'ಅರ್ಧ ತಲೆ ಬೋಳಿಸಿಕೊಳ್ಳುವೆ' ಎಂದು ಹೊಸ ಸವಾಲೆಸೆದ ಆಂಡಿ.!
Recommended Video

''ಕವಿತಾ ಕಂಡ್ರೆ ಮೈ ಜುಮ್ ಎನ್ನುತ್ತೆ'' ಅಂತ ಹೇಳ್ತಿದ್ದ ಆಂಡಿ, ಇದೀಗ ಕವಿತಾ ಕಂಡ್ರೆ ಉರಿದು ಬೀಳ್ತಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ಕವಿತಾ ಮತ್ತು ಆಂಡಿ.. ಎಣ್ಣೆ-ಸೀಗೇಕಾಯಿ ಆಗಿದ್ದಾರೆ. ಇಬ್ಬರ ನಡುವಿನ ಕಿತ್ತಾಟ ದಿನೇ ದಿನೇ ತಾರಕಕ್ಕೇರುತ್ತಿದೆ.
ತಮ್ಮ ಗುಂಪನ್ನು ನಾಮಿನೇಷನ್ ನಿಂದ ಬಚಾವ್ ಮಾಡಿದ ಕವಿತಾ ಗೌಡ, ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯಲ್ಲಿ ಪಕ್ಷಪಾತ ತೋರಿದರು. ಕವಿತಾ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದರೆ, ಆಂಡಿ ಕ್ಯಾಪ್ಟನ್ ಆಗುತ್ತಿದ್ದರು. ಆದ್ರೆ, ಆಂಡಿ ಕ್ಯಾಪ್ಟನ್ ಆಗುವುದು ಕವಿತಾಗೆ ಇಷ್ಟ ಇಲ್ಲ. ಹೀಗಾಗಿ, ಏನೋ ಒಂದು ಕಾರಣ ಕೊಟ್ಟು ಮುರಳಿಗೆ ಕವಿತಾ ಕ್ಯಾಪ್ಟನ್ ಪಟ್ಟ ಕೊಟ್ಟರು.
ಇನ್ನೂ 'ಗೋಡೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಟಾಸ್ಕ್ ನಲ್ಲೂ ಇಟ್ಟಿಗೆ ಹಂಚುವ ವಿಷಯದಲ್ಲಿ ಕವಿತಾ ತಾರತಮ್ಯ ಮಾಡಿದ್ದರು. ಇದರಿಂದ ಆಂಡಿ ರೊಚ್ಚಿಗೆದ್ದರು. ಟಾಸ್ಕ್ ಚಾಲ್ತಿಯಲ್ಲಿ ಇರುವಾಗಲೇ, ಕವಿತಾ ವಿರುದ್ಧ ಆಂಡಿ ಸಿಡಿದೆದ್ದರು.
ಈ ವೇಳೆ, ''ನಾನು ಇರುವ ತಂಡದ ಬಗ್ಗೆ ಕವಿತಾ ಸರಿಯಾದ ನಿರ್ಧಾರ ತೆಗೆದುಕೊಂಡು ಗೆಲ್ಲಿಸಿದರೆ, ನಾನು ಅರ್ಧ ತಲೆ ಬೋಳಿಸಿಕೊಳ್ಳುವೆ'' ಎಂದು ಆಂಡಿ ಸವಾಲೆಸೆದಿದ್ದರು. ಚಟುವಟಿಕೆಯ ಅಂತ್ಯದಲ್ಲಿ ಆಂಡಿ ಇದ್ದ ಟೀಮ್ ಗೆದ್ದಿದೆ. ಹಾಗಾದ್ರೆ, ಆಂಡಿ ಅರ್ಧ ತಲೆ ಬೋಳಿಸುತ್ತಾರಾ.? ಮುಂದೆ ಓದಿರಿ..

ಚಾಲೆಂಜ್ ಮಾಡಿದ ಆಂಡಿ.!
''ನಾನು ಇರುವ ತಂಡದ ಬಗ್ಗೆ ಕವಿತಾ ಸರಿಯಾದ ನಿರ್ಧಾರ ತೆಗೆದುಕೊಂಡು ಗೆಲ್ಲಿಸಿದರೆ, ನಾನು ಅರ್ಧ ತಲೆ ಬೋಳಿಸಿಕೊಂಡು 'ಬಿಗ್ ಬಾಸ್' ಮನೆಯಲ್ಲಿ ಇರ್ತೀನಿ'' ಎಂದು ಶಶಿ ಬಳಿ ಆಂಡಿ ಚಾಲೆಂಜ್ ಮಾಡಿದ್ದರು.

ಗೆಲುವಿನ ನಗೆ ಬೀರಿದ ಶಶಿ ಮತ್ತು ತಂಡ
'ಗೋಡೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಚಟುವಟಿಕೆಯ ಅಂತ್ಯದಲ್ಲಿ ಅತಿ ಹೆಚ್ಚು ಇಟ್ಟಿಗೆ ಬಳಸಿ, ಎತ್ತರದ ಗೋಡೆ ಕಟ್ಟಿದ್ದು ಶಶಿ ಮತ್ತು ತಂಡ ಎಂದು 'ಸುಂದರಿ' ಕವಿತಾ ಘೋಷಿಸಿದರು. ಆಂಡಿ ಇದ್ದದ್ದು ಶಶಿ ಟೀಮ್ ನಲ್ಲೇ.!

ಹಾಗಾದ್ರೆ, ಅರ್ಧ ತಲೆ ಬೋಳಿಸುತ್ತಾರಾ ಆಂಡಿ.?
ಆಂಡಿ ಗಲಾಟೆ ಮಾಡಿದ್ದರೂ, ಚಟುವಟಿಕೆಯಲ್ಲಿ ಶಶಿ ಮತ್ತು ತಂಡವನ್ನ ಕವಿತಾ ಗೆಲ್ಲಿಸಿದರು. ಹಾಗಾದ್ರೆ, ಸವಾಲೆಸೆದಂತೆ ಅರ್ಧ ತಲೆಯನ್ನ ಬೋಳಿಸಿಕೊಂಡು ಆಂಡಿ 'ಬಿಗ್ ಬಾಸ್' ಮನೆಯಲ್ಲಿ ಇರ್ತಾರಾ.? ಈ ಪ್ರಶ್ನೆಗೆ ಮೂಡುವ ಮುನ್ನವೇ ಮತ್ತೆ ಆಂಡಿ ಮತ್ತು ಕವಿತಾ ನಡುವೆ ಮಾತಿನ ಚಕಮಕಿ ನಡೆಯಿತು.

ಕಳಪೆ ಪ್ರದರ್ಶನ
ಚಟುವಟಿಕೆಯಲ್ಲಿ ಶಶಿ ಅಂಡ್ ಟೀಮ್ ಗೆದ್ದಿದ್ರಿಂದ, ಶಶಿ ಮತ್ತು ರಶ್ಮಿ ಕ್ಯಾಪ್ಟನ್ ಪ್ರತಿಸ್ಪರ್ಧಿಗಳಾದರು. ಇನ್ನೂ ಸೋತ ತಂಡದಿಂದ ರಾಕೇಶ್ ಮತ್ತು ಜಯಶ್ರೀ ಕ್ಯಾಪ್ಟನ್ ರೇಸ್ ಗಿಳಿದರು. ಸೋತ ತಂಡದಿಂದ ಇಬ್ಬರಿಗೆ 'ಕಳಪೆ ಪ್ರದರ್ಶನ'ದ ಹಣೆಪಟ್ಟಿ ನೀಡಿ ಜೈಲಿಗೆ ಕಳುಹಿಸಬೇಕಿತ್ತು. ವಾದ-ವಿವಾದ ಮತ್ತೊಂದು ಬಾರಿಗೆ ಶುರುವಾಗಿದ್ದು ಇಲ್ಲಿಂದ.

ಮತ್ತೆ ವಾಕ್ಸಮರ ಶುರು
ಚಟುವಟಿಕೆಯಲ್ಲಿ ಆಂಡಿ ಪಾತ್ರದಿಂದ ಹೊರಗೆ ಬಂದು ಗಲಾಟೆ ಮಾಡಿದ್ದರೂ, ಶಶಿ ತಂಡವನ್ನು ಕವಿತಾ ಗೆಲ್ಲಿಸಿದರು ಅನ್ನೋದು ರಾಕೇಶ್ ಮತ್ತು ತಂಡದ ಬೇಸರಕ್ಕೆ ಕಾರಣವಾಯ್ತು. ''ಎಲ್ಲರನ್ನೂ ಗಣನೆಗೆ ತೆಗೆದುಕೊಳ್ಳುವ ಹಾಗಿದ್ದರೆ, ಕಳಪೆ ಪ್ರದರ್ಶನ ಆಂಡಿಗೆ ಕೊಡುತ್ತಿದ್ದೆ'' ಅಂತ ಕವಿತಾ ಹೇಳಿದ ಮಾತು ಮತ್ತೆ ಆಂಡಿನ ಕೆರಳಿಸಿತು. ಆಂಡಿ-ಕವಿತಾ ಮಧ್ಯೆ ಮತ್ತೆ ವಾಕ್ಸಮರ ನಡೆಯಿತು. ಕೊನೆಗೆ ಜೈಲಿಗೆ ಹೋಗಲು ಮುರಳಿ ಮತ್ತು ಧನರಾಜ್ ಮುಂದಾದರು.

ಉಲ್ಟಾ ಹೊಡೆದ ಕವಿತಾ
''ನಾನು ರಾಕೇಶ್ ತಂಡವನ್ನು ಗೆಲ್ಲಿಸಬೇಕಿತ್ತು ಅಂತ ಅನಿಸುತ್ತಿದೆ'' ಎಂದು ಎಲ್ಲಾ ಮುಗಿದ ಮೇಲೆ ಕವಿತಾ ಹೇಳಿದ್ದಾರೆ. ಒಟ್ನಲ್ಲಿ, ಕವಿತಾ ನಡೆದುಕೊಳ್ಳುವುದಕ್ಕೂ.. ಆಂಡಿ ಆಡುವುದಕ್ಕೂ ಸರಿಯಾಗಿದೆ. ಇಬ್ಬರ ನಡುವಿನ ಕಿತ್ತಾಟ ಸದ್ಯಕ್ಕೆ ಮುಗಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ.


Click it and Unblock the Notifications











