'ಸುಂದರಿ' ಕವಿತಾ ಮತ್ತು ಆಂಡ್ರ್ಯೂ ನಡುವೆ ಮತ್ತೆ ವಾಗ್ಯುದ್ಧ.!
Recommended Video

'ಬಿಗ್ ಬಾಸ್' ಮನೆಯಲ್ಲಿ ಕವಿತಾ ಮತ್ತು ಆಂಡ್ರ್ಯೂ ನಡುವಿನ ಕಿತ್ತಾಟ ಇಂದು-ನಿನ್ನೆಯದ್ದಲ್ಲ. ಎರಡ್ಮೂರು ವಾರಗಳಿಂದ ಇಬ್ಬರ ಮಧ್ಯೆ ಬೆಂಕಿ ಹೊತ್ತಿ ಉರಿಯುತ್ತಲೇ ಇದೆ.
ಅದ್ಯಾವಾಗ ನಾಮಿನೇಷನ್ ನಲ್ಲಿ ಡೀಲ್ ಮಾಡಿಕೊಂಡು, ಕೊನೆಗೆ ಉಲ್ಟಾ ಹೊಡೆದರೋ.. ಕವಿತಾ ಮೇಲೆ ಆಂಡಿಗೆ ಬೇಸರ ಮೂಡಿತು. ಇನ್ನೂ ಆಂಡಿ ಕ್ಯಾಪ್ಟನ್ ಆಗದೇ ಇರುವುದಕ್ಕೆ ಪ್ರಮುಖ ಕಾರಣ ಕವಿತಾ. ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯಲ್ಲಿ ಪಕ್ಷಪಾತ ಮಾಡಿದ ಕವಿತಾ ವಿರುದ್ಧ ಆಂಡಿ ಮುನಿಸಿಕೊಂಡಿದ್ದರು.
ಇದೀಗ 'ಗೋಡೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಚಟುವಟಿಕೆಯಲ್ಲಿ ಸರಿಯಾಗಿ ನಿರ್ಧಾರ ತೆಗೆದುಕೊಳ್ಳದ ಕವಿತಾ ವಿರುದ್ಧ ಆಂಡಿ ಗುಡುಗಿದ್ದಾರೆ. ಕವಿತಾ ಮತ್ತು ಆಂಡಿ ನಡುವೆ ವಾಗ್ಯುದ್ಧವೇ ನಡೆದಿದೆ. ಮುಂದೆ ಓದಿರಿ...

ಈ ವಾರದ ಚಟುವಟಿಕೆ
'ಗೋಡೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನ ಈ ವಾರ 'ಬಿಗ್ ಬಾಸ್' ನೀಡಿದ್ದಾರೆ. ಇದರ ಅನುಸಾರ, ಊರಿನ ಶ್ರೀಮಂತನ ಮಗಳು 'ಸುಂದರಿ'ಯನ್ನು ಮನವೊಲಿಸುವ ಜವಾಬ್ದಾರಿ ಎರಡು ಬಡ ಕುಟುಂಬಗಳ ಮೇಲಿದೆ. ಕಾಲ ಕಾಲಕ್ಕೆ ಕೊಡಲಾಗುವ ಚಟುವಟಿಕೆಯಲ್ಲಿ ಯಾವ ಕುಟುಂಬ ಗೆಲ್ಲುತ್ತದೋ, ಆ ಕುಟುಂಬಕ್ಕೆ ಹೆಚ್ಚು ಇಟ್ಟಿಗೆಗಳನ್ನು ಸುಂದರಿ ನೀಡಬೇಕು. ಟಾಸ್ಕ್ ಅಂತ್ಯದಲ್ಲಿ ಯಾವ ಕುಟುಂಬದ ಗೋಡೆ ಹೆಚ್ಚು ಕಟ್ಟಲ್ಪಟ್ಟಿರುತ್ತದೋ, ಅವರು ಗೆದ್ದ ಹಾಗೆ.

ನಾಯಕರಿಗೆ ಸುಂದರಿ ಮೇಲೆ ಕಣ್ಣು
ಒಂದು ಬಡ ಕುಟುಂಬದ ನಾಯಕ ಶಶಿ, ಇನ್ನೊಂದು ಬಡ ಕುಟುಂಬದ ನಾಯಕ ರಾಕೇಶ್. ಇವರಿಬ್ಬರಿಗೂ ಸುಂದರಿ ಕವಿತಾ ರೊಂದಿಗೆ ಮದುವೆ ಆಗುವ ಕನಸು. ಸುಂದರಿಯ ಮನವನ್ನು ಯಾರು ಗೆಲ್ಲುತ್ತಾರೋ, ಆ ಕುಟುಂಬಕ್ಕೆ ಲಾಭ ಹೆಚ್ಚು.

ಹಾಡು ಹಾಡಿ ಗೆದ್ದ ರಾಕೇಶ್ ತಂಡ
ಸುಂದರಿ ಕವಿತಾ ಮೇಲೆ ಹಾಡು ಹಾಡಿ, ಮೊದಲ ಚಟುವಟಿಕೆಯಲ್ಲಿ ರಾಕೇಶ್ ಮತ್ತು ತಂಡ ಜಯಗಳಿಸಿತು. ಪರಿಣಾಮ, ರಾಕೇಶ್ ಕುಟುಂಬಕ್ಕೆ ಕೇವಲ ನಾಲ್ಕು ಇಟ್ಟಿಗೆ ಹೆಚ್ಚುವರಿಯಾಗಿ ಸಿಕ್ತು.

ವಸ್ತುಗಳನ್ನು ತ್ಯಾಗ ಮಾಡಬೇಕಿತ್ತು
ಸುಂದರಿಯ ಮನವೊಲಿಸಲು ವೈಯುಕ್ತಿಕ ವಸ್ತುಗಳನ್ನು ಉಭಯ ತಂಡಗಳು ತ್ಯಾಗ ಮಾಡಬೇಕಿತ್ತು. ಯಾವ ತಂಡದ ವಸ್ತುಗಳ ತೂಕ ಹೆಚ್ಚು ಇರುತ್ತದೋ, ಆ ತಂಡ ಗೆದ್ದ ಹಾಗೆ.

ಅಜಗಜಾಂತರ ವ್ಯತ್ಯಾಸ
ರಾಕೇಶ್ ಮತ್ತು ತಂಡ 9 ಕೆಜಿ ತೂಕದ ವೈಯುಕ್ತಿಕ ವಸ್ತುಗಳನ್ನು ತ್ಯಾಗ ಮಾಡಲು ಮುಂದಾದರು. ಇನ್ನೂ ಶಶಿ ಮತ್ತು ತಂಡ 21 ಕೆಜಿ ತೂಕದ ವೈಯುಕ್ತಿಕ ವಸ್ತುಗಳನ್ನು ತ್ಯಾಗ ಮಾಡಿದರು. ತೂಕದ ನಡುವೆ ಇಷ್ಟೊಂದು ಅಜಗಜಾಂತರ ವ್ಯತ್ಯಾಸ ಇರುವ ಕಾರಣ, ಶಶಿ ಮತ್ತು ತಂಡ ಗೋಡೆ ಕಟ್ಟಲು ಹೆಚ್ಚು ಇಟ್ಟಿಗೆಗಳನ್ನು ನಿರೀಕ್ಷಿಸಿದ್ದರು.

ಹುಸಿಯಾದ ನಿರೀಕ್ಷೆ
ತೂಕದ ಬಗ್ಗೆ ಹೆಚ್ಚು ಯೋಚಿಸದೆ, ಶಶಿ ಮತ್ತು ತಂಡಕ್ಕೆ ಕೇವಲ ಹತ್ತು ಇಟ್ಟಿಗೆಗಳನ್ನು ಹೆಚ್ಚುವರಿಯಾಗಿ ಸುಂದರಿ ಕವಿತಾ ನೀಡಿದರು. ಇದರಿಂದ ಶಶಿ ತಂಡದಲ್ಲಿದ ಆಂಡಿಗೆ ಸಿಟ್ಟು ಬಂತು. ಕವಿತಾ ಬಗ್ಗೆ ಬೆಂಕಿ ಚೆಂಡುಗಳನ್ನು ಉಗುಳಲು ಆಂಡಿ ಆರಂಭಿಸಿದರು.

ಯಾವುದನ್ನೂ ನೇರವಾಗಿ ಆಡಿಲ್ಲ.!
''ಯಾವ ಟಾಸ್ಕ್ ನೂ ಕವಿತಾ ನೇರವಾಗಿ ಆಡಿಲ್ಲ. ಎಲ್ಲಾ ಟಾಸ್ಕ್ ನೂ ಪರ್ಸನಲ್ ಆಗಿ ಆಡುತ್ತಾಳೆ'' ಅಂತೆಲ್ಲಾ ಆಂಡಿ ಹೇಳುತ್ತಿರುವಾಗ, ''ನನ್ನ ಇಷ್ಟ. ನಾನು ಹೀಗೇ ಆಡುವುದು. ಏನು ಮಾಡ್ತೀಯಾ.? ನಿರ್ಧಾರ ನನ್ನ ಮೇಲಿದೆ. ನನ್ನ ವಿವೇಚನೆಗೆ ಬಿಟ್ಟ ಹಾಗೆ ನಿರ್ಧಾರ ಮಾಡುವೆ'' ಎಂದು ಕವಿತಾ ತಿರುಗೇಟು ನೀಡಿದರು.

ಕವಿತಾ ಮೋಸಗಾರ್ತಿ
ಕವಿತಾಗೆ ಆಂಡಿ ಮೋಸಗಾರ್ತಿ ಎಂಬ ಪಟ್ಟ ಕೊಟ್ಟರು. ಟಾಸ್ಕ್ ಮಧ್ಯದಲ್ಲೇ ಕವಿತಾ ಮತ್ತು ಆಂಡಿ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಕವಿತಾ ಮತ್ತು ಆಂಡಿ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿದೆ.


Click it and Unblock the Notifications











