ಕವಿತಾಗೆ ನಿಜವಾಗಲೂ ಪ್ರಪೋಸ್ ಮಾಡಿಬಿಟ್ರಾ 'ರೈತ' ಶಶಿ.?
Recommended Video

'ಚಿನ್ನು' ಕವಿತಾ ಮತ್ತು ಶಶಿ ಮಧ್ಯೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗುಮಾನಿ ಹಲವರಿಗಿದೆ. ಆದ್ರೆ, ಯಾರಿಗೂ ಅಷ್ಟಾಗಿ ಕ್ಲಾರಿಟಿ ಸಿಕ್ಕಿರಲಿಲ್ಲ. ಈಗ 'ಬಿಗ್ ಬಾಸ್' ನೀಡಿದ್ದ 'ಗೋಡೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಟಾಸ್ಕ್ ನಲ್ಲಂತೂ ಶಶಿ ರಿಯಲ್ಲಾಗಿ ಕವಿತಾಗೆ ಪ್ರಪೋಸ್ ಮಾಡಿಬಿಟ್ರಾ ಅನ್ನೋವಷ್ಟು ಡೀಪ್ ಆಗಿ ಲವ್ ಲೆಟರ್ ಬರೆದಿದ್ದಾರೆ.!
'ಬಿಗ್ ಬಾಸ್' ನೀಡಿದ್ದ 'ಗೋಡೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಚಟುವಟಿಕೆ ಅನುಸಾರ, ಎರಡು ಬಡ ಕುಟುಂಬಗಳ ನಾಯಕರಾಗಿದ್ದ ಶಶಿ ಮತ್ತು ರಾಕೇಶ್, 'ಸುಂದರಿ' ಕವಿತಾ ರನ್ನ ಇಂಪ್ರೆಸ್ ಮಾಡಬೇಕಿತ್ತು.
'ಸುಂದರಿ' ಕವಿತಾ ಮನಗೆಲ್ಲಲು ಲವ್ ಲೆಟರ್ ಬರೆಯುವ ಚಟುವಟಿಕೆಯನ್ನ 'ಬಿಗ್ ಬಾಸ್' ನೀಡಿದರು. ಬಲಗೈಯಲ್ಲಿ ಬರೆಯಲು ಆಗದ ಶಶಿ, ಎಡಗೈನಲ್ಲಿ ಕವಿತಾಗಾಗಿ ಪ್ರೇಮ ಪತ್ರ ಬರೆದರು. ಕವಿತಾ ಮೇಲೆ ತಮ್ಮ ಮನಸ್ಸಿನಲ್ಲಿದ್ದ ಪ್ರೀತಿಯನ್ನ ಟಾಸ್ಕ್ ನೆಪದಲ್ಲಿ ಹೊರ ಹಾಕ್ಬಿಟ್ರಾ ಶಶಿ ಎಂಬ ಅನುಮಾನ ಸದ್ಯ ವೀಕ್ಷಕರಿಗೆ ಕಾಡುತ್ತಿದೆ. ಮುಂದೆ ಓದಿರಿ...

ಕವಿತಾಗಾಗಿ ಒಲವಿನ ಓಲೆ
'ಸುಂದರಿ' ಕವಿತಾಗಾಗಿ ಶಶಿ ಒಲವಿನ ಪತ್ರ ಬರೆದರು. ಮೊದಲೇ ಬಲಗೈ ಮೂಳೆ ಮುರಿದುಕೊಂಡು ಒಂದು ಕೈಯಲ್ಲಿ ಆಟ ಆಡುತ್ತಿರುವ ಶಶಿ, ಕವಿತಾಗಾಗಿ ಎರಡು ಗಂಟೆ ಸರ್ಕಸ್ ಮಾಡಿ ಎಡಗೈನಲ್ಲಿ ಪ್ರೇಮ ಪತ್ರ ಬರೆದಿದ್ದಾರೆ ಅಂದ್ರೆ ನೀವೇ ಯೋಚಿಸಿ...

''ನನ್ನ ಫೀಲಿಂಗ್ಸ್'' ಎಂದ ಶಶಿ.!
''ಬೇರೆಯವರು ಪತ್ರ ಬರೆಯುತ್ತೀನಿ ಅಂತ ಹೇಳಿದರು. ಆದ್ರೆ, ನಾನು ಬಿಡಲಿಲ್ಲ. ಯಾಕಂದ್ರೆ, ಇದು ನನ್ನ ಪ್ರೀತಿ. ನನ್ನ ಭಾವನೆ. ಇಲ್ಲಿ ಏನೇ ಬರೆದಿದ್ದರೂ, ಅದು ನನ್ನ ಫೀಲಿಂಗ್ಸ್'' ಎನ್ನುತ್ತಾ ಕವಿತಾಗೆ ತಮ್ಮ ಒಲವಿನ ಓಲೆಯನ್ನ ಓದಿ ಹೇಳಿದರು.

ಶಶಿ ಬರೆದ ಪತ್ರಕ್ಕೆ ಕವಿತಾ ಫಿದಾ
ಅತ್ತ ರಾಕೇಶ್ ಬರೆದ ಪತ್ರದಲ್ಲಿ ಭಾವನೆಗಳಿಗಿಂತ ಪ್ರಾಸಗಳೇ ಹೆಚ್ಚಿತ್ತು. ಇತ್ತ ಶಶಿ ಬರೆದಿದ್ದ ಪತ್ರ ತೀರಾ ಆಪ್ತವಾಗಿದ್ದರಿಂದ, ಅದಕ್ಕೆ ಫಿದಾ ಆಗಿ ಶಶಿಯನ್ನ ಗೆಲ್ಲಿಸಿದರು ಕವಿತಾ.

ಎಡಗೈನಲ್ಲೇ ಚಿತ್ರ ಬಿಡಿಸಿದ ಶಶಿ
ಇನ್ನೂ ಚಿತ್ರ ಬಿಡಿಸುವ ಚಟುವಟಿಕೆಯಲ್ಲೂ ಎಡಗೈನಲ್ಲಿ ಕವಿತಾ ಚಿತ್ರ ಬಿಡಿಸಿದರು ಶಶಿ. ಅತ್ತ ರಾಕೇಶ್ ಕೂಡ ಎಡಗೈನಲ್ಲಿ ಚಿತ್ರ ಬಿಡಿಸಲು ಮುಂದಾದರು. ಆದ್ರೆ, ಇಲ್ಲೂ ಕವಿತಾ ಮನಸೋತಿದ್ದು ಶಶಿ ಬಿಡಿಸಿದ ಚಿತ್ರಕ್ಕೆ.

ವೀಕ್ಷಕರ ತಲೆಯಲ್ಲಿ ಹುಳ
ಇದನ್ನೆಲ್ಲಾ ನೋಡಿದ್ಮೇಲೆ, ಶಶಿ ಮತ್ತು ಕವಿತಾ ಮಧ್ಯೆ ನಿಜವಾಗಲೂ ಪ್ರೀತಿ ಮೂಡಿದ್ಯಾ.? ತಮ್ಮ ಮನಸ್ಸಿನಲ್ಲಿ ಇದ್ದದ್ದೆಲ್ಲಾ ಟಾಸ್ಕ್ ಮೂಲಕ ಶಶಿ ಹೊರಹಾಕಿದ್ರಾ ಎಂಬ ಡೌಟ್ ವೀಕ್ಷಕರಿಗೆ ಕಾಡುತ್ತಿದೆ.


Click it and Unblock the Notifications











