'ಬಿಗ್ ಬಾಸ್' ಮನೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಅಕ್ಷತಾ.!
Recommended Video

''ಬಿಗ್ ಬಾಸ್' ಮನೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಅಕ್ಷತಾ.!' ಎಂಬ ಶೀರ್ಷಿಕೆ ಓದಿದ ಕೂಡಲೆ ಕಣ್ಣು ಬಾಯಿ ಬಿಡುವ ಅಗತ್ಯ ಇಲ್ಲ. 'ಬಿಗ್ ಬಾಸ್'.. ಒಂದು ರಿಯಾಲಿಟಿ ಶೋ ಇರಬಹುದು. ಆದ್ರೆ, ಚಟುವಟಿಕೆಯ ರೂಪದಲ್ಲಿ 'ಬಿಗ್ ಬಾಸ್' ಮನೆಯಲ್ಲಿ ನಡೆಯುವುದೆಲ್ಲಾ ರಿಯಲ್ ಅಲ್ಲ.!
'ಬಿಗ್ ಬಾಸ್' ಮನೆಯ ಸದಸ್ಯರಿಗೆ ಈ ವಾರ 'ಗೋಡೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಎಂಬ ಚಟುವಟಿಕೆ ನೀಡಲಾಗಿತ್ತು. ಇದರಲ್ಲಿ ಊರಿನ ಶ್ರೀಮಂತನ ಮಗಳು 'ಸುಂದರಿ' ಪಾತ್ರ ಪೋಷಿಸಿದವರು ಕವಿತಾ ಗೌಡ.
ಇನ್ನೂ ಊರಲ್ಲಿ ಇರುವ ಎರಡು ಬಡ ಕುಟುಂಬಗಳ ಪೈಕಿ ರಾಕೇಶ್ ಫ್ಯಾಮಿಲಿ ಒಂದಾದರೆ.. ಶಶಿ ಕುಟುಂಬ ಇನ್ನೊಂದು. ಶಶಿ ಕುಟುಂಬದಲ್ಲಿ... ಶಶಿ ಅಣ್ಣನ ಮಡದಿ 'ಸರೋಜ' ಪಾತ್ರಕ್ಕೆ ಜೀವ ತುಂಬಿದವರು 'ರಾಜ್ಯ ಪ್ರಶಸ್ತಿ ಪುರಸ್ಕೃತ' ನಟಿ ಅಕ್ಷತಾ ಪಾಂಡವಪುರ.

ಸರೋಜ ಪಾತ್ರಧಾರಿ ಆಗಿ ಗರ್ಭಿಣಿ ಆಗಿದ್ದ ಅಕ್ಷತಾ ಪಾಂಡವಪುರ ನಿನ್ನೆ 'ಬಿಗ್ ಬಾಸ್' ಮನೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ಗಂಡು ಮಗು ಹುಟ್ಟಿದ ಖುಷಿಯಲ್ಲಿ ಎಲ್ಲಾ ಸವಾಲುಗಳನ್ನು ಯಶಸ್ವಿಯಾಗಿ ಪೂರೈಸಿದ ಶಶಿ ಅಂಡ್ ಟೀಮ್ ಗೆಲುವಿನ ನಗೆ ಬೀರಿತು.
ಚಟುವಟಿಕೆಯಲ್ಲಿ ಫ್ಯಾಮಿಲಿ ಫೀಲ್ ಬರಬೇಕು.. ವೀಕ್ಷಕರಿಗೆ ಮನರಂಜನೆ ಕೊಡಬೇಕು ಎಂದು ಶಶಿ ಮತ್ತು ತಂಡ ಈ ಪ್ಲಾನ್ ಮಾಡಿತ್ತು. ಗರ್ಭಿಣಿ ಆಗಿ, ಬಾಣಂತಿ ಆಗಿ ಅಕ್ಷತಾ ಪಾಂಡವಪುರ ನಟನೆ ನೈಜವಾಗಿತ್ತು.
ಅಂದ್ಹಾಗೆ, 'ಗೋಡೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಟಾಸ್ಕ್ ನ ನೀವು ನೋಡಿದ್ರಾ.? ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.


Click it and Unblock the Notifications











