For Quick Alerts
  ALLOW NOTIFICATIONS  
  For Daily Alerts

  'ರೊಮ್ಯಾಂಟಿಕ್' ರಾಕೇಶ್ ಗೆ ಕ್ಲೀನ್ ಬೌಲ್ಡ್ ಆದ 'ಸುಂದರಿ' ಕವಿತಾ.!

  |

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಎಂ.ಜೆ.ರಾಕೇಶ್ ಒಂಥರಾ ರಸಿಕರ ರಾಜ ಇದ್ದ ಹಾಗೆ. 35 ವರ್ಷ ವಯಸ್ಸಿನ ಎಂ.ಜೆ.ರಾಕೇಶ್ ಇಲ್ಲಿಯವರೆಗೂ 200 ಹುಡುಗಿಯರ ಜೊತೆಗೆ ಡೇಟಿಂಗ್ ಮಾಡಿದ್ದಾರೆ ಅಂದ್ರೆ ನೀವೇ ಊಹಿಸಿಕೊಳ್ಳಿ...

  ಹುಡುಗಿಯರ ಗಮನ ಸೆಳೆಯುವುದರಲ್ಲಿ.. ಹುಡುಗಿಯರನ್ನು ಇಂಪ್ರೆಸ್ ಮಾಡುವಲ್ಲಿ.. ರೊಮ್ಯಾಂಟಿಕ್ ಆಗಿ ನಡೆದುಕೊಳ್ಳುವಲ್ಲಿ ಎಂ.ಜೆ ರಾಕೇಶ್ ಎತ್ತಿದ ಕೈ. ಅಷ್ಟಕ್ಕೂ, ಈ ಮಾತನ್ನು ನಾವು ಹೇಳುತ್ತಿಲ್ಲ. 'ಬಿಗ್ ಬಾಸ್' ಮನೆಯಲ್ಲೇ ಇರುವ 'ಚಿನ್ನು' ಕವಿತಾ ಅಭಿಪ್ರಾಯ ಇದು.

  'ಗೋಡೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನ 'ಬಿಗ್ ಬಾಸ್' ಈ ವಾರ ನೀಡಿದ್ದರು. ಈ ಟಾಸ್ಕ್ ನಲ್ಲಿ ಒಂದು ಕುಟುಂಬದ ನಾಯಕನಾಗಿದ್ದ ಎಂ.ಜೆ ರಾಕೇಶ್, 'ಸುಂದರಿ' ಕವಿತಾ ರನ್ನ ಇಂಪ್ರೆಸ್ ಮಾಡಬೇಕಿತ್ತು.

  ನಿಜ ಬದುಕಿನ ಅನುಭವಗಳನ್ನು ಇಟ್ಟುಕೊಂಡು ರಾಕೇಶ್ ಮಾಡಿದ ಮೋಡಿಗೆ ಕವಿತಾ ಅಕ್ಷರಶಃ ಮರುಳಾಗಿದ್ದಾರೆ. ಮುಂದೆ ಓದಿರಿ...

  ರಾಕೇಶ್ ಗೆ ಪರ್ಫೆಕ್ಟ್ ಆಗಿ ಗೊತ್ತು.!

  ರಾಕೇಶ್ ಗೆ ಪರ್ಫೆಕ್ಟ್ ಆಗಿ ಗೊತ್ತು.!

  'ಗೋಡೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಚಟುವಟಿಕೆಯಲ್ಲಿ ರಾಕೇಶ್ ಭಾಗವಹಿಸಿದ ರೀತಿ ನೋಡಿ ''ನಾನು ನಿಜ ಹೇಳ್ಲಾ.. ಅವನು ಇನ್ನೂರು ಹುಡುಗಿಯರ ಜೊತೆಗೆ ಡೇಟಿಂಗ್ ಮಾಡಿರೋದು ಪರ್ಫೆಕ್ಟ್ ಎಕ್ಸ್ ಪೀರಿಯನ್ಸ್. ಹುಡುಗಿಯರನ್ನ ಹೇಗೆ ಇಂಪ್ರೆಸ್ ಮಾಡಬೇಕು ಅಂತ ಅವನಿಗೆ ಪರ್ಫೆಕ್ಟ್ ಆಗಿ ಗೊತ್ತು'' ಅಂತ ಖುಷಿಯಿಂದ ಹೇಳಿದ್ದಾರೆ 'ಸುಂದರಿ' ಕವಿತಾ.

  ಓಹೋ... ಸೋನು ಪಾಟೀಲ್ ಮೇಲೆ ರಾಕೇಶ್ ಗೆ ಕ್ರಷ್ ಆಗಿತ್ತಂತೆ.!

  ರೊಮ್ಯಾಂಟಿಕ್ ಹುಡುಗ.!

  ರೊಮ್ಯಾಂಟಿಕ್ ಹುಡುಗ.!

  ''ರಾಕೇಶ್ ತುಂಬಾ ರೊಮ್ಯಾಂಟಿಕ್ ಹುಡುಗ'' ಅಂತ ಜಯಶ್ರೀ ಕೂಡ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಆದ್ರೆ, ನಯನಗೆ ಮಾತ್ರ ರಾಕೇಶ್ ನ ನೋಡಿದ್ರೆ ಕಿರಿಕಿರಿ ಆಗುತ್ತೆ.

  ಮಾಡೋದೆಲ್ಲಾ ಮಾಡಿದ್ರೂ ಸಮರ್ಥನೆ ನೀಡುವಲ್ಲಿ ರಾಕೇಶ್ ಎತ್ತಿದ ಕೈ.!

  ಕವಿತಾ ಕಾಲಿಗೆ ಮಸಾಜ್ ಮಾಡಿದ ರಾಕೇಶ್.!

  ಕವಿತಾ ಕಾಲಿಗೆ ಮಸಾಜ್ ಮಾಡಿದ ರಾಕೇಶ್.!

  'ಗೋಡೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಚಟುವಟಿಕೆಯ ಭಾಗವಾಗಿ, ಕವಿತಾ ಮನವೊಲಿಸಲು ಆಕೆಯ ಕಾಲಿಗೆ ರಾಕೇಶ್ ಮಸಾಜ್ ಕೂಡ ಮಾಡಿದರು.

  ತಾನೇ ಸರಿ ಎನ್ನುವ 'ಸ್ವಾರ್ಥಿ' ರಾಕೇಶ್ ಬಾಯಿಗೆ ಬೀಗ ಜಡಿದ ಸುದೀಪ್.!

  ಸರ್ಕಸ್ ಮಾಡಿದ ರಾಕೇಶ್.!

  ಸರ್ಕಸ್ ಮಾಡಿದ ರಾಕೇಶ್.!

  ಇನ್ನೂ ಎದೆ ಮೇಲೆ ಹೃದಯದ ಚಿತ್ರ ಬಿಡಿಸಿಕೊಂಡು, ''ಕವಿತಾ ಮ್ಯಾರಿ ಮೀ'' ಅಂತೆಲ್ಲಾ ಬರೆದುಕೊಂಡು ಬಂದು 'ಸುಂದರಿ' ಕವಿತಾ ಬಳಿ ರಾಕೇಶ್ ಪ್ರಪೋಸ್ ಕೂಡ ಮಾಡಿದರು.

  ಪರಸ್ಪರ ಹಾರ ಹಾಕಿಕೊಂಡ ರಾಕೇಶ್-ಕವಿತಾ: ಮುನಿಸಿಕೊಂಡ ಅಕ್ಷತಾ.!

  ಏನೇ ಮಾಡಿದರೂ ಗೆಲ್ಲಲಿಲ್ಲ.!

  ಏನೇ ಮಾಡಿದರೂ ಗೆಲ್ಲಲಿಲ್ಲ.!

  ಟಾಸ್ಕ್ ಹೊರತಾಗಿಯೂ, ಬೆಳಗ್ಗೆ ಎದ್ದ ಕೂಡಲೆ ಕವಿತಾಗೆ ಬೆಡ್ ಕಾಫಿ ಕೊಟ್ಟು ಇಂಪ್ರೆಸ್ ಮಾಡಲು ರಾಕೇಶ್ ಯತ್ನಿಸಿದರು. ಇಷ್ಟೆಲ್ಲಾ ಸರ್ಕಸ್ ಮಾಡಿದರೂ, ಚಟುವಟಿಕೆಯ ಅಂತ್ಯದಲ್ಲಿ ಗೆದ್ದಿದ್ದು ಮಾತ್ರ ಶಶಿ ಕುಮಾರ್. ರಾಕೇಶ್ ಎಷ್ಟೇ ರೊಮ್ಯಾಂಟಿಕ್ ಆಗಿದ್ದರೂ, ಯಾವುದೂ ಪ್ರಯೋಜನಕ್ಕೆ ಬರಲಿಲ್ಲ.

  ಮುನಿಸಿಕೊಂಡ ರಾಕೇಶ್

  ಮುನಿಸಿಕೊಂಡ ರಾಕೇಶ್

  ''ಕ್ವಾಲಿಟಿಗೆ ಇಲ್ಲಿ ಜಾಗ ಇಲ್ಲ. ನಾವು ಮಾಡಿದ್ದೆಲ್ಲವನ್ನೂ ಶಶಿ ತಂಡ ಕಾಪಿ ಮಾಡಿತು. ಯಾವುದೂ ಒರಿಜಿನಲ್ ಆಗಿ ಇರಲಿಲ್ಲ. ಕವಿತಾ ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲಿಲ್ಲ'' ಅಂತ ಕವಿತಾ ಮೇಲೆ ರಾಕೇಶ್ ಮುನಿಸಿಕೊಂಡಿದ್ದರು.

  ಎಡವಿದ ರಾಕೇಶ್

  ಎಡವಿದ ರಾಕೇಶ್

  ಲವ್ ಲೆಟರ್ ಬರೆಯುವುದರಲ್ಲಿ ಮತ್ತು ಚಿತ್ರ ಬಿಡಿಸುವಲ್ಲಿ ರಾಕೇಶ್ ನೀರಸ ಪ್ರದರ್ಶನ ನೀಡಿದ ಕಾರಣ ಚಟುವಟಿಕೆಯಲ್ಲಿ ಸೋಲು ಅನುಭವಿಸಬೇಕಾಯಿತು.

  English summary
  Bigg Boss Kannada 6: Day 52: Kavitha Gowda impressed with 'Romantic Person' MJ Rakesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X