ನಂಬರ್ 1 ಸ್ಥಾನಕ್ಕೆ ಪಟ್ಟು ಹಿಡಿದು ನಿಂತ 'ಚಿನ್ನು' ಕವಿತಾ.!

Recommended Video

ನಂಬರ್ 1 ಸ್ಥಾನಕ್ಕೆ ಪಟ್ಟು ಹಿಡಿದು ನಿಂತ 'ಚಿನ್ನು' ಕವಿತಾ.! | FILMIBEAT KANNADA

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಐವತ್ತು ದಿನಗಳು ಯಶಸ್ವಿಯಾಗಿ ಮುಗಿದಿದೆ. ಇನ್ನೂ ಐವತ್ತು ದಿನಗಳ ಕಾಲ 'ಬಿಗ್ ಬಾಸ್' ಮನೆಯಲ್ಲಿ ಗಟ್ಟಿಯಾಗಿ ನೆಲೆಯೂರುವಲ್ಲಿ ಯಾರು ಯಶಸ್ವಿ ಆಗುತ್ತಾರೆ ಅಂತ ಈಗಲೇ ಹೇಳುವುದು ಕಷ್ಟ.

'ಬಿಗ್ ಬಾಸ್' ಆಡಿಸುವ ಆಟದಲ್ಲಿ ಯಾವಾಗ, ಏನು ಬೇಕಾದರೂ ಆಗಬಹುದು. ಏನೇ ಆದರೂ, ಯಾರು ಏನೇ ಹೇಳಿದರೂ... ''ನಾನು ಮಾತ್ರ ನಂಬರ್ 1 ಸ್ಥಾನದಲ್ಲೇ ನಿಲ್ಲುವೆ'' ಅಂತ 'ಚಿನ್ನು' ಖ್ಯಾತಿಯ ಕವಿತಾ ಪಟ್ಟು ಹಿಡಿದು ನಿಂತಿದ್ದರು.

ಹಾಗ್ನೋಡಿದ್ರೆ, ಕವಿತಾ ಅಂಡ್ ಟೀಮ್ ಮೊದಲ ನಾಲ್ಕು ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದರು. ಮೊದಲ ನಾಲ್ಕು ಸ್ಥಾನಗಳನ್ನು ಬಿಟ್ಟುಕೊಡಲು ಕವಿತಾ, ಶಶಿ, ಜಯಶ್ರೀ ಮತ್ತು ಧನರಾಜ್ ತಯಾರಿರಲಿಲ್ಲ. ಉಳಿದವರು, ಉಳಿದ ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿತ್ತು.

ಅಷ್ಟಕ್ಕೂ, ಏನೀ ಚಟುವಟಿಕೆ ಅಂದ್ರಾ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಸ್ಪರ್ಧಿಗಳ ಸ್ಥಾನಮಾನ

ಸ್ಪರ್ಧಿಗಳ ಸ್ಥಾನಮಾನ

'ಬಿಗ್ ಬಾಸ್' ಮನೆಯಲ್ಲಿ ಸ್ಪರ್ಧಿಗಳ ಸ್ಥಾನಮಾನವನ್ನು ತಿಳಿಯಲು 'ಸ್ಥಾನಮಾನ' ಎಂಬ ವಿಶೇಷ ಚಟುವಟಿಕೆ ನೀಡಲಾಗಿತ್ತು. ಇದರ ಅನುಸಾರ, 'ಬಿಗ್ ಬಾಸ್' ಮನೆಯಲ್ಲಿ ಇರಲು ಅತ್ಯಂತ ಸೂಕ್ತ ಎನಿಸುವವರಿಗೆ ಮೊದಲ ಸ್ಥಾನ, 'ಬಿಗ್ ಬಾಸ್' ಮನೆಯಲ್ಲಿ ಇರಲು ಸೂಕ್ತವಲ್ಲದ ಸದಸ್ಯರಿಗೆ 11ನೇ ಸ್ಥಾನ ನೀಡಬೇಕಿತ್ತು.

ನಂಬರ್ 1 ಸ್ಥಾನದ ಮೇಲೆ ಕವಿತಾ ಕಣ್ಣು

ನಂಬರ್ 1 ಸ್ಥಾನದ ಮೇಲೆ ಕವಿತಾ ಕಣ್ಣು

''ಮೊದಲನೇ ಸ್ಥಾನದಲ್ಲಿ ಇರಲು ಎಲ್ಲರೂ ಇಲ್ಲಿಗೆ ಬಂದಿದ್ದಾರೆ. ಗೆಲ್ಲಲು ನಾನು ಇಲ್ಲಿಗೆ ಬಂದಿರುವೆ. ಹೀಗಾಗಿ ಮೊದಲನೇ ಸ್ಥಾನದಲ್ಲಿ ಇರಲು ಬಯಸುವೆ'' ಎಂದು ವಾದಿಸಿದ ಕವಿತಾ, ನಂಬರ್ 1 ಸ್ಥಾನದಲ್ಲಿ ನಿಂತರು.

ಪೈಪೋಟಿ ನೀಡಿದ ರಶ್ಮಿ, ಆಂಡಿ

ಪೈಪೋಟಿ ನೀಡಿದ ರಶ್ಮಿ, ಆಂಡಿ

ಮೊದಲನೇ ಸ್ಥಾನದಲ್ಲಿ ನಿಲ್ಲಲು ಕವಿತಾ ಜೊತೆ ರಶ್ಮಿ ಮತ್ತು ಆಂಡಿ ಪೈಪೋಟಿ ನಡೆಸಿದರು. ಆದ್ರೆ, ಕವಿತಾ ಮಾತ್ರ ತಮ್ಮ ಪಟ್ಟನ್ನು ಬಿಡಲಿಲ್ಲ. ಕವಿತಾಗೆ ಮೊದಲನೇ ಸ್ಥಾನ ನೀಡುವಲ್ಲಿ ಯಾರ ಸಮ್ಮತಿಯೂ ಇರಲಿಲ್ಲ. ಆದರೂ, ಕವಿತಾ ಮಾತ್ರ ಹಠ ನಿಲ್ಲಿಸಲಿಲ್ಲ.

ಎರಡನೇ ಸ್ಥಾನಕ್ಕೆ ಜೋತು ಬಿದ್ದ ಶಶಿ

ಎರಡನೇ ಸ್ಥಾನಕ್ಕೆ ಜೋತು ಬಿದ್ದ ಶಶಿ

ಮೊದಲನೇ ಸ್ಥಾನದ ಮೇಲೆ ಕಣ್ಣಿಡದ ಶಶಿ, ಎರಡನೇ ಸ್ಥಾನದಲ್ಲಿ ನಿಂತಿದ್ದರು. ಇನ್ನೂ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಕ್ರಮವಾಗಿ ಜಯಶ್ರೀ ಮತ್ತು ಧನರಾಜ್ ನಿಂತರು.

ಕೊನೆಯ ಸ್ಥಾನ ಆಂಡಿ

ಕೊನೆಯ ಸ್ಥಾನ ಆಂಡಿ

ವಾದ-ವಿವಾದ ಜಾಸ್ತಿ ಆಗುತ್ತಿದ್ದಂತೆಯೇ, ಕೊನೆಯ ಸ್ಥಾನದಲ್ಲಿ ಆಂಡಿ ನಿಂತರು. ಉಳಿದವರು ಯಾವ ನಂಬರ್ ಖಾಲಿ ಇತ್ತೋ, ಆ ಜಾಗದಲ್ಲಿ ನಿಂತುಕೊಂಡರು.

ಮನಸಾಕ್ಷಿಗೆ ಅನುಗುಣವಾಗಿ ಯಾರೂ ನಿಂತಿಲ್ಲ.!

ಮನಸಾಕ್ಷಿಗೆ ಅನುಗುಣವಾಗಿ ಯಾರೂ ನಿಂತಿಲ್ಲ.!

''ಮನಸಾಕ್ಷಿಗೆ ಅನುಗುಣವಾಗಿ ಯಾರೂ ಅವರವರ ಸ್ಥಾನದಲ್ಲಿ ನಿಂತಿಲ್ಲ'' ಎಂದು ಮುರಳಿ ಎಲ್ಲರ ಮುಂದೆ ಹೇಳಿದರು. ಆದರೂ, ''ನನಗೆ ಓವರ್ ಕಾನ್ಫಿಡೆನ್ಸ್ ಇಲ್ಲ. ಜನರ ಮೇಲೆ ನಂಬಿಕೆ ಇದೆ. ನಾನಿಲ್ಲಿ 'ಹೋಗಲಿ ಬಿಡು' ಅನ್ನೋಕೆ ಬಂದಿಲ್ಲ'' ಎಂದು ತಮ್ಮನ್ನ ತಾವು ಸಮರ್ಥಿಸಿಕೊಂಡರು ಕವಿತಾ.

More from Filmibeat

English summary
Bigg Boss Kannada 6: Day 53: Kavitha Gowda rated herself as Number 1.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X