ಅರ್ಧ ತಲೆ ಬೋಳಿಸಿಕೊಂಡ ಆಂಡಿ: ಬೇಜಾರು ಮಾಡಿಕೊಂಡ ಕವಿತಾ.!

Recommended Video

Bigg Boss Kannada Season 6: ಬೇಜಾರು ಮಾಡಿಕೊಂಡ ಕವಿತಾ! | FILMIBEAT KANNADA

''ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು'' ಎಂಬ ಮಾತಿನಂತೆ ಸಿಟ್ಟಿನಲ್ಲಿ ಆಂಡಿ ಆಡಿದ ಒಂದು ಮಾತಿನಿಂದ, ಅವರ ಅರ್ಧ ತಲೆ ಕೂದಲಿಗೆ ಕತ್ತರಿ ಬಿತ್ತು.

ಫುಟೇಜ್ ಗಾಗಿ, ಕ್ಯಾಮರಾದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಸಲುವಾಗಿ ಆಂಡಿ ಕಳೆದ ವಾರ ಪ್ರತಿಭಟನೆ ಕೂಡ ನಡೆಸಿದರು. ''ಲಕ್ಷುರಿ ಬಜೆಟ್'ನಲ್ಲಿ ಬರುವ ಒಂದು ಪದಾರ್ಥವನ್ನೂ ನಾನು ಮುಟ್ಟಲ್ಲ'' ಅಂತ ಆಂಡಿ ಹೇಳಿದ್ದರು. ಆದ್ರೆ, ಲಡ್ಡು ಮತ್ತು ಚಿಕನ್ ಬಂದ್ಮೇಲೆ... ಆಂಡಿಗೆ ತಮ್ಮ ಮಾತಿನ ಬಗ್ಗೆ ನೆನಪೇ ಆಗಲಿಲ್ಲ.

ಆಡಿದ ಮಾತಿನಂತೆ ನಡೆದುಕೊಳ್ಳದ ಆಂಡಿಗೆ ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕಿವಿ ಹಿಂಡಿದರು. ಸುದೀಪ್ ಕ್ಲಾಸ್ ತೆಗೆದುಕೊಂಡ ಮೇಲೆ ಆಂಡಿಗೆ ತಮ್ಮ ತಪ್ಪಿನ ಅರಿವಾಯಿತು. ಹೀಗಾಗಿ, ಮಾತಿನ ಪ್ರಕಾರ, ಆಂಡಿ ಅರ್ಧ ತಲೆ ಬೋಳಿಸಿಕೊಂಡರು. ಮುಂದೆ ಓದಿರಿ...

ಸವಾಲು ಹಾಕಿದ್ದ ಆಂಡಿ.!

ಸವಾಲು ಹಾಕಿದ್ದ ಆಂಡಿ.!

''ನಾನು ಇರುವ ತಂಡದ ಬಗ್ಗೆ ಕವಿತಾ ಸರಿಯಾದ ನಿರ್ಧಾರ ತೆಗೆದುಕೊಂಡು ಗೆಲ್ಲಿಸಿದರೆ, ನಾನು ಅರ್ಧ ತಲೆ ಬೋಳಿಸಿಕೊಂಡು 'ಬಿಗ್ ಬಾಸ್' ಮನೆಯಲ್ಲಿ ಇರ್ತೀನಿ'' ಅಂತ ಶಶಿ ಬಳಿ ಆಂಡಿ ಚಾಲೆಂಜ್ ಮಾಡಿದ್ದರು. ಚಟುವಟಿಕೆಯ ಅಂತ್ಯದಲ್ಲಿ ಆಂಡಿ ಇದ್ದ ತಂಡವನ್ನ ಕವಿತಾ ಗೆಲ್ಲಿಸಿದರು. ಆದ್ರೆ, ತಮ್ಮ ಮಾತಿನ ಬಗ್ಗೆ ಆಂಡಿಗೆ ನೆನಪಾಗಲಿಲ್ಲ.

ಮಾತು ತಪ್ಪಿದ ಆಂಡಿ

ಮಾತು ತಪ್ಪಿದ ಆಂಡಿ

ಚಟುವಟಿಕೆಯ ವೇಳೆ ಗೋಡೆಯನ್ನು ಬೀಳಿಸಲು ಆಂಡಿ ಮುಂದಾದಾಗ ಶಶಿ ತಡೆದಿದ್ದರು. ಹೀಗಾಗಿ, ಕ್ರೀಡಾ ಮನೋಭಾವದಿಂದ ಆಟ ಆಡಿಲ್ಲ ಎಂದು ಲಕ್ಷುರಿ ಬಜೆಟ್ ಪಾಯಿಂಟ್ ಗಳನ್ನು 'ಬಿಗ್ ಬಾಸ್' ಕಡಿತ ಗೊಳಿಸಿದರು. ಆಗ ಮುನಿಸಿಕೊಂಡ ಅಂಡಿ, ಲಕ್ಷುರಿ ಬಜೆಟ್ ಪದಾರ್ಥಗಳನ್ನು ಮುಟ್ಟಲ್ಲ ಅಂತ ಪ್ರಾಮಿಸ್ ಮಾಡಿದ್ದರು. ಆದ್ರೆ, ಕೊನೆಗೆ ಮಾತು ತಪ್ಪಿ ಡ್ರೈ ಫ್ರೂಟ್ಸ್ ಲಡ್ಡುನ ಆಂಡಿ ತಿಂದುಬಿಟ್ಟರು.

ಕ್ಲಾಸ್ ತೆಗೆದುಕೊಂಡ ಸುದೀಪ್

ಕ್ಲಾಸ್ ತೆಗೆದುಕೊಂಡ ಸುದೀಪ್

ಒಂದೇ ವಾರದಲ್ಲಿ ಎರಡು ಬಾರಿ ಮಾತು ತಪ್ಪಿದ ಆಂಡಿಗೆ ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕ್ಲಾಸ್ ತೆಗೆದುಕೊಂಡರು. ಶಶಿಯ ಜ್ಞಾಪಕ ಶಕ್ತಿ ಬಗ್ಗೆ ಪ್ರಶ್ನೆ ಮಾಡುತ್ತಾ, ''ಕವಿತಾ ಏನಾದರೂ ನಮ್ಮ ಟೀಮ್ ನ ಗೆಲ್ಲಿಸಿದರೆ, ಅರ್ಧ ತಲೆ ಬೋಳಿಸಿಕೊಂಡು 'ಬಿಗ್ ಬಾಸ್' ಮನೆಯಲ್ಲಿ ಇರ್ತೀನಿ'' ಎಂದು ಆಂಡಿ ಹೇಳಿದ ಮಾತಿನ ಬಗ್ಗೆ ಸುದೀಪ್ ಚರ್ಚೆ ಶುರು ಮಾಡಿದರು.

ಮಾತಿನ ಪ್ರಕಾರ ನಡೆದುಕೊಳ್ಳಬೇಕು ಎಂದ ಸುದೀಪ್

ಮಾತಿನ ಪ್ರಕಾರ ನಡೆದುಕೊಳ್ಳಬೇಕು ಎಂದ ಸುದೀಪ್

''ನನಗೆ ಅನಿಸುತ್ತದೆ, ನೀವು ಆಡಿದ ಮಾತಿನ ಪ್ರಕಾರ ನಡೆದುಕೊಳ್ಳಬೇಕು'' ಎಂದು ಆಂಡಿಗೆ ಸುದೀಪ್ ಹೇಳಿದರು. ಆಗ, ''ಪ್ಲೀಸ್ ಸರ್.. ನಾನು ತುಂಬಾ ಖರಾಬ್ ಆಗಿ ಕಾಣಿಸುತ್ತೇನೆ'' ಅಂತ ಆಂಡಿ ಪುಸಲಾಯಿಸಲು ಶುರು ಮಾಡಿದರು.

ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ.!

ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ.!

''ನೀವು ಕೊಟ್ಟಿದ್ದ ಮಾತುಗಳನ್ನು ಉಳಿಸಿಕೊಳ್ಳಿ ಆಂಡಿ.. ಲಾಡು ತಿನ್ನಲ್ಲ ಅಂತ ಪ್ರತಿಭಟನೆ ಮಾಡ್ತೀರಿ. ಅದೂ ತಿಂದ್ರಿ. ಲಕ್ಷುರಿ ಬಜೆಟ್ ಮುಟ್ಟಲ್ಲ ಅಂದ್ರಿ. ಎಲ್ಲಾ ಮುಟ್ಟಿದ್ರಿ. ಮಾತು ಉಳಿಸಿಕೊಳ್ಳಿ... ಇನ್ಮೇಲೆ ಬಿಗ್ ಬಾಸ್ ಗೆ ಏನೂ ಪ್ರಾಮಿಸ್ ಮಾಡಲು ಹೋಗಬೇಡಿ. ಯಾಕಂದ್ರೆ, ಅಷ್ಟು ಸೀರಿಯಸ್ ಆಗಿ ನಾವು ನಿಮ್ಮನ್ನ ತೆಗೆದುಕೊಳ್ಳಲು ಆಗಲ್ಲ'' ಅಂತ ಖಾರವಾಗಿ ಸುದೀಪ್ ನುಡಿದರು.

ಅರ್ಧ ತಲೆ ಬೋಳಿಸಿದ ಆಂಡಿ

ಅರ್ಧ ತಲೆ ಬೋಳಿಸಿದ ಆಂಡಿ

ಸುದೀಪ್ ಆಡಿದ ಮಾತುಗಳನ್ನು ಕೇಳಿದ್ಮೇಲೆ, ಆಂಡಿ ಅರ್ಧ ತಲೆ ಬೋಳಿಸಿಕೊಂಡರು. ಅರ್ಧ ತಲೆ ಬೋಳಿಸಿಕೊಂಡಿದ್ದ ಆಂಡಿಯನ್ನು ನೋಡಿ, ''ಉಳಿದ ಅರ್ಧವನ್ನು ತೆಗೆದು ಹಾಯಾಗಿರಿ'' ಎಂದರು ಸುದೀಪ್.

ಕವಿತಾಗೆ ಬೇಜಾರು

ಕವಿತಾಗೆ ಬೇಜಾರು

ಆಂಡಿ ಅರ್ಧ ತಲೆ ಬೋಳಿಸಿದ್ದಕ್ಕೆ, ಕವಿತಾ ಬೇಜಾರು ಮಾಡಿಕೊಂಡರು. ಆದ್ರೆ, ಆಂಡಿ ಮಾತ್ರ ಸ್ಪೋರ್ಟಿವ್ ಆಗಿ ತೆಗೆದುಕೊಂಡು, ಇನ್ನುಳಿದ ಅರ್ಧ ಜರ್ನಿಯನ್ನು ಚೆನ್ನಾಗಿ ಪೂರ್ಣಗೊಳಿಸುವೆ ಅಂತ ಭರವಸೆ ನೀಡಿದ್ದಾರೆ.

More from Filmibeat

English summary
Bigg Boss Kannada 6: Day 55: Andrew shaved half of his head.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X