ಶಶಿ ಮನಸ್ಸಿನ ಮಾತನ್ನೇ ಹೇಳಿದ್ರೂ, ಕವಿತಾ ಇಂಪ್ರೆಸ್ ಆಗಿದ್ದು ರಾಕೇಶ್ ಗೆ.!

Recommended Video

Bigg Boss Kannada Season 6:ಕವಿತಾಗೆ ನಿಜವಾಗಲೂ ಪ್ರಪೋಸ್ ಮಾಡಿಬಿಟ್ರಾ 'ರೈತ' ಶಶಿ.? |FILMIBEAT KANNADA

ಬರೋಬ್ಬರಿ 200 ಹುಡುಗಿಯರನ್ನು ಡೇಟಿಂಗ್ ಮಾಡಿರುವ ಎಂ.ಜೆ.ರಾಕೇಶ್, 'ಚಿನ್ನು' ಕವಿತಾ ರನ್ನೂ ಇಂಪ್ರೆಸ್ ಮಾಡುವಲ್ಲಿ ಯಶಸ್ವಿ ಆಗಿದ್ದಾರೆ.

ಹೌದು, ಕಳೆದ ವಾರ ಎಲ್ಲಾ ಸ್ಪರ್ಧಿಗಳಿಗೂ 'ಗೋಡೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಎಂಬ ಟಾಸ್ಕ್ ನ 'ಬಿಗ್ ಬಾಸ್' ನೀಡಿದ್ದರು. ಈ ಚಟುವಟಿಕೆಯಲ್ಲಿ 'ಸುಂದರಿ' ಕವಿತಾ ರನ್ನ ಇಂಪ್ರೆಸ್ ಮಾಡುವ ಜವಾಬ್ದಾರಿ ಶಶಿ ಮತ್ತು ರಾಕೇಶ್ ಮೇಲಿತ್ತು.

ಶಶಿ ಮತ್ತು ಕವಿತಾ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗುಮಾನಿ ಹಲವರಿಗೆ ಇದ್ದೇ ಇದೆ. ಹೀಗಿದ್ದರೂ, ಶಶಿಯನ್ನ ರಾಕೇಶ್ ಓವರ್ ಟೇಕ್ ಮಾಡಿದ್ದಾರೆ.

'ಗೋಡೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಚಟುವಟಿಕೆಯಲ್ಲಿ ಹೆಚ್ಚು ಇಟ್ಟಿಗೆಗಳನ್ನು ಪಡೆದು ಶಶಿ ಅಂಡ್ ಟೀಮ್ ಗೆದ್ದಿರಬಹುದು. ಆದ್ರೆ, ಕವಿತಾ ಇಂಪ್ರೆಸ್ ಆಗಿದ್ದು ರಾಕೇಶ್ ಗೆ ಮಾತ್ರ ಅನ್ನೋದು ಸತ್ಯ.! ಮುಂದೆ ಓದಿರಿ...

ರಾಕೇಶ್ ಗೆ ಫಿದಾ ಆಗಿದ್ದ ಕವಿತಾ

ರಾಕೇಶ್ ಗೆ ಫಿದಾ ಆಗಿದ್ದ ಕವಿತಾ

''ಹುಡುಗಿಯರನ್ನು ಹೇಗೆ ಇಂಪ್ರೆಸ್ ಮಾಡಬೇಕು ಎಂಬುದು ರಾಕೇಶ್ ಗೆ ಚೆನ್ನಾಗಿ ಗೊತ್ತಿದೆ'' ಅಂತ ಕವಿತಾ ಹೇಳಿದ್ದರು. ಇನ್ನೂ ಚಟುವಟಿಕೆಯಲ್ಲಿ ರಾಕೇಶ್ ಮಾಡಿದ ಕೆಲವು ಸರ್ಕಸ್ ಗಳನ್ನು ನೋಡಿ ಕವಿತಾ ಗೌಡ ಫಿದಾ ಆದರು.

ಶಶಿ ಮನಸ್ಸಿನ ಮಾತು ವರ್ಕೌಟ್ ಆಯ್ತಾ.?

ಶಶಿ ಮನಸ್ಸಿನ ಮಾತು ವರ್ಕೌಟ್ ಆಯ್ತಾ.?

'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ''ಕೋಡ್ ಭಾಷೆಯಲ್ಲಿ ಕವಿತಾ ಜೊತೆಗೆ ಮೂರನೇ ವ್ಯಕ್ತಿಯಾಗಿ ಮಾತನಾಡುತ್ತಿದ್ರಿ. ಈ ವಾರ ಮನಸ್ಸಿನ ಮಾತನ್ನು ನೇರವಾಗಿ ಹೇಳುವ ಅವಕಾಶ ಸಿಕ್ಕಿತ್ತು. ವರ್ಕೌಟ್ ಆಯ್ತಾ.?'' ಎಂದು ಶಶಿಗೆ ಸುದೀಪ್ ಪ್ರಶ್ನಿಸಿದರು. ಇದು 'ವೂಟ್ ಬಿಗ್ ಪ್ರಶ್ನೆ' ಕೂಡ ಆಗಿತ್ತು.

ಶಶಿ ಹೇಳಿದ್ದೇನು.?

ಶಶಿ ಹೇಳಿದ್ದೇನು.?

ಉತ್ತರ ಕೊಡಲು ಹಿಂದೆ ಮುಂದೆ ನೋಡಿದ ಶಶಿ, ''ಟಾಸ್ಕ್ ಪ್ರಕಾರ ವರ್ಕೌಟ್ ಆಯ್ತು'' ಎಂದಷ್ಟೇ ಹೇಳಿದರು. ಕವಿತಾ ಮಾತ್ರ ಏನೂ ಗೊತ್ತಿಲ್ಲದಂತೆ ಕೂತಿದ್ದರು.

ಕವಿತಾ ರನ್ನ ಇಂಪ್ರೆಸ್ ಮಾಡಿದ್ದು ಯಾರು.?

ಕವಿತಾ ರನ್ನ ಇಂಪ್ರೆಸ್ ಮಾಡಿದ್ದು ಯಾರು.?

ಚಟುವಟಿಕೆಯಲ್ಲಿ ಹೆಚ್ಚು ಇಟ್ಟಿಗೆ ಪಡೆದು ಶಶಿ ಗೆದ್ದಿರಬಹುದು. ಆದ್ರೆ, ಕವಿತಾನ ಇಂಪ್ರೆಸ್ ಮಾಡಿದ್ದು ಯಾರು ಅಂತ ಸುದೀಪ್ ಕೇಳಿದಾಗ, ಕವಿತಾ ಬಾಯಿಂದ ಬಂದ ಉತ್ತರ 'ರಾಕೇಶ್'.!

More from Filmibeat

English summary
Bigg Boss Kannada 6: Day 55: Kavitha Gowda admits that she is impressed with MJ Rakesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X