ಇಷ್ಟು ದಿನ ಕಳೆದ ಮೇಲೆ ರಾಕೇಶ್ ಗೆ ಸಡನ್ನಾಗಿ ಭಯ ಕಾಡುತ್ತಿದೆ.!
Recommended Video

ತಾನು ಮಾಡುತ್ತಿರುವುದೇ ಸರಿ.. ತಾನು ಹೇಳುತ್ತಿರುವುದೇ ಸರಿ.. ಎಂಬ ಧೋರಣೆಯೊಂದಿಗೆ 'ಬಿಗ್ ಬಾಸ್' ಮನೆಯಲ್ಲಿ ಐವತ್ತು ದಿನ ಕಳೆದ ಮೇಲೆ ರಾಕೇಶ್ ಗೆ ಈಗ ಭಯ ಕಾಡುತ್ತಿದ್ಯಂತೆ.!
''200 ಹುಡುಗಿಯರ ಜೊತೆಗೆ ಡೇಟಿಂಗ್ ಮಾಡಿದ್ದೇನೆ'' ಎಂದು ಹೆಮ್ಮೆಯಿಂದ ಪದೇ ಪದೇ ಹೇಳಿಕೊಳ್ಳುವ ರಾಕೇಶ್ ಗೆ 'ಕೆಟ್ಟ ಇಮೇಜ್' ಬಗ್ಗೆ ಹೆದರಿಕೆ ಆಗುತ್ತಿದೆ.
ಹೌದು, 'ಬಿಗ್ ಬಾಸ್' ಮನೆಯಲ್ಲಿ ರಾಕೇಶ್-ಅಕ್ಷತಾ ನಡುವಿನ Intense ಫ್ರೆಂಡ್ ಶಿಪ್ ಬಗ್ಗೆ ಇತರೆ ಸ್ಪರ್ಧಿಗಳು ತರಾಟೆಗೆ ತೆಗೆದುಕೊಂಡಾಗ ರಾಕೇಶ್ ತಲೆ ಕೆಡಿಸಿಕೊಂಡಿರಲಿಲ್ಲ. ''ಒಂದು ವಾರ ರಾಕೇಶ್ ಜೊತೆಗೆ ಮಾತನಾಡಬೇಡಿ'' ಎಂದು ಅಕ್ಷತಾಗೆ ಸುದೀಪ್ ಹೇಳಿದಾಗ ಅದರ ಸೂಕ್ಷ್ಮತೆ ರಾಕೇಶ್ ಗೆ ಅರ್ಥ ಆಗಲಿಲ್ಲ. ಅಕ್ಷತಾ ಮಾತುಬಿಟ್ಟಾಗ ಆಕೆಯ ಮನವೊಲಿಸಲು ಮುಂದಾಗಿದ್ದ ರಾಕೇಶ್ ಗೆ ಇದೀಗ ಸಡನ್ ಆಗಿ 'ಇಮೇಜ್' ಬಗ್ಗೆ ಭಯ ಆಗುತ್ತಿದೆ.!

ಅಷ್ಟಕ್ಕೂ, ಈ ವಾರ ರಾಕೇಶ್ ಬಗ್ಗೆ ಯಾರೂ ನೆಗೆಟಿವ್ ಅಗಿ ಮಾತನಾಡಲಿಲ್ಲ. ತಮ್ಮ ತಾಯಿ ಕಡೆಯಿಂದಲೂ ರಾಕೇಶ್ ಗೆ ಒಳ್ಳೆ ಸಂದೇಶವೇ ಸಿಕ್ತು. ಹೀಗಿದ್ದರೂ, 'ಭಯ ಆಗುತ್ತಿದೆ' ಅಂತ ಕಣ್ಣೀರಿಟ್ಟಿದ್ದಾರೆ ರಾಕೇಶ್.
''ನಾನು ಏನು ತಪ್ಪು ಮಾಡಿದ್ದೇನೆ.? ನನಗೆ ತುಂಬಾ ಭಯ ಆಗುತ್ತಿದೆ. ಹೊರಗೆ ಏನಾಗುತ್ತಿದ್ಯೋ.. ನನ್ನ ಪರ್ಸನಲ್ ಲೈಫ್ ಮತ್ತು ಮನೆಯಲ್ಲಿ ಏನು ಆಗುತ್ತಿದ್ಯೋ ಅಂತ ಭಯ ಆಗುತ್ತಿದೆ'' ಎನ್ನುತ್ತ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ರಾಕೇಶ್.
ಒಂದು ವಾರದಿಂದ ರಾಕೇಶ್ ಜೊತೆಗೆ ಮಾತುಬಿಟ್ಟು, ಕಿತ್ತಾಡಿಕೊಂಡಿದ್ದ ಅಕ್ಷತಾ, ರಾಕೇಶ್ ಕಣ್ಣೀರಿಡುವುದನ್ನು ನೋಡಿ ಸಮಾಧಾನ ಮಾಡಿದ್ದಾರೆ.


Click it and Unblock the Notifications











