ಪ್ರೀತಿಯ 'ಪುಟ್ಟ'ನ ಸೇಫ್ ಮಾಡದ ರಾಕೇಶ್: ಅಕ್ಷತಾ ನಿಮಗಿದು ಆಗ್ಬೇಕಿತ್ತು.!

Recommended Video

Bigg Boss Kannada Season 6: ಪ್ರೀತಿಯ 'ಪುಟ್ಟ'ನ ಸೇಫ್ ಮಾಡದ ರಾಕೇಶ್: ಅಕ್ಷತಾ ನಿಮಗಿದು ಆಗ್ಬೇಕಿತ್ತು.!

'ಬಿಗ್ ಬಾಸ್' ಮನೆಯಲ್ಲಿ 'ಅತಿ' ಎನಿಸುವಷ್ಟು ಆತ್ಮೀಯತೆ ಹೊಂದಿದ್ದವರು ಅಕ್ಷತಾ ಪಾಂಡವಪುರ ಮತ್ತು ಎಂ.ಜೆ.ರಾಕೇಶ್. ಹಾಗ್ನೋಡಿದ್ರೆ, ಅಕ್ಷತಾಗೆ ರಾಕೇಶ್ ಪ್ರೀತಿಯಿಂದ 'ಪುಟ್ಟ', 'ಚಿನ್ನು' ಅಂತೆಲ್ಲಾ ಕರೆಯುತ್ತಿದ್ದರು.

ಪ್ರಾಂಕ್ ಚಟುವಟಿಕೆಯಲ್ಲಿ ಅಕ್ಷತಾ ಔಟ್ ಆದಾಗ, ರಾಕೇಶ್ ಕಣ್ಣಲ್ಲಿ ಗಂಗಾ-ಕಾವೇರಿ ಸುರಿದಿತ್ತು. ಅಕ್ಷತಾನ ಸೇಫ್ ಮಾಡಲು ರಾಕೇಶ್ ಬೇಜಾನ್ ಪ್ಲಾನಿಂಗ್, ಪ್ಲಾಟಿಂಗ್ ಮಾಡಿದ್ದರು.

ಆದ್ರೀಗ, ಅಕ್ಷತಾನ ಉಳಿಸುವ ಅಧಿಕಾರ ಸ್ವತಃ ರಾಕೇಶ್ ಕೈಯಲ್ಲಿತ್ತು. ಹಲವು ಬಾರಿ ರಾಕೇಶ್ ಗೆ ಅಕ್ಷತಾ ಸಹಾಯ ಮಾಡಿದ್ದಾರೆ. ಕ್ಯಾಪ್ಟನ್ ಆಯ್ಕೆ ಚಟುವಟಿಕೆಯಲ್ಲೂ ರಾಕೇಶ್ ಗೆ ಅಕ್ಷತಾ ಸಪೋರ್ಟ್ ಮಾಡಿದ್ದರು. ಹೀಗಿದ್ದರೂ, 'ಆತ್ಮೀಯ ಗೆಳತಿ'ಯನ್ನು ನಾಮಿನೇಷನ್ ನಿಂದ ರಾಕೇಶ್ ಬಚಾವ್ ಮಾಡಲಿಲ್ಲ.

ಅಕ್ಷತಾ ಮತ್ತು ರಾಕೇಶ್ ನಡುವೆ ಈಗ ಅದೇ ಅನುಬಂಧ ಇಲ್ಲ ನಿಜ. ತಾಯಿ ಕಡೆಯಿಂದ ಕಟ್ಟುನಿಟ್ಟಿನ ಆದೇಶ ಬಂದ್ಮೇಲೆ, ರಾಕೇಶ್ ರಿಂದ ಅಕ್ಷತಾ ದೂರ ಉಳಿದಿರುವುದು ಸತ್ಯ. ಆದ್ರೆ, ಅಲ್ಲಿಯವರೆಗೂ ಅಕ್ಷತಾ ಮಾಡಿದ ಸಹಾಯವನ್ನು ಪರಿಗಣಿಸಿ ರಾಕೇಶ್ ಒಂದು ಜೀವದಾನ ನೀಡಬಹುದಿತ್ತು. ಆದ್ರೆ, ರಾಕೇಶ್ ಹಾಗೆ ಮಾಡಲಿಲ್ಲ.!

ವೂಟ್ ನಲ್ಲಿ ಕೇಳಲಾದ 'ಬಿಗ್' ಪ್ರಶ್ನೆಯನ್ನು ಮನದಲ್ಲಿ ಇಟ್ಟುಕೊಂಡು ಒಮ್ಮೆ ನಾಮಿನೇಷನ್ ಪ್ರಕ್ರಿಯೆಯಲ್ಲಿ ರಾಕೇಶ್ ರನ್ನ ಸೇಫ್ ಮಾಡಿ, ಅಕ್ಷತಾ ಖುದ್ದು ನಾಮಿನೇಟ್ ಆಗಿದ್ದರು. ಆ ಋಣವನ್ನೂ ತೀರಿಸುವ ಮನಸ್ಸು ಮಾಡಲಿಲ್ಲ ರಾಕೇಶ್.

''ಬಿಗ್ ಬಾಸ್' ಮನೆಯಲ್ಲಿ ಅಕ್ಷತಾ ಅಂತಹ ಸ್ಪರ್ಧಿ ಇರಲೇಬೇಕು'' ಅಂತ ಹಿಂದೊಮ್ಮೆ ವಾದ ಮಾಡಿದ್ದ ರಾಕೇಶ್, ಅದೇ ಕಾರಣವನ್ನ ನೀಡಿ ಮುರಳಿ ರವರನ್ನ ಸೇಫ್ ಮಾಡಿಬಿಟ್ಟರು. ಇದು ಅಕ್ಷತಾ ಮನಸ್ಸನ್ನ ಘಾಸಿಗೊಳಿಸಿತು. ಪರಿಣಾಮ, ಅಕ್ಷತಾ ಕಣ್ಣೀರು ಹಾಕಿದರು. ತಮ್ಮ ತಾಯಿಗೆ ಪಶ್ಚಾತ್ತಾಪದಿಂದ ಕ್ಷಮೆ ಕೇಳಿದರು. ಮುಂದೆ ಓದಿರಿ...

ವಿಶೇಷ ಅಧಿಕಾರ ಪಡೆದಿದ್ದ ರಾಕೇಶ್

ವಿಶೇಷ ಅಧಿಕಾರ ಪಡೆದಿದ್ದ ರಾಕೇಶ್

ರಾಕೇಶ್ ಕ್ಯಾಪ್ಟನ್ ಆಗಿದ್ದರಿಂದ, ಅವರಿಗೆ ಒಂದು ವಿಶೇಷ ಅಧಿಕಾರವನ್ನು 'ಬಿಗ್ ಬಾಸ್' ನೀಡಿದರು. ಇದರ ಅನುಸಾರ, ನಾಮಿನೇಟ್ ಆಗಿರುವ ಸದಸ್ಯರ ಪೈಕಿ ಒಬ್ಬರನ್ನು ರಾಕೇಶ್ ಸೇಫ್ ಮಾಡಬಹುದಿತ್ತು ಅಥವಾ ತಮ್ಮನ್ನ ತಾವು ಉಳಿಸಿಕೊಳ್ಳಬಹುದಿತ್ತು.

ಅಪ್ ಸೆಟ್ ಆದ ಅಕ್ಷತಾ

ಅಪ್ ಸೆಟ್ ಆದ ಅಕ್ಷತಾ

'ಬಿಗ್ ಬಾಸ್' ಕೊಟ್ಟ ವಿಶೇಷ ಅಧಿಕಾರವನ್ನು ಕೇಳಿ, ''ನೀವೂ ಸೇಫ್ ಆಗಬಹುದು'' ಎಂದು ರಾಕೇಶ್ ಗೆ ಅಕ್ಷತಾ ಹೇಳಿದರು. ''ಯೋಚನೆ ಮಾಡುವೆ'' ಅಂತ ಸ್ವಲ್ಪ ಸಮಯ ತೆಗೆದುಕೊಂಡು, ''ಈ ಮನೆಯಲ್ಲಿ ಪ್ರೀತಿ ಗೆದ್ದಿದ್ದೇನೆ. ಅಷ್ಟೇ ಪ್ರೀತಿ ಹೊರಗೂ ಗೆಲ್ಲುತ್ತೇನೆ ಎಂಬ ನಂಬಿಕೆ ನನ್ನಲ್ಲಿ ಇದೆ. ಕ್ಯಾಪ್ಟನ್ ಆಗಿ ನಾನು ಮಾದರಿ ಆಗಿ ಇರಬೇಕು ಎಂದು ನನ್ನನ್ನ ನಾನು ಸೇಫ್ ಮಾಡಿಕೊಳ್ಳಲ್ಲ. ಸ್ವಾರ್ಥಿಯಾಗಿ ಯೋಚಿಸುವುದಿಲ್ಲ. ನನ್ನ ಫಿಲಾಸಫಿ ಪ್ರಕಾರ, ಈ ಮನೆಗೆ ಮುರಳಿ ಅವರ ಅವಶ್ಯಕತೆ ಇದೆ. ಈ ಮನೆಗೆ ಅನುಭವ ಇರುವವರು ಬೇಕು. ಈ ಜರ್ನಿಗೆ ಅವರು ಬಹಳ ಮುಖ್ಯ'' ಎನ್ನುತ್ತಾ ಮುರಳಿಯನ್ನ ರಾಕೇಶ್ ಸೇಫ್ ಮಾಡಿದರು. ಇದನ್ನ ನೋಡಿ ಅಕ್ಷತಾ ಅಪ್ ಸೆಟ್ ಆದರು. ಕಣ್ಣೀರಿಡಲು ಆರಂಭಿಸಿದರು.

''ನನಗಿದು ಆಗ್ಬೇಕಿತ್ತು.!''

''ನನಗಿದು ಆಗ್ಬೇಕಿತ್ತು.!''

''ನಾನಾಗಿದ್ದರೆ, ಮುಲಾಜಿಲ್ಲದೇ ಅವನನ್ನು (ರಾಕೇಶ್) ಸೇಫ್ ಮಾಡುತ್ತಿದ್ದೆ. ಕ್ಯಾಪ್ಟನ್ ಆಯ್ಕೆ ಮಾಡುವಾಗ ಅವನು ಕೇಳದೇ ಇದ್ದರೂ, ಅವನಿಗೇ ಹೋಗಿ ಸಪೋರ್ಟ್ ಮಾಡಿದೆ. ಆಗಬೇಕಿತ್ತು ನನಗೆ ಇದು. ದಯವಿಟ್ಟು ನನ್ನನ್ನ ಕ್ಷಮಿಸು ಅಮ್ಮ'' ಎನ್ನುತ್ತಾ ಅಕ್ಷತಾ ಕಣ್ಣೀರಿಟ್ಟರು.

ಫೇಕ್ ರಾಕೇಶ್.!

ಫೇಕ್ ರಾಕೇಶ್.!

''ಅವನು (ರಾಕೇಶ್) ಫೇಕ್. ಈಗ ಮಾಡಿದ್ದು ಫೇಕಾ.? ಅಥವಾ ಪ್ರಾಂಕ್ ಟಾಸ್ಕ್ ನಲ್ಲಿ ಮಾಡಿದ್ದು ಫೇಕಾ.? ನಾನು ಈಡಿಯೆಟ್ ಆದೆ ಅಂತ ನನಗೇ ಪಶ್ಚಾತ್ತಾಪ ಆಗುತ್ತಿದೆ'' - ಅಕ್ಷತಾ ಪಾಂಡವಪುರ

ಮರ್ಯಾದೆ ಹೋಯ್ತು.!

ಮರ್ಯಾದೆ ಹೋಯ್ತು.!

''ಅವನಿಂದ (ರಾಕೇಶ್) ನಾನು ಮರ್ಯಾದೆ ಕಳಕೊಂಡೆ. ಅವನಿಂದ ನನಗೆ ಮರ್ಯಾದೆ ಹೋಯ್ತು. ಎಷ್ಟೆಲ್ಲಾ ಸಪೋರ್ಟ್ ಮಾಡಿದ್ದೇನೆ ಅವನಿಗೆ. ನಾನು ಯಾವ ಸೆಲೆಬ್ರಿಟಿನೂ ಅಲ್ಲ. ಇವನಾಡುವ ಆಟಕ್ಕೆ ನಾನು ಬಲಿಯಾದೆ. ನನ್ನ ತಾಯಿಗೆ ನಾನು ಕ್ಷಮೆ ಕೇಳಬೇಕು'' - ಅಕ್ಷತಾ ಪಾಂಡವಪುರ

ಫೇಕ್ ಮಾತುಗಳನ್ನು ನಂಬಿ ಹೀಗೆ ಆಗಿರುವೆ.!

ಫೇಕ್ ಮಾತುಗಳನ್ನು ನಂಬಿ ಹೀಗೆ ಆಗಿರುವೆ.!

ಅಕ್ಷತಾ ಮನವೊಲಿಸಲು ರಾಕೇಶ್ ಮುಂದಾದಾಗ ''ಅವನ ಸ್ಪಷ್ಟನೆಯನ್ನ ಕೇಳಿ ಕೇಳಿಯೇ ನಾನು ಹೀಗೆ ಆಗಿರೋದು. ಅವನ ಫೇಕ್ ಮಾತುಗಳನ್ನು ನಂಬಿ ನಾನು ಹೀಗೆ ಆಗಿರುವುದು'' ಎಂದು ಅಕ್ಷತಾ ಕೂಗಾಡಿದರು. ಅಲ್ಲದೇ, ''ನಾನು ಕ್ಯಾಪ್ಟನ್ ಆದಾಗ ನನಗೆ ನೀವು ಎಷ್ಟು ಸಪೋರ್ಟ್ ಮಾಡಿದ್ರಿ.? ಪನ್ನೀರ್ ವಿಷಯಕ್ಕೆ ಎಷ್ಟು ದೊಡ್ಡ ಗಲಾಟೆ ಮಾಡಿದ್ರಿ.?'' ಎಂದು ರಾಕೇಶ್ ತಪ್ಪನ್ನ ಅಕ್ಷತಾ ಒತ್ತಿ ಒತ್ತಿ ಹೇಳಿದರು.

ಶಬ್ಬಾಸ್..

ಶಬ್ಬಾಸ್..

''ನಾನೇ ಈಡಿಯೆಟ್. ನಾನು ಎಮೋಷನಲಿ ಇಷ್ಟೊಂದು ಹರ್ಟ್ ಆಗಬಾರದಿತ್ತು. ಮುರಳಿಗೆ ಏನು ಕಾರಣ ಕೊಟ್ಟಿದ್ದೆ, ಅದೇ ಕಾರಣವನ್ನ ಮೊದಲ ವಾರದಿಂದಲೂ ನೀನು ನನಗೆ ಕೊಡುತ್ತಲೇ ಬಂದಿದ್ದೆ. ಈಗ ಅವರ ಮುಂದೆ ನಾನು ನಿನ್ನ ಪ್ರಕಾರ ಇಲ್ಲಿ ಇರಲು ಅರ್ಹಳಲ್ಲ. ಚೆನ್ನಾಗಿ ಗೇಮ್ ಆಡ್ತಿದ್ಯಾ. ವೆರಿ ಗುಡ್.. ಶಬ್ಬಾಸ್'' ಅಂತ ರಾಕೇಶ್ ಗೆ ಹೇಳಿ ಚಪ್ಪಾಳೆ ತಟ್ಟಿದರು ಅಕ್ಷತಾ.

ನಿಮ್ಮ ಅಭಿಪ್ರಾಯ ಏನು.?

ನಿಮ್ಮ ಅಭಿಪ್ರಾಯ ಏನು.?

ನಾಮಿನೇಷನ್ ವೇಳೆ ರಾಕೇಶ್ ತೆಗೆದುಕೊಂಡ ನಿರ್ಧಾರ ಸರಿ ಅಂತ ನಿಮಗೆ ಅನ್ಸುತ್ತಾ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

More from Filmibeat

English summary
Bigg Boss Kannada 6: Day 57: Akshata is upset because of Rakesh's decision.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X