ಕ್ಯಾಪ್ಟನ್ ರಾಕೇಶ್ ತೆಗೆದುಕೊಂಡ ನಿರ್ಧಾರ ಸರಿಯೋ.? ತಪ್ಪೋ.?
Recommended Video

ವೈಲ್ಡ್ ಕಾರ್ಡ್ ಗೊಂಬೆಗಳಿಗೆ ಜೀವ ಕೊಡಲು ನೇರವಾಗಿ ನಾಮಿನೇಟ್ ಆಗಿದ್ದ ಎಂ.ಜೆ.ರಾಕೇಶ್, ವಾರದ ಕ್ಯಾಪ್ಟನ್ ಕೂಡ ಆಗ್ಬಿಟ್ಟರು. ಕ್ಯಾಪ್ಟನ್ ಆದ್ಮೇಲೆ ಇಮ್ಯೂನಿಟಿ ಸಿಗಲೇಬೇಕು. ಹೀಗಾಗಿ, 'ವಿಶೇಷ ಅಧಿಕಾರ'ವನ್ನ ರಾಕೇಶ್ ಗೆ 'ಬಿಗ್ ಬಾಸ್' ದಯಪಾಲಿಸಿದರು.
'ವಿಶೇಷ ಅಧಿಕಾರ'ದ ಅನುಸಾರ, ನಾಮಿನೇಟ್ ಆಗಿರುವವರ ಪೈಕಿ ಯಾರಾದರೂ ಒಬ್ಬರನ್ನ ರಾಕೇಶ್ ಉಳಿಸಬಹುದಿತ್ತು. ಅಥವಾ ತಮ್ಮನ್ನ ತಾವೇ ಸೇಫ್ ಮಾಡಿಕೊಳ್ಳಬಹುದಿತ್ತು.
'ಗುಡ್ನೆಸ್' ನೆಪದಲ್ಲಿ ತಮ್ಮನ್ನ ತಾವು ಸೇಫ್ ಮಾಡಿಕೊಳ್ಳದ ರಾಕೇಶ್, ಅದಾಗಲೇ ನಾಮಿನೇಟ್ ಆಗಿದ್ದ ಮುರಳಿಯನ್ನ ಬಚಾವ್ ಮಾಡಿದರು. ಇದರಿಂದ ಅಕ್ಷತಾ ಅಪ್ ಸೆಟ್ ಆದರು.
ಕ್ಯಾಪ್ಟನ್ ಆಗಿ ರಾಕೇಶ್ ತೆಗೆದುಕೊಂಡ ಈ ನಿರ್ಧಾರದ ಬಗ್ಗೆ 'ಬಿಗ್ ಬಾಸ್' ಮನೆಯಲ್ಲೇ ಭಿನ್ನಮತ ಮೂಡಿದೆ. ರಾಕೇಶ್ ನಿರ್ಧಾರದ ಬಗ್ಗೆ ಯಾರ್ಯಾರು ಏನಂತ ಕಾಮೆಂಟ್ ಮಾಡಿದ್ದಾರೆ ಎಂಬುದನ್ನ ನೀವೇ ಓದಿರಿ, ಫೋಟೋ ಸ್ಲೈಡ್ ಗಳಲ್ಲಿ...

ಭೇಷ್ ಎಂದ ಮೇಘಶ್ರೀ
''ಮನೆಯಲ್ಲಿ ಪ್ರೀತಿ ಗಳಿಸಿರುವ ಹಾಗೆ, ಹೊರಗೂ ಪ್ರೀತಿ ಗಳಿಸಿರುವೆ ಎಂಬ ನಂಬಿಕೆ ಇದೆ ಅಂತ ಹೇಳಿದ್ರಿ. ಆ ಪಾಯಿಂಟ್ ನನಗೆ ಇಷ್ಟ ಆಯ್ತು'' ಎಂದು ರಾಕೇಶ್ ಗೆ ಭೇಷ್ ಎಂದರು ಮೇಘಶ್ರೀ.

ಸಂಸಾರ ಮಾಡಲು ಬಂದಿಲ್ಲ.!
''ಮನೆಗೆ ಇವರು ಬೇಕು ಅಂತ ಹೇಳೋಕೆ, ಇಲ್ಲಿ ಯಾರೂ ಸಂಸಾರ ಮಾಡಲು ಬಂದಿಲ್ಲ. ಎಲ್ಲರದ್ದೂ ಒಂದು ಜರ್ನಿ. ಮುಗಿಸಿಕೊಂಡು ಹೋಗಬೇಕು ಅಷ್ಟೇ. ನಿನಗೆ ಸಿಕ್ಕ ಇಮ್ಯೂನಿಟಿಯನ್ನ ನೀನು ಇಟ್ಟುಕೊಳ್ಳಬೇಕಿತ್ತು. ಇದರಿಂದ ಯಾವ ಗುಡ್ನೆಸ್ ಕೂಡ ಸಾಧಿಸಲು ಆಗಲ್ಲ'' ಅಂತ ರಾಕೇಶ್ ಗೆ ಕ್ಲಾಸ್ ತೆಗೆದುಕೊಂಡರು ಜಯಶ್ರೀ.

ಡಬ್ಬಾ ರೀಸನ್
''ಮುರಳಿ ಬಗ್ಗೆ ಡಬ್ಬಾ ರೀಸನ್ ಕೊಟ್ಟು ಸೇಫ್ ಮಾಡಿದೆ. ನಮ್ಮೆಲ್ಲರಿಗಿಂತಲೂ ಮುರಳಿ ಚೆನ್ನಾಗಿ ಆಟ ಆಡುತ್ತಿದ್ದಾರೆ. ಮುರಳಿ ನಾಮಿನೇಟ್ ಆಗುತ್ತಿಲ್ಲ. ಇದಕ್ಕಿಂತ ಇನ್ನೇನು ಬೇಕು.?'' ಅಂತಾರೆ ಆಂಡ್ರ್ಯೂ.

ಒಳ್ಳೆಯ ನಿರ್ಧಾರ ಎಂದ ಶಶಿ
''ನಿನ್ನನ್ನ ನೀನು ಸೇಫ್ ಮಾಡಿಕೊಳ್ಳದೇ ಇರುವುದು ಒಳ್ಳೆಯ ನಿರ್ಧಾರ'' ಎಂದು ರಾಕೇಶ್ ಗೆ ಹೇಳಿದರು ಶಶಿ.

ರಶ್ಮಿ ಏನಂತಾರೆ.?
''ಮುರಳಿ ಸೆಲೆಬ್ರಿಟಿ. ಆದ್ರೆ, ಅಕ್ಷತಾ ಬಗ್ಗೆ ಜನರಿಗೆ ಅಷ್ಟಾಗಿ ಗೊತ್ತಿಲ್ಲ. ಮುರಳಿ ಬಗ್ಗೆ ಯಾವುದೇ ನೆಗೆಟಿವ್ ಇಲ್ಲ. ಹೀಗಿರುವಾಗ, ಅಕ್ಷತಾಗಿಂತ ಮುರಳಿಗೆ ಔಟ್ ಆಗುವ ಚಾನ್ಸಸ್ ಇತ್ತು ಅಂತ ಹೇಗೆ ಹೇಳ್ತೀಯಾ.? ಅಕ್ಷತಾ ನಿನಗಾಗಿ ನಾಮಿನೇಟ್ ಆಗಿದ್ದಳು. ಆಕೆಗೆ ಬಾಕಿ ತೀರಿಸಬೇಕಿತ್ತು'' ಎಂಬುದು ರಶ್ಮಿ ಅಭಿಪ್ರಾಯ.

ತೂಕ ಜಾಸ್ತಿ ಆಗುತ್ತಿತ್ತು
''ನನ್ನ ಯಾಕಾದರೂ ಸೇಫ್ ಮಾಡಿದ್ಯೋ.. ಅಕ್ಷತಾ ಸುಮ್ಮನೆ ಇದ್ದಿದ್ದರೆ, ಇಬ್ಬರು ಬೇರೆ ಆಗಿದ್ದಾರೆ ಅಂತ ತೂಕ ಜಾಸ್ತಿ ಆಗುತ್ತಿತ್ತು'' ಅಂತಾರೆ ಮುರಳಿ.

ನವೀನ್ ನೋಡಿದ್ದು, ಹೇಳಿದ್ದು...
''ಅಕ್ಷತಾ ಕಂಡ್ರೆ ಯಾರಿಗೆ ಆಗಲ್ಲ.. ಅವರು ನೀನು ಮಾಡಿದ್ದು ಸರಿ ಅಂತಾರೆ. ಮುರಳಿ ಕಂಡ್ರೆ ಆಗದೇ ಇರುವವರು ನೀನು ಮಾಡಿದ್ದು ತಪ್ಪು ಅಂತಾರೆ'' ಅಂತ ರಾಕೇಶ್ ಗೆ ಬೋಧಿಸಿದರು ನವೀನ್ ಸಜ್ಜು.


Click it and Unblock the Notifications











