ಏನ್ ಆಶ್ಚರ್ಯ: 'ಜೀವದ ಗೆಳತಿ' ಜಯಶ್ರೀಯನ್ನೇ ನಾಮಿನೇಟ್ ಮಾಡಿದ ಕವಿತಾ.!
'ಬಿಗ್ ಬಾಸ್' ಮನೆಯಲ್ಲಿ ಯಾರು ಯಾವಾಗ ಯಾರ ವಿರುದ್ಧ ತಿರುಗಿ ಬೀಳ್ತಾರೆ ಅಂತ ಹೇಳುವುದೇ ಕಷ್ಟ. ಇವತ್ತು ದೋಸ್ತ್ ಗಳಾಗಿದ್ದವರು ನಾಳೆ ದುಷ್ಮನ್ ಆಗಬಹುದು. ಬೆನ್ನಿಗೆ ಚೂರಿ ಹಾಕಬಹುದು. ಹಾವು-ಏಣಿ ಅಂತಹ ಈ ಆಟದಲ್ಲಿ ಇವೆಲ್ಲವೂ ಮಾಮೂಲು.
'ಬಿಗ್ ಬಾಸ್' ಮನೆಯಲ್ಲಿ ಮೊದಲ ದಿನದಿಂದಲೂ ಕವಿತಾ ಮತ್ತು ಜಯಶ್ರೀ ಅತ್ಯಂತ ಆತ್ಮೀಯ ಗೆಳತಿಯರು. ಅಸಲಿಗೆ, ಇವರಿಬ್ಬರು 'ಬಿಗ್ ಬಾಸ್'ಗೆ ಬರುವ ಮೊದಲಿನಿಂದಲೂ ಫ್ರೆಂಡ್ಸ್ ಅಂತೆ. ಅದೇ ಫ್ರೆಂಡ್ ಶಿಪ್ 'ಬಿಗ್ ಬಾಸ್' ಮನೆಯಲ್ಲೂ ಮುಂದುವರೆಯಿತು.
ಕವಿತಾ ಮತ್ತು ಜಯಶ್ರೀಯೊಂದಿಗೆ ಶಶಿ ಮತ್ತು ಧನರಾಜ್ ಕೂಡ ಸೇರಿಕೊಂಡರು. ಈ ನಾಲ್ವರದ್ದು ಒಂದು ಗುಂಪು ಎಂದು 'ಬಿಗ್ ಬಾಸ್' ಮನೆಯಲ್ಲಿ ಬ್ರ್ಯಾಂಡ್ ಆಗಿದೆ.
ಇಲ್ಲಿಯವರೆಗೂ ಈ ನಾಲ್ವರು ಯಾವುದರಲ್ಲಿಯೂ ಒಬ್ಬರನ್ನೊಬ್ಬರು ಬಿಟ್ಟುಕೊಟ್ಟಿರಲಿಲ್ಲ. ಆದ್ರೀಗ, ಜಯಶ್ರೀ ಯವರನ್ನೇ ಹೊರಗೆ ಕಳುಹಿಸಲು ಕವಿತಾ ಪ್ಲಾನ್ ಮಾಡಿದ್ದಾರೆ. ಮುಂದೆ ಓದಿರಿ...

ಅಚ್ಚರಿ ಅಂದ್ರೆ ಇದೇ.!
ನಾಮಿನೇಷನ್ ವೇಳೆ ನಡೆದ ಅಚ್ಚರಿ ಅಂದ್ರೆ ಇದೇ ನೋಡಿ. ಒಂಬತ್ತನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಜಯಶ್ರೀ ಹೆಸರನ್ನ ಕವಿತಾ ತೆಗೆದುಕೊಂಡಿದ್ದಾರೆ.

ಕವಿತಾ ಕೊಟ್ಟ ಕಾರಣ ಏನು.?
''ಪ್ರತಿಯೊಂದು ವಿಚಾರವನ್ನೂ ಜಯಶ್ರೀ ವೈಯುಕ್ತಿಕವಾಗಿ ಪರಿಗಣಿಸುತ್ತಿದ್ದಾರೆ. ಕ್ರೀಡಾ ಮನೋಭಾವದಿಂದ ಆಡುತ್ತಿಲ್ಲ. ಅವರಿಗೆ ಪರ್ಸನಲ್ ಪ್ರಾಬ್ಲಂಗಳಿದೆ. ಎಲ್ಲರ ಜೊತೆ ಮಿಂಗಲ್ ಆಗಬೇಕು ಅಂತ ನನಗೆ ಅನ್ಸುತ್ತೆ'' ಎಂಬ ಕಾರಣವನ್ನು ನೀಡಿ ಜಯಶ್ರೀ ಯನ್ನ ಕವಿತಾ ನಾಮಿನೇಟ್ ಮಾಡಿದ್ದಾರೆ.

ಅಂದು ಹಾಗೆ, ಇಂದು ಹೀಗೆ...
ಹಾಗ್ನೋಡಿದ್ರೆ, ಕವಿತಾ ಕ್ಯಾಪ್ಟನ್ ಆಗಿದ್ದಾಗ.. ತಮ್ಮ 'ಗ್ರೂಪ್'ನವರನ್ನು ಸೇಫ್ ಮಾಡಿದ್ದಕ್ಕೆ ಇತರೆ ಸ್ಪರ್ಧಿಗಳು ಸಿಡಿಮಿಡಿಗೊಂಡಿದ್ದರು. ಅಂದು ಗ್ರೂಪ್ ನ ಉಳಿಸಿದ್ದ ಕವಿತಾ ಇಂದು ಅದೇ ಗುಂಪಿನ 'ಗೌರವ ಅಧ್ಯಕ್ಷ'ರನ್ನೇ ಔಟ್ ಮಾಡಲು ಹೊರಟಿದ್ದಾರೆ. ಕವಿತಾ ರವರ ಈ ನಡೆ ಜಯಶ್ರೀಗೆ ಗೊತ್ತಾದರೆ.?

ಜಯಶ್ರೀಗೆ ನಿಮ್ಮ ಬೆಂಬಲ ಇದ್ಯಾ.?
ಅಂದ್ಹಾಗೆ, ಜಯಶ್ರೀ ಈ ವಾರ ನಾಮಿನೇಟ್ ಆಗಿದ್ದಾರೆ. ಜಯಶ್ರೀಗೆ ನಿಮ್ಮ ಬೆಂಬಲ ಇದ್ಯಾ.? ಈ ವಾರ ಯಾರು ಔಟ್ ಆಗಬೇಕು.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.


Click it and Unblock the Notifications











