ಅಕ್ಷತಾ ಋಣ ತೀರಿಸಲು ರಾಕೇಶ್ ಮನಸ್ಸು ಮಾಡಲೇ ಇಲ್ಲ.!
Recommended Video

''ನನ್ನ ಮತ್ತು ಅಕ್ಷತಾ ನಡುವೆ ಇರುವುದು Intense ಫ್ರೆಂಡ್ ಶಿಪ್. ಈ 'ಬಿಗ್ ಬಾಸ್' ಜರ್ನಿಯಲ್ಲಿ ನಾವಿಬ್ಬರು ಒಬ್ಬರಿಗೊಬ್ಬರು ಸಪೋರ್ಟ್ ಮಾಡಿಕೊಳ್ಳುತ್ತಿದ್ದೇವೆ'' ಅಂತೆಲ್ಲಾ ಮೊನ್ನೆಮೊನ್ನೆಯಷ್ಟೇ ಸುದೀಪ್ ಮುಂದೆ ಎಂ.ಜೆ.ರಾಕೇಶ್ ಹೇಳಿಕೆ ನೀಡಿದ್ದರು. ಆದ್ರೀಗ ನೋಡಿದ್ರೆ, ಅಕ್ಷತಾಗೆ ರಾಕೇಶ್ ಸಪೋರ್ಟ್ ಮಾಡುವುದರಿಲಿ.. ಕಡೆ ಪಕ್ಷ ಋಣವನ್ನು ತೀರಿಸುವ ಮನಸ್ಸು ಕೂಡ ಮಾಡಿಲ್ಲ.!
ಅಕ್ಷತಾ ಜೊತೆಗೆ ಚೆನ್ನಾಗಿದ್ದಾಗ, ಆಕೆಯಿಂದ ಎಲ್ಲಾ ಚಟುವಟಿಕೆಯಲ್ಲೂ ರಾಕೇಶ್ ಸಹಾಯ ಪಡೆದಿದ್ದರು. ಒಂದು ವಾರ ನಾಮಿನೇಷನ್ ನಿಂದ ರಾಕೇಶ್ ಬಚಾವ್ ಆಗಲು ಅಕ್ಷತಾ ಕಾರಣರಾಗಿದ್ದರು. ರಾಕೇಶ್ ನ ಸೇಫ್ ಮಾಡಿ ಖುದ್ದು ಅಕ್ಷತಾ ಎಲಿಮಿನೇಷನ್ ತಲೆಬಿಸಿ ಎದುರಿಸಿದ್ದರು.
ಸದ್ಯ ರಾಕೇಶ್ ಜೊತೆಗೆ ಅಕ್ಷತಾ ಮಾತನಾಡದೇ ಇದ್ದರೂ, ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ವೇಳೆಯಲ್ಲಿ ರಾಕೇಶ್ ಪರವಾಗಿ ಅಕ್ಷತಾ ಬೆಂಬಲ ನೀಡಿದ್ದರು.
ಅಕ್ಷತಾರಿಂದ ಇಷ್ಟೆಲ್ಲಾ ಸಹಾಯ ಪಡೆದುಕೊಂಡ ರಾಕೇಶ್, ಅವಕಾಶ ಸಿಕ್ಕಾಗ.. ಕೈಯಲ್ಲಿ ಅಧಿಕಾರ ಇದ್ದಾಗ ಅಕ್ಷತಾ ರನ್ನ ನಾಮಿನೇಷನ್ ನಿಂದ ಸೇಫ್ ಮಾಡಲು ಮುಂದಾಗಲಿಲ್ಲ. ತಮ್ಮ ಮೇಲಿದ್ದ ಅಕ್ಷತಾ ಋಣವನ್ನು ತೀರಿಸಲು ರಾಕೇಶ್ ಮನಸ್ಸು ಮಾಡಲೇ ಇಲ್ಲ.

ಅಕ್ಷತಾ ಬದಲಿಗೆ 'ಗುಡ್ನೆಸ್' ನೆಪದಲ್ಲಿ ಮುರಳಿಯನ್ನ ರಾಕೇಶ್ ಸೇಫ್ ಮಾಡಿದರು. ಇಲ್ಲಿಯವರೆಗೂ ರಾಕೇಶ್ ಗೆ ಸಪೋರ್ಟ್ ಮಾಡುತ್ತಲೇ ಬಂದಿದ್ದ ಅಕ್ಷತಾಗೆ ಇದರಿಂದ ಭಾರಿ ಬೇಸರ ಆಗಿದೆ.
ಇನ್ನಾದರೂ ಅಕ್ಷತಾ ಬುದ್ಧಿ ಕಲಿಯುತ್ತಾರಾ.? ರಾಕೇಶ್ ತಂಟೆಗೆ ಹೋಗದೆ ತಮ್ಮ ಆಟದ ಬಗ್ಗೆ ಅಕ್ಷತಾ ಗಮನ ಹರಿಸುತ್ತಾರಾ.? ನೋಡೋಣ.


Click it and Unblock the Notifications











