'ಇದು ಅನ್ಯಾಯ' ಅಂತಿದ್ದ ರಾಕೇಶ್, ಏಕ್ದಂ ಉಲ್ಟಾ ಹೊಡೆದಿದ್ದು ಯಾಕೆ.?

Recommended Video

Bigg Boss Kannada Season 6 : ಇದು ಅನ್ಯಾಯ' ಅಂತಿದ್ದ ರಾಕೇಶ್, ಏಕ್ದಂ ಉಲ್ಟಾ ಹೊಡೆದಿದ್ದು ಯಾಕೆ.?

''ಮಾಡೋದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ'' ಎಂಬ ಗಾದೆ ಮಾತು ಎಂ.ಜೆ.ರಾಕೇಶ್ ಗೆ ಪಕ್ಕಾ ಸೂಟ್ ಆಗುತ್ತೆ ಅಂತ ಚಟುವಟಿಕೆಯೊಂದರಲ್ಲಿ ರಾಪಿಡ್ ರಶ್ಮಿ ಹೇಳಿದ್ದರು. 'ಬಿಗ್ ಬಾಸ್' ಮನೆಯಲ್ಲಿ ಉಳಿದುಕೊಳ್ಳಲು ಏನೇನೋ ಸ್ಟ್ರಾಟೆಜಿ ಮಾಡುತ್ತಿರುವ ಎಂ.ಜೆ.ರಾಕೇಶ್, ಆಗಾಗ 'ಗುಡ್ನೆಸ್' ಎಂಬ ಬೃಂದಾವನ ಕಟ್ಟುತ್ತಾರೆ ಎಂಬುದು ರಶ್ಮಿ ಅಭಿಪ್ರಾಯ.

ಅಸಲಿಗೆ, ಈ ಎಂ.ಜೆ.ರಾಕೇಶ್ ಗೆ 'ಗುಡ್ನೆಸ್' ಹೆಸರಿನಲ್ಲಿ 'ದೊಡ್ಡತನ' ತೋರಿಸುವ ಅಭ್ಯಾಸ 'ಬಿಗ್ ಬಾಸ್' ಮನೆಯಲ್ಲಿ ಮೊದಲ ವಾರದಿಂದಲೂ ಇದೆ. 'ಗುಡ್ನೆಸ್' ನೆಪದಲ್ಲಿ ಕ್ಯಾಮರಾ ಮುಂದೆ 'ಮಹಾನುಭಾವ'ನಾಗಿ ಕಾಣಿಸಿಕೊಂಡು ವೋಟ್ಸ್ ಗಿಟ್ಟಿಸುವ ಪ್ಲಾನ್ ಎಂ.ಜೆ.ರಾಕೇಶ್ ತಲೆಯಲ್ಲಿ ಇರಬಹುದು.!?

ಮಾತು ಮಾತಿಗೂ 'ಗುಡ್ನೆಸ್' ಎನ್ನುವ ಎಂ.ಜೆ.ರಾಕೇಶ್, ಈ ವಾರ 'ಗುಡ್ನೆಸ್' ಸೋಗಿನಲ್ಲಿ ಕೈಗೆ ಸಿಕ್ಕ ಅಧಿಕಾರವನ್ನು ಇನ್ನೊಬ್ಬರಿಗೆ ಬಿಟ್ಟುಕೊಟ್ಟಿದ್ದಾರೆ. ''ಇದು ಅನ್ಯಾಯ'' ಅಂತ ಕೊರಗುತ್ತಿದ್ದರೂ, 'ಮಾದರಿ ಕ್ಯಾಪ್ಟನ್' ಆಗಿ ಕಾಣಲು ತಮ್ಮನ್ನ ತಾವೇ ನಾಮಿನೇಟ್ ಮಾಡಿಕೊಂಡಿದ್ದಾರೆ ಎಂ.ಜೆ.ರಾಕೇಶ್. ಮುಂದೆ ಓದಿರಿ...

ನೇರವಾಗಿ ನಾಮಿನೇಟ್ ಆಗಿದ್ದ ರಾಕೇಶ್.!

ನೇರವಾಗಿ ನಾಮಿನೇಟ್ ಆಗಿದ್ದ ರಾಕೇಶ್.!

'ಬಿಗ್ ಬಾಸ್' ಮನೆಯೊಳಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಕಾಲಿಡುವ ಮುನ್ನ ಮೂರು ಗೊಂಬೆಗಳು ಪ್ರತ್ಯಕ್ಷವಾಗಿತ್ತು. ಗೊಂಬೆಗಳಿಗೆ ಜೀವ ಕೊಡಬೇಕು ಅಂದ್ರೆ ಮೂವರು ಸ್ಪರ್ಧಿಗಳ ತ್ಯಾಗ ಅವಶ್ಯಕವಾಗಿತ್ತು. ಆಗ ಗೊಂಬೆಗಳನ್ನು ಹಿಡಿದಿದ್ದ ರಶ್ಮಿ, ನವೀನ್ ಮತ್ತು ಧನರಾಜ್... ರಾಕೇಶ್, ಅಕ್ಷತಾ ಮತ್ತು ಆಂಡಿಯನ್ನ ನೇರವಾಗಿ ನಾಮಿನೇಟ್ ಮಾಡಿದರು.

ಕ್ಯಾಪ್ಟನ್ ಆದ ರಾಕೇಶ್.!

ಕ್ಯಾಪ್ಟನ್ ಆದ ರಾಕೇಶ್.!

'ಗೋಡೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಚಟುವಟಿಕೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಾಕೇಶ್ ಕ್ಯಾಪ್ಟನ್ ಪ್ರತಿಸ್ಪರ್ಧಿ ಆಗಿದ್ದರು. ಕ್ಯಾಪ್ಟನ್ ಆಯ್ಕೆ ಚಟುವಟಿಕೆಯಲ್ಲಿ ಐದು ಮಂದಿ ರಾಕೇಶ್ ಗೆ ಸಪೋರ್ಟ್ ಮಾಡಿದ್ರಿಂದ, ಆತ ವಾರದ ಕ್ಯಾಪ್ಟನ್ ಆದರು.

ನಿಯಮದ ಪ್ರಕಾರ...

ನಿಯಮದ ಪ್ರಕಾರ...

'ಬಿಗ್ ಬಾಸ್' ಮನೆಯ ನಿಯಮದ ಪ್ರಕಾರ, ಕ್ಯಾಪ್ಟನ್ ಆಗಿರುವವರು ನಾಮಿನೇಷನ್ ಪ್ರಕ್ರಿಯೆಯಲ್ಲಿ ಸೇಫ್ ಆಗಿರುತ್ತಾರೆ. ಆದ್ರೆ, ಅದಾಗಲೇ ರಾಕೇಶ್ ನೇರವಾಗಿ ನಾಮಿನೇಟ್ ಆಗಿದ್ದರಿಂದ 'ಬಿಗ್ ಬಾಸ್' ಒಂದು ವಿಶೇಷ ಅಧಿಕಾರ ನೀಡಿದರು.

ಅನ್ಯಾಯ..ಅನ್ಯಾಯ ಎನ್ನುತ್ತಿದ್ದ ರಾಕೇಶ್.!

ಅನ್ಯಾಯ..ಅನ್ಯಾಯ ಎನ್ನುತ್ತಿದ್ದ ರಾಕೇಶ್.!

ನಾಮಿನೇಷನ್ ಪ್ರಕ್ರಿಯೆ ಆರಂಭವಾದಾಗ, ''ಇದು ಅನ್ ಫೇರ್ (ಅನ್ಯಾಯ). ಕ್ಯಾಪ್ಟನ್ ಆಗಿದ್ದರೂ ನನಗೆ ಇಮ್ಯೂನಿಟಿ ಸಿಗಲಿಲ್ಲ. ಇಲ್ಲಿಯವರೆಗೂ ಏಳು ಜನ ಕ್ಯಾಪ್ಟನ್ ಆಗಿದ್ದಾರೆ. ಎಲ್ಲರಿಗೂ ಇಮ್ಯೂನಿಟಿ ಸಿಕ್ಕಿದೆ. ನನ್ನೊಬ್ಬನ ಬಿಟ್ಟು'' ಎಂದು ರಾಕೇಶ್ ಕೊರಗುತ್ತಿದ್ದರು. ಆಗ 'ವಿಶೇಷ ಅಧಿಕಾರ'ವನ್ನು 'ಬಿಗ್ ಬಾಸ್' ಘೋಷಿಸಿದರು.

'ಬಿಗ್ ಬಾಸ್' ಕೊಟ್ಟ ವಿಶೇಷ ಅಧಿಕಾರ ಏನು.?

'ಬಿಗ್ ಬಾಸ್' ಕೊಟ್ಟ ವಿಶೇಷ ಅಧಿಕಾರ ಏನು.?

ರಾಕೇಶ್ ಕ್ಯಾಪ್ಟನ್ ಆಗಿದ್ದರಿಂದ, ಅವರಿಗೆ ಒಂದು ವಿಶೇಷ ಅಧಿಕಾರವನ್ನು 'ಬಿಗ್ ಬಾಸ್' ನೀಡಿದರು. ಇದರ ಅನುಸಾರ, ನಾಮಿನೇಟ್ ಆಗಿರುವ ಸದಸ್ಯರ ಪೈಕಿ ಒಬ್ಬರನ್ನು ರಾಕೇಶ್ ಸೇಫ್ ಮಾಡಬಹುದಿತ್ತು ಅಥವಾ ತಮ್ಮನ್ನ ತಾವು ಉಳಿಸಿಕೊಳ್ಳಬಹುದಿತ್ತು.

'ನ್ಯಾಯ'ವಾದ ನಿರ್ಧಾರ ತೆಗೆದುಕೊಳ್ಳಬಹುದಿತ್ತು.!

'ನ್ಯಾಯ'ವಾದ ನಿರ್ಧಾರ ತೆಗೆದುಕೊಳ್ಳಬಹುದಿತ್ತು.!

ಮೊದಲು 'ಇದು ಅನ್ ಫೇರ್' ಎಂದಿದ್ದ ರಾಕೇಶ್, ಬಳಿಕ 'ಫೇರ್' ನಿರ್ಧಾರ ತೆಗೆದುಕೊಳ್ಳಬಹುದಿತ್ತು. ನಾಮಿನೇಷನ್ ನಿಂದ ಸೇಫ್ ಆಗುವ ಅವಕಾಶವನ್ನ ರಾಕೇಶ್ ಗೆ 'ಬಿಗ್ ಬಾಸ್' ನೀಡಿದ್ದರು. ಆದರೂ, ಅದನ್ನ ರಾಕೇಶ್ ಬಳಿಸಿಕೊಳ್ಳಲಿಲ್ಲ. ಕಾರಣ... 'ಗುಡ್ನೆಸ್'.!

ರಾಕೇಶ್ 'ಫಿಲಾಸಫಿ'

ರಾಕೇಶ್ 'ಫಿಲಾಸಫಿ'

''ಯೋಚನೆ ಮಾಡುವೆ'' ಅಂತ ಸ್ವಲ್ಪ ಸಮಯ ತೆಗೆದುಕೊಂಡು, ''ಈ ಮನೆಯಲ್ಲಿ ನಾನು ಪ್ರೀತಿ ಗೆದ್ದಿದ್ದೇನೆ. ಅಷ್ಟೇ ಪ್ರೀತಿ ಹೊರಗೂ ಗೆಲ್ಲುತ್ತೇನೆ ಎಂಬ ನಂಬಿಕೆ ನನ್ನಲ್ಲಿ ಇದೆ. ಕ್ಯಾಪ್ಟನ್ ಆಗಿ ನಾನು ಮಾದರಿ ಆಗಿ ಇರಬೇಕು ಎಂದು ನನ್ನನ್ನ ನಾನು ಸೇಫ್ ಮಾಡಿಕೊಳ್ಳಲ್ಲ. ಸ್ವಾರ್ಥಿಯಾಗಿ ಯೋಚಿಸುವುದಿಲ್ಲ. ನನ್ನ ಫಿಲಾಸಫಿ ಪ್ರಕಾರ, ಈ ಮನೆಗೆ ಮುರಳಿ ಅವರ ಅವಶ್ಯಕತೆ ಇದೆ. ಈ ಮನೆಗೆ ಅನುಭವ ಇರುವವರು ಬೇಕು. ಈ ಜರ್ನಿಗೆ ಮುರಳಿ ಅವರು ಬಹಳ ಮುಖ್ಯ'' ಎನ್ನುತ್ತಾ ಮುರಳಿಗೆ ರಾಕೇಶ್ ಇಮ್ಯೂನಿಟಿ ನೀಡಿದರು.

ಈ ವಾರ ಔಟ್ ಆದರೆ.?

ಈ ವಾರ ಔಟ್ ಆದರೆ.?

ಪದೇ ಪದೇ 'ಗುಡ್ನೆಸ್' ಎನ್ನುವ ರಾಕೇಶ್, ಈ ವಾರ ಅದೇ 'ಗುಡ್ನೆಸ್'ನಿಂದ ಔಟ್ ಆದರೆ.? ಅಷ್ಟೊಂದು 'ಗುಡ್ನೆಸ್' ಇದ್ದಿದ್ದರೆ ಮೊದಲು 'ಅನ್ಯಾಯ' ಅಂತ ರಾಕೇಶ್ ಯಾಕೆ ಕೊರಗಬೇಕಿತ್ತು.? ರಾಕೇಶ್ ಅವರ ಈ ನಿರ್ಧಾರ ಸರಿ ಅಂತ ನಿಮಗೆ ಅನ್ಸುತ್ತಾ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

More from Filmibeat

English summary
Bigg Boss Kannada 6: Day 57: Captain MJ Rakesh gives the immunity to Murali.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X