ಈ ವಾರ ಅಕ್ಷತಾ ಪಾಂಡವಪುರ ಔಟ್ ಆಗಲು ಚಾನ್ಸೇ ಇಲ್ಲ.!

Recommended Video

Bigg Boss Kannada Season 6: ಈ ವಾರ ಅಕ್ಷತಾ ಪಾಂಡವಪುರ ಔಟ್ ಆಗಲು ಚಾನ್ಸೇ ಇಲ್ಲ.!

''ಪ್ರಾಕ್ಟಿಕಲ್ ಆಗಿ ನೋಡಿದ್ರೆ, ಅಕ್ಷತಾ ಈ ವಾರ ಔಟ್ ಆಗುವ ಚಾನ್ಸಸ್ ಇಲ್ಲ'' ಹೀಗಂತ ಅತೀ ವಿಶ್ವಾಸದಿಂದ ಹೇಳಿಕೆ ಕೊಟ್ಟಿರುವವರು ಒನ್ ಅಂಡ್ ಒನ್ಲಿ ಮಿಸ್ಟರ್ ಎಂ.ಜೆ.ರಾಕೇಶ್.! ಅದು ತಾವ್ಯಾಕೆ ಅಕ್ಷತಾನ ಸೇಫ್ ಮಾಡಲಿಲ್ಲ ಅಂತ ಸಮರ್ಥನೆ ನೀಡುವ ಸಮಯದಲ್ಲಿ.!

ಅಕ್ಷತಾ ಜೊತೆಗೆ ಚೆನ್ನಾಗಿರುವಾಗ ಬಣ್ಣ ಬಣ್ಣದ ಮಾತುಗಳನ್ನಾಡಿದ್ದ ರಾಕೇಶ್ ಗೇಮ್ ಪ್ಲಾನ್ ಇದೀಗ ಚೇಂಜ್ ಆಗಿದೆ. ಇಷ್ಟು ದಿನ ಅಕ್ಷತಾ ಜೊತೆಗೆ 'ಬ್ಯಾಟಿಂಗ್ ಆಡೋಣ' ಅಂತಿದ್ದ ರಾಕೇಶ್ ಇದೀಗ 'ಗುಡ್ನೆಸ್' ಮಂತ್ರ ಜಪಿಸುತ್ತಾ ಎಲ್ಲರ ಮಧ್ಯೆ ಸೇಫ್ ಆಗಿರಲು ಪ್ರಯತ್ನ ಪಡುತ್ತಿದ್ದಾರೆ.

ಹಾಗ್ನೋಡಿದ್ರೆ, ರಾಕೇಶ್ ಗೆ ಹಲವು ವಿಷಯಗಳಲ್ಲಿ, ಚಟುವಟಿಕೆಗಳಲ್ಲಿ ಸಪೋರ್ಟ್ ಮಾಡಿದವರು ಅಕ್ಷತಾ. ಒಮ್ಮೆ ರಾಕೇಶ್ ನ ಬಚಾವ್ ಮಾಡಿ, ಅಕ್ಷತಾ ಖುದ್ದು ನಾಮಿನೇಟ್ ಆಗಿದ್ದರು. ಹೀಗಿದ್ದರೂ, ಕೈಯಲ್ಲಿ ಅಧಿಕಾರ ಇದ್ದಾಗ ಅಕ್ಷತಾನ ರಾಕೇಶ್ ಸೇಫ್ ಮಾಡಲಿಲ್ಲ. ಇದಕ್ಕೆ ಕಾರಣ ಕೇಳಿದ್ರೆ, ರಾಕೇಶ್ ಬಾಯಿಂದ ಬರುವ ಉತ್ತರವೇ ಬೇರೆ.! ಮುಂದೆ ಓದಿರಿ...

ಅಕ್ಷತಾ ಪರವಾಗಿ ನಿಂತ ಆಂಡ್ರ್ಯೂ

ಅಕ್ಷತಾ ಪರವಾಗಿ ನಿಂತ ಆಂಡ್ರ್ಯೂ

ನಾಮಿನೇಷನ್ ವೇಳೆ ರಾಕೇಶ್ ತೆಗೆದುಕೊಂಡ ನಿರ್ಧಾರ ಸರಿ ಇಲ್ಲ ಅನ್ನೋದು ಆಂಡ್ರ್ಯೂ ಅಭಿಪ್ರಾಯ. ಈ ಬಗ್ಗೆ ಆಂಡ್ರ್ಯೂ ಪ್ರಶ್ನೆ ಮಾಡಿದಾಗ ರಾಕೇಶ್ ಹೇಳಿದ್ದು ಹೀಗೆ - ''ಒಂದು ಸೈಡ್ ನಲ್ಲಿ ಗುಡ್ನೆಸ್ ನೋಡಿದರೂ, ಇನ್ನೊಂದು ಸೈಡ್ ನಲ್ಲಿ ಪ್ರಾಕ್ಟಿಕಲ್ ಆಗಿ ನೋಡಿದೆ. ಅಕ್ಷತಾ ಔಟ್ ಆಗುವ ಚಾನ್ಸಸ್ ಇಲ್ಲ''.

ಅಕ್ಷತಾಗೆ ಬೇಸರ ಆಗಿದೆ

ಅಕ್ಷತಾಗೆ ಬೇಸರ ಆಗಿದೆ

''ನಿನಗಾಗಿ ಐದು ವಾರ ಎಲ್ಲರನ್ನೂ ಎದುರು ಹಾಕಿಕೊಂಡು, ಅವರ ಮನೆಯವರನ್ನೂ ಎದುರು ಹಾಕಿಕೊಂಡು ಸಪೋರ್ಟ್ ಮಾಡಿದಳು. ಸೇಫ್ ಮಾಡುವ ಅವಕಾಶ ಸಿಕ್ಕಾಗ, ಬಿಡಬಾರದು. ನಿನಗಾಗಿ ಅವಳು ಐದು ವಾರ ನಿಂತಿದ್ದಳು. ಮರೆಯಬೇಡ... ಅಕ್ಷತಾಗೆ ತುಂಬಾ ಹರ್ಟ್ ಆಗಿದೆ. ನಿನ್ನ ಒಳ್ಳೆಯದ್ದಕ್ಕಾಗಿ ಆಕೆ ನಿನ್ನ ಬಿಟ್ಟು ದೂರ ಇದ್ದಾಳೆ'' ಅಂತ ಅಕ್ಷತಾ ಪರವಾಗಿ ರಾಕೇಶ್ ಬಳಿ ಆಂಡ್ರ್ಯೂ ವಾದ ಮಾಡಿದರು.

ಅಕ್ಷತಾ ಹಾಗೇ ಸೇಫ್ ಆಗುತ್ತಾಳೆ.!

ಅಕ್ಷತಾ ಹಾಗೇ ಸೇಫ್ ಆಗುತ್ತಾಳೆ.!

''ನಾನು ಕೂಡ ಅಕ್ಷತಾ ನ ಸಪೋರ್ಟ್ ಮಾಡಿರುವೆ. ನಾನು ಖ್ಯಾತಿ ಗಳಿಸುವುದಕ್ಕೆ ಹದಿನೈದು ವರ್ಷ ಕಷ್ಟ ಪಟ್ಟಿದ್ದೇನೆ. ನಾನು ಯಾಕೆ ಅಕ್ಷತಾನ ಸೇಫ್ ಮಾಡಿಲ್ಲ ಅಂದ್ರೆ ಅವಳು ಈ ವಾರ ಹಾಗೇ ಸೇಫ್ ಆಗುತ್ತಾಳೆ. ಈ ವಾರ ಅವಳ ಪರ್ಫಾಮೆನ್ಸ್ ಚೆನ್ನಾಗಿತ್ತು. ಸುದೀಪ್ ಕೂಡ ಚಪ್ಪಾಳೆ ತಟ್ಟಿದರು'' ಅಂತ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಾರೆ ರಾಕೇಶ್.

ಜನ ಹೀಗೂ ಮಾತಾಡ್ತಿದ್ರಂತೆ.!

ಜನ ಹೀಗೂ ಮಾತಾಡ್ತಿದ್ರಂತೆ.!

''ಅಕ್ಷತಾನ ಸೇಫ್ ಮಾಡಿದ್ರೆ, ಇನ್ನೊಂದು ಆಂಗಲ್ ನಲ್ಲಿ ಹೋಗುತ್ತಿತ್ತು. ನಾನಿನ್ನೂ ಅವಳ ಹಿಂದೆ ಬಿದ್ದಿದ್ದೇನೆ ಅಂತ... ಅಕ್ಷತಾ ಈ ವಾರ ಸೇಫ್ ಆಗುತ್ತಾಳೆ ಅಂತ ನನಗೆ ಗೊತ್ತಿದೆ'' ಅಂತ ಪದೇ ಪದೇ ರಾಕೇಶ್ ಹೇಳುತ್ತಿದ್ದರು.

ಬುದ್ಧಿ ಮಾತು ಹೇಳಿದ ಆಂಡಿ

ಬುದ್ಧಿ ಮಾತು ಹೇಳಿದ ಆಂಡಿ

''ಟಿಶ್ಯೂ ಪೇಪರ್ ಬಳಸಿದ ಹಾಗೆ ಆಗಬಾರದು ನಮ್ಮ ಜೀವನ. ಎಲ್ಲೋ ಒಂದು ಕಡೆ ಸುದೀಪ್ ಕೂಡ ನಿನಗೆ ಹೇಳಿದರು. ಮನೆಯಿಂದಲೂ ಮೆಸೇಜ್ ಬಂತು. ನಿನಗೆ ಎಲ್ಲಾ ತರಹದ ಸೂಚನೆಗಳು ಸಿಕ್ತು. ಆದರೂ ನೀನು ಯಾಮಾರಿದೆ'' ಅಂತ ಅಕ್ಷತಾಗೆ ಆಂಡ್ರ್ಯೂ ಬುದ್ಧಿ ಮಾತು ಹೇಳಿದ್ದಾರೆ.

More from Filmibeat

English summary
Bigg Boss Kannada 6: Day 57: Why Rakesh din't save Akshata during Nomination.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X