ಮುರಿದು ಬಿದ್ದ 'ಗೆಳೆತನ': ರಾಕೇಶ್-ಅಕ್ಷತಾ ನಡುವೆ ಈಗ ಬರೀ ಜಗಳ.!

''ರಾಕೇಶ್ ರಿಂದ ದೂರ ಇರು'' ಅಂತ ತಾಯಿಯಿಂದ ಕಟ್ಟುನಿಟ್ಟಿನ ಆದೇಶ ಬಂದ್ಮೇಲೆ, ಎಂ.ಜೆ.ರಾಕೇಶ್ ರಿಂದ ಅಕ್ಷತಾ ಡಿಸ್ಟೆನ್ಸ್ ಮೇನ್ಟೇನ್ ಮಾಡಿದ್ದರು. ಆದ್ರೆ, ಅದ್ಯಾವಾಗ 'ಬಿಗ್ ಬಾಸ್' ಮನೆಯೊಳಗೆ ವೈಲ್ಡ್ ಕಾರ್ಡ್ ಎಂಟ್ರಿ ರೂಪದಲ್ಲಿ ಮೂವರು ಹುಡುಗಿಯರು ಕಾಲಿಟ್ರೋ, ರಾಕೇಶ್ ಮತ್ತು ಅಕ್ಷತಾ ನಡುವೆ ಗಲಾಟೆ ತಾರಕಕ್ಕೇರಿದೆ.

ಅಕ್ಷತಾ ದೂರ ಸರಿದ್ಮೇಲೆ, ಜೀವಿತಾ ಹಿಂದೆ ಬಿದ್ದಿದ್ದಾರೆ ರಾಕೇಶ್. ಇನ್ನೂ ಮೇಘಶ್ರೀ ಮತ್ತು ನಿವೇದಿತಾ ಜೊತೆಗೂ ರಾಕೇಶ್ ಒಡನಾಟ ಚೆನ್ನಾಗಿದೆ. ಇದು ಅಕ್ಷತಾಗೆ ಇಷ್ಟ ಆಗುತ್ತಿಲ್ಲ.

ಇನ್ನೂ ನಿವೇದಿತಾ ಗೌಡ ಕಂಡ್ರೆ ಅಕ್ಷತಾಗೆ ಆಗ್ಬರ್ತಿಲ್ಲ. ನಿವೇದಿತಾ ಗೌಡ ಜೊತೆಗೆ ರಾಕೇಶ್ ಮಾತನಾಡಿದರೆ, ಅಕ್ಷತಾ ಉರಿದು ಬೀಳ್ತಿದ್ದಾರೆ. ಈ ಎಲ್ಲದರ ನಡುವೆ ನಾಮಿನೇಷನ್ ನಲ್ಲಿ ಅಕ್ಷತಾನ ರಾಕೇಶ್ ಸೇಫ್ ಮಾಡಲಿಲ್ಲ. ಹೀಗಾಗಿ, ಇಬ್ಬರ ನಡುವೆ ಆಗಾಗ ಜಟಾಪಟಿ ನಡೆಯುತ್ತಲೇ ಇದೆ. ಮುಂದೆ ಓದಿರಿ...

ರಾಕೇಶ್ ಮೇಲೆ ಕೆಂಡಕಾರಿದ ಅಕ್ಷತಾ

ರಾಕೇಶ್ ಮೇಲೆ ಕೆಂಡಕಾರಿದ ಅಕ್ಷತಾ

ಒಂಬತ್ತನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ನಾಮಿನೇಟ್ ಆಗಿರುವ ಸ್ಪರ್ಧಿಗಳ ಪೈಕಿ ಯಾರಾದರೂ ಒಬ್ಬರನ್ನ ಸೇಫ್ ಮಾಡುವ ಅಧಿಕಾರ ಕ್ಯಾಪ್ಟನ್ ರಾಕೇಶ್ ಕೈಯಲ್ಲಿತ್ತು. ಆಗ ರಾಕೇಶ್ ಮುರಳಿಯನ್ನ ಸೇಫ್ ಮಾಡಿದರು. ಅಕ್ಷತಾನ ಬಚಾವ್ ಮಾಡಲಿಲ್ಲ. ಹೀಗಾಗಿ ರಾಕೇಶ್ ಮೇಲೆ ಅಕ್ಷತಾಗೆ ಕೆಂಡದಷ್ಟು ಕೋಪ ಇದೆ.

ಟಾಸ್ಕ್ ನಲ್ಲಿ ಸಿಟ್ಟು ಹೊರಹಾಕಿದ ಅಕ್ಷತಾ

ಟಾಸ್ಕ್ ನಲ್ಲಿ ಸಿಟ್ಟು ಹೊರಹಾಕಿದ ಅಕ್ಷತಾ

'ಬಿಗ್ ಬಾಸ್ ವಿಶ್ವವಿದ್ಯಾನಿಲಯ' ಟಾಸ್ಕ್ ನಲ್ಲಿ ರಾಕೇಶ್ ಮೇಲೆ ಇದ್ದ ಸಿಟ್ಟನ್ನೆಲ್ಲಾ ಅಕ್ಷತಾ ಹೊರಹಾಕಿದರು. ಚಟುವಟಿಕೆ ವೇಳೆ ಉದಾಹರಣೆ ನೀಡುವ ನೆಪದಲ್ಲಿ ರಾಕೇಶ್ ಬಗ್ಗೆಯೇ ಅಕ್ಷತಾ ಪದೇ ಪದೇ ಬೆಟ್ಟು ಮಾಡಿ ತೋರಿಸುತ್ತಿದ್ದರು.

ಧಿಕ್ಕಾರ ಕೂಗಿದ ಅಕ್ಷತಾ

ಧಿಕ್ಕಾರ ಕೂಗಿದ ಅಕ್ಷತಾ

'ಕೋಳಿ ಮಂಜ.. ಹುಡುಗಿಯರ ಮೇಲೆ ಹಾರುವ ಹುಂಜ'' ಎನ್ನುತ್ತಾ ಚಟುವಟಿಕೆಯಲ್ಲಿ ರಾಕೇಶ್ ವಿರುದ್ಧ ಅಕ್ಷತಾ ಧಿಕ್ಕಾರ ಕೂಡ ಕೂಗಿದರು. ಒಟ್ನಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ರಾಕೇಶ್ ನ ಅಕ್ಷತಾ ಟಾರ್ಗೆಟ್ ಮಾಡಿದರು.

ತಿರುಗೇಟು ಕೊಟ್ಟ ರಾಕೇಶ್

ತಿರುಗೇಟು ಕೊಟ್ಟ ರಾಕೇಶ್

'ಬಿಗ್ ಬಾಸ್ ವಿಶ್ವವಿದ್ಯಾನಿಲಯ' ಚಟುವಟಿಕೆ ಮುಗಿದ ಮೇಲೆ ''ಈ ಲೆವೆಲ್ ಗೆ ನೀವು ಇಳಿಯುತ್ತೀರಾ ಅಂತ ನಾನು ಅಂದುಕೊಂಡಿರಲಿಲ್ಲ. ನನ್ನ ಇಡೀ ಟಾಸ್ಕ್ ನ ನೀವು ಕೆಡಿಸಿದ್ರಿ. ಪ್ರತಿ ಬಾರಿ ನನ್ನ ಮೇಲೆ ಚಾಡಿ ಹೇಳಿದ್ರಿ. ಚೀಪ್ ಹೆಸರು ಕೊಟ್ಟು ನನ್ನ ಚಿಕ್ಕದಾಗಿ ತೋರಿಸಿದ್ರಿ'' ಅಂತ ಅಕ್ಷತಾಗೆ ರಾಕೇಶ್ ತಿರುಗೇಟು ಕೊಟ್ಟರು.

ಇನ್ಮುಂದೆ ಹೇಗೆ.?

ಇನ್ಮುಂದೆ ಹೇಗೆ.?

ಇಲ್ಲಿಯವರೆಗೂ ಗೆಳೆಯರಾಗಿದ್ದ ಅಕ್ಷತಾ-ರಾಕೇಶ್ ಇದೀಗ ಹಾವು-ಮುಂಗುಸಿ ತರಹ ಕಚ್ಚಾಡುತ್ತಿದ್ದಾರೆ. ಇವರಿಬ್ಬರ ನಡುವಿನ ಗಲಾಟೆ ಹೀಗೇ ಮುಂದುವರೆಯುತ್ತಾ.? ಕಾದು ನೋಡಬೇಕು.

More from Filmibeat

English summary
Bigg Boss Kannada 6: Day 59: Clash between Rakesh and Akshata.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X