ಅಕ್ಷತಾ-ರಾಕೇಶ್ ನಡುವೆ ಜೋರು ಜಟಾಪಟಿ: ಉರಿಯುತ್ತಿದೆ ವೈಮನಸ್ಯದ ಬೆಂಕಿ.!
Recommended Video

ಸುದೀಪ್ ಹಾಗೂ ತಮ್ಮ ತಾಯಿ ಕಡೆಯಿಂದ ಕಟ್ಟುನಿಟ್ಟಿನ ಆದೇಶ ಬಂದ ಮೇಲೆ ರಾಕೇಶ್ ರಿಂದ ಅಕ್ಷತಾ ಕೊಂಚ ದೂರ ಉಳಿದಿದ್ದಾರೆ. ರಾಕೇಶ್ ಜೊತೆಗೆ ಮೊದಲಿನಷ್ಟು ಆತ್ಮೀಯತೆ ಇಟ್ಟುಕೊಳ್ಳದ ಅಕ್ಷತಾ, ಚಟುವಟಿಕೆಗಳಲ್ಲಿ ತಮಗೆ ಅನಿಸಿದ್ದನ್ನ ನೇರವಾಗಿ ಹೊರಗೆ ಕಕ್ಕುತ್ತಿದ್ದಾರೆ. ಇದು ರಾಕೇಶ್ ಗೆ 'ಪರ್ಸನಲ್ ಅಟ್ಯಾಕ್' ಅಂತ ಅನಿಸಲು ಶುರುವಾಗಿದೆ.
'ಬಿಗ್ ಬಾಸ್ ವಿಶ್ವವಿದ್ಯಾನಿಲಯ' ಟಾಸ್ಕ್ ಅನ್ವಯ, ಗ್ರೂಪಿಸಂ ಬಗ್ಗೆ ತಮ್ಮ ಅಭಿಪ್ರಾಯವನ್ನು ಅಕ್ಷತಾ ವ್ಯಕ್ತಪಡಿಸಿದ್ದರು. ಇನ್ನೂ ಕೋಳಿ ಮಂಜ (ರಾಕೇಶ್) ವಿರುದ್ಧ ಹೋರಾಟ ಮಾಡಿದ್ದರು. ಪದೇ ಪದೇ ರಾಕೇಶ್ ಕಡೆಗೆ ಅಕ್ಷತಾ ಬೆಟ್ಟು ಮಾಡಿ ತೋರಿಸುತ್ತಿದ್ದರಿಂದ ಆತನ ಪಿತ್ತ ನೆತ್ತಿಗೇರಿದೆ.
ಚಟುವಟಿಕೆ ಮುಗಿದ ಮೇಲೆ ಒಂದಲ್ಲಾ ಒಂದು ವಿಷಯಕ್ಕೆ ರಾಕೇಶ್ ಹಾಗೂ ಅಕ್ಷತಾ ಮಧ್ಯೆ ಕಿತ್ತಾಟ ನಡೆಯುತ್ತಲೇ ಇದೆ. ಅಕ್ಷತಾ ಮಾಡಿದ್ದು ಸರಿ ಅಲ್ಲ ಅನ್ನೋದು ರಾಕೇಶ್ ವಾದ ಆಗಿದ್ದರೆ, ಚಟುವಟಿಕೆಯಲ್ಲಿ ಅನಿಸಿದ್ದನ್ನ ಮಾಡಿದೆ ಎನ್ನುವುದು ಅಕ್ಷತಾ ಸಮರ್ಥನೆ. ಒಟ್ನಲ್ಲಿ ಇವರಿಬ್ಬರ ನಡುವೆ ವೈಮನಸ್ಯದ ಬೆಂಕಿ ಹೊತ್ತಿ ಉರಿಯುತ್ತಿದೆ. ಪರಿಣಾಮ ಆಗಾಗ ಜೋರು ಜಟಾಪಟಿ ಆಗುತ್ತಿದೆ. ಮುಂದೆ ಓದಿರಿ...

ಕೆಣಕಿದ ರಶ್ಮಿ
ಇನ್ನೊಬ್ಬರನ್ನು ಟ್ರಿಗರ್ ಮಾಡುವುದರಲ್ಲಿ ರಶ್ಮಿ ಎತ್ತಿದ ಕೈ. ಚಟುವಟಿಕೆ ಮುಗಿದ ಮೇಲೆ ತಮ್ಮ ಪಾಡಿಗೆ ಅಕ್ಷತಾ ಇರುವಾಗ, ''ಸಂಬಂಧಗಳಲ್ಲಿ ಮೊದಲು ಅಪ್ಪ-ಮಗಳು ಆಮೇಲೆ ಗಂಡ-ಹೆಂಡತಿ'' ಅಂತ ರಶ್ಮಿ ಕಾಮೆಂಟ್ ಮಾಡಿದರು. ಇದು ಅಕ್ಷತಾಗೆ ಕಿರಿಕಿರಿ ತಂತು.

ಸೀನ್ ಕ್ರಿಯೇಟ್ ಮಾಡಿದ ರಾಕೇಶ್
ನಿವೇದಿತಾ ಪಾಲಿನ ಚಪಾತಿಯನ್ನ ರಾಕೇಶ್ ತಿನ್ನುತ್ತಿದ್ದರು. ಇದಕ್ಕೆ ಅಕ್ಷತಾ ಮೂಗು ತೂರಿಸಲಿಲ್ಲ. ಆದ್ರೂ, ಕಲ್ಪನೆ ಮಾಡಿಕೊಂಡು ''ಎಕ್ಸ್ ಟ್ರಾ ತಿಂದರೆ ಏನು ತಪ್ಪು'' ಎನ್ನುತ್ತಾ ರಾಕೇಶ್ ಸೀನ್ ಕ್ರಿಯೇಟ್ ಮಾಡಿದರು. ಬಳಿಕ ''ಚಪಾತಿ ತಿನ್ನಿ'' ಅಂತ ಅಕ್ಷತಾ ಹೇಳಿದರೂ ರಾಕೇಶ್ ತಿನ್ನಲಿಲ್ಲ. ''ಕ್ಯಾಪ್ಟನ್ ಆಗಿ ಸುಮ್ಮನೆ ಇನ್ನೊಬ್ಬರ ಮೇಲೆ ಆರೋಪ ಹೊರಿಸಬಾರದು'' ಅನ್ನೋದು ಅಕ್ಷತಾ ವಾದ ಆಗಿತ್ತು.

ಬೇರೆ ಕಂಟೆಂಟ್ ಇಲ್ವಂತೆ.!
''She is so desperate. ಅವಳ ಬಳಿ ನನ್ನ ಬಿಟ್ಟು ಬೇರೆ ಕಂಟೆಂಟ್ ಇಲ್ಲ. ಯಾವುದೇ ಟಾಸ್ಕ್ ಇರಲಿ, ಹೋರಾಟ ಮಾಡುವುದರಲಿ.. ಎಲ್ಲದರಲ್ಲೂ ಆಕೆಗೆ ನಾನು ಬೇಕು. ಫ್ರೆಂಡ್ ಶಿಪ್ ಬ್ರೇಕಪ್ ನನ್ನಿಂದ ಆಗಿಲ್ಲ. ಅವಳಿಂದ ಆಗಿರೋದು'' ಅಂತ ರಾಕೇಶ್, ಅಕ್ಷತಾ ಬಗ್ಗೆ ರಶ್ಮಿ ಬಳಿ ಹೇಳಿದ್ದಾರೆ.

ಇಮೇಜ್ ಡ್ಯಾಮೇಜ್ ಆಗಿದ್ಯಂತೆ.!
ಯಾರು ಅಕ್ಷತಾ ಬಗ್ಗೆ ರಾಕೇಶ್ ಬಳಿಗೆ ಹೋಗಿ ಹೇಳಿದರು ಅನ್ನೋದು ಗೊತ್ತಿಲ್ಲ. ಆದ್ರೆ, ಪದೇ ಪದೇ ''7-8 ಜನ ಬಂದು ನನ್ನ ಬಳಿ ಕೇಳಿದ್ದಾರೆ. ಏನಂದ್ರೆ, ಯಾಕೆ ಅಕ್ಷತಾ ನಿನ್ನನ್ನೇ ಟಾರ್ಗೆಟ್ ಮಾಡುತ್ತಾರೆ ಅಂತ.? ನಿಮ್ಮಿಂದ ನನ್ನ ಇಮೇಜ್ ಡ್ಯಾಮೇಜ್ ಆಗಿದೆ'' ಅಂತ ಅಕ್ಷತಾ ಬಳಿ ರಾಕೇಶ್ ಹೇಳಿದರು.

ಐ ಹೇಟ್ ಯು ಎಂದ ಅಕ್ಷತಾ
''ನಾನು ನಿನ್ನ ಜೊತೆ 50 ದಿನ ಕಳೆದಿದ್ದೇನೆ, ನಿನ್ನಿಂದ ನಾನು ನನ್ನ ಹೆಸರು ಹಾಳು ಮಾಡಿಕೊಂಡಿರುವೆ. ಟಾಸ್ಕ್ ನಲ್ಲಿ ಏನು ಅನ್ಸುತ್ತೋ, ಅದನ್ನ ನಾನು ಹೇಳುತ್ತೇನೆ. ಕವಿತಾ ಹಿಂದೆ ರಾಕೇಶ್ ಬಿದ್ದಿದ್ದಾನೆ ಅಂತ ನನಗೂ ಜನ ಬಂದು ಹೇಳಿದ್ದಾರೆ. ಆದರೆ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಯಾಕಂದ್ರೆ, ಅದು ಟಾಸ್ಕ್. ಈಗ ನೀನು ಜೀವಿತಾ ಜೊತೆಗೆ ಜಾಸ್ತಿ ಸಮಯ ಕಳೆಯುತ್ತಿರುವ ಬಗ್ಗೆ ಇಡೀ ಮನೆ ಮಾತನಾಡುತ್ತಿದೆ. ಐ ಹೇಟ್ ಯು ಮ್ಯಾನ್'' ಎಂದು ರಾಕೇಶ್ ಗೆ ಹೇಳಿದರು ಅಕ್ಷತಾ.

ಲವ್ ಹೋಯ್ತು, ಹೋಗಲಿ
''ನೀನು ನನ್ನ ಹೇಟ್ ಮಾಡ್ತೀಯಾ, ಲವ್ ಮಾಡ್ತೀಯಾ.. ನಾನು ಕೇರ್ ಮಾಡಲ್ಲ. ಈ ಮನೆಯಲ್ಲಿ ಗೌರವ ಕೊಡಬೇಕು. ಯಾಕಂದ್ರೆ, ನಾನು ಅಗೌರವ ತೋರುತ್ತಿಲ್ಲ. ಲವ್ ಹೋಯ್ತು, ಹೋಗಲಿ'' ಎಂದಿದ್ದಾರೆ ರಾಕೇಶ್.

ಅಡುಗೆ ಮನೆ ಜಗಳ
''ಅಕ್ಷತಾ ಜಾಸ್ತಿ ಅಡುಗೆ ಮನೆಯಲ್ಲೇ ಇದ್ದಾರೆ. ಬೇರೆಯವರಿಗೆ ಅವಕಾಶ ಕೊಡಿ'' ಅಂತ ಮನೆಯವರೆಲ್ಲಾ ಹೋಗಿ ರಾಕೇಶ್ ಬಳಿ ಹೇಳಿದ್ದಾರಂತೆ. ಇದೇ ಪಾಯಿಂಟ್ ನಿಂದ ಮತ್ತೆ ರಾಕೇಶ್-ಅಕ್ಷತಾ ಮಧ್ಯೆ ಕಿತ್ತಾಟ ಶುರುವಾಯ್ತು.

ಕ್ಯಾತೆ ತೆಗೆದ ರಾಕೇಶ್
ಸಂಬಂಧದ ಬಗ್ಗೆ ರಶ್ಮಿ ಆಡಿದ ಮಾತು ತಪ್ಪು ಅಂತ ಕ್ಯಾಪ್ಟನ್ ಆಯ್ಕೆ ಚಟುವಟಿಕೆ ವೇಳೆ ಅಕ್ಷತಾ ಪ್ರಶ್ನೆ ಮಾಡಿದರು. ''ಇದು ತಪ್ಪು. ನೀವು ಪದೇ ಪದೇ ನನ್ನ ಬಗ್ಗೆ ಹೀಗೆ ಪರ್ಸನಲ್ ಅಟ್ಯಾಕ್ ಮಾಡುವುದರಿಂದ ನನ್ನ ಇಮೇಜ್ ಡ್ಯಾಮೇಜ್ ಆಗುತ್ತೆ'' ಅಂತ ಅಕ್ಷತಾ ಬಳಿ ಮತ್ತೆ ರಾಕೇಶ್ ಕ್ಯಾತೆ ತೆಗೆದರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.

ಹೋಗೋ ಲೋ ಎಂದ ಅಕ್ಷತಾ
''ದಯವಿಟ್ಟು ನನ್ನ ಹತ್ತಿರ ಬರಬೇಡಿ ಅಂತ ರಾಕೇಶ್ ಮತ್ತೆ ಮತ್ತೆ ಹೇಳಿದ್ದಕ್ಕೆ, ಕಿರಿಕಿರಿಗೊಂಡ ಅಕ್ಷತಾ, ''ಪದೇ ಪದೇ ನನ್ನ ಹತ್ತಿರ ಬರಬೇಡಿ ಅಂತ ಹೇಳಿ ಹೇಳಿ ನನ್ನ ಕ್ಯಾರೆಕ್ಟರ್ ನ ಬೇರೆ ತರಹ ತೋರಿಸುತ್ತಿದ್ದೀಯಾ. ನನಗೆ ನಿಮ್ಮ ಬಳಿ ಮಾತನಾಡಲು ಇಷ್ಟ ಇಲ್ಲ. ನಿನ್ನ ಬಿಟ್ಟು ದೂರ ಇದ್ದೇನೆ. ಹೋಗೋ ಲೋ'' ಎಂದುಬಿಟ್ಟರು ಅಕ್ಷತಾ.

ಫ್ರೆಂಡ್ಸ್ ಅಲ್ಲ.!
''ನಾವು ಫ್ರೆಂಡ್ಸ್ ಅಲ್ಲ. ಇವತ್ತು ನನಗೆ ಗೊತ್ತಾಯಿತು ನೀವು ಯಾವ ಲೆವೆಲ್ ಗೆ ಇಳಿಯುತ್ತೀರಾ ಅಂತ'' ಎಂದು ಅಕ್ಷತಾಗೆ ಕೈ ಮುಗಿದಿದ್ದಾರೆ ರಾಕೇಶ್. ಅಲ್ಲಿಗೆ, ರಾಕೇಶ್-ಅಕ್ಷತಾ ನಡುವಿನ ಗೆಳೆತನ ಮುರಿದು ಬಿತ್ತು ಅಂತ ಸ್ಪರ್ಧಿಗಳೆಲ್ಲಾ ಭಾವಿಸಿದ್ದಾರೆ. ಮುಂದೇನಾಗುತ್ತೋ, ಯಾರಿಗೊತ್ತು.?!


Click it and Unblock the Notifications











