ಅಕ್ಷತಾ ಪಾಂಡವಪುರ ಹೇಳಿದ್ದು ನಿಜವೋ, ಸುಳ್ಳೋ.?
Recommended Video

''ರಾಕೇಶ್ ರಿಂದ ದೂರ ಇರು'' ಅಂತ ತಾಯಿಯಿಂದ ಸಂದೇಶ ಬಂದ್ಮೇಲೆ, ಅಕ್ಷತಾ ಬದಲಾಗಿದ್ದಾರೆ. ರಾಕೇಶ್ ರಿಂದ ಕೊಂಚ ದೂರ ಸರಿದಿದ್ದಾರೆ ನಿಜ. ಇವರಿಬ್ಬರ ನಡುವೆ ಅಂತರ ಬೆಳೆಯುತ್ತಿರುವಾಗಲೇ, 'ಬಿಗ್ ಬಾಸ್' ಮನೆಯೊಳಗೆ ಮೂವರು ಹುಡುಗಿಯರು ಎಂಟ್ರಿಕೊಟ್ಟರು.
ಅಕ್ಷತಾ ಜೊತೆಗಿನ ಫ್ರೆಂಡ್ ಶಿಪ್ ಮುರಿದುಕೊಂಡಿದ್ದ ರಾಕೇಶ್, ಜೀವಿತಾ ರೊಂದಿಗೆ ಕ್ಲೋಸ್ ಆದರು. ನಿವೇದಿತಾ ಗೌಡ ಮತ್ತು ಮೇಘಶ್ರೀ ಜೊತೆಗೂ ರಾಕೇಶ್ ಆತ್ಮೀಯತೆ ಬೆಳೆಯಿತು.
ಬದಲಾದ ಈ ರಾಕೇಶ್ ವರ್ತನೆ ಅಕ್ಷತಾಗೆ ಕಿರಿಕಿರಿ ತಂತು. ಅದೇ ಸಮಯಕ್ಕೆ ನಾಮಿನೇಷನ್ ಕೂಡ ನಡೆದಿದ್ದರಿಂದ, ಅಕ್ಷತಾ ಸಿಟ್ಟು ತಾರಕಕ್ಕೇರಿತು. ಇನ್ನೂ ನಿವೇದಿತಾ ಗೌಡ ಮುಂದೆ ತಮ್ಮ ವೀಕ್ನೆಸ್ ಬಿಟ್ಟುಕೊಡದಂತೆ ರಾಕೇಶ್ ಗೆ ಅಕ್ಷತಾ ತಾಕೀತು ಕೂಡ ಮಾಡಿದ್ದರು.

ಇದನ್ನೆಲ್ಲಾ ನೋಡಿದ್ಮೇಲೆ ವೀಕ್ಷಕರ ತಲೆಯಲ್ಲಿ ಮೂಡಿದ ಪ್ರಶ್ನೆ - ''ಬೇರೆ ಹುಡುಗಿಯರ ಜೊತೆಗೆ ರಾಕೇಶ್ ಮಾತನಾಡಿದರೆ ಅಕ್ಷತಾಗೆ ಕಿರಿಕಿರಿ ಆಗುತ್ತಾ.?''. ವೂಟ್ ನಲ್ಲಿ ವೀಕ್ಷಕರು ಕೇಳಿದ ಈ 'ಬಿಗ್' ಪ್ರಶ್ನೆಯನ್ನ ಅಕ್ಷತಾ ಮುಂದಿಟ್ಟರು ಸುದೀಪ್.
ಈ ಪ್ರಶ್ನೆಗೆ ಅಕ್ಷತಾ ಕೊಟ್ಟ ಉತ್ತರ ''ಖಂಡಿತ ಇಲ್ಲ''. ಹಾಗಾದ್ರೆ, ಜೀವಿತಾ ಮತ್ತು ನಿವೇದಿತಾ ಜೊತೆಗೆ ರಾಕೇಶ್ ಮಾತನಾಡಿದಾಗ ಅಕ್ಷತಾಗೆ ಕಿರಿಕಿರಿ ಆಗ್ಲಿಲ್ವಾ.? ಅಕ್ಷತಾ ನಿಜ ಹೇಳಿದ್ರಾ.? ಸುಳ್ಳು ಹೇಳಿದ್ರಾ.? ಎಂಬ ಗೊಂದಲ ಸದ್ಯ ವೀಕ್ಷಕರಿಗೆ ಕಾಡುತ್ತಿದೆ.


Click it and Unblock the Notifications











