ರಾಕೇಶ್ ಗೆ ಅತ್ಯಂತ ಗೋಳು ಕೊಟ್ಟ ಸ್ಪರ್ಧಿ ಯಾರು ಗೊತ್ತಾ.?

Recommended Video

Bigg Boss Kannada Season 6: ರಾಕೇಶ್ ಗೆ ಅತ್ಯಂತ ಗೋಳು ಕೊಟ್ಟ ಸ್ಪರ್ಧಿ ಯಾರು ಗೊತ್ತಾ.? | FILMIBEAT KANNADA

ಕೆಲವೇ ಕೆಲವು ದಿನಗಳ ಹಿಂದೆ ಹೀಗೆ ಇರಲಿಲ್ಲ.. ಅಕ್ಷತಾ ಅಂದ್ರೆ ಸಾಕು.. ಏನು ಬೇಕಾದರೂ ಮಾಡಲು ರಾಕೇಶ್ ರೆಡಿ ಆಗಿದ್ದರು. 'ಬಿಗ್ ಬಾಸ್' ಗೆಲುವಿನ ಟ್ರೋಫಿಯನ್ನ ಅಕ್ಷತಾಗೆ ಬಿಟ್ಟುಕೊಡುವ ಬಗ್ಗೆಯೂ ರಾಕೇಶ್ ಆಲೋಚನೆ ಮಾಡಿದ್ದರು.

ಆದ್ರೀಗ, ಕಾಲ ಬದಲಾಗಿದೆ. ''ರಾಕೇಶ್ ರಿಂದ ದೂರ ಇರು'' ಅಂತ ಅಕ್ಷತಾಗೆ ತಾಯಿ ಕಡೆಯಿಂದ ಆದೇಶ ಬಂದ ಮೇಲೆ ಗೇಮ್ ಪ್ಲಾನ್ ಬದಲಾಗಿದೆ. ಅಲ್ಲಿಯವರೆಗೂ ಅಕ್ಷತಾ ಜೊತೆಗೆ ಅಂಟಿಕೊಂಡು ಸ್ಟ್ರಾಟೆಜಿ ಮಾಡುತ್ತಿದ್ದ ರಾಕೇಶ್, ಇದೀಗ ಅಕ್ಷತಾ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.

ಇಷ್ಟು ದಿನ ಅಕ್ಷತಾ ಬ್ರೇನ್ ವಾಶ್ ಮಾಡಿದ್ದ ರಾಕೇಶ್ ಈಗ 'ಅತ್ಯಂತ ಗೋಳು ಕೊಡುವ ಸ್ಪರ್ಧಿ' ಎಂಬ ಹಣೆಪಟ್ಟಿಯನ್ನ 'ಪ್ರೀತಿಯ ಅಕ್ಷ್'ಗೆ ನೀಡಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ಯಾರು ಯಾವಾಗ ಬೇಕಾದರೂ ಪಲ್ಟಿ ಹೊಡೆಯುತ್ತಾರೆ ಅನ್ನೋದಕ್ಕೆ ಇದೇ ಉತ್ತಮ ಉದಾಹರಣೆ. ಮುಂದೆ ಓದಿರಿ...

'ವಾರದ ಕಥೆ ಕಿಚ್ಚನ ಜೊತೆ'

'ವಾರದ ಕಥೆ ಕಿಚ್ಚನ ಜೊತೆ'

'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಪ್ರತಿಯೊಬ್ಬ ಸ್ಪರ್ಧಿಗೂ ''ನಿಮಗೆ ಖುಷಿ ಕೊಟ್ಟ ಸ್ಪರ್ಧಿ ಯಾರು, ಗೋಳು ಕೊಟ್ಟ ಸ್ಪರ್ಧಿ ಯಾರು ಮತ್ತು ಯಾಕೆ.?'' ಎಂದು ಸುದೀಪ್ ಪ್ರಶ್ನಿಸಿದರು. ಇದಕ್ಕೆ ಅಚ್ಚರಿ ಉತ್ತರಗಳು ಬಂದಿದ್ದು ರಾಕೇಶ್ ಮತ್ತು ಅಕ್ಷತಾ ಕಡೆಯಿಂದ.

ಅಕ್ಷತಾ ಹೇಳಿದ್ದೇನು.?

ಅಕ್ಷತಾ ಹೇಳಿದ್ದೇನು.?

''ಫಸ್ಟ್ ಹಾಫ್ ವರೆಗೂ ನನಗೆ ತುಂಬಾ ಖುಷಿ ಕೊಟ್ಟಿದ್ದು ರಾಕೇಶ್. ಆಮೇಲೆ ಗೋಳು ಕೊಟ್ಟಿದ್ದು ಅವನೇ. ಆದ್ರೆ, ಮೊದಲಿನಿಂದಲೂ ಗೋಳು ಕೊಟ್ಟಿದ್ದು ಧನರಾಜ್'' ಎಂದು ಅಕ್ಷತಾ ಉತ್ತರಿಸಿದರು.

ರಾಕೇಶ್ ಹೇಳಿದ್ದೇನು.?

ರಾಕೇಶ್ ಹೇಳಿದ್ದೇನು.?

''ನನಗೆ ತುಂಬಾ ಖುಷಿ ಕೊಟ್ಟಿದ್ದು ನವೀನ್. ಅವರ ಸರಳತೆ, ಮಾತನಾಡುವ ರೀತಿ ನನಗೆ ತುಂಬಾ ಇಷ್ಟ. ಇನ್ನೂ ಗೋಳು ಕೊಡುತ್ತಿರುವುದು ಅಕ್ಷತಾ'' ಎಂದರು ಎಂ.ಜೆ.ರಾಕೇಶ್.

ಹೀಗೂ ಉಂಟೇ.?

ಹೀಗೂ ಉಂಟೇ.?

ನಮ್ಮಿಬ್ಬರ ನಡುವೆ Intense ಫ್ರೆಂಡ್ ಶಿಪ್ ಇದೆ ಅಂತೆಲ್ಲಾ ಹೇಳಿದ್ದ ರಾಕೇಶ್ ಇದೀಗ ಅದೇ ಅಕ್ಷತಾ ಮೇಲೆ 'ಗೋಳು' ಎಂಬ ಗೂಬೆ ಕೂರಿಸಿದ್ದಾರೆ. ಇದನ್ನೆಲ್ಲ ನೋಡ್ತಿದ್ರೆ, ಕಂಟೆಂಟ್ ಮತ್ತು ಗೇಮ್ ಪ್ಲಾನ್ ಗಾಗಿ ರಾಕೇಶ್ ಮತ್ತು ಅಕ್ಷತಾ ಒಬ್ಬರನ್ನೊಬ್ಬರು ಬಳಸಿಕೊಳ್ಳುತ್ತಿರುವ ಹಾಗಿದೆ.

More from Filmibeat

English summary
Bigg Boss Kannada 6: Day 63: Akshata is torturing says Rakesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X