ಕಡೆಗೂ ಕವಿತಾ ನಾಟಕ ಜಯಶ್ರೀ ಮುಂದೆ ಬಯಲಾಯಿತು.!
''ನಮ್ಮಿಬ್ಬರ ಗೆಳೆತನ 'ಬಿಗ್ ಬಾಸ್' ಮನೆಯೊಳಗೆ ಶುರುವಾಗಿದ್ದಲ್ಲ. ಮುಂಚಿನಿಂದಲೂ ನಾವಿಬ್ಬರೂ ಫ್ರೆಂಡ್ಸ್'' - ಹೀಗಂತ ಕವಿತಾ ಮತ್ತು ತಮ್ಮ ಗೆಳೆತನದ ಬಗ್ಗೆ ಜಯಶ್ರೀ ಒಮ್ಮೆ ಕಾಮೆಂಟ್ ಮಾಡಿದ್ದರು.
ಕವಿತಾ ಪರವಾಗಿ ಸದಾ ನಿಲ್ಲುತ್ತಿದ್ದ ಜಯಶ್ರೀ 'ಬಿಗ್ ಬಾಸ್' ಮನೆಯಿಂದ ಕಳೆದ ವಾರ ಔಟ್ ಆದರು. ಅಚ್ಚರಿ ಅಂದ್ರೆ, ಜಯಶ್ರೀ ರನ್ನ ಖುದ್ದು ಕವಿತಾ ನಾಮಿನೇಟ್ ಮಾಡಿದ್ದರು. ''ಕ್ರೀಡಾ ಮನೋಭಾವದಿಂದ ಜಯಶ್ರೀ ಆಟ ಆಡುತ್ತಿಲ್ಲ'' ಎಂದು ಕವಿತಾ ಕಾರಣವನ್ನೂ ಕೊಟ್ಟಿದ್ದರು.
ಜಯಶ್ರೀ ರನ್ನ ಕವಿತಾ ನಾಮಿನೇಟ್ ಮಾಡಿರುವ ವಿಷಯ ಶಶಿ ಮತ್ತು ಧನರಾಜ್ ಗೆ ಗೊತ್ತಿತ್ತು. ಆದ್ರೆ, ಜಯಶ್ರೀಗೆ ಗೊತ್ತಿರಲಿಲ್ಲ. ಈ ಸೀಕ್ರೆಟ್ ಇದೀಗ ಜಯಶ್ರೀ ಮುಂದೆ ರಿವೀಲ್ ಆಗಿದೆ.

ಕವಿತಾ ನಾಮಿನೇಟ್ ಮಾಡಿದ ವಿಡಿಯೋ ಕ್ಲಿಪ್ ನ ಸುದೀಪ್, 'ಸೂಪರ್ ಸಂಡೆ ವಿತ್ ಸುದೀಪ್' ಸಂಚಿಕೆಯಲ್ಲಿ ಜಯಶ್ರೀಗೆ ತೋರಿಸಿದರು. ಅದನ್ನ ನೋಡಿ ಕೊಂಚ ಶಾಕ್ ಆದ ಜಯಶ್ರೀ, ''ಯಾವುದೋ ಒಂದು ವಾರ ಹೀಗೆ ಮಾಡ್ತಾರೆ ಅಂತ ಗೊತ್ತಿತ್ತು. ಈ ವಾರ ಅರ್ಜೆಂಟ್ ಮಾಡಿದ್ರು ಅನ್ಸುತ್ತೆ'' ಎಂದು ಪ್ರತಿಕ್ರಿಯಿಸಿದರು.
''ಈ ಮನೆಯಲ್ಲಿ ತುಂಬಾ ನಾಟಕ ಮಾಡೋರು ಯಾರು.?'' ಅಂತ ಸುದೀಪ್ ಕೇಳಿದ ಪ್ರಶ್ನೆಗೆ ಜಯಶ್ರೀ ಬಾಯಿಂದ ಬಂದ ಉತ್ತರ - ''ಕವಿತಾ''.
ಅಲ್ಲಿಗೆ, 'ಜೀವದ ಗೆಳತಿ'ಯರಂತೆ ಇದ್ದ ಜಯಶ್ರೀ-ಕವಿತಾ ನಡುವೆ ಮನಸ್ತಾಪ ಮೂಡಿರುವುದು ಖಂಡಿತ.


Click it and Unblock the Notifications











