ರಾಕೇಶ್ 'ಗುಡ್ನೆಸ್' ಬಗ್ಗೆ ಪ್ರಶ್ನೆ ಮಾಡಿದ ಸುದೀಪ್.!

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ 'ಗುಡ್ನೆಸ್' ಎಂಬ ಗಾಳಿ ಬೀಸಿರೋದು ಎಂ.ಜೆ.ರಾಕೇಶ್ ಎಂಬ ಸ್ಪರ್ಧಿಗೆ ಮಾತ್ರ. ಯಾವಾಗ್ಯಾವಾಗ ತಾವು ಅಂದುಕೊಂಡಿದ್ದು ನಡೆಯುವುದಿಲ್ಲವೋ, ಆಗಾಗ 'ಗುಡ್ನೆಸ್' ಎಂಬ ಮಂತ್ರವನ್ನ ಜಪಿಸಿ 'ಮಹಾನುಭಾವ'ನಂತೆ ಬಿಂಬಿಸಿಕೊಳ್ಳಲು ಎಂ.ಜೆ.ರಾಕೇಶ್ ಯತ್ನಿಸುತ್ತಾರೆ.

ಒಂದು ಕಡೆ ಅಕ್ಷತಾ ಜೊತೆ ಅಂಟಿಕೊಂಡು ಅಥವಾ ಕಿತ್ತಾಡಿಕೊಂಡು 'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ದಿನ ಉಳಿಯುವುದು ರಾಕೇಶ್ ಸ್ಟ್ರಾಟೆಜಿ ಆಗಿದ್ದರೆ, ಇನ್ನೊಂದೆಡೆ 'ಗುಡ್ನೆಸ್' ಎಂಬುದು ಮತ್ತೊಂದು ಗೇಮ್ ಪ್ಲಾನ್ ಎನ್ನುವುದು ಉಳಿದ ಸ್ಪರ್ಧಿಗಳ ಲೆಕ್ಕಾಚಾರ.

ಪದೇ ಪದೇ 'ಗುಡ್ನೆಸ್' ಎನ್ನುವ ರಾಕೇಶ್, ಅದೇ ಒಳ್ಳೆತನವನ್ನು ಹರಡಲು ಕಳೆದ ವಾರ ಮುರಳಿಯನ್ನ ಸೇಫ್ ಮಾಡಿದ್ದರು. ಮುರಳಿಯನ್ನ ರಾಕೇಶ್ ಸೇಫ್ ಮಾಡಿದ್ದು ಯಾಕೆ.? ಅಕ್ಷತಾ ರನ್ನ ರಾಕೇಶ್ ಯಾಕೆ ಉಳಿಸಲಿಲ್ಲ ಎಂಬುದರ ಕುರಿತು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಪ್ರಶ್ನಿಸಿದರು. ಆಗ ರಾಕೇಶ್ ಹೇಳಿದ್ದೇನು ಗೊತ್ತಾ.? ಮುಂದೆ ಓದಿರಿ..

ಸುದೀಪ್ ಕೇಳಿದ ಪ್ರಶ್ನೆ ಏನು.?

ಸುದೀಪ್ ಕೇಳಿದ ಪ್ರಶ್ನೆ ಏನು.?

''ಈ ಬಾರಿ ನಾಮಿನೇಷನ್ ಒಂಥರಾ ವಿಚಿತ್ರವಾಗಿತ್ತು. ಕ್ಯಾಪ್ಟನ್ ಆಗಿದ್ದರೂ, ರಾಕೇಶ್ ನಾಮಿನೇಟ್ ಆದರು. ಒಬ್ಬರನ್ನ ಸೇಫ್ ಮಾಡುವ ಅಧಿಕಾರ ಸಿಕ್ಕಾಗ, ರಾಕೇಶ್ ಸೇಫ್ ಆಗಬಹುದಿತ್ತು. ಆ ಘೋಷಣೆ ಆಗುವ ಮುನ್ನ ''ಕ್ಯಾಪ್ಟನ್ ಆಗಿದ್ದರೂ, ನಾಮಿನೇಟ್ ಆಗಿದ್ದೀನಿ. ಇದು ಅನ್ ಫೇರ್'' ಅಂತ ರಾಕೇಶ್ ಹೇಳಿದರು. ಆದರೆ, ಎದ್ದು ನಿಂತಾಗ ರಾಕೇಶ್ ತಮ್ಮನ್ನ ತಾವು ಸೇಫ್ ಮಾಡಿಕೊಳ್ಳಲ್ಲ. ಈ ರಿಸ್ಕ್ ಈಗ ಬೇಕಿತ್ತಾ.?'' ಎಂದು ರಾಕೇಶ್ ಗೆ ಸುದೀಪ್ ಪ್ರಶ್ನಿಸಿದರು.

ರಾಕೇಶ್ ಹೇಳಿದ್ದೇನು.?

ರಾಕೇಶ್ ಹೇಳಿದ್ದೇನು.?

''ಹೌದು.. ನನ್ನ ಉದ್ದೇಶ ಏನು ಅಂದ್ರೆ ಒಳ್ಳೆತನದಿಂದ ಆಟ ಆಡಬೇಕು. ಗುಡ್ನೆಸ್ ನಿಂದ ಯಾವುದೇ ಯುದ್ಧ ಗೆಲ್ಲಬಹುದು ಎನ್ನುವುದು ನನ್ನ ನಂಬಿಕೆ. ಹೀಗಿರುವಾಗ, ನಾನು ನನ್ನನ್ನೇ ಸೇಫ್ ಮಾಡಿಕೊಂಡಿದ್ದರೆ, ನಾನು ಸ್ವಾರ್ಥಿ ಆಗುತ್ತಿದ್ದೆ'' ಎಂದು ವಿವರಿಸಿದರು ರಾಕೇಶ್.

ಮುರಳಿಯನ್ನ ಸೇಫ್ ಮಾಡಿದ್ದು ಯಾಕೆ.?

ಮುರಳಿಯನ್ನ ಸೇಫ್ ಮಾಡಿದ್ದು ಯಾಕೆ.?

''ಮುರಳಿ ರವರನ್ನ ನಾನು ಯಾಕೆ ಸೇಫ್ ಮಾಡಿದೆ ಅಂದ್ರೆ, ಈ ಮನೆಯ ಅರ್ಧದಷ್ಟು ಪ್ರಾಬ್ಲಂ ಶುರುವಾಗುವುದು ಅಡುಗೆ ಮನೆಯಿಂದ. ಮುರಳಿ ಇದ್ದರೆ, ಅರ್ಧ ಪ್ರಾಬ್ಲಂ ಬಗೆಹರಿದ ಹಾಗೆ. ಹೀಗಾಗಿ, ನಾನು ಅವರನ್ನ ಸೇಫ್ ಮಾಡಿದೆ'' ಎಂದರು ರಾಕೇಶ್.

ಅಕ್ಷತಾ ರನ್ನ ಸೇಫ್ ಮಾಡಲಿಲ್ಲ ಯಾಕೆ.?

ಅಕ್ಷತಾ ರನ್ನ ಸೇಫ್ ಮಾಡಲಿಲ್ಲ ಯಾಕೆ.?

''ಎರಡು ವಾರದ ಹಿಂದೆ ಪ್ರಾಂಕ್ ಟಾಸ್ಕ್ ಬಂದಾಗ, ಅಕ್ಷತಾ ರನ್ನ ಉಳಿಸಿಕೊಳ್ಳಲು ನೀವು ಕಣ್ಣೀರು ಹಾಕಿದ್ರಿ. ಈಗ ನಿಮ್ಮ ಕೈಯಲ್ಲಿ ಅಧಿಕಾರ ಇದ್ದಾಗ, ಅಕ್ಷತಾನ ಸೇಫ್ ಮಾಡಲಿಲ್ಲ ಯಾಕೆ.?'' ಎಂದು ಪ್ರಶ್ನಿಸಿದರು ಸುದೀಪ್

ಸಮಜಾಯಿಷಿ ನೀಡಿದ ರಾಕೇಶ್

ಸಮಜಾಯಿಷಿ ನೀಡಿದ ರಾಕೇಶ್

''ಅಕ್ಷತಾ ಮತ್ತು ನನ್ನ ನಡುವೆ ಇರುವ Intense ಫ್ರೆಂಡ್ ಶಿಪ್ ಬಗ್ಗೆ ತುಂಬಾ ಅನುಮಾನ, ಪ್ರಶ್ನೆಗಳು ಮೂಡಿವೆ. ಇನ್ಮೇಲೆ ನಾವಿಬ್ಬರು ಮಾತನಾಡುವುದು ಬೇಡ ಅಂತ ಅಕ್ಷತಾ ತೀರ್ಮಾನ ಮಾಡಿದ್ದರು. ಅದಾದ ಮೇಲೆ ನಾನು ಅವರನ್ನ ಸೇಫ್ ಮಾಡುವೆ ಎಂಬ ನಿರೀಕ್ಷೆ ಅವರಲ್ಲಿ ಯಾಕೆ ಇರಬೇಕು.? ಹಾಗೊಂದು ವೇಳೆ ನಾನು ಅಕ್ಷತಾ ರನ್ನ ಸೇಫ್ ಮಾಡಿದ್ರೆ, ಮತ್ತೆ ಇದೇ ಟಾಪಿಕ್ ಚರ್ಚೆ ಆಗುತ್ತಿತ್ತು. ''ನಾನಿನ್ನೂ ಅವರ ಹಿಂದೆ ಬಿದ್ದಿದ್ದೇನೆ'' ಅಂತಾಗುತ್ತೆ ಅಂತ ನಾನು ಅಕ್ಷತಾ ರನ್ನ ಸೇಫ್ ಮಾಡಲಿಲ್ಲ. ಮೇಲಾಗಿ, ಅಕ್ಷತಾ ಒಳ್ಳೆ ಪರ್ಫಾಮರ್. ಆಕೆ ಸೇಫ್ ಆಗುತ್ತಾರೆ'' ಎಂದರು ರಾಕೇಶ್.

ಅಕ್ಷತಾ ಹೇಳಿದ್ದೇನು.?

ಅಕ್ಷತಾ ಹೇಳಿದ್ದೇನು.?

''ನನ್ನನ್ನ ರಾಕೇಶ್ ಸೇಫ್ ಮಾಡುತ್ತಾರೆ ಅಂತ ನನಗೆ ನಂಬಿಕೆ ಇತ್ತು. ಒಂದು ವೇಳೆ ನನಗೆ ಇದೇ ಅಧಿಕಾರ ಸಿಕ್ಕಿದ್ದರೆ, ನಾನು ಅವನ ಹಾಗೆ ಇಷ್ಟೆಲ್ಲಾ ಯೋಚನೆ ಮಾಡುತ್ತಿರಲಿಲ್ಲ. ಮನಸ್ಸಿಗೆ ಅನಿಸಿದ್ದನ್ನ ಮಾಡುತ್ತಿದ್ದೆ'' ಎಂದರು ಅಕ್ಷತಾ.

More from Filmibeat

English summary
Bigg Boss Kannada 6: Day 63: Why did Rakesh save Murali from nomination.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X