ರಾಕೇಶ್ ಉಡುಗೊರೆಯನ್ನ ಅಕ್ಷತಾ ಸ್ವೀಕರಿಸಿದ್ದು ಯಾರಿಗೂ ಗೊತ್ತಾಗಲೇ ಇಲ್ಲ.!

Recommended Video

Bigg Boss Kannada Season 6:ಅಕ್ಷತಾ ಮತ್ತು ರಾಕೇಶ್ ಫ್ರೆಂಡ್ ಶಿಪ್ ಮುರಿದು ಬಿತ್ತು ಅಂತ ಊಹಿಸಿದವರಿಗೆ ಹೊಸ ಶಾಕ್

ಹೀಗೊಂದು ವಿಚಿತ್ರ ನಡೆಯುತ್ತೆ ಅಂತ ಯಾರು ಊಹಿಸಿದ್ರೋ, ಇಲ್ವೋ... ಯಾಕಂದ್ರೆ, ಒಂದು ವಾರದ ಹಿಂದೆಯಷ್ಟೇ ಅಕ್ಷತಾ ಮತ್ತು ರಾಕೇಶ್ ಹಾವು-ಮುಂಗುಸಿಯಂತೆ ಕಿತ್ತಾಡಿದ್ದರು. 'ನಾವು ಫ್ರೆಂಡ್ಸ್ ಅಲ್ಲ' ಎನ್ನುವ ಮಟ್ಟಕ್ಕೆ ರಾಕೇಶ್ ಕೂಗಾಡಿದ್ದರು. ಅಲ್ಲಿಗೆ, ಇವರಿಬ್ಬರ ನಡುವಿನ Intense ಫ್ರೆಂಡ್ ಶಿಪ್ ಮುರಿದು ಬಿತ್ತು ಅಂತ ಊಹಿಸಿದವರಿಗೆ ಹೊಸ ಶಾಕ್ ಸಿಕ್ಕಿದೆ.

'ಬಿಗ್ ಬಾಸ್' ಮನೆಯಲ್ಲಿ ನಡೆದ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಎಲ್ಲಾ ಸ್ಪರ್ಧಿಗಳು ಸಾಂತಾ ಆಗಿ ಉಡುಗೊರೆ ನೀಡಿದ್ದು ನಿಮಗೆಲ್ಲ ಗೊತ್ತೇ ಇದೆ. ಈ ವೇಳೆ ಎಲ್ಲರ ಮುಂದೆ ಉಡುಗೊರೆ ನೀಡದ ರಾಕೇಶ್, ಗುಟ್ಟಾಗಿ ಅಕ್ಷತಾಗೆ ಒಂದು ಗಿಫ್ಟ್ ನೀಡಿದ್ದರು. ಆದ್ರೆ, ಅದನ್ನ ಅಕ್ಷತಾ ಸ್ವೀಕರಿಸಲಿಲ್ಲ ಎಂಬುದಷ್ಟೇ ನಿಮಗೆ ಗೊತ್ತು.

ವಾಸ್ತವ ಏನು ಅಂದ್ರೆ... 'ಬಿಗ್ ಬಾಸ್' ಮನೆಯಲ್ಲಿ ಲೈಟ್ಸ್ ಆಫ್ ಆದ್ಮೇಲೆ ರಾಕೇಶ್ ಕೊಟ್ಟ ಉಡುಗೊರೆಯನ್ನ ಅಕ್ಷತಾ ಸ್ವೀಕರಿಸಿದ್ದಾರೆ. ಉಡುಗೊರೆಯನ್ನು ಸ್ವೀಕರಿಸಲು ಅಕ್ಷತಾ ಮನವೊಲಿಸುವಲ್ಲಿ ರಾಕೇಶ್ ಯಶಸ್ವಿ ಆಗಿದ್ದಾರೆ. ಮುಂದೆ ಓದಿರಿ...

ಮನವೊಲಿಸಿದ ರಾಕೇಶ್

ಮನವೊಲಿಸಿದ ರಾಕೇಶ್

''ಉಡುಗೊರೆಯನ್ನ ವಾಪಸ್ ಕೊಡಬಾರದು. ನಿಮಗೆ ಇದು ಬೇಕಾಗಿದೆ ಅಂತ ನನಗೆ ಗೊತ್ತು. ಹಾಕಿ ಕೊಳ್ಳಿ'' ಎಂದು ರಾಕೇಶ್ ಮನವೊಲಿಸಿದ ಮೇಲೆ, ಉಡುಗೊರೆಯನ್ನ ಅಕ್ಷತಾ ಸ್ವೀಕರಿಸಿದರು. ಇದು ಸಂಚಿಕೆಯಲ್ಲಿ ಪ್ರಸಾರ ಆಗಿಲ್ಲ. ವೂಟ್ ಅನ್ ಸೀನ್ ಕ್ಲಿಪ್ ನಲ್ಲಿ ತೋರಿಸಲಾಗಿದೆ.

ಅಕ್ಷತಾಗೆ ಪ್ರೀತಿಯ ಸಂದೇಶ

ಅಕ್ಷತಾಗೆ ಪ್ರೀತಿಯ ಸಂದೇಶ

''ಅಕ್ಷತಾ.. ನನಗೆ ಗೊತ್ತು ನಿನಗೆ ಇದು ಬೇಕು ಅಂತ. ಕ್ಯಾಮರಾ ಮುಂದೆ ಕೇಳುತ್ತಿದ್ದೆ ಅಲ್ವಾ.. ನಮ್ಮ ಮಧ್ಯೆ ಇರುವ ಕೋಲ್ಡ್ ವಾರ್ ಗೆ ಈ ಉಡುಗೊರೆಯಿಂದ ವಾವ್ ಸಿಗಲಿ'' ಎಂಬ ಸಂದೇಶದೊಂದಿಗೆ ಅಕ್ಷತಾಗೆ ರಾಕೇಶ್ 'ಸ್ವೆಟರ್'ನ ಗಿಫ್ಟ್ ಆಗಿ ನೀಡಿದ್ದಾರೆ.

ಅಕ್ಷತಾ ಕೋರಿಕೆ

ಅಕ್ಷತಾ ಕೋರಿಕೆ

ಕ್ಯಾಮರಾ ಮುಂದೆ ಹೋಗಿ ''ಸ್ವೆಟರ್ ಬೇಕು, ಕಳುಹಿಸಿಕೊಡಿ'' ಅಂತ ಅಕ್ಷತಾ ಕೇಳುತ್ತಿದ್ದರಂತೆ. ಇದನ್ನ ಅರಿತ ರಾಕೇಶ್, ಸ್ವೆಟರ್ ನ ಕ್ರಿಸ್ಮಸ್ ಗಿಫ್ಟ್ ಆಗಿ ಅಕ್ಷತಾಗೆ ನೀಡಿದ್ದಾರೆ.

ಮಾತುಕತೆ ನಡೆಯುತ್ತಲೇ ಇದೆ.!

ಮಾತುಕತೆ ನಡೆಯುತ್ತಲೇ ಇದೆ.!

ರಾಕೇಶ್ ರಿಂದ ದೂರ ಇರುವಂತೆ ಅಕ್ಷತಾಗೆ ಕಟ್ಟುನಿಟ್ಟಿನ ಆದೇಶ ಬಂದಿದ್ದರೂ, ಇಬ್ಬರ ನಡುವಿನ ಅನ್ಯೋನ್ಯ ಅನುಬಂಧಕ್ಕೆ ಮಾತ್ರ ಬ್ರೇಕ್ ಸಿಕ್ಕಿಲ್ಲ. ಮುಂಚೆ ಆತ್ಮೀಯವಾಗಿ ಮಾತುಕತೆ ನಡೆಸುತ್ತಿದ್ದ ಇವರಿಬ್ಬರು ಬಳಿಕ ಕಿತ್ತಾಡಿಕೊಂಡರು. ಕಿತ್ತಾಟ ಆದರೂ, ಜಗಳ ನಡೆದರೂ.. ಇಬ್ಬರ ನಡುವೆ ಮಾತುಕತೆ ಮಾತ್ರ ನಿಂತಿಲ್ಲ.

More from Filmibeat

English summary
Bigg Boss Kannada 6: Day 65: Akshata accepts Rakesh's gifts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X