ರಾಕೇಶ್ ಕೊಟ್ಟ ಉಡುಗೊರೆಯನ್ನ ತಿರಸ್ಕರಿಸಿದ ಅಕ್ಷತಾ.!
Recommended Video

''ನಾವು ಫ್ರೆಂಡ್ಸ್ ಅಲ್ಲ.. ದಯವಿಟ್ಟು ನನ್ನ ಬಳಿ ಬರಬೇಡ'' ಅಂತ ಕಳೆದ ವಾರವಷ್ಟೇ ಅಕ್ಷತಾ ಮುಂದೆ ಎಂ.ಜೆ.ರಾಕೇಶ್ ಕೈ ಮುಗಿದಿದ್ದರು. ಇನ್ನೂ 'ಅತ್ಯಂತ ಗೋಳು ಕೊಡುವ ಸ್ಪರ್ಧಿ' ಎಂಬ ಹಣೆಪಟ್ಟಿಯನ್ನೂ ಅಕ್ಷತಾಗೆ ಎಂ.ಜೆ.ರಾಕೇಶ್ ನೀಡಿದ್ದರು.
ಅಲ್ಲಿಗೆ, ಇಬ್ಬರ ನಡುವಿನ ಗೆಳೆತನ ಮುರಿದು ಬಿತ್ತು ಅಂತ ಭಾವಿಸಿದ ವೀಕ್ಷಕರ ತಲೆಗೆ ಎಂ.ಜೆ.ರಾಕೇಶ್ ಮತ್ತೆ ಹುಳ ಬಿಟ್ಟಿದ್ದಾರೆ. ಕ್ರಿಸ್ಮಸ್ ನೆಪದಲ್ಲಿ ಅಕ್ಷತಾಗೆ ಉಡುಗೊರೆ ಕೊಡಲು ರಾಕೇಶ್ ಮುಂದಾದರು. ಆದ್ರೆ, ಅದನ್ನ ಅಕ್ಷತಾ ಸ್ವೀಕರಿಸಲಿಲ್ಲ.
ರಾಕೇಶ್ ಮತ್ತು ಅಕ್ಷತಾ ನಡುವಿನ ಈಕ್ವೇಷನ್ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಇವರಿಬ್ಬರು ಅದ್ಯಾವಾಗ ಕಿತ್ತಾಡುತ್ತಾರೋ, ಅದ್ಯಾವಾಗ ಒಂದಾಗುತ್ತಾರೋ ಅಂತ ಊಹಿಸುವುದು 'ಬಿಗ್ ಬಾಸ್' ಮನೆಯ ಸ್ಪರ್ಧಿಗಳಿಗೆ ಮತ್ತು ವೀಕ್ಷಕರಿಗೆ ಕಷ್ಟ ಕಷ್ಟ. ಮುಂದೆ ಓದಿರಿ...

'ಬಿಗ್ ಬಾಸ್' ಮನೆಯಲ್ಲಿ ಕ್ರಿಸ್ಮಸ್ ಸಂಭ್ರಮ
ಕ್ರಿಸ್ಮಸ್ ಹಬ್ಬದ ಪ್ರಯುಕ್ತ 'ಬಿಗ್ ಬಾಸ್' ಮನೆಯಲ್ಲಿ ಸ್ಪರ್ಧಿಗಳೆಲ್ಲರೂ ಸಾಂತಾ ಆಗಿದ್ದರು. ತಮ್ಮ ಬಳಿ ಇರುವ ಅಮೂಲ್ಯ ವಸ್ತುವನ್ನು ಇತರೆ ಸದಸ್ಯರೊಬ್ಬರಿಗೆ ಉಡುಗೊರೆ ರೂಪದಲ್ಲಿ ಪ್ರತಿಯೊಬ್ಬರೂ ಕೊಡಬೇಕಿತ್ತು.

ಎಲ್ಲರೆದುರಿಗೆ ರಶ್ಮಿಗೆ ಉಡುಗೊರೆ ಕೊಟ್ಟ ರಾಕೇಶ್
ಉಡುಗೊರೆಗಳು ಎಲ್ಲರೆದುರು ಎಕ್ಸ್ ಚೇಂಜ್ ಆಗುವಾಗ, ಎಲ್ಲರ ಮುಂದೆ ನಿಂತು ರಶ್ಮಿಗೆ ಎಂ.ಜೆ.ರಾಕೇಶ್ ಬೆಲ್ಟ್ ನ ಉಡುಗೊರೆಯಾಗಿ ನೀಡಿದರು. ಹಾಗ್ನೋಡಿದ್ರೆ, ರಶ್ಮಿ ಬಗ್ಗೆ ಮೊದಲು ಗಾಸಿಪ್ ಮಾಡಿದವರೇ ರಾಕೇಶ್. ಈಗ ಅದೇ ರಶ್ಮಿ ಜೊತೆಗೆ ಚೆನ್ನಾಗಿರಲು ರಾಕೇಶ್ ಪ್ರಯತ್ನ ಪಡುತ್ತಿದ್ದಾರೆ.

ಅಕ್ಷತಾಗೆ ಸರ್ ಪ್ರೈಸ್
ಎಲ್ಲರೆದುರು ಗಿಫ್ಟ್ಸ್ ಎಕ್ಸ್ ಚೇಂಜ್ ಆಗುವಾಗ ಅಕ್ಷತಾಗೆ ಯಾರಿಂದಲೂ ಉಡುಗೊರೆ ಸಿಗಲಿಲ್ಲ. ಈ ನಡುವೆ ಅಕ್ಷತಾ ಸೂಟ್ ಕೇಸ್ ಬಳಿ ಉಡುಗೊರೆ ಇಟ್ಟು ಆಕೆಗೆ ಸರ್ ಪ್ರೈಸ್ ನೀಡಲು ರಾಕೇಶ್ ಯತ್ನಿಸಿದರು.

ರಿಜೆಕ್ಟ್ ಮಾಡಿದ ಅಕ್ಷತಾ
ನಿವೇದಿತಾ ಮೂಲಕ ತಮ್ಮ ಉಡುಗೊರೆಯನ್ನ ಅಕ್ಷತಾಗೆ ತಲುಪಿಸಲು ರಾಕೇಶ್ ಮುಂದಾದರು. ಆದ್ರೆ, ಉಡುಗೊರೆ ಮೇಲೆ ಬರೆದಿದ್ದ ಸಂದೇಶವನ್ನ ಮಾತ್ರ ಇಟ್ಟುಕೊಂಡು, ಗಿಫ್ಟ್ ನ ರಾಕೇಶ್ ಸೂಟ್ ಕೇಸ್ ನಲ್ಲಿ ಅಕ್ಷತಾ ವಾಪಸ್ ಇಟ್ಟುಬಿಟ್ಟರು.

ಕದ್ದುಮುಚ್ಚಿ ಆಟ ಏಕೆ.?
''ಉಡುಗೊರೆಯನ್ನ ವಾಪಸ್ ಕೊಡಬಾರದು'' ಅಂತ ಅಕ್ಷತಾಗೆ ಪದೇ ಪದೇ ರಾಕೇಶ್ ಹೇಳಿದರು. ಆದ್ರೆ, ಅದನ್ನ ಅಕ್ಷತಾ ಕೇಳಲಿಲ್ಲ. ಹಾಗೊಂದು ವೇಳೆ ಉಡುಗೊರೆ ಕೊಡಬೇಕಿದ್ದರೆ, ಎಲ್ಲರೆದುರಿಗೆ ಅಕ್ಷತಾಗೆ ರಾಕೇಶ್ ಗಿಫ್ಟ್ ನೀಡಬಹುದಿತ್ತು. ರಾಕೇಶ್ ಕಡೆಯಿಂದ ಈ ಕದ್ದುಮುಚ್ಚಿ ಆಟ ಏಕೋ.? ವೀಕ್ಷಕರಿಗೆ ಅರ್ಥ ಆಗುತ್ತಿಲ್ಲ.


Click it and Unblock the Notifications











