ಅಕ್ಷತಾಗೆ ಪೊರಕೆಯಲ್ಲಿ ಹೊಡೆದ್ರಾ ರಾಪಿಡ್ ರಶ್ಮಿ.?
Recommended Video

ಟಾಸ್ಕ್ ನಲ್ಲಿ ಏನು ಬೇಕಾದರೂ ಮಾಡಬಹುದು... ಹೆಚ್ಚು ಹೆಚ್ಚು ವಿವಾದಗಳಲ್ಲಿ ಸಿಲುಕಿದರೆ 'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ದಿನ ಇರಬಹುದು ಎಂಬ ಭ್ರಮೆ ಬಹುಶಃ ಕೆಲ ಸ್ಪರ್ಧಿಗಳಲ್ಲಿ ಇದೆ ಅಂತ ಕಾಣುತ್ತೆ. ಅದಕ್ಕೆ ಚಟುವಟಿಕೆ ಶುರುವಾದರೆ ಸಾಕು, ಕೆಲವರ ನಿಜ ರೂಪ/ಉಗ್ರ ರೂಪ ಬಯಲಿಗೆ ಬರುತ್ತಿದೆ.
ನಿನ್ನೆ ಪ್ರಸಾರವಾದ ಸಂಚಿಕೆಯನ್ನೇ ತೆಗೆದುಕೊಳ್ಳಿ.. 'ಬಿಗ್ ಬಾಸ್' ಕೊಟ್ಟಿದ್ದೇ ಒಂದು ಟಾಸ್ಕ್ ಆಗಿದ್ದರೆ, ಅದನ್ನ ಸ್ಪರ್ಧಿಗಳು ತೆಗೆದುಕೊಂಡು ಹೋಗಿದ್ದೇ ಮತ್ತೊಂದು ರೀತಿಯಲ್ಲಿ.
ಚಟುವಟಿಕೆಯ ಅನುಸಾರ, ವಿಲನ್ ಗಳು ವಿಲನ್ ಗಳಾಗಿ ವರ್ತಿಸಬೇಕಿತ್ತು. ಹೀರೋಗಳು ವಿಜ್ಞಾನಿಯನ್ನ ಬಚಾವ್ ಮಾಡಬೇಕಿತ್ತು. ಆದ್ರೆ, ವಿಲನ್ ಗಳು ವಿಲನ್ ಗಳಾಗಿ ಅಲ್ಲ, ರಾಕ್ಷಸರಾಗಿ ವರ್ತಿಸಿದ್ದು ದುರಂತ.!
ಇನ್ನೂ ಟಾಸ್ಕ್ ನೆಪದಲ್ಲಿ ಅಕ್ಷತಾ ಪಾಂಡವಪುರಗೆ ರಾಪಿಡ್ ರಶ್ಮಿ ಪೊರಕೆಯಲ್ಲಿ ಹೊಡೆದಿರುವ ದೃಶ್ಯ ಸಂಚಿಕೆಯಲ್ಲಿ ಪ್ರಸಾರ ಆಗಿದೆ.! ಮುಂದೆ ಓದಿರಿ...

ಪೊರಕೆಯಲ್ಲಿ ಹೊಡೆದ್ರಾ ರಶ್ಮಿ.?
''ನಾನು ರಾಕ್ಷಸಿ.. ಏನು ಬೇಕಾದರೂ ಮಾಡಬಹುದು'' ಎನ್ನುತ್ತಾ ಅಕ್ಷತಾಗೆ ರಾಪಿಡ್ ರಶ್ಮಿ ಪೊರಕೆಯಲ್ಲಿ ಹೊಡೆದಿರುವಂತೆ ಕಂಡು ಬಂದಿದೆ. ಟಾಸ್ಕ್ ಆಗಿದ್ದರೂ, ಒಬ್ಬರಿಗೆ ಪೊರಕೆಯಲ್ಲಿ ಹೊಡೆಯುವುದು ಎಷ್ಟರ ಮಟ್ಟಿಗೆ ಸರಿ.?

ಪೊರಕೆ ಹೊಡೆತ ಬಿದ್ದಿದೆಯೇ.?
ಸಂಚಿಕೆಯಲ್ಲಿ ಪ್ರಸಾರ ಆದ ದೃಶ್ಯದಲ್ಲಿ... ಒಂದು ಕ್ಯಾಮರಾದ ಆಂಗಲ್ ಪ್ರಕಾರ ಅಕ್ಷತಾಗೆ ರಾಪಿಡ್ ರಶ್ಮಿ ಪೊರಕೆಯಲ್ಲಿ ಹೊಡೆದಿದ್ದಾರೆ. ಆದ್ರೆ, ಆ ಹೊಡೆತ ಅಕ್ಷತಾಗೆ ಟಚ್ ಆಗಿದ್ಯಾ.? ಅಥವಾ ಅಕ್ಷತಾ ರನ್ನ ದೂರ ಓಡಿಸಲು ರಾಪಿಡ್ ರಶ್ಮಿ ಸುಮ್ಮನೆ ಪೊರಕೆ ಬೀಸಿದ್ರಾ.? ಅನ್ನೋದು ಸ್ಪಷ್ಟವಾಗಿಲ್ಲ.

ಪ್ರತಿಕ್ರಿಯಿಸದ ಅಕ್ಷತಾ
''ಟಾಸ್ಕ್ ನಲ್ಲಿ ಇದೆಲ್ಲಾ ಮಾಮೂಲು. ಎಲ್ಲವನ್ನೂ ಸಹಿಸಿಕೊಳ್ಳಬೇಕು'' ಎಂದು ಅಕ್ಷತಾ ತಾಳ್ಮೆಯಿಂದ ವರ್ತಿಸಿದರು. ತಮಗೆ ಪೊರಕೆ ಏಟು ಬಿತ್ತೋ, ಇಲ್ವೋ ಎಂಬುದನ್ನೂ ಯಾರ ಬಳಿಯೂ ಅಕ್ಷತಾ ಚರ್ಚೆ ಮಾಡಿಲ್ಲ.

ಕನಿಷ್ಟ ಜ್ಞಾನ ಬೇಡ್ವಾ.?
ಚಟುವಟಿಕೆಯಲ್ಲಿ ನಾವು ಆಡಿದ್ದೇ ಆಟ ಎಂಬ ಭ್ರಮೆಯಲ್ಲಿ ತಳ್ಳಾಟ, ನೂಕಾಟ, ಪೊರಕೆ ಸೇವೆ, ಕಣ್ಣಿಗೆ ಮಾರಕ ಸ್ಪ್ರೇ ಹೊಡೆಯುವುದು ಸರಿಯೇ.? ಕೋಟ್ಯಾಂತರ ವೀಕ್ಷಕರು ಇದನ್ನೆಲ್ಲ ಟಿವಿಯಲ್ಲಿ ನೋಡುತ್ತಿರುತ್ತಾರೆ ಎಂಬ ಕನಿಷ್ಟ ಜ್ಞಾನ ಕೂಡ ಸ್ಪರ್ಧಿಗಳಿಗೆ ಬೇಡ್ವಾ.?


Click it and Unblock the Notifications











