'ಬಿಗ್ ಬಾಸ್' ಮನೆಯಲ್ಲಿ ಕೋಲಾಹಲ: ಹೀಗೂ ಟಾಸ್ಕ್ ಮಾಡ್ತಾರಾ.?

'ಬಿಗ್ ಬಾಸ್' ಮನೆಯ ಮುಖ್ಯ ನಿಯಮಗಳ ಪೈಕಿ ದೈಹಿಕವಾಗಿ ಯಾರು ಯಾರಿಗೂ ನೋವುಂಟು ಮಾಡುವ ಹಾಗಿಲ್ಲ ಮತ್ತು ದೈಹಿಕವಾಗಿ ಯಾರು ಯಾರಿಗೂ ಕಿರುಕುಳ ನೀಡುವ ಹಾಗಿಲ್ಲ. ಆದ್ರೆ, ಚಟುವಟಿಕೆ ಅಂತ ಬಂದಾಗ ಇದೆಲ್ಲ ಅನ್ವಯ ಆಗುತ್ತದೋ, ಇಲ್ವೋ.? ಎಂಬ ಅನುಮಾನ ಸದ್ಯ ವೀಕ್ಷಕರಲ್ಲಿ ಕಾಡುತ್ತಿದೆ.

ಯಾಕಂದ್ರೆ, 'ಬಿಗ್ ಬಾಸ್ ಕನ್ನಡ'ದಲ್ಲಿ ಇದುವರೆಗೂ ಐದು ಆವೃತ್ತಿಗಳು ಮುಗಿದಿದೆ. ಈ ಐದೂ ಆವೃತ್ತಿಗಳಲ್ಲಿ ಹಲವಾರು ಚಟುವಟಿಕೆಗಳನ್ನು ಸ್ಪರ್ಧಿಗಳಿಗೆ ನೀಡಲಾಗಿದೆ. ಆದರೆ, 'ಲಿಮಿಟ್ ಮೀರಿದೆ' ಅಂತ ಅಕ್ಷರಶಃ ವೀಕ್ಷಕರಿಗೆ ಅನಿಸಿರುವುದು 'ಸೂಪರ್ ಹೀರೋಸ್ ವರ್ಸಸ್ ಸೂಪರ್ ವಿಲನ್ಸ್' ಟಾಸ್ಕ್ ನಲ್ಲಿ.!

'ಸೂಪರ್ ವಿಲನ್' ತಂಡದಲ್ಲಿ ಇದ್ದವರು 'ವಿಲನ್' ಎಂಬ ಮಾತ್ರಕ್ಕೆ 'ಏನು ಬೇಕಾದರೂ ಮಾಡಬಹುದು' ಎಂದು ತಿಳಿದು ಎಲ್ಲೆ ಮೀರಿ ವರ್ತಿಸಿದ್ದಾರೆ. ಆ ಮೂಲಕ ಬರೀ 'ಸೂಪರ್ ಹೀರೋ'ಗಳಿಗೆ ಮಾತ್ರ ಅಲ್ಲ, ಕಾರ್ಯಕ್ರಮ ನೋಡುತ್ತಿದ್ದ ವೀಕ್ಷಕರಿಗೂ ಕಿರಿಕಿರಿ ಉಂಟು ಮಾಡಿದ್ದಾರೆ. ಮುಂದೆ ಓದಿರಿ..

'ಬಿಗ್ ಬಾಸ್' ನೀಡಿದ್ದ ಚಟುವಟಿಕೆ ಏನು.?

'ಬಿಗ್ ಬಾಸ್' ನೀಡಿದ್ದ ಚಟುವಟಿಕೆ ಏನು.?

ಈ ವಾರ 'ಸೂಪರ್ ಹೀರೋಸ್ ವರ್ಸಸ್ ಸೂಪರ್ ವಿಲನ್ಸ್' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನ 'ಬಿಗ್ ಬಾಸ್' ನೀಡಿದ್ದಾರೆ. ಇದರ ಅನುಸಾರ, ಪ್ರಪಂಚದ ಒಳಿತಿಗೆ ಬೇಕಾಗಿರುವ ವಿಜ್ಞಾನಿಯೊಬ್ಬರನ್ನು ಸೂಪರ್ ವಿಲನ್ಸ್ ಬಂಧಿಸಿದ್ದಾರೆ. ವಿಜ್ಞಾನಿಯನ್ನು ಸೂಪರ್ ವಿಲನ್ಸ್ ಬಂಧನದಿಂದ ಮುಕ್ತಗೊಳಿಸುವುದು ಸೂಪರ್ ಹೀರೋಸ್ ಜವಾಬ್ದಾರಿ. ಸೂಪರ್ ಹೀರೋಗಳ ಕೈಗೆ ಕೀಗಳನ್ನು ನೀಡಲಾಗಿದ್ದು, ಅದನ್ನ ಬಳಸಿ, ವಿಜ್ಞಾನಿಯನ್ನು ಬಿಡುಗಡೆಗೊಳಿಸಬೇಕು. ಅತ್ತ ಸೂಪರ್ ಹೀರೋಗಳನ್ನು ತಡೆಯುವುದು ಸೂಪರ್ ವಿಲನ್ಸ್ ಕೆಲಸ. ಅದರ ಜೊತೆಗೆ ಸೂಪರ್ ಹೀರೋಗಳು ತಾಳ್ಮೆ ಕಳೆದುಕೊಳ್ಳುವ ಹಾಗೆ ಸೂಪರ್ ವಿಲನ್ ಗಳು ಕಿರಿಕಿರಿ ಮಾಡಬೇಕು. ಕಿರಿಕಿರಿ ಸಹಿಸಿಕೊಳ್ಳಲು ಆಗದೆ, ಬಝರ್ ಒತ್ತಿ ಟಾಸ್ಕ್ ನಿಂದ ಸೂಪರ್ ಹೀರೋಗಳು ಹಿಂದೆ ಸರಿಯಬಹುದು. ಇದರಲ್ಲಿ ಗೆಲ್ಲುವ ತಂಡದ ಸದಸ್ಯರು ಕ್ಯಾಪ್ಟನ್ ಪ್ರತಿಸ್ಪರ್ಧಿಗಳಾದರೆ, ಸೋತ ತಂಡದಲ್ಲಿ ಇಬ್ಬರು ನೇರವಾಗಿ ನಾಮಿನೇಟ್ ಆಗುತ್ತಾರೆ.

ಸೂಪರ್ ವಿಲನ್ ಗಳಾಗಿದ್ದವರು ಯಾರು.?

ಸೂಪರ್ ವಿಲನ್ ಗಳಾಗಿದ್ದವರು ಯಾರು.?

ಚಟುವಟಿಕೆಯ ಮೊದಲ ಹಂತದಲ್ಲಿ ಸೂಪರ್ ವಿಲನ್ ಗಳಾಗಿದ್ದವರು ನವೀನ್, ಮೇಘಶ್ರೀ, ಆಂಡಿ, ರಾಕೇಶ್, ಮುರಳಿ ಮತ್ತು ರಶ್ಮಿ.

ಸೂಪರ್ ಹೀರೋಗಳು ಯಾರ್ಯಾರು.?

ಸೂಪರ್ ಹೀರೋಗಳು ಯಾರ್ಯಾರು.?

ಚಟುವಟಿಕೆಯ ಮೊದಲ ಹಂತದಲ್ಲಿ ಸೂಪರ್ ಹೀರೋ ಗಳಾಗಿದ್ದವರು ಶಶಿ, ಜೀವಿತಾ, ಧನರಾಜ್, ಕವಿತಾ, ನಿವೇದಿತಾ ಗೌಡ ಮತ್ತು ಅಕ್ಷತಾ.

ವಿಲನ್ ಗಳ ಉಗ್ರರೂಪ

ವಿಲನ್ ಗಳ ಉಗ್ರರೂಪ

ಚಟುವಟಿಕೆ ಆರಂಭ ಆಗುತ್ತಿದ್ದ ಹಾಗೆ, ಸೂಪರ್ ವಿಲನ್ ಗಳು ಸೂಪರ್ ಹೀರೋಗಳ ಮೇಲೆ ಅಟ್ಯಾಕ್ ಮಾಡಿದರು. ಹೀರೋಗಳಿಂದ ಕೀಗಳನ್ನು ಪಡೆಯಲು ವಿಲನ್ ಗಳು ಉಗ್ರರೂಪ ತಾಳಿದರು.

'ಬಿಗ್ ಬಾಸ್' ಮನೆಯಲ್ಲಿ ಕೋಲಾಹಲ

'ಬಿಗ್ ಬಾಸ್' ಮನೆಯಲ್ಲಿ ಕೋಲಾಹಲ

ಕೀಗಳನ್ನು ಪಡೆದು ಗೆಲುವು ಸಾಧಿಸಲು ಸೂಪರ್ ವಿಲನ್ ಗಳ ತಂಡ ಹೀರೋಗಳ ಮೈ ಮೇಲೆ ಬಿದ್ದರು. ಈ ಸಮಯದಲ್ಲಿ ಮಲ್ಲಯುದ್ಧವೇ ನಡೆದು ಹೋಯ್ತು. ಪರಿಣಾಮ, ದೈಹಿಕವಾಗಿ ಹಲವರು ಪೆಟ್ಟು ತಿಂದರು.

ಪೊರಕೆಯಲ್ಲಿ ಹೊಡೆದ್ರಾ ರಶ್ಮಿ.?

ಪೊರಕೆಯಲ್ಲಿ ಹೊಡೆದ್ರಾ ರಶ್ಮಿ.?

''ನಾನು ರಾಕ್ಷಸಿ.. ಏನು ಬೇಕಾದರೂ ಮಾಡಬಹುದು'' ಎನ್ನುತ್ತಾ ಅಕ್ಷತಾಗೆ ರಾಪಿಡ್ ರಶ್ಮಿ ಪೊರಕೆಯಲ್ಲಿ ಹೊಡೆದಿರುವಂತೆ ಕಂಡು ಬಂದಿದೆ. ಟಾಸ್ಕ್ ಆಗಿದ್ದರೂ, ಒಬ್ಬರಿಗೆ ಪೊರಕೆಯಲ್ಲಿ ಹೊಡೆಯುವುದು ಎಷ್ಟರ ಮಟ್ಟಿಗೆ ಸರಿ.?

ಆರೋಪ-ಪ್ರತ್ಯಾರೋಪ

ಆರೋಪ-ಪ್ರತ್ಯಾರೋಪ

ಕೀಗಳನ್ನು ರಕ್ಷಿಸಿಕೊಳ್ಳಲು ಹೀರೋಗಳು ಸೊಂಟದ ಬಳಿ ಕೀಗಳನ್ನು ಇಟ್ಟುಕೊಂಡಿದ್ದರು. ಅತ್ತ ವಿಲನ್ ತಂಡ ಮುಲಾಜಿಲ್ಲದೇ, ಬಟ್ಟೆಯೊಳಗೆ ಕೈಹಾಕಿ ಕೀಗಳನ್ನು ತೆಗೆದುಕೊಂಡಿದ್ದು ಹೆಣ್ಮಕ್ಕಳ ಕೋಪಕ್ಕೆ ಕಾರಣವಾಯ್ತು. ಇತ್ತ, ''ಇಡಬಾರದ ಜಾಗದಲ್ಲಿ ಕೀ ಇಟ್ಟುಕೊಂಡರೆ, ಅದೇ ಜಾಗಕ್ಕೆ ಕೈ ಹಾಕದೆ ಬೇರೆ ದಾರಿ ಇಲ್ಲ'' ಅನ್ನೋದು ವಿಲನ್ ಗಳ ಸಬೂಬು. ಇದರಲ್ಲಿ ಯಾರದ್ದು ಸರಿ, ಯಾರದ್ದು ತಪ್ಪು.?

ಎಲ್ಲೆ ಮೀರಿ ವರ್ತಿಸಿದ ಆಂಡಿ

ಎಲ್ಲೆ ಮೀರಿ ವರ್ತಿಸಿದ ಆಂಡಿ

ಈಗಾಗಲೇ ಹಲವು ಬಾರಿ ಬೇಕಾಬಿಟ್ಟಿ ವರ್ತನೆ ತೋರಿರುವ ಆಂಡಿ, 'ಸೂಪರ್ ಹೀರೋಸ್ ವರ್ಸಸ್ ಸೂಪರ್ ವಿಲನ್ಸ್' ಟಾಸ್ಕ್ ನಲ್ಲಿ ಎಲ್ಲೆ ಮೀರಿ ವರ್ತಿಸಿದ್ದಾರೆ. ಹೀರೋಗಳಿಗೆ ಕಿರಿಕಿರಿ ಮಾಡಬೇಕು ಎಂಬುದು ನಿಯಮ ನಿಜ. ಕಿರಿಕಿರಿ ಮಾಡಲು ನಾನಾ ವಿಧಗಳಿವೆ. ಅವೆಲ್ಲವನ್ನೂ ಬಿಟ್ಟು, ಹೀರೋಗಳ ಕಣ್ಣಿಗೆ ಮತ್ತು ಉಸಿರುಗಟ್ಟುವ ಹಾಗೆ ಮೂಗಿಗೆ ಪದೇ ಪದೇ ಸ್ಪ್ರೇ ಹೊಡೆದು ಅಕ್ಷರಶಃ ಕಿರಿಕಿರಿ ಅಲ್ಲ, ಕಿರುಕುಳ ಕೊಟ್ಟಿದ್ದಾರೆ ಆಂಡಿ. ''ಮುಖಕ್ಕೆ ಸ್ಪ್ರೇ ಹೊಡೆಯಬೇಡಿ'' ಅಂತ ಎಷ್ಟೇ ಬಾರಿ ಹೇಳಿದರೂ, ಅದನ್ನ ಕೇಳುವ ವ್ಯವಧಾನ ಕೂಡ ಆಂಡಿಗೆ ಇರಲಿಲ್ಲ.

ಇದಕ್ಕೆ ಮನರಂಜನೆ ಅಂತಾರಾ.?

ಇದಕ್ಕೆ ಮನರಂಜನೆ ಅಂತಾರಾ.?

ಮನರಂಜನೆ ಅಂದ್ರೆ, ಮನಸ್ಸನ್ನು ರಂಜಿಸಬೇಕು. ಮನಸ್ಸಿಗೆ ಮುದ ನೀಡಬೇಕು. ಅದು ಬಿಟ್ಟು, ಕಿತ್ತಾಟ, ನೂಕಾಟ, ಬಡಿದಾಟ, ಹೊಡೆದಾಟ, ಕಿರುಚಾಟವನ್ನ ಯಾರಾದರೂ ಮನರಂಜನೆ ಅಂತಾರಾ.? ಹೀಗೂ ಟಾಸ್ಕ್ ಮಾಡಿ ಅಂತ 'ಬಿಗ್ ಬಾಸ್' ಹೇಳಿದ್ದಾರಾ.? 'ಹೀರೋಗಳಿಗೆ ಕಿರಿಕಿರಿ ಕೊಡಿ' ಅಂತ ವಿಲನ್ ಗಳಿಗೆ 'ಬಿಗ್ ಬಾಸ್' ಸೂಚಿಸಿದ್ದರು ನಿಜ. ಆದ್ರೆ, ಈ ಸಂಚಿಕೆಯಿಂದ ನಿಜವಾದ ಕಿರಿಕಿರಿ ಆಗಿದ್ದು ವೀಕ್ಷಕರಿಗೆ ಅನ್ನೋದು ಕಟುಸತ್ಯ.!

More from Filmibeat

English summary
Bigg Boss Kannada 6: Day 66: Physical attack due to Super Heroes versus Super Villain task.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X