For Quick Alerts
  ALLOW NOTIFICATIONS  
  For Daily Alerts

  'ಗುಡ್ನೆಸ್' ಹೆಸರಲ್ಲಿ ರಾಕೇಶ್ ಆಡುತ್ತಿರುವ ಡಬಲ್ ಗೇಮ್ ಬಯಲು ಮಾಡಿದ ಆಂಡಿ.!

  |
  Bigg Boss Kannada Season 6:ಗುಡ್ನೆಸ್' ಹೆಸರಲ್ಲಿ ರಾಕೇಶ್ ಆಡುತ್ತಿರುವ ಡಬಲ್ ಗೇಮ್ ಬಯಲು ಮಾಡಿದ ಆಂಡಿ

  ''ನಾನು ಬಿಗ್ ಬಾಸ್ ಮನೆಗೆ ಬಂದಿರುವುದು ಗೆಲ್ಲಲು ಅಲ್ಲ. ಒಂದು ಅನುಭವಕ್ಕಾಗಿ. ಇದು ನನಗೆ ಆಟ ಅಲ್ಲ, ಜರ್ನಿ'' ಎಂದು ಹಲವು ಬಾರಿ ರಾಕೇಶ್ ಹೇಳಿಕೊಂಡಿದ್ದಾರೆ. ಆದ್ರೆ, ನೀಡಲಾದ ಚಟುವಟಿಕೆಗಳಲ್ಲಿ ರಾಕೇಶ್ ಆಕ್ರಮಣಕಾರಿಯಾಗಿ ವರ್ತಿಸಿದ್ದಾರೆ.

  'ಸೂಪರ್ ಹೀರೋಸ್ ವರ್ಸಸ್ ಸೂಪರ್ ವಿಲನ್ಸ್' ಟಾಸ್ಕ್ ನಲ್ಲಂತೂ ರಾಕೇಶ್ ಎಲ್ಲೆ ಮೀರಿ ವರ್ತಿಸಿದರು. ಕಿತ್ತಾಟ, ನೂಕಾಟಕ್ಕೆ ಸಾಕ್ಷಿ ಆದರು. ಟಾಸ್ಕ್ ಮುಗಿಯುತ್ತಿದ್ದ ಹಾಗೆ, ''ಹೀಗೆ ಮಾಡಬಾರದಿತ್ತು'' ಅಂತ ಕಣ್ಣೀರು ಸುರಿಸಿ ಸಿಂಪಥಿ ಗಿಟ್ಟಿಸಿಕೊಂಡರು.

  ರಾಕೇಶ್ ಹೀಗೆ ಮಾಡಿದ್ದು ಯಾಕೆ.? ತಮ್ಮ ಮೇಲೆ ಕೆಟ್ಟ ಅಭಿಪ್ರಾಯ ಮೂಡಬಾರದು, ಟಾಸ್ಕ್ ವಿಷಯವಾಗಿ ನಾಮಿನೇಟ್ ಆಗಬಾರದು ಅಂತ 'ಗುಡ್ನೆಸ್' ಹೆಸರಲ್ಲಿ ರಾಕೇಶ್ ಕಣ್ಣೀರು ಹಾಕಿದ್ರಾ.? ಈ ಅನುಮಾನ ಸುದೀಪ್ ಗೂ ಮೂಡಿದೆ. ಹೀಗಾಗಿ, 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಈ ಬಗ್ಗೆ ಸುದೀಪ್ ಪ್ರಶ್ನಿಸಿದರು. ಮುಂದೆ ಓದಿರಿ...

  ಪ್ರಶ್ನೆ ಮಾಡಿದ ಸುದೀಪ್

  ಪ್ರಶ್ನೆ ಮಾಡಿದ ಸುದೀಪ್

  ''ವಿಲನ್ ಗುಂಪಿನಲ್ಲಿ ರಾಕೇಶ್ ಇದ್ದರು. ಟಾಸ್ಕ್ ಮುಗಿದ್ಮೇಲೆ ''ಹೀಗೆ ಮಾಡಬಾರದಿತ್ತು'' ಅಂತ ಕಣ್ಣೀರು ಹಾಕಿದರು. ಆಟ ಆಡುವಾಗ ಈ ಯೋಚನೆ ಯಾಕೆ ಬರಲಿಲ್ಲ.?'' ಎಂದು ರಾಕೇಶ್ ಗೆ ಸುದೀಪ್ ಪ್ರಶ್ನೆ ಮಾಡಿದರು.

  ಮಾಡೋದೆಲ್ಲಾ ಮಾಡಿ ಕಣ್ಣೀರು ಹಾಕಿದ ರಾಕೇಶ್: ಹಿಂದಿದೆ ಹೊಸ ಸ್ಟ್ರಾಟೆಜಿ.!

  ರಾಕೇಶ್ ಕೊಟ್ಟ ಸಬೂಬು ಏನು.?

  ರಾಕೇಶ್ ಕೊಟ್ಟ ಸಬೂಬು ಏನು.?

  ''ಎರಡು ಬಾರಿ ನಾನು ಪ್ರಯತ್ನ ಮಾಡಿದೆ. ಇದನ್ನ ನಿಲ್ಲಿಸಿ, ಬೇರೆ ಕ್ರಿಯೇಟಿವ್ ಆಗಿ ಏನಾದರೂ ಮಾಡೋಣ ಅಂತ ಆಂಡಿಗೆ ಹೇಳಿದೆ. ಆದ್ರೆ, ಆಂಡಿ ಕೇಳಲಿಲ್ಲ. ನಾನು ಅಸಹಾಯಕನಾಗಿದ್ದೆ'' ಎಂದು ರಾಕೇಶ್ ಸಬೂಬು ಕೊಟ್ಟರು.

  ಎಲ್ಲೆ ಮೀರಿ ವರ್ತಿಸಿದ ಆಂಡಿ: ಕಣ್ಣಿಗೆ ಮಾರಕ ಸ್ಪ್ರೇ ಹೊಡೆದಿದ್ದು ಎಷ್ಟು ಸರಿ.?

  ರೊಚ್ಚಿಗೆದ್ದ ಆಂಡಿ

  ರೊಚ್ಚಿಗೆದ್ದ ಆಂಡಿ

  ''ರಾಕೇಶ್ ಹೇಳುತ್ತಿರುವುದು ಪಕ್ಕಾ ಸುಳ್ಳು. ಯಾಕಂದ್ರೆ, ಅವನ ಬುಡಕ್ಕೆ ಬಂದಾಗ ತುಂಬಾ ಫಿಸಿಕಲ್ ಆಗಿ ಎಲ್ಲರನ್ನೂ ಡ್ಯಾಮೇಜ್ ಮಾಡಿದ. ''ಎಲ್ಲಿ ನಿನ್ನ ಗುಡ್ನೆಸ್'' ಅಂತ ಶಶಿ ನಾಲ್ಕು ಬಾರಿ ರಾಕೇಶ್ ಜೊತೆಗೆ ಜಗಳ ಮಾಡಿದ್ದಾನೆ. ರಾಕೇಶ್ ಕೇರ್ ಮಾಡಲಿಲ್ಲ. ಅವನ ಆಟ ಬಂದಾಗ, ಅವನು ಆಡುತ್ತಾನೆ. ಆಮೇಲೆ, ಎಲ್ಲರ ಬಳಿ ಹೋಗಿ ಕ್ಷಮೆ ಕೇಳಿ ಗುಡ್ನೆಸ್ ಅಂತಾನೆ'' ಎನ್ನುತ್ತಾ ರಾಕೇಶ್ ಆಡುತ್ತಿರುವ ಡಬಲ್ ಗೇಮ್ ನ ಆಂಡಿ ಬಯಲು ಮಾಡಿದರು.

  ಅಕ್ಷತಾಗೆ ಪೊರಕೆಯಲ್ಲಿ ಹೊಡೆದ್ರಾ ರಾಪಿಡ್ ರಶ್ಮಿ.?

  ರಾಕೇಶ್ ಏನಂದರು.?

  ರಾಕೇಶ್ ಏನಂದರು.?

  ''ನಾನು ಆಕ್ರಮಣಕಾರಿ ಆಗಿ ವರ್ತಿಸಿದೆ ಅಂತ ಒಪ್ಪಿಕೊಳ್ಳುವೆ. ಆದ್ರೆ, ಶಸ್ತ್ರಾಸ್ತ್ರ ಬಳಸಿಲ್ಲ'' ಎಂದು ರಾಕೇಶ್ ಸಮರ್ಥಿಸಿಕೊಳ್ಳಲು ಮುಂದಾದರು.

  ಈ ವಾರ ಯಾರಿಗೂ ಸುದೀಪ್ ಕಡೆಯಿಂದ ಸ್ಪೆಷಲ್ ಚಪ್ಪಾಳೆ ಸಿಗಲೇ ಇಲ್ಲ.!

  ಎಲ್ಲರೂ ಫೇಲ್

  ಎಲ್ಲರೂ ಫೇಲ್

  ''ಟಾಸ್ಕ್ ನ ತುಂಬಾ ಚೆನ್ನಾಗಿ ಆಡಬಹುದಿತ್ತು. ಆದ್ರೆ, ಬೇಸಿಕ್ ನಿಂದಲೇ ತಪ್ಪಾಗಿದೆ. ನೀವೆಲ್ಲಾ ಫೇಲ್ ಆದ್ರಿ'' ಎಂದು ಎಲ್ಲರಿಗೂ ಸುದೀಪ್ ತಿಳಿಸಿದರು.

  'ಬಿಗ್ ಬಾಸ್' ಮನೆಯಲ್ಲಿ ಕೋಲಾಹಲ: ಹೀಗೂ ಟಾಸ್ಕ್ ಮಾಡ್ತಾರಾ.?

  English summary
  Bigg Boss Kannada 6: Day 69: Andrew speaks about Rakesh's double game.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X