ಅಕ್ಷತಾ ವಿಚಾರದಲ್ಲಿ ರಾಕೇಶ್ ಮುಖವಾಡ ಕಳಚಿದ ಸುದೀಪ್.!
Recommended Video

''ನಮ್ಮ ಫ್ರೆಂಡ್ ಶಿಪ್ ಮುಗೀತು. ದಯವಿಟ್ಟು ನನ್ನ ಬಳಿ ಬರಬೇಡಿ'' ಅಂತ ಅಕ್ಷತಾಗೆ ಎಲ್ಲರ ಮುಂದೆ ರಾಕೇಶ್ ಕೈಮುಗಿದು ಹೇಳಿದ್ದರು. ಆಮೇಲೆ ಯಾರಿಗೂ ಗೊತ್ತಾಗದ ಹಾಗೆ ಕ್ರಿಸ್ಮಸ್ ಹಬ್ಬದಂದು ಅಕ್ಷತಾಗೆ ಉಡುಗೊರೆ ಕೊಟ್ಟಿದ್ದು ರಾಕೇಶ್.!
ರಾಕೇಶ್ ಕೊಟ್ಟ ಉಡುಗೊರೆಯನ್ನ ಮೊದಲು ಅಕ್ಷತಾ ಸ್ವೀಕರಿಸಲಿಲ್ಲ. ನಂತರ ರಾಕೇಶ್ ಕೊಟ್ಟ ಸ್ವೆಟರ್ ನ ಅಕ್ಷತಾ ಪಡೆದರು. ಇಷ್ಟೆಲ್ಲಾ ಆದ್ಮೇಲೆ, ''ನಾನು ಬೇರೆ ಹುಡುಗಿಯರ ಜೊತೆ ಮಾತನಾಡಿದರೆ ಅಕ್ಷತಾಗೆ ಹೊಟ್ಟೆಕಿಚ್ಚು'' ಅಂತ ಗಾಸಿಪ್ ಮಾಡಿದ್ದೂ ಕೂಡ ಸ್ವತಃ ರಾಕೇಶ್.!
ಇದನ್ನೆಲ್ಲ ನೋಡಿದ್ಮೇಲೆ, ತಮ್ಮ ಆಟಕ್ಕೋಸ್ಕರ, ತಮ್ಮ ಸ್ವಾರ್ಥಕ್ಕೋಸ್ಕರ ಅಕ್ಷತಾ ರನ್ನ ರಾಕೇಶ್ ಬಳಸಿಕೊಳ್ತಿದ್ದಾರಾ.? ಎಂಬ ಅನುಮಾನ ವೀಕ್ಷಕರಿಗೆ ಬರುವುದು ಸಹಜ. ಇದೇ ಅನುಮಾನ ಸುದೀಪ್ ಗೂ ಕಾಡುತ್ತಿದೆ. ಅದಕ್ಕೆ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಈ ಕುರಿತು ರಾಕೇಶ್ ಗೆ ಸುದೀಪ್ ಪ್ರಶ್ನಿಸಿದರು. ಮುಂದೆ ಓದಿರಿ...

ಗಿಫ್ಟ್ ಬಗ್ಗೆ ಸುದೀಪ್ ಮಾತು
''ರಾಕೇಶ್ ಅವರೇ.. ತಾವು ಸೆಪರೇಟ್ ಆಗಿ ಹೋಗಿ ಅಕ್ಷತಾಗೆ ಉಡುಗೊರೆ ಕೊಡ್ತೀರಾ. ಕೊನೆಗೆ ಅದು ಸ್ವೀಕಾರ ಆಯ್ತಾ, ಇಲ್ವಾ.?'' ಎಂದು ರಾಕೇಶ್ ಗೆ ಸುದೀಪ್ ಪ್ರಶ್ನಿಸಿದರು. ಅದಕ್ಕೆ, ''ಅವತ್ತು ತಕ್ಷಣಕ್ಕೆ ಸ್ವೀಕರಿಸಲಿಲ್ಲ. ಆಮೇಲೆ ಅಕ್ಷತಾ ಸ್ವೀಕರಿಸಿದರು'' ಎಂದು ರಾಕೇಶ್ ಉತ್ತರಿಸಿದರು.

ಡಿಲೇ ಆಗಿದ್ದು ಯಾಕೆ.?
''ಯಾಕೆ ಸ್ವೀಕಾರ ಆಗುವುದರಲ್ಲಿ ಡಿಲೇ.?'' ಎಂದು ಸುದೀಪ್ ಪ್ರಶ್ನಿಸಿದಾಗ, ''ಅಕ್ಷತಾ ಅವರ ಎಮೋಷನಲ್ ಗ್ರಾಫ್ ತುಂಬಾ ಹೈ. ಅದೊಂದು good will gesture. ಅದರಲ್ಲಿ ತಪ್ಪೇನೂ ಇರಲಿಲ್ಲ. ನಾನು ನನ್ನ ಶ್ರಮ ಹಾಕಿ ಕನ್ನಡದಲ್ಲಿ ಬರೆದಿದ್ದೆ. ಅದನ್ನ ಸ್ವೀಕರಿಸಿದರು'' ಎಂದರು ರಾಕೇಶ್.

ರಾಕೇಶ್ ಮುಖವಾಡ ಕಳಚಿದ ಸುದೀಪ್
''ಅಕ್ಷತಾ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಏನಿದೆ ಅಂತ ನನಗೆ ಗೊತ್ತಿಲ್ಲ. ಗೊತ್ತಾಗುವುದು ಬೇಡ. ಆದ್ರೆ, ಸೆಪರೇಟ್ ಆಗಿ ಉಡುಗೊರೆ ಕೊಡ್ತೀರಾ, ಕಳಪೆ ಯಾರು ಅಂತ ಚರ್ಚೆ ಆಗುವಾಗ ಸನ್ನೆ ಮಾಡಿ ಅಕ್ಷತಾ ರನ್ನ ಪ್ರೊಟೆಕ್ಟ್ ಮಾಡಲು ಟ್ರೈ ಮಾಡ್ತೀರಾ, ಬೇರೆ ಹುಡುಗಿಯರ ಜೊತೆಗೆ ಕೂತು ಅಕ್ಷತಾಗೆ ಹೊಟ್ಟೆಕಿಚ್ಚು ಅಂತ ಗಾಸಿಪ್ ಮಾಡ್ತೀರಾ. ಒಂದಕ್ಕೊಂದು ಟ್ಯಾಲಿ ಆಗುತ್ತಿಲ್ಲ'' ಎನ್ನುತ್ತಾ ರಾಕೇಶ್ ಮುಖವಾಡವನ್ನ ಸುದೀಪ್ ಕಳಚಿದರು.

ಸಮಜಾಯಿಷಿ ಕೊಟ್ಟ ರಾಕೇಶ್
''ಸೆಪರೇಟ್ ಆಗಿ ಗಿಫ್ಟ್ ಕೊಟ್ಟಿದ್ದು ಒಳ್ಳೆತನದಿಂದ. ಕಳಪೆ ವಿಷಯದಲ್ಲಿ ತಪ್ಪಾಗುತ್ತಿದೆ ಅಂತ ನನಗೆ ಅನಿಸ್ತು, ಅದಕ್ಕೆ ಹೇಳಿದೆ. ಹೊಟ್ಟೆಕಿಚ್ಚು ನನ್ನ ಕಡೆಯಿಂದ ಬಂದಿಲ್ಲ. ಬೇರೆ ಕಡೆಯಿಂದ ಬಂದಿದೆ. ನಾನು ಆ ಮಾತುಕತೆಯನ್ನ ಬೆಳೆಸಿಲ್ಲ'' ಎಂದರು ಸಮಜಾಯಿಷಿ ನೀಡಿದರು ರಾಕೇಶ್.

ಶಾಕ್ ಆದ ಅಕ್ಷತಾ
ತಮ್ಮ ಬಗ್ಗೆ ರಾಕೇಶ್ ಗಾಸಿಪ್ ಮಾಡಿದ ವಿಚಾರವನ್ನ ಸುದೀಪ್ ಬಾಯಿಂದ ಕೇಳಿ ಅಕ್ಷತಾ ಶಾಕ್ ಆದರು.


Click it and Unblock the Notifications











