For Quick Alerts
  ALLOW NOTIFICATIONS  
  For Daily Alerts

  ಆಟದಲ್ಲಿ ಬೇಕಾದ ನಿಯಮಗಳನ್ನು ರೂಪಿಸಿಕೊಳ್ಳುವ ಸ್ಪರ್ಧಿಗಳ ವಿರುದ್ಧ ಸುದೀಪ್ ಗರಂ.!

  |
  Bigg Boss Kannada Season 6:ಆಟದಲ್ಲಿ ಬೇಕಾದ ನಿಯಮಗಳನ್ನು ರೂಪಿಸಿಕೊಳ್ಳುವ ಸ್ಪರ್ಧಿಗಳ ವಿರುದ್ಧ ಸುದೀಪ್ ಗರಂ.!

  ಸ್ಪರ್ಧಿಗಳಿಗೆ ಚಟುವಟಿಕೆ ಅಂತ ಕೊಟ್ಟ ಮೇಲೆ ಅದಕ್ಕೆ ನಿಯಮಗಳನ್ನೂ 'ಬಿಗ್ ಬಾಸ್' ಕೊಟ್ಟಿರುತ್ತಾರೆ. ಆದ್ರೆ, ನಿಯಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ತಮಗೆ ಬೇಕಾದಂತೆ ನಿಯಮಗಳನ್ನು ರೂಪಿಸಿಕೊಂಡು ಆಟದಲ್ಲಿ ಮೇಲುಗೈ ಸಾಧಿಸಲು ಕೆಲವು ಸ್ಪರ್ಧಿಗಳು ಯತ್ನಿಸುತ್ತಿದ್ದಾರೆ.

  ಮೊನ್ನೆ ಮೊನ್ನೆಯಷ್ಟೇ ಮುಕ್ತಾಯಗೊಂಡ 'ಸೂಪರ್ ವಿಲನ್ಸ್ ವರ್ಸಸ್ ಸೂಪರ್ ಹೀರೋಸ್' ಚಟುವಟಿಕೆಯೇ ಇದಕ್ಕೆ ಉತ್ತಮ ಉದಾಹರಣೆ. ಹೀರೋಗಳಿಗೆ ವಿಲನ್ ಗಳು ಕಿರಿಕಿರಿ ಕೊಡಬಹುದು ಎಂಬ ನಿಯಮ ಇತ್ತು. ಆದ್ರೆ, ಕಿರಿಕಿರಿ ಬದಲು ಕಿರುಕುಳ ಕೊಡಲು ಆಂಡಿ ಆರಂಭಿಸಿದರು.!

  ಇನ್ನೂ ಹೀರೋ ಪಾತ್ರಧಾರಿಗಳಿಗೆ ಕೀಗಳನ್ನು ನೀಡಲಾಗಿತ್ತು. ಕೀಗಳನ್ನು ಬಳಸಿ ವಿಜ್ಞಾನಿಯನ್ನು ಹೀರೋ ಪಾತ್ರಧಾರಿಗಳು ರಕ್ಷಿಸಬೇಕಿತ್ತು. ಆದ್ರೆ, ಕೀಗಳನ್ನು ಹೀರೋ ಪಾತ್ರಧಾರಿಗಳು ಪ್ಯಾಂಟ್ ಒಳಗೆ ಇರಿಸಿಕೊಂಡಿದ್ದರು. ಪ್ಯಾಂಟ್ ಒಳಗೆ ಕೀ ಇಟ್ಟುಕೊಂಡಿದ್ದ ಕವಿತಾ, ವಿಲನ್ ಆಂಡಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

  ಇದೇ ವಿಚಾರದ ಕುರಿತು 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ಪಂಚಾಯತಿ ನಡೆಸಿದ್ದು ಹೀಗೆ....

  ವ್ಯಕ್ತಿತ್ವದ ಬಗ್ಗೆ ಸುದೀಪ್ ಪ್ರಶ್ನೆ

  ವ್ಯಕ್ತಿತ್ವದ ಬಗ್ಗೆ ಸುದೀಪ್ ಪ್ರಶ್ನೆ

  ''ಕವಿತಾ ತಮ್ಮ ದೇಹವನ್ನ ಬಳಸಿಕೊಂಡು ಆಟ ಗೆಲ್ಲಲು ಹೊರಟಿದ್ದಾರೆ ಅಂತ ನೀವು ಹೇಳ್ತೀರಾ. ಈ ಮಾತಿನಿಂದ ಕವಿತಾ ವ್ಯಕ್ತಿತ್ವ ಕಮ್ಮಿ ಆಯಿತಾ.? ನಿಮ್ಮ ವ್ಯಕ್ತಿತ್ವ ಕಮ್ಮಿ ಆಯಿತಾ.?'' ಎಂದು ಆಂಡಿಗೆ ಸುದೀಪ್ ಪ್ರಶ್ನಿಸಿದರು.

  ಈ ವಾರ ಯಾರಿಗೂ ಸುದೀಪ್ ಕಡೆಯಿಂದ ಸ್ಪೆಷಲ್ ಚಪ್ಪಾಳೆ ಸಿಗಲೇ ಇಲ್ಲ.!ಈ ವಾರ ಯಾರಿಗೂ ಸುದೀಪ್ ಕಡೆಯಿಂದ ಸ್ಪೆಷಲ್ ಚಪ್ಪಾಳೆ ಸಿಗಲೇ ಇಲ್ಲ.!

  ಆ ತರಹ ಏನೂ ನಡೆದಿಲ್ಲ.!

  ಆ ತರಹ ಏನೂ ನಡೆದಿಲ್ಲ.!

  ''ನಂದೇ ಕಮ್ಮಿ ಆಯಿತು. ನನಗೆ ಅವರು ಹೇಳಿದ ಮಾತು ತುಂಬಾ ನೋವಾಯಿತು. ನಾನು ಆ ತರಹ ಕೆಲಸ ಮಾಡಿಲ್ಲ. ಆದರೂ, ಮಾಡಿದೆ ಅಂತ ಹೇಳುತ್ತಿದ್ದರು. ಸುತ್ತ ಕ್ಯಾಮರಾ ಇತ್ತು. ಆ ತರಹ ನಡೆದಿಲ್ಲ. ತುಂಬಾ ಸೂಕ್ಷ್ಮವಾದ ವಿಷಯ ಆದ್ದರಿಂದ ಮಾತಿಗೆ ಮಾತು ಬೆಳೆಯಿತು'' ಎಂದು ಉತ್ತರಿಸಿದರು ಆಂಡಿ.

  ಎಲ್ಲೆ ಮೀರಿ ವರ್ತಿಸಿದ ಆಂಡಿ: ಕಣ್ಣಿಗೆ ಮಾರಕ ಸ್ಪ್ರೇ ಹೊಡೆದಿದ್ದು ಎಷ್ಟು ಸರಿ.?ಎಲ್ಲೆ ಮೀರಿ ವರ್ತಿಸಿದ ಆಂಡಿ: ಕಣ್ಣಿಗೆ ಮಾರಕ ಸ್ಪ್ರೇ ಹೊಡೆದಿದ್ದು ಎಷ್ಟು ಸರಿ.?

  ಉದ್ದೇಶ ತೋರಿಸಲು ಸಾಧ್ಯ ಇಲ್ಲ

  ಉದ್ದೇಶ ತೋರಿಸಲು ಸಾಧ್ಯ ಇಲ್ಲ

  ''ಒಂದು ಮಾತು ಎಲ್ಲರಿಗೂ ಹೇಳುವೆ... ಕ್ಯಾಮರಾ ಎಲ್ಲವನ್ನೂ ತೋರಿಸುತ್ತೆ ನಿಜ. ಆದ್ರೆ, ನಿಮ್ಮ ಉದ್ದೇಶವನ್ನ ತೋರಿಸಲು ಕ್ಯಾಮರಾ ಕೈಯಲ್ಲಿ ಆಗಲ್ಲ. ಅದು ನಿಮ್ಮ ಮನಸಾಕ್ಷಿಗೆ ಬಿಟ್ಟಿದ್ದು'' ಎಂದರು ಸುದೀಪ್.

  'ಬಿಗ್ ಬಾಸ್' ಮನೆಯಲ್ಲಿ ಕೋಲಾಹಲ: ಹೀಗೂ ಟಾಸ್ಕ್ ಮಾಡ್ತಾರಾ.?'ಬಿಗ್ ಬಾಸ್' ಮನೆಯಲ್ಲಿ ಕೋಲಾಹಲ: ಹೀಗೂ ಟಾಸ್ಕ್ ಮಾಡ್ತಾರಾ.?

  ಇದು ಯಾಕೆ ಬೇಕಿತ್ತು.?

  ಇದು ಯಾಕೆ ಬೇಕಿತ್ತು.?

  ''ಆಟದಲ್ಲಿ ಆಂಡಿ ಮಾಡಿದ್ದು ತಪ್ಪು ನಿಜ. ಅದರ ಜೊತೆಗೆ ಪ್ಯಾಂಟ್ ಒಳಗೆ ಕೀಗಳನ್ನು ಇಟ್ಟುಕೊಂಡಿದ್ದು ಯಾಕೆ.? ಆಮೇಲೆ ಬ್ಲೇಮ್ ಮಾಡುವುದು ಯಾಕೆ.? ನಿಮಗೆ ನೀವೇ ನಿಯಮಗಳನ್ನು ಮಾಡಿಕೊಳ್ತೀರಾ. ಪ್ಯಾಂಟ್ ಒಳಗೆ ಕೀ ಇಟ್ಟುಕೊಳ್ಳುವುದು ಸೇಫ್ ಅಂತ ಭಾವಿಸುತ್ತೀರಾ. ಹಾಗಾದ್ರೆ, ಅದನ್ನ ತೆಗೆಯುವುದು ಹೇಗೆ.? ಇದು ಯಾಕೆ ಬೇಕಿತ್ತು.?'' ಎಂದು ಕವಿತಾಗೆ ಸುದೀಪ್ ಪ್ರಶ್ನಿಸಿದರು.

  ಕ್ರೂರತನ ಮೆರೆದ ಆಂಡಿಗೆ ಚಡಿಯೇಟು ಕೊಟ್ಟ ಕಿಚ್ಚ ಸುದೀಪ್.!ಕ್ರೂರತನ ಮೆರೆದ ಆಂಡಿಗೆ ಚಡಿಯೇಟು ಕೊಟ್ಟ ಕಿಚ್ಚ ಸುದೀಪ್.!

  ತಪ್ಪೊಪ್ಪಿಕೊಂಡ ಕವಿತಾ

  ತಪ್ಪೊಪ್ಪಿಕೊಂಡ ಕವಿತಾ

  ''ಎಲ್ಲರದ್ದೂ ತಪ್ಪಿದೆ. ನಮಗೆ ಕೊಟ್ಟಿದ್ದ ಕೀ ತುಂಬಾ ದೊಡ್ಡದು. ಎಲ್ಲೂ ಇಟ್ಟುಕೊಳ್ಳಲು ಆಗುತ್ತಿರಲಿಲ್ಲ. ನಾಲ್ಕು ಜನ ಹುಡುಗಿಯರು ಇದ್ದ ಕಾರಣ, ಹೀಗೆ ಮಾಡಬಹುದು ಅಂತ ಭಾವಿಸಿದ್ವಿ. ಅದು ತಪ್ಪಾಯ್ತು'' ಎಂದರು ಕವಿತಾ

  ಅಕ್ಷತಾಗೆ ಪೊರಕೆಯಲ್ಲಿ ಹೊಡೆದ್ರಾ ರಾಪಿಡ್ ರಶ್ಮಿ.?ಅಕ್ಷತಾಗೆ ಪೊರಕೆಯಲ್ಲಿ ಹೊಡೆದ್ರಾ ರಾಪಿಡ್ ರಶ್ಮಿ.?

  ಮುರಳಿ ಹೇಳಿದ್ದೇನು.?

  ಮುರಳಿ ಹೇಳಿದ್ದೇನು.?

  ''ಎಲ್ಲರೂ ತುಂಬಾ ಆಕ್ರಮಣಕಾರಿ ಆಗಿದ್ದರು. ಯಾರೂ ಯಾರ ಮಾತನ್ನೂ ಕೇಳಲು ರೆಡಿ ಇರಲಿಲ್ಲ. ಈ ತರಹ ಆಡಿದ್ರೇನೇ ಕಾಣಿಸೋದು ಎಂಬ ಮನಃಸ್ಥಿತಿ ಇತ್ತು'' ಎಂದರು ಮುರಳಿ.

  ಏನಾದರೂ ಹೆಚ್ಚು ಕಮ್ಮಿ ಆಗಿದ್ದರೆ.?

  ಏನಾದರೂ ಹೆಚ್ಚು ಕಮ್ಮಿ ಆಗಿದ್ದರೆ.?

  ''ಆಕ್ರಮಣಕಾರಿ ಆಗುವುದು ತಪ್ಪಲ್ಲ. ಆದ್ರೆ, ಜೀವಕ್ಕೆ ಅಪಾಯ ಆಗುವ ಹಾಗೆ ವರ್ತಿಸುವುದು ಸರಿ ಅಲ್ಲ. ಏನಾದರೂ ಹೆಚ್ಚು ಕಮ್ಮಿ ಆದರೆ ಏನು ಮಾಡ್ತೀರಾ.? ಎಲ್ಲರೂ ಕೂತು ಯೋಚನೆ ಮಾಡಿ, ಎಲ್ಲಿ ತಪ್ಪಾಯಿತು ಅಂತ...'' ಎಲ್ಲರಿಗೂ ಸುದೀಪ್ ತಿಳಿಸಿದರು.

  English summary
  Bigg Boss Kannada 6: Day 69: Kiccha Sudeep schools Kavitha Gowda and Andrew.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X