ಎರಡುವರೆ ವರ್ಷ ಡಿಪ್ರೆಶನ್ ನಲ್ಲಿದ್ದ ಆಂಡಿ: ಯಾಕೆ.?
Recommended Video

'ಬಿಗ್ ಬಾಸ್' ಮನೆಯಲ್ಲಿ ಎಲ್ಲರಿಗೂ ಕಿರಿಕಿರಿ ಕೊಡುವುದರಲ್ಲಿ ಆಂಡ್ರ್ಯೂ ಅಲಿಯಾಸ್ ಆಂಡಿ ನಂಬರ್ 1. ಟಾಸ್ಕ್ ಗಳಲ್ಲಂತೂ ಉಗ್ರ ರೂಪ ತಾಳುವ ಆಂಡಿ ಕಂಡ್ರೆ 'ಬಿಗ್ ಬಾಸ್' ಮನೆಯಲ್ಲಿ ಉರ್ಕೊಳ್ಳೋರು ಒಬ್ಬಿಬ್ಬರಲ್ಲ.
ಕಿಚ್ ಸುದೀಪ್ ರಿಂದಲೂ ಕ್ಲಾಸ್ ತೆಗೆದುಕೊಂಡಿರುವ ಆಂಡಿ ಒಂದ್ಕಾಲದಲ್ಲಿ ಡಿಪ್ರೆಶನ್ ಗೆ ಹೋಗಿದ್ದರು ಅನ್ನೋದು ನಿಮಗೆ ಗೊತ್ತಾ.? ಹೌದು, ಹತ್ತನೇ ಕ್ಲಾಸ್ ಮುಗಿದ್ಮೇಲೆ, ಆಂಡ್ರ್ಯೂ ಎರಡುವರೆ ವರ್ಷಗಳ ಕಾಲ ಡಿಪ್ರೆಶನ್ ನಲ್ಲಿದ್ದರು.
ಇದಕ್ಕಿದ್ದಂತೆ ದಪ್ಪ ಆಗಲು ಶುರು ಆದ ಆಂಡಿಯನ್ನ ಕಂಡು ಎಲ್ಲರೂ ಹೀಯಾಳಿಸುತ್ತಿದ್ದರಂತೆ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾದ ಆಂಡಿ ಡಿಪ್ರೆಶನ್ ನಲ್ಲಿದ್ದರು. ಈ ಕಹಿ ಅನುಭವವನ್ನ ಆಂಡಿ 'ಬಿಗ್ ಬಾಸ್' ಮನೆಯಲ್ಲಿ ಹೇಳಿಕೊಂಡಿದ್ದಾರೆ. ಮುಂದೆ ಓದಿರಿ...

ಬಿಗ್ ಬಾಸ್ ಕೊಟ್ಟಿದ್ದ ವಿಶೇಷ ಚಟುವಟಿಕೆ
ಸ್ಪರ್ಧಿಗಳು ತಮ್ಮ ಜೀವನ ಚರಿತ್ರೆಯನ್ನು ತೆರೆದಿಡಲು 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದರು. ಅದೇ 'ನನ್ನ ಕಥೆ'. ಇದರ ಅನುಸಾರ, ತಮ್ಮ ಜೀವನದ ಕಹಿ ಅನುಭವವನ್ನು ಆಂಡಿ ಬಿಚ್ಚಿಟ್ಟರು.

ದಿಢೀರ್ ದಪ್ಪ ಆದ ಆಂಡಿ
''ಎಂಟನೇ ಕ್ಲಾಸ್ ಗೆ ಬಂದಾಗ ದಪ್ಪ ಆಗಲು ಶುರುವಾದೆ. ಯಾಕೆ ಅಂತ ಗೊತ್ತಿಲ್ಲ. ಹತ್ತನೇ ಕ್ಲಾಸ್ ಗೆ ಬರುವ ಹೊತ್ತಿಗೆ ಧಡಿಯಾ ಅಂತ ಎಲ್ಲರೂ ಕರೆಯಲು ಶುರು ಮಾಡಿದರು. ಹೀಗಾಗಿ, ಹತ್ತನೇ ಕ್ಲಾಸ್ ಆದ್ಮೇಲೆ ನಾನು ಡಿಪ್ರೆಶನ್ ಗೆ ಹೋದೆ. ಎರಡುವರೆ ವರ್ಷ ನಾನೇನು ಮಾಡಿದೆ ಅನ್ನೋದೇ ನನಗೆ ಗೊತ್ತಿಲ್ಲ'' - ಆಂಡ್ರ್ಯೂ

ಸ್ಫೂರ್ತಿ ತುಂಬಿದ ಮಾತು
''ಸಂಬಂಧಿಕರು ಹೀಯಾಳಿಸುತ್ತಿದ್ದರು. ಮದುವೆ ಮನೆಯಲ್ಲಿ ನನ್ನ ತಂದೆ-ತಾಯಿ ನನಗಾಗಿ ಕಣ್ಣೀರು ಹಾಕಿದ್ದರು. ರೋಡ್ ನಲ್ಲಿ ಬರುವಾಗ ''ಕನಸು ಎಂಬುದು ನಿದ್ದೆ ಮಾಡುವಾಗ ಬರುವುದಲ್ಲ. ನಿನ್ನ ಕನಸು ನಿನ್ನನ್ನು ಮಲಗಲು ಬಿಡಬಾರದು'' ಎಂಬ ಅಬ್ದುಲ್ ಕಲಾಂ ರವರ ಮಾತನ್ನ ನೋಡಿದೆ. ಅದು ನನಗೆ ಸ್ಫೂರ್ತಿ ತುಂಬಿತು'' - ಆಂಡ್ರ್ಯೂ

ದೃಢ ನಿರ್ಧಾರ ಕೈಗೊಂಡ ಆಂಡಿ
''ಒಂದು ದೊಡ್ಡ ಆಡಿಟೋರಿಯಂ. ಅಲ್ಲಿ ಕೂರಲು ಹೋದಾಗ, ಚೇರ್ ನನಗೆ ಸಾಕಾಗಲಿಲ್ಲ. ಆಗ ಇಡೀ ಆಡಿಟೋರಿಯಂ ನನ್ನ ನೋಡಿ ನಕ್ಕಿತು. ನನಗೆ ಸಿಕ್ಕಾಪಟ್ಟೆ ಬೇಜಾರಾಗಿ ಬೈಕಲ್ಲಿ ಅಳುತ್ತ ಮನೆಗೆ ಹೋಗಿದ್ದೇನೆ. ಯಾವ ದೇಹದಿಂದ ಜನ ನನ್ನ ನೋಡಿ ನಗುತ್ತಾರೋ, ಅದೇ ದೇಹದಿಂದಲೇ ನಾನು ಖ್ಯಾತಿ ಗಳಿಸಬೇಕು ಅಂತ ನಿರ್ಧಾರ ಮಾಡಿದೆ. ಎಲ್ಲವನ್ನೂ ಪಾಸಿಟೀವ್ ಆಗಿ ತೆಗೆದುಕೊಳ್ಳಲು ಆರಂಭಿಸಿದೆ'' - ಆಂಡ್ರ್ಯೂ


Click it and Unblock the Notifications











