ಹೊಟ್ಟೆಪಾಡಿಗಾಗಿ ಗಾಯಕ ನವೀನ್ ಸಜ್ಜು ಮಾಡದೇ ಇರುವ ಕೆಲಸಗಳೇ ಇಲ್ಲ.!

Recommended Video

Bigg Boss Kannada Season 6: ಹೊಟ್ಟೆಪಾಡಿಗಾಗಿ ಗಾಯಕ ನವೀನ್ ಸಜ್ಜು ಮಾಡದೇ ಇರುವ ಕೆಲಸಗಳೇ ಇಲ್ಲ.!

ತಮ್ಮ ವಿಶಿಷ್ಟ ಧ್ವನಿಯಿಂದ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಉಂಟು ಮಾಡಿರುವ ಗಾಯಕ ನವೀನ್ ಸಜ್ಜು. ಗಾಯಕನಾಗಿ ಸಂಗೀತ ನಿರ್ದೇಶಕನ ಪಟ್ಟಕ್ಕೂ ಏರಿರುವ ನವೀನ್ ಸಜ್ಜುಗೆ ಗಾಂಧಿನಗರದಲ್ಲಿ ಇದೀಗ ಡಿಮ್ಯಾಂಡ್ ಇದೆ.

ಆದ್ರೆ, ಇದೇ ನವೀನ್ ಸಜ್ಜು ಒಂದ್ಕಾಲದಲ್ಲಿ ಹೊಟ್ಟೆಪಾಡಿಗಾಗಿ ಮಾಡದೇ ಇರುವ ಕೆಲಸಗಳೇ ಇಲ್ಲ ಅನ್ನೋದು ನಿಮಗೆ ಗೊತ್ತಾ.? ಎಸ್.ಎಸ್.ಎಲ್.ಸಿ ಮುಗಿಸಿದ ಕೂಡಲೆ ಕುಟುಂಬಕ್ಕೆ ಆಧಾರವಾಗಿರಲು ನವೀನ್ ಸಜ್ಜು ಕಂಡ ಕಂಡ ಕೆಲಸಗಳನ್ನೆಲ್ಲಾ ಮಾಡಿದ್ದಾರೆ.

ಗಾರೆ ಕೆಲಸದಿಂದ ಹಿಡಿದು ಎಲೆಕ್ಟ್ರೀಶಿಯನ್, ಕ್ಲೀನರ್, ಆಟೋ ಓಡಿಸುವವರೆಗೂ ನವೀನ್ ಸಜ್ಜು ಮೈ ಬಗ್ಗಿಸಿ ದುಡಿದಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...

ಬಿಗ್ ಬಾಸ್ ಕೊಟ್ಟಿದ್ದ ವಿಶೇಷ ಚಟುವಟಿಕೆ

ಬಿಗ್ ಬಾಸ್ ಕೊಟ್ಟಿದ್ದ ವಿಶೇಷ ಚಟುವಟಿಕೆ

ಸ್ಪರ್ಧಿಗಳು ತಮ್ಮ ಜೀವನ ಚರಿತ್ರೆಯನ್ನು ತೆರೆದಿಡಲು 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದರು. ಅದೇ 'ನನ್ನ ಕಥೆ'. ಇದರ ಅನುಸಾರ, ತಮ್ಮ ಕಷ್ಟದ ದಿನಗಳನ್ನು ನವೀನ್ ಸಜ್ಜು ನೆನಪಿಸಿಕೊಂಡರು.

ಎಲೆಕ್ಟ್ರೀಶಿಯನ್ ಕೆಲಸ

ಎಲೆಕ್ಟ್ರೀಶಿಯನ್ ಕೆಲಸ

''ಎಸ್.ಎಸ್.ಎಲ್.ಸಿ ಮುಗಿದ ಮೇಲೆ ನಾನು ಮಾಡದೇ ಇರದ ಕೆಲಸಗಳೇ ಇಲ್ಲ. 500 ರೂಪಾಯಿ ಸಂಬಳಕ್ಕೆ ಎಲೆಕ್ಟ್ರೀಶಿಯನ್ ಕೆಲಸಕ್ಕೆ ಸೇರಿದೆ. ಆ ವಯಸ್ಸಿಗೆ ಅದು ಹೆವಿ ಕೆಲಸ. ಆದರೂ ವರ್ಷಗಟ್ಟಲೆ ಕೆಲಸ ಮಾಡಿದೆ'' - ನವೀನ್ ಸಜ್ಜು

ಕ್ಲೀನರ್ ಕೆಲಸ

ಕ್ಲೀನರ್ ಕೆಲಸ

''ಮೆಡಿಕಲ್ ಸ್ಟೋರಿನಲ್ಲಿ ಕೆಲಸ ಮಾಡಿದೆ. ಚಿನ್ನ-ಬೆಳ್ಳಿ ಅಂಗಡಿಯಲ್ಲಿ ಕ್ಲೀನ್ ಮಾಡುವ ಕೆಲಸಕ್ಕೆ ಸೇರಿದೆ. ಅಲ್ಲಿ ಗಿರಾಕಿಗಳ ಮೇಲೆ ಕಣ್ಣಿಡಬೇಕಿತ್ತು. ಒಂದು ದಿನ ರಿಂಗ್ ಕಾಣುತ್ತಿಲ್ಲ ಅಂತ ನಮ್ಮ ಬಟ್ಟೆ ಬಿಚ್ಚಿಸಿ ಹುಡುಕಿದರು. ಅವತ್ತು ಆ ಅಂಗಡಿ ಓನರ್ ಜೊತೆ ಜಗಳ ಮಾಡಿ ಸಂಬಳ ತೆಗೆದುಕೊಳ್ಳದೆ ಕೆಲಸ ಬಿಟ್ಟೆ'' - ನವೀನ್ ಸಜ್ಜು

ಮನೆಯವರಿಗೆ ಗೊತ್ತಿಲ್ಲದೇ...

ಮನೆಯವರಿಗೆ ಗೊತ್ತಿಲ್ಲದೇ...

''ನಮ್ಮ ಮನೆಯವರಿಗೆ ಗೊತ್ತಿಲ್ಲದೇ, ಆಟೋ ಓಡಿಸಿದ್ದೇನೆ. ಗಾರೆ ಕೆಲಸ ಮಾಡಿದ್ದೇನೆ. ಏನಾದರೂ ಬಿಸಿನೆಸ್ ಮಾಡೋಣ ಅಂತ ಎರಡು ಹಸುಗಳನ್ನು ಕೊಂಡುಕೊಳ್ಳಲು ಪ್ರಯತ್ನ ಮಾಡಿದ್ವಿ. ಹಸು ಸಿಕ್ತು, ಜಾಗ ಸಿಕ್ತು ಅನ್ನೋವಾಗ.. ಅಕ್ಕ-ಪಕ್ಕ ಮನೆಯವರು ಜಗಳ ಮಾಡಿದರು. ಅಲ್ಲಿಗೆ ಆ ಬಿಸಿನೆಸ್ ಕೂಡ ಹೋಯ್ತು'' - ನವೀನ್ ಸಜ್ಜು.

ಮ್ಯೂಸಿಕಲ್ ಜರ್ನಿ

ಮ್ಯೂಸಿಕಲ್ ಜರ್ನಿ

''ಇಷ್ಟೆಲ್ಲಾ ಆದ್ಮೇಲೆ, ಬೆಂಗಳೂರಿಗೆ ಬಂದೆ. ಅಲ್ಲಿಂದ ಮ್ಯೂಸಿಕಲ್ ಜರ್ನಿ ಶುರುವಾಯ್ತು. ನಾನು ಪಟ್ಟಿರುವ ಕಷ್ಟ, ನನ್ನ ಜೀವನದ ಪಾಠ ಅಂತ ಅಂದುಕೊಳ್ಳುವೆ'' ಅಂತಾರೆ ಗಾಯಕ, ಸಂಗೀತ ನಿರ್ದೇಶಕ ನವೀನ್ ಸಜ್ಜು

More from Filmibeat

English summary
Bigg Boss Kannada 6: Day 73: Naveen Sajju remembers his tough times.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X