For Quick Alerts
  ALLOW NOTIFICATIONS  
  For Daily Alerts

  ಎಂ.ಜೆ.ರಾಕೇಶ್ ಜೊತೆ ಸೇರಿ ಅಕ್ಷತಾ ಪಾಂಡವಪುರ ಫೂಲ್ ಆಗುತ್ತಿದ್ದಾರೆ.!

  |

  'ಬಿಗ್ ಬಾಸ್' ಮನೆಯಲ್ಲಿ ಮೊದಲು ಅಂಟಿಕೊಂಡು ಇರುತ್ತಿದ್ದ ಎಂ.ಜೆ.ರಾಕೇಶ್ ಮತ್ತು ಅಕ್ಷತಾ ನಡುವೆ ಇತ್ತೀಚೆಗೆ ಕಚ್ಚಾಟ ವಿಪರೀತವಾಗಿದೆ. 'ಬಿಗ್ ಬಾಸ್' ಮನೆಯಲ್ಲಿ ಉಳಿದುಕೊಳ್ಳಲು ಇವರಿಬ್ಬರು ಕಿತ್ತಾಡುತ್ತಿದ್ದಾರೆ ಎಂದು ಅಂದುಕೊಂಡಿದ್ದ ಇತರೆ ಸ್ಪರ್ಧಿಗಳಿಗೆ ಇದೀಗ ಒಂದು ಕ್ಲಾರಿಟಿ ಸಿಕ್ಕಿದೆ.

  ''ಪ್ಲಾನಿಂಗ್ ಮಾಡಿ ಆಟ ಆಡುತ್ತಿರುವುದು ರಾಕೇಶ್. ಆತ ಫೇಕ್. ರಾಕೇಶ್ ರಿಂದಾಗಿ ಅಕ್ಷತಾ ಫೂಲ್ ಆಗುತ್ತಿದ್ದಾರೆ'' ಎಂಬ ತೀರ್ಮಾನಕ್ಕೆ 'ಬಿಗ್ ಬಾಸ್' ಸ್ಪರ್ಧಿಗಳು ಬಂದಿದ್ದಾರೆ.

  ಇನ್ನಾದರೂ ಅಕ್ಷತಾ ಪಾಂಡವಪುರ ಎಚ್ಚೆತ್ತುಕೊಂಡರೆ ಆಕೆಗೆ ಒಳಿತು.!

  ''ರಾಕೇಶ್ ಗೆ ಎಲ್ಲಾ ಗೊತ್ತು. ಈ ಮನೆಯಲ್ಲಿ ಫ್ರೆಂಡ್ ಶಿಪ್, ಜನರನ್ನು ಮಿಸ್ ಯೂಸ್ ಮಾಡಿಕೊಳ್ಳುವುದರಲ್ಲಿ ರಾಕೇಶ್ ನಂಬರ್ ಒನ್. ಇದು ಯಾರಿಗೂ ಗೊತ್ತಾಗುತ್ತಿಲ್ಲ'' ಎಲ್ಲರ ಮುಂದೆ ಆಂಡಿ ಹೇಳಿದ್ದರು. ಆಂಡಿ ಹೇಳಿದ್ದು ಸರಿ ಅಂತ ಅಕ್ಷತಾ ಕೂಡ ಒಪ್ಪಿಕೊಂಡರು.

  ಪ್ರೀತಿಯ 'ಪುಟ್ಟ'ನ ಸೇಫ್ ಮಾಡದ ರಾಕೇಶ್: ಅಕ್ಷತಾ ನಿಮಗಿದು ಆಗ್ಬೇಕಿತ್ತು.!

  ಅತ್ತ ''ರಾಕೇಶ್ ಬಗ್ಗೆ ಅಕ್ಷತಾಗೆ ಬಾಂಡಿಂಗ್ ಇದೆ. ಆದ್ರೆ, ರಾಕೇಶ್ ಗೆ ಕೇರ್ ಇಲ್ಲ. ಅವನು ಪ್ಲಾನ್ ಮಾಡಿ ಆಡುತ್ತಿದ್ದಾನೆ. ಆಂಡಿ ಹೇಳಿದ್ದೆಲ್ಲವೂ ನಿಜ. ಬಾಂಡಿಂಗ್ ಎನ್ನುವ ಪೂಲ್ ನಲ್ಲಿ ಬಿದ್ದು ಅಕ್ಷತಾ ಫೂಲ್ ಆಗುತ್ತಿದ್ದಾಳೆ. ಪರ್ಫಾಮೆನ್ಸ್ ಹಾಳು ಮಾಡಿಕೊಳ್ಳುತ್ತಿದ್ದಾಳೆ. ರಾಕೇಶ್ ಫೇಕ್. ನಮ್ಮನ್ನೆಲ್ಲ ಅವನು ಬಕ್ರಾ ಮಾಡುತ್ತಿದ್ದಾನೆ'' ಎನ್ನುತ್ತಾರೆ ಧನರಾಜ್ ಮತ್ತು ಶಶಿ.

  ಏನು ಮಾಡೋದು ಅಂತ ಗೊತ್ತಾಗದೆ, ರಾಕೇಶ್-ಅಕ್ಷತಾ ಜಗಳ ಆಡುತ್ತಿದ್ದಾರೆ.!

  ಒಟ್ನಲ್ಲಿ, ಗುಡ್ನೆಸ್ ಎನ್ನುವ ಹೆಸರಿನಲ್ಲಿ ರಾಕೇಶ್ ಡಬಲ್ ಗೇಮ್ ಆಡುತ್ತಿರುವುದು... 'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ದಿನ ಉಳಿಯಲು ಅಕ್ಷತಾ ರನ್ನ ರಾಕೇಶ್ ದುರ್ಬಳಕೆ ಮಾಡಿಕೊಳ್ಳುತ್ತಿರುವುದು 'ಬಿಗ್ ಬಾಸ್' ಸ್ಪರ್ಧಿಗಳಿಗೆ ಸ್ಪಷ್ಟವಾಗಿ ಗೋಚರಿಸಿದೆ.

  English summary
  Bigg Boss Kannada 6: Day 76: Rakesh is fake says Dhanraj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X