ಆಂಡಿಯನ್ನ ಅಪ್ಪ ಹೊರಗೆ ಕರ್ಕೊಂಡು ಹೋಗಲಿಲ್ಲ: ಎಲ್ಲಾ ನಾಟಕ ಅಷ್ಟೇ.!

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಎಲ್ಲಾ ಸ್ಪರ್ಧಿಗಳಿಗೂ ಅತಿ ಹೆಚ್ಚು ಕಿರಿಕಿರಿ ಕೊಟ್ಟಿರುವವರು ಆಂಡ್ರ್ಯೂ ಅಲಿಯಾಸ್ ಆಂಡಿ. ಕೆಲವು ಟಾಸ್ಕ್ ಗಳಲ್ಲಂತೂ ಆಂಡಿ ಎಲ್ಲೆ ಮೀರಿ ವರ್ತಿಸಿದ್ದಾರೆ. ಕಿಚ್ಚ ಸುದೀಪ್ ಕೂಡ ಹಲವು ಬಾರಿ ಆಂಡಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದನ್ನೆಲ್ಲ ನೋಡಿರುವ ಆಂಡಿ ತಂದೆ ಜೋಸೆಫ್ ಗೆ ಬೇಸರ ಆಗಿದೆ. ಹೀಗಾಗಿ, ಫ್ಯಾಮಿಲಿ ವೀಕ್ ಪ್ರಯುಕ್ತ 'ಬಿಗ್ ಬಾಸ್' ಮನೆಯೊಳಗೆ ಬಂದ ಜೋಸೆಫ್ ರವರು ತಮ್ಮ ಪುತ್ರನನ್ನ ವಾಪಸ್ ಮನೆಗೆ ಕರೆದುಕೊಂಡು ಹೋಗುತ್ತಾರೆ ಎಂದೇ ಹಲವರು ಭಾವಿಸಿದ್ದರು.

ಅದರಲ್ಲೂ ನಿನ್ನೆ ಸಂಚಿಕೆಯ ಪ್ರೋಮೋ ನೋಡಿದ್ಮೇಲೆ, 'ಬಿಗ್ ಬಾಸ್' ಮನೆಯಿಂದ ಆಂಡಿ ಹೊರ ಹೋಗುವುದು ಕನ್ಫರ್ಮ್ ಅನ್ನೋದು ವೀಕ್ಷಕರ ತಲೆಯಲ್ಲಿತ್ತು. ಆದ್ರೆ, ಸಂಚಿಕೆ ನೋಡಿದ್ಮೇಲೆ, ಅದರ ಅಸಲಿಯತ್ತು ಬಯಲಾಗಿದೆ. 'ಬಿಗ್ ಬಾಸ್' ಮನೆಯಿಂದ ಆಂಡಿ ಹೊರಗೆ ಹೋಗಿಲ್ಲ. ತಂದೆ ಜೋಸೆಫ್ ಗೆ ಕೋಪ ಕೂಡ ಬಂದಿಲ್ಲ. ಇದೆಲ್ಲವೂ 'ಬಿಗ್ ಬಾಸ್' ಮಾಡಿಸಿರುವ ಪ್ರಾಂಕ್ ಅಷ್ಟೇ.! ಮುಂದೆ ಓದಿರಿ...

'ಬಿಗ್ ಬಾಸ್' ಮನೆಯೊಳಗೆ ಆಂಡಿ ತಂದೆ

'ಬಿಗ್ ಬಾಸ್' ಮನೆಯೊಳಗೆ ಆಂಡಿ ತಂದೆ

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸದ್ಯ ಫ್ಯಾಮಿಲಿ ವೀಕ್ ಚಾಲ್ತಿಯಲ್ಲಿದೆ. ಪ್ರತಿಯೊಬ್ಬ ಸ್ಪರ್ಧಿಯ ಕುಟುಂಬದವರು 'ಬಿಗ್ ಬಾಸ್' ಮನೆಗೆ ಬರುತ್ತಿದ್ದಾರೆ. ಅದರಂತೆ ನಿನ್ನೆ 'ಬಿಗ್ ಬಾಸ್' ಮನೆಯೊಳಗೆ ಆಂಡ್ರ್ಯೂ ತಂದೆ ಜೋಸೆಫ್ ಬಂದರು.

ಸೀಕ್ರೆಟ್ ಟಾಸ್ಕ್

ಸೀಕ್ರೆಟ್ ಟಾಸ್ಕ್

''ಎಲ್ಲಾ ಸ್ಪರ್ಧಿಗಳು ಆಂಡಿ ವಿರುದ್ಧ ದೂರು ಹೇಳಬೇಕು. ಎಲ್ಲರ ಮಾತನ್ನು ಕೇಳಿ ಕೋಪಗೊಳ್ಳುವ ಆಂಡಿ ತಂದೆ ಆಂಡಿಯನ್ನ ಹೊರಗೆ ಕರೆದುಕೊಂಡು ಹೋಗಬೇಕು'' ಎಂಬ ಸೀಕ್ರೆಟ್ ಟಾಸ್ಕ್ ನ ಆಂಡಿಯನ್ನು ಹೊರತು ಪಡಿಸಿ ಎಲ್ಲರಿಗೂ 'ಬಿಗ್ ಬಾಸ್' ನೀಡಿದರು.

ಆಂಡಿ ಮೇಲೆ ದೂರಿನ ಸರಮಾಲೆ

ಆಂಡಿ ಮೇಲೆ ದೂರಿನ ಸರಮಾಲೆ

''ಆಂಡಿ ಸಣ್ಣ ಹುಡುಗ ಅಲ್ಲ. ಇನ್ನೊಬ್ಬರಿಗೆ ಡ್ಯಾಮೇಜ್ ಮಾಡಿ ಇಲ್ಲಿ ಉಳಿದುಕೊಳ್ಳುವ ಪ್ಲಾನ್ ಮಾಡಿದ್ದಾನಾ.? ಏಕ್ದಂ ಮಾತನಾಡುತ್ತಾನೆ. ಪರಿಜ್ಞಾನ ಇಲ್ಲ'' ಅಂತ ಅಕ್ಷತಾ ಹೇಳಿದರೆ, ''ಗೇಮ್ ಆಡುವ ರಭಸದಲ್ಲಿ ಮನುಷ್ಯ ಎಂಬುದನ್ನೇ ಆಂಡಿ ಮರೆತಿದ್ದಾನೆ. ಜನರನ್ನು ಹರ್ಟ್ ಮಾಡುತ್ತಾನೆ. ಟ್ಯಾಲೆಂಟ್ ಬಗ್ಗೆ ಜಾಸ್ತಿ ಫೋಕಸ್ ಮಾಡಲ್ಲ'' ಅಂತ ರಶ್ಮಿ ದೂರಿದರು.

ಕವಿತಾ ಹೇಳಿದ್ದೇನು.?

ಕವಿತಾ ಹೇಳಿದ್ದೇನು.?

''ಟಾಸ್ಕ್ ಮುಗಿದ್ಮೇಲೆ ಮಾಡಿರುವ ತಪ್ಪುಗಳಿಗೆ ಸಮಜಾಯಿಷಿ ನೀಡುತ್ತಾರೆ. ಸಡನ್ನಾಗಿ ಟ್ರಿಗರ್ ಮಾಡುತ್ತಾರೆ. ಯಾವುದೇ ವಿಷಯದಲ್ಲೂ ತಿದ್ದುಕೊಂಡಿಲ್ಲ'' ಎಂದು ಕವಿತಾ ಹೇಳಿದರೆ, ''ನಾವು ಒಳ್ಳೆ ಫ್ರೆಂಡ್ಸ್ ಆಗಿದ್ವಿ. ಈಗ ಇಲ್ಲ. ಯಾಕಂದ್ರೆ, ಬೆನ್ನಿಗೆ ಚೂರಿ ಹಾಕಿದ್ದಾನೆ. ನನ್ನನ್ನ ಪರ್ಸನಲ್ ಆಗಿ ಆಂಡಿ ಟಾರ್ಗೆಟ್ ಮಾಡಿದ್ದಾನೆ'' ಎಂದರು ರಾಕೇಶ್.

ತಪ್ಪು ದಾರಿ

ತಪ್ಪು ದಾರಿ

''ಕಾಮಿಡಿ ಮಾಡುವ ಟ್ಯಾಲೆಂಟ್ ಇದ್ದರೂ, ಆಂಡಿ ಹೋಗುತ್ತಿರುವ ದಾರಿ ತಪ್ಪು. ನೆಗೆಟಿವಿಟಿ ಜಾಸ್ತಿ ಅಳವಡಿಸಿಕೊಂಡಿದ್ದಾನೆ'' ಅಂತ ಶಶಿ ಹೇಳಿದರೆ, ''ಆಂಡಿ ತುಂಬಾ ಬುದ್ಧಿವಂತ. ಪ್ರತಿಯೊಬ್ಬರ ವೀಕ್ನೆಸ್ ಅವನಿಗೆ ಗೊತ್ತು'' ಎಂದರು ನವೀನ್. ಇನ್ನೂ, ''ಕೆಟ್ಟದಾದರೂ ಇರಲಿ, ಯಾವಾಗಲೂ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರಬೇಕು ಎಂಬುದು ಆಂಡಿ ಪಾಲಿಸಿ. ಅವನು ಬ್ಯಾಡ್ ವುಲ್ಫ್'' ಅಂತ ಧನರಾಜ್ ಹೇಳಿದರು.

ಕೆರಳಿದ ಆಂಡಿ ತಂದೆ

ಕೆರಳಿದ ಆಂಡಿ ತಂದೆ

ಇದನ್ನೆಲ್ಲ ಕೇಳಿದ್ಮೇಲೆ, ಪ್ರಾಂಕ್ ಅನ್ವಯ ಕೆರಳಿದ ಆಂಡಿ ತಂದೆ, ''ನಾನು ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಎಲ್ಲರಿಗೂ ಅವನು ಪ್ರಾಬ್ಲಂ ಮಾಡಿರುವ ಕಾರಣ, ನಾನು ಬಿಗ್ ಬಾಸ್ ಗೆ ಹೇಳಿ ಆಂಡಿಯನ್ನ ಮನೆಗೆ ಕರೆದುಕೊಂಡು ಹೋಗುವೆ. ಎಲ್ಲರಿಗೂ 'ಸಾರಿ'' ಎಂದು ಆಂಡಿ ಕೈಹಿಡಿದು ಹೊರಟು ನಿಂತರು.

ಎಲ್ಲಾ ನಾಟಕ.!

ಎಲ್ಲಾ ನಾಟಕ.!

ಸೀಕ್ರೆಟ್ ಟಾಸ್ಕ್ ಬಗ್ಗೆ ಆಂಡಿಗೆ ಅರಿವು ಇರಲಿಲ್ಲ. ಹೀಗಾಗಿ, ವಾದ, ವಾಗ್ವಾದ, ಡ್ರಾಮಾ.. ಎಲ್ಲಾ ನಡೆಯಿತು. ಕಡೆಗೆ ''ಸೀಕ್ರೆಟ್ ಟಾಸ್ಕ್ ಯಶಸ್ವಿ'' ಎಂದು 'ಬಿಗ್ ಬಾಸ್' ಘೋಷಿಸಿದರು.

ಮಗನಿಗೆ ಕಿವಿಮಾತು

ಮಗನಿಗೆ ಕಿವಿಮಾತು

''ಈ ಸೀಕ್ರೆಟ್ ಟಾಸ್ಕ್ ಒಂದು ಪಾಠ. ಅತಿರೇಕದಿಂದ ವರ್ತಿಸಬಾರದು'' ಎಂದು ಮಗನಿಗೆ ಕಿವಿಮಾತು ಹೇಳಿ ಆಂಡಿ ತಂದೆ ಜೋಸೆಫ್ ನಿರ್ಗಮಿಸಿದರು.

More from Filmibeat

English summary
Bigg Boss Kannada 6: Day 82: That was prank, Andrew dint go home.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X