'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಮೊದಲ ಫೈನಲಿಸ್ಟ್ ಗಾಯಕ ನವೀನ್.!
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಅತಿ ಕಡಿಮೆ ಬಾರಿ ನಾಮಿನೇಟ್ ಆಗಿರುವವರು ಗಾಯಕ ನವೀನ್ ಸಜ್ಜು. ಕಾರಣ, 'ಬಿಗ್ ಬಾಸ್' ಮನೆಯಲ್ಲಿ ನವೀನ್ ಯಾರಿಗೂ ಕಿರಿಕಿರಿ ಮಾಡಿಲ್ಲ. ವಾದ-ವಿವಾದ-ವಾಗ್ವಾದಗಳಿಗೆ ಸಾಕ್ಷಿ ಆಗಿಲ್ಲ. 'ಸೇಫ್ ಗೇಮ್ ಆಡುತ್ತಿದ್ದಾರೆ' ಅಂತ ಹಲವು ಬಾರಿ ಬೆಟ್ಟು ಮಾಡಿ ತೋರಿಸಿದರೂ, ನವೀನ್ ಆಕ್ರಮಣಕಾರಿ ಆಗಿ ಯಾವತ್ತೂ ವರ್ತಿಸಿಲ್ಲ.
'ಬಿಗ್ ಬಾಸ್' ಕೊಡುವ ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಗಾಯಕ ನವೀನ್ ಸಜ್ಜು ಕಳೆದ ವಾರ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದರು. ಈ ನಡುವೆ 'ಬಿಗ್ ಬಾಸ್' ಕೊಟ್ಟ ಸ್ಪೆಷಲ್ ಟಾಸ್ಕ್ ನಲ್ಲಿ ವಿಜೇತರಾಗಿ ಡೈರೆಕ್ಟಾಗಿ ಫಿನಾಲೆ ವಾರಕ್ಕೆ ನವೀನ್ ಸಜ್ಜು ಎಂಟ್ರಿ ಕೊಟ್ಟಿದ್ದಾರೆ.

ಪ್ರತಿ ವಾರಾಂತ್ಯದಲ್ಲಿ ನಡೆಯುವ ಹಾಗೆ ಕಳೆದ ವಾರ ಕ್ಯಾಪ್ಟನ್ ಆಯ್ಕೆ ಚಟುವಟಿಕೆ ನಡೆಯಲಿಲ್ಲ. ಬದಲಾಗಿ, 'ಯಶಸ್ಸು ಒಂದು ತಪಸ್ಸು' ಎಂಬ ವಿಶೇಷ ಸವಾಲನ್ನು 'ಬಿಗ್ ಬಾಸ್' ನೀಡಿದರು. ಇದನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದವರು ನವೀನ್ ಸಜ್ಜು. ಗೆದ್ದವರಿಗೆ 'ವಿಶೇಷ ಅಧಿಕಾರ' ಸಿಗುತ್ತದೆ ಎಂದು 'ಬಿಗ್ ಬಾಸ್' ಹೇಳಿದ್ದರು.
ಈ ವಿಶೇಷ ಅಧಿಕಾರದ ಅನುಸಾರ, ಗ್ರ್ಯಾಂಡ್ ಫಿನಾಲೆ ವಾರಕ್ಕೆ ಗಾಯಕ ನವೀನ್ ಸಜ್ಜುಗೆ 'ಗೋಲ್ಡನ್ ಟಿಕೆಟ್' ಸಿಕ್ಕಿದೆ. ಪರಿಣಾಮ, ಈ ವಾರ ನಾಮಿನೇಷನ್ ಪ್ರಕ್ರಿಯೆಯಿಂದ ನವೀನ್ ಸೇಫ್ ಆಗಿದ್ದಾರೆ. ನಾಮಿನೇಷನ್-ಎಲಿಮಿನೇಷನ್ ಎಂಬ ಟೆನ್ಷನ್ ಇಲ್ಲದೆ, ಫಿನಾಲೆ ವಾರಕ್ಕೆ ನವೀನ್ ಸಜ್ಜು ಕಾಲಿಟ್ಟಿದ್ದಾರೆ.
ಜೀವನದಲ್ಲಿ ಕಷ್ಟ ಪಟ್ಟು ಮೇಲೆ ಬಂದಿರುವ ಗಾಯಕ ನವೀನ್ ಸಜ್ಜುರನ್ನ 'ಬಿಗ್ ಬಾಸ್' ವಿನ್ನರ್ ಆಗಿ ಮಾಡುವುದು ಬಿಡುವುದು ಸದ್ಯ ನಿಮ್ಮ ಕೈಯಲ್ಲಿದೆ.


Click it and Unblock the Notifications











