ಒಂದು ಚಪಾತಿ, ಪೀಸ್ ಹೀರೇಕಾಯಿಗಾಗಿ ಜಗಳ ಆಡಿದ ರಾಕೇಶ್ ಗುಡ್ನೆಸ್ ಎಲ್ಲಿ ಹೋಯ್ತು.?

ಮಾತ್ತೆತ್ತಿದರೆ 'ಗುಡ್ನೆಸ್', 'ಒಳ್ಳೆತನ' ಅಂತ ಪೋಸ್ ಕೊಡುವ 'ಬಿಗ್ ಬಾಸ್ ಕನ್ನಡ-6' ಸ್ಪರ್ಧಿ ಎಂ.ಜೆ.ರಾಕೇಶ್. ಇಂತಿಪ್ಪ ಎಂ.ಜೆ.ರಾಕೇಶ್ ಒಂದೇ ಒಂದು ಚಪಾತಿ ಮತ್ತು ಕೇವಲ ಒಂದು ಪೀಸ್ ಹೀರೇಕಾಯಿಗಾಗಿ ಕಳೆದ ವಾರ ದೊಡ್ಡ ಜಗಳ ಮಾಡಿದ್ದರು.

''ತಿಂಡಿ-ಅಡುಗೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡ. ಮನೆಗೆ ಬಂದ್ಮೇಲೆ, ಚೆನ್ನಾಗಿ ಅಡುಗೆ ಮಾಡಿ ಕೊಡುವೆ'' ಅಂತ ತಾಯಿ ಹೇಳಿ ಹೋಗಿದ್ದರೂ, ಒಂದು ಪೀಸ್ ಹೀರೇಕಾಯಿಗಾಗಿ ಆಂಡಿ ಜೊತೆಗೆ ರಾಕೇಶ್ ರಂಪ ಮಾಡಿದ್ದರು.

ಸಿಲ್ಲಿ ವಿಷಯಕ್ಕೆ ಶುರುವಾದ ಗಲಾಟೆ ಕಡೆಗೆ ಮನೆಯವರನ್ನೂ ರೌಂಡ್ ಹಾಕಿ ಬಂತು. ರಾಕೇಶ್ ಬಾಯಿಂದ 'ಭಿಕ್ಷುಕ'ರ ಬಗ್ಗೆಯೂ ಮಾತು ಹೊರಬಿತ್ತು. ಇದನ್ನೆಲ್ಲ ಗಮನಿಸಿದ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ರಾಕೇಶ್ ಮತ್ತು ಆಂಡಿಗೆ ಕ್ಲಾಸ್ ತೆಗೆದುಕೊಂಡರು. ಮುಂದೆ ಓದಿರಿ...

ಕ್ಲಾಸ್ ತೆಗೆದುಕೊಂಡ ಸುದೀಪ್

ಕ್ಲಾಸ್ ತೆಗೆದುಕೊಂಡ ಸುದೀಪ್

''ಮನೆಯವರು ಬಂದರು ಅಂತ ಎಲ್ಲರೂ ಹಿಕ್ಕಿ ಹೀರೇಕಾಯಿ ಆಗ್ತೀರಾ. ಆದ್ರೆ, ಅವರೆಲ್ಲ ಬಂದು ಹೋದ ದಿನವೇ ಕೇವಲ ಹೀರೇಕಾಯಿಗಾಗಿ ಒಂದು ಜಗಳ ನಡೆಯುತ್ತೆ. ಇದರಲ್ಲಿ ರಾಕೇಶ್ ತಾಯಿ, ಆಂಡಿ ತಂದೆ ಬರ್ತಾರೆ. ನಿಜ ಹೇಳಬೇಕು ಅಂದ್ರೆ, ಇದು ಕೇವಲವಾದ ವಿಚಾರ. ಆದ್ರೆ, ಭಿಕ್ಷುಕರು ಎಲ್ಲಿಂದ ಬಂದರು ರಾಕೇಶ್.?'' ಎಂದು ಸುದೀಪ್ ಪ್ರಶ್ನೆ ಮಾಡಿದರು.

ರಾಕೇಶ್ ಹೇಳಿದ್ದೇನು.?

ರಾಕೇಶ್ ಹೇಳಿದ್ದೇನು.?

''ಮಟನ್, ಚಿಕನ್, ಫಿಶ್, ಮೊಟ್ಟೆ ಸೇರಿದಂತೆ ಆಂಡಿಗೆ ತುಂಬಾ ಆಯ್ಕೆಗಳು ಇವೆ. ಹೀಗಿದ್ದರೂ, ನಾನು ತಿನ್ನುವುದರಲ್ಲೂ ಬೇಕು ಅಂದಾಗ ನಾನು ಜಗಳ ಮಾಡಿದೆ. ಭಿಕ್ಷುಕರು ಕೇಳಿದಾಗ ಕೊಡುತ್ತೇವೆ ಅಂತ ನಾನು ಹೇಳಿದೆ. ಆದ್ರೆ, ಜಗಳವನ್ನ ಆಂಡಿ ಬೇರೆ ಲೆವೆಲ್ ಗೆ ತೆಗೆದುಕೊಂಡು ಹೋದ'' ಎಂದು ತಮ್ಮನ್ನ ತಾವು ಸಮರ್ಥಿಸಿಕೊಂಡರು ರಾಕೇಶ್.

ಆಂಡಿ ಏನಂದರು.?

ಆಂಡಿ ಏನಂದರು.?

''ಈ ಸನ್ನಿವೇಶ ಎರಡು ಬಾರಿ ನಡೆಯುತ್ತೆ. ಒಂದು ಚಪಾತಿಗೆ, ಇನ್ನೊಂದು ಹೀರೇಕಾಯಿಗೆ. ಎರಡರಲ್ಲೂ ಕಾಮನ್ ಫ್ಯಾಕ್ಟರ್ ಅಕ್ಷತಾ. ಆಕೆಯ ಬಳಿ ತೆಗೆದುಕೊಂಡು ಬಂದು ಕೂತು ತಿನ್ನುವಾಗ, ರಾಕೇಶ್ ಜಗಳ ಶುರು ಮಾಡಿದ. ಹೀರೇಕಾಯಿ ತಾನೆ ಬಿಡು ಅಂತ ಹೇಳಿದರೂ, ಕೇಳಲಿಲ್ಲ. ಜಗಳ ದೊಡ್ಡದು ಮಾಡಿದ್ದು ರಾಕೇಶ್. ನನ್ನ ತಂದೆ ಬಗ್ಗೆ ಮಾತನಾಡಿದ್ದು ರಾಕೇಶ್'' ಎಂದರು ಆಂಡಿ.

ಇಬ್ಬರದ್ದೂ ತಪ್ಪು.!

ಇಬ್ಬರದ್ದೂ ತಪ್ಪು.!

''ಮೊದಲು ವಾಯ್ಸ್ ರೇಸ್ ಮಾಡಿದ್ದು ರಾಕೇಶ್. ನಿಮ್ಮನ್ನು ವೋಟ್ ಮಾಡಿ ಸೇಫ್ ಮಾಡುತ್ತಿರುವ ಜನರು ದಡ್ಡರಾ.? ಊಟ ಮುಗಿದ ಮೇಲೆ ನೀವು ಮಾತನಾಡಬಹುದಿತ್ತು. ಆಂಡಿ ತಂದೆ ಬಗ್ಗೆ ರಾಕೇಶ್ ಮಾತನಾಡಿದರು ಅಂತ ರಾಕೇಶ್ ತಾಯಿ ಬಗ್ಗೆ ಆಂಡಿ ಮಾತನಾಡಿದ್ದು ತಪ್ಪು. ಆಗ ಆಂಡಿ ಸುಮ್ಮನೆ ಇದ್ದಿದ್ದರೆ, ಅವರು ದೊಡ್ಡವರು ಆಗ್ತಿದ್ರು. ಇಲ್ಲಿ ಇಬ್ಬರದ್ದೂ ತಪ್ಪು ಇದೆ'' ಅಂತ ಸುದೀಪ್ ಹೇಳಿದರು.

ಇದು ಬೇಕಿತ್ತಾ.?

ಇದು ಬೇಕಿತ್ತಾ.?

''ಆಂಡಿ ಕಾಮಿಡಿ ಶೋ ಮಾಡುತ್ತಿರುವಾಗ, ಅವರನ್ನ ರಾಕೇಶ್ ಕಮೋಡ್ ಗೆ ಹೋಲಿಸುತ್ತಾರೆ. ಕಾಮಿಡಿ ಎಲ್ಲಿ.? ಕಮೋಡ್ ಎಲ್ಲಿ.? ತಮಾಷೆಗೆ ಹಾಗೆ ಮಾಡಿದ್ದು ಓಕೆನಾ.? ಅದು ಓಕೆ ಆದರೆ ನಿಮಗೆ ಎಲ್ಲವೂ ಓಕೆ ಆಗಿರಬೇಕು ಅಲ್ವಾ.?'' ಎಂದು ರಾಕೇಶ್ ಗೆ ಸುದೀಪ್ ಕೇಳಿದರು. ಉತ್ತರ ಕೊಡಲು ಆಗದೆ 'ಗುಡ್ನೆಸ್' ರಾಕೇಶ್ ತಲೆಬಗ್ಗಿಸಿದರು.

More from Filmibeat

English summary
Bigg Boss Kannada 6: Day 83: Sudeep annoyed with Andrew and Rakesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X