ಗೆಲ್ಲಲು ಬಂದಿಲ್ಲ ಎನ್ನುವ ರಾಕೇಶ್ ಫಿನಾಲೆಗೆ ಯಾಕ್ರೀ ಹೋಗಬೇಕು.?

''ನನಗೆ 'ಬಿಗ್ ಬಾಸ್' ಆಟ ಅಲ್ಲ. ಇದು ಜರ್ನಿ. ನಾನಿಲ್ಲಿ ಗೆಲ್ಲಲು ಬಂದಿಲ್ಲ'' ಅಂತ 'ಬಿಗ್ ಬಾಸ್' ಮನೆಯಲ್ಲೇ ಹಲವು ಬಾರಿ ಎಂ.ಜೆ.ರಾಕೇಶ್ ಹೇಳಿದ್ದಾರೆ. ಸಾಲದಕ್ಕೆ, ಅಕ್ಷತಾ ಮತ್ತು ರಾಕೇಶ್ ಟಾಪ್ 2 ಹಂತ ತಲುಪಿದರೆ, ''ಅಕ್ಷತಾಗೆ ಟ್ರೋಫಿ ಬಿಟ್ಟುಕೊಡುವೆ'' ಅಂತಲೂ ರಾಕೇಶ್ ಹೇಳಿಕೊಂಡಿದ್ದರು.

ಅಲ್ಲಿಗೆ, ಗೆಲ್ಲಬೇಕು ಎಂಬ ಛಲ ರಾಕೇಶ್ ಗೆ ಇದ್ದ ಹಾಗಿಲ್ಲ. ಇದ್ದರೂ, ಅದನ್ನ 'ಗುಡ್ನೆಸ್' ನೆಪದಲ್ಲಿ ರಾಕೇಶ್ ತೋರಿಸಿಕೊಳ್ಳುತ್ತಿಲ್ಲ. ಇಂತಿಪ್ಪ ರಾಕೇಶ್ ಫಿನಾಲೆ ವಾರಕ್ಕೆ ಯಾಕೆ ಹೋಗಬೇಕು.?

''ಗುಡ್ನೆಸ್', 'ಸಸ್ಯಾಹಾರ' ಮತ್ತು 'ಫಿಟ್ನೆಸ್'ನ 'ನಾನು ''ಪ್ರಮೋಟ್'' ಮಾಡುತ್ತಿರುವೆ. ಹೀಗಾಗಿ, ಫಿನಾಲೆ ವಾರಕ್ಕೆ ನಾನು ಹೋಗಬೇಕು'' ಎಂದು ರಾಕೇಶ್ ತಮ್ಮನ್ನ ತಾವು ಸಮರ್ಥಿಸಿಕೊಂಡರು.

''ನಾನು ಕೊಡುವವನು'' ಎನ್ನುತ್ತಾ ಅಕ್ಷತಾಗಾಗಿ ಔಟ್ ಆಗಲು ಸಿದ್ಧರಿದ್ದ ರಾಕೇಶ್ ಬಗ್ಗೆ 'ಬಿಗ್ ಬಾಸ್' ಮನೆಗೆ ಬಂದ ವಿಶೇಷ ಅತಿಥಿಗಳಿಗೆ ಆಕ್ಷೇಪಣೆ ಇತ್ತು. ಹೀಗಾಗಿ ಸ್ಪೆಷಲ್ ಗೆಸ್ಟ್ ಗಳು ರಾಕೇಶ್ ರನ್ನ ಸೇಫ್ ಮಾಡಲಿಲ್ಲ. ಮುಂದೆ ಓದಿರಿ...

'ಬಿಗ್ ಬಾಸ್' ಮನೆಗೆ ವಿಶೇಷ ಅತಿಥಿಗಳು

'ಬಿಗ್ ಬಾಸ್' ಮನೆಗೆ ವಿಶೇಷ ಅತಿಥಿಗಳು

ಒಳ್ಳೆ ಹುಡುಗ ಪ್ರಥಮ್, ಕಿರಿಕ್ ಕೀರ್ತಿ, ಸಂಜನಾ, ಕೃಷಿ ತಾಪಂಡ ಮತ್ತು ಸಮೀರಾಚಾರ್ಯ ವಿಶೇಷ ಅತಿಥಿಗಳಾಗಿ 'ಬಿಗ್ ಬಾಸ್' ಔಟ್ ಹೌಸ್ ಗೆ ಎಂಟ್ರಿಕೊಟ್ಟರು. 'ಬಿಗ್ ಬಾಸ್' ಸ್ಪರ್ಧಿಗಳ ಪೈಕಿ ಒಬ್ಬರನ್ನು ಸೇಫ್ ಮಾಡುವ ಅಧಿಕಾರವನ್ನ ವಿಶೇಷ ಅತಿಥಿಗಳಿಗೆ 'ಬಿಗ್ ಬಾಸ್' ನೀಡಿದ್ದರು.

ಸಮರ್ಥನೆ ಕೊಡಬೇಕಿದ್ದ ಸ್ಪರ್ಧಿಗಳು

ಸಮರ್ಥನೆ ಕೊಡಬೇಕಿದ್ದ ಸ್ಪರ್ಧಿಗಳು

''ಈ ವಾರ ತಾವು ಯಾಕೆ ಉಳಿದುಕೊಳ್ಳಬೇಕು.? ಫಿನಾಲೆ ವಾರಕ್ಕೆ ಯಾಕೆ ಹೋಗಬೇಕು.?'' ಎಂಬುದರ ಬಗ್ಗೆ ಸ್ಪರ್ಧಿಗಳು ತಮ್ಮನ್ನ ತಾವು ಸಮರ್ಥಿಸಿಕೊಳ್ಳಬೇಕಿತ್ತು. ಇದರ ಅನುಸಾರ, ವಿಶೇಷ ಅತಿಥಿಗಳು ಒಮ್ಮತದ ನಿರ್ಧಾರ ಕೈಗೊಳ್ಳಬೇಕಿತ್ತು.

ರಾಕೇಶ್ ಗೆ ಪ್ರಶ್ನೆ ಮಾಡಿದ ಕಿರಿಕ್ ಕೀರ್ತಿ

ರಾಕೇಶ್ ಗೆ ಪ್ರಶ್ನೆ ಮಾಡಿದ ಕಿರಿಕ್ ಕೀರ್ತಿ

''ನಿನ್ನೆ ನೀವು ಅಕ್ಷತಾಗಾಗಿ ಆಟವನ್ನ ಬಿಟ್ಟುಕೊಡಲು ರೆಡಿ ಇದ್ರಿ. ಇವತ್ತು ಇರಬೇಕು ಅಂತ ಸಮರ್ಥಿಸಿಕೊಳ್ತೀರಾ. ಇದು ಹೇಗೆ ಸಾಧ್ಯ.?'' ಎಂದು ಎಂ.ಜೆ.ರಾಕೇಶ್ ಗೆ ಕಿರಿಕ್ ಕೀರ್ತಿ ಪ್ರಶ್ನೆ ಮಾಡಿದರು.

ರಾಕೇಶ್ ಹೇಳಿದ್ದೇನು.?

ರಾಕೇಶ್ ಹೇಳಿದ್ದೇನು.?

''ಬಿಟ್ಟುಕೊಡುವುದು ಸುಲಭವಾಗಿ ಇರಲಿಲ್ಲ. ಒಳ್ಳೆತನ ಮತ್ತು ಗುಡ್ನೆಸ್ ನಿಂದ ಈ ಜರ್ನಿಯನ್ನ ಕಂಪ್ಲೀಟ್ ಮಾಡಬೇಕು ಅಂತಿದ್ದೀನಿ. ನಿನ್ನೆ ನಾನು ತೋರಿಸಿದ್ದು ಒಳ್ಳೆತನ ಮತ್ತು ಗುಡ್ನೆಸ್. ತ್ಯಾಗ ಮಾಡಲು ನಾನು ಹೋಗಿದ್ದೆ'' ಅಂತ ರಾಕೇಶ್ ಹೇಳಿದರು.

ತೋರ್ಪಡಿಕೆಗಾಗಿ ಇಷ್ಟೆಲ್ಲಾ.?

ತೋರ್ಪಡಿಕೆಗಾಗಿ ಇಷ್ಟೆಲ್ಲಾ.?

''ತೋರ್ಪಡಿಕೆಗಾಗಿ ತ್ಯಾಗ ಮಾಡಲು ಮುಂದಾಗಿದ್ರಾ.?'' ಎಂದು ಪ್ರಥಮ್ ಪ್ರಶ್ನಿಸಿದರು. ಆಗ, ''ಹೊರಗೆ ಹೋಗುವ ಅಧಿಕಾರ ನನಗೆ ಕೊಟ್ಟಿದ್ದರೆ ನಾನು ಹೋಗುತ್ತಿದ್ದೆ'' ಎಂದರು ರಾಕೇಶ್.

ಇದು ಕಾಂಪಿಟೇಶನ್

ಇದು ಕಾಂಪಿಟೇಶನ್

''ಅಕ್ಷತಾನಾ ಆ ಕ್ಷಣದಲ್ಲಿ ಮನವೊಲಿಸಲು ಅಥವಾ ಗುಡ್ನೆಸ್ ಅಂತ ತೋರಿಸಿಕೊಳ್ಳುವ ಪ್ರಯತ್ನದಲ್ಲಿ ನೀವು ಜನರ ಅಭಿಪ್ರಾಯವನ್ನು ಗಾಳಿಗೆ ತೂರಿದ್ದೀರಾ'' ಅಂತ ಪ್ರಥಮ್ ಹೇಳಿದಾಗ, ''ಇಲ್ಲಿ ಅಕ್ಷತಾ ಅಥವಾ ಯಾರೇ ಇದ್ದಿದ್ದರೂ, ನಾನೇ ಹೊರಗೆ ಹೋಗುತ್ತಿದ್ದೆ'' ಅಂತ ಮತ್ತೆ ರಾಕೇಶ್ ಗುಡ್ನೆಸ್ ರಾಗ ಎಳೆಯುತ್ತಿದ್ದಂತೆಯೇ.. ''ನಿಮ್ಮ ದೃಷ್ಟಿಕೋನದಲ್ಲಿ ನೀವು ಹೇಳುತ್ತಿದ್ದೀರಾ. ಅದನ್ನ ಬೇರೆಯವರು ಮೆಚ್ಚಿಕೊಳ್ಳಬೇಕು ಎಂಬ ಯಾವ ನಿಯಮ ಕೂಡ ಇಲ್ಲ. ಇದು ಕಾಂಪಿಟೇಶನ್'' ಎಂದರು ಕಿರಿಕ್ ಕೀರ್ತಿ.

ವಿಶೇಷ ಅತಿಥಿಗಳು ಸೇಫ್ ಮಾಡಲಿಲ್ಲ.!

ವಿಶೇಷ ಅತಿಥಿಗಳು ಸೇಫ್ ಮಾಡಲಿಲ್ಲ.!

ವಿಶೇಷ ಅತಿಥಿಗಳು ರಾಕೇಶ್ ರನ್ನು ಸೇಫ್ ಮಾಡಲಿಲ್ಲ. ನೀವು ರಾಕೇಶ್ ಗೆ ಬೆಂಬಲ ಕೊಡ್ತೀರಾ.? ರಾಕೇಶ್ ಪರವಾಗಿ ವೋಟ್ ಮಾಡಿ, ಫಿನಾಲೆ ವಾರಕ್ಕೆ ಕಳುಹಿಸುತ್ತೀರಾ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

More from Filmibeat

English summary
Bigg Boss Kannada 6: Day 85: Special Guests have a question for Rakesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X