ಅಂದು ಹಾಗೆ ಹೇಳಿ, ಇಂದು ತೇಪೆ ಹಚ್ಚಿದ್ದು ಯಾಕೆ ಮಿಸ್ಟರ್ ರಾಕೇಶ್.?

''ನಾನು ಇನ್ನೂರು ಜನ ಹುಡುಗಿಯರನ್ನು ಡೇಟ್ ಮಾಡಿದ್ದೇನೆ'' ಎಂದು 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೊದಲ ವಾರವೇ ಎಂ.ಜೆ.ರಾಕೇಶ್ ಹೇಳಿಕೊಂಡಿದ್ದರು. ಸಾಲದಕ್ಕೆ ''200 ಸ್ಟ್ರೈಕ್ ರೇಟ್'' ದೊಡ್ಡ ಸಾಧನೆ ಎಂಬಂತೆ ಸುದೀಪ್ ಮುಂದೆ ಬಿಂಬಿಸಿದ್ದರು.

ಒಂದ್ಸಾರಿ ಅಲ್ಲ.. ಎರಡು ಬಾರಿ ಅಲ್ಲ.. ''ಪದೇ ಪದೇ 200 ಡೇಟಿಂಗ್'' ಮ್ಯಾಟರ್ ಬಗ್ಗೆ ರಾಕೇಶ್ ತುಟಿ ಬಿಚ್ಚುತ್ತಲೇ ಇದ್ದರು. ಈಗ ನೋಡಿದ್ರೆ, ''ನಾನು 200 ಡೇಟ್ ಮಾಡಿದ್ದೇನೆ. ಆದ್ರೆ, 200 ಹುಡುಗಿಯರನ್ನಲ್ಲ.!'' ಎಂದು ಎಂ.ಜೆ.ರಾಕೇಶ್ ಉಲ್ಟಾ ಹೊಡೆದಿದ್ದಾರೆ.

ಇಷ್ಟು ದಿನ ಪ್ಲೇ ಬಾಯ್ ಇಮೇಜ್ ಹೊಂದಿದ್ದ ರಾಕೇಶ್, 'ಬಿಗ್ ಬಾಸ್' ಕೊನೆಯ ಹಂತಕ್ಕೆ ಬರುತ್ತಿರುವ ಹಾಗೆ ಗುಡ್ ಬಾಯ್ ಇಮೇಜ್ ಪಡೆದುಕೊಳ್ಳಲು ಈ ರೀತಿ ತೇಪೆ ಹಚ್ಚಿದ್ರಾ.? ನಮಗಂತೂ ಗೊತ್ತಿಲ್ಲ. ಒಟ್ನಲ್ಲಿ, ಅಂದು ರಾಕೇಶ್ ಹೇಳಿದ್ದೇನು.? ಇಂದು ಹೇಳಿರುವುದೇನು.? ಎಂಬುದರ ವಿವರ ಕೊಡ್ತೀವಿ, ಓದಿರಿ...

ಗುಟ್ಟು ರಟ್ಟಾಗಿದ್ದು ಯಾವಾಗ.?

ಗುಟ್ಟು ರಟ್ಟಾಗಿದ್ದು ಯಾವಾಗ.?

ಅದು 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಐದನೇ ದಿನ. ಪ್ರಸಾರವಾದ ಆರನೇ ಸಂಚಿಕೆಯಲ್ಲಿ 'ಬಿಗ್ ಬಾಸ್' ಒಂದು ಚಟುವಟಿಕೆ ನೀಡಿದ್ದರು. ಅದೇ 'ನಾ ನಿನ್ನ ಬಲ್ಲೆನಾ'. ಇದರ ಅನುಸಾರ, ಸ್ಪರ್ಧಿಗಳ ಬದುಕಿನ ಗುಟ್ಟುಗಳನ್ನು ಹೊಂದಿರುವ ಚೀಟಿಗಳನ್ನು 'ಬಿಗ್ ಬಾಸ್' ನೀಡಿದ್ದರು. ಚೀಟಿಯಲ್ಲಿ ಬರೆದಿರುವ ಗುಟ್ಟನ್ನು ಓದಿ, ಆ ಗುಟ್ಟು ಯಾರಿಗೆ ಸಂಬಂಧಿಸಿದ್ದು ಎಂದು ಸ್ಪರ್ಧಿಗಳು ಊಹಿಸಬೇಕಿತ್ತು.

ರಾಕೇಶ್ ಜೀವನ ಗುಟ್ಟು

ರಾಕೇಶ್ ಜೀವನ ಗುಟ್ಟು

''ಇಲ್ಲಿಯವರೆಗೂ 200 ಕ್ಕೂ ಹೆಚ್ಚು ಜನ ಸಂಗಾತಿಗಳನ್ನು ಹೊಂದಿದ್ದ ಸದಸ್ಯರು ಯಾರು.?'' ಎಂಬ ಗುಟ್ಟನ್ನು ಹೊಂದಿದ್ದ ಚೀಟಿ ಆನಂದ್ ಕೈಗೆ ಸಿಕ್ತು. ''ರಾಕೇಶ್'' ಎಂದು ಆನಂದ್ ಮತ್ತು ತಂಡ ಊಹಿಸಿದರು. ಅದಕ್ಕೆ 'ಹೌದು' ಎಂದು ರಾಕೇಶ್ ಒಪ್ಪಿಕೊಂಡಿದ್ದರು.

ಅಂದು ರಾಕೇಶ್ ಹೇಳಿದ್ದೇನು.?

ಅಂದು ರಾಕೇಶ್ ಹೇಳಿದ್ದೇನು.?

''ನಿಮಗೆ ಇದನ್ನ ಕೇಳಿ ನಾನು ಪ್ಲೇಯರ್, ಕ್ಯಾರೆಕ್ಟರ್ ಲೆಸ್ ಹುಡುಗ ಅಂತ ಅನಿಸಬಹುದು. ಆದ್ರೆ, ಇದಕ್ಕೂ ಒಂದು ಕಾರಣ ಇದೆ. ನಾನು ಎಂಟು ವರ್ಷ ಒಂದೇ ಒಂದು ರಿಲೇಶನ್ ಶಿಪ್ ನಲ್ಲಿದ್ದೆ. ಆದರೆ ಅದು ಯಾಕೋ ವರ್ಕೌಟ್ ಆಗಲಿಲ್ಲ. ನಾನು ಓಪನ್ ಅಪ್ ಆದಾಗ, ಹೊರಗೆ ಇಷ್ಟೊಂದು ಜನ ಹುಡುಗಿಯರು ನನ್ನ ಜೊತೆ ಇರಲು ಇಷ್ಟ ಪಟ್ಟಿದ್ದಾರೆ ಅಂತ ಅನಿಸಿತ್ತು. ನಾಲ್ಕು ವರ್ಷದ ಗ್ಯಾಪ್ ನಲ್ಲಿ ಹಲವಾರು ಹುಡುಗಿಯರು ಸಿಕ್ಕಿದ್ದರು. ಯಾರಿಗೂ ನಾನು ಮೋಸ ಮಾಡಿಲ್ಲ. 200 ಜನರಿಗೂ ಗೊತ್ತು ನಾನು ಹೆಮ್ಮೆಯಿಂದ ಇದರ ಬಗ್ಗೆ ಮಾತನಾಡಬಹುದು ಯಾಕಂದ್ರೆ, ನಾನು ಒಳ್ಳೆ ರೀತಿಯಲ್ಲಿ ನಡೆದುಕೊಂಡಿರುವೆ. ಸದ್ಯಕ್ಕೆ ನನಗೆ ಗರ್ಲ್ ಫ್ರೆಂಡ್ ಇದ್ದಾರೆ'' ಎಂದು ಇದೇ ಸಂದರ್ಭದಲ್ಲಿ ರಾಕೇಶ್ ವಿವರಣೆ ನೀಡಿದ್ದರು.

ಈಗ ರಾಕೇಶ್ ಹೇಳುತ್ತಿರುವುದೇನು.?

ಈಗ ರಾಕೇಶ್ ಹೇಳುತ್ತಿರುವುದೇನು.?

87ನೇ ದಿನ 88ನೇ ಸಂಚಿಕೆಯಲ್ಲಿ ''ಇನ್ನೂರು ಜನ ಹುಡುಗಿಯರನ್ನು ಡೇಟ್ ಮಾಡಿಲ್ಲ'' ಎನ್ನುವ ಮೂಲಕ ರಾಕೇಶ್ ಉಲ್ಟಾ ಹೊಡೆದಿದ್ದಾರೆ.

ಚಟುವಟಿಕೆಯಲ್ಲಿ ರಾಕೇಶ್ ಹೇಳಿದ್ದೇನು.?

ಚಟುವಟಿಕೆಯಲ್ಲಿ ರಾಕೇಶ್ ಹೇಳಿದ್ದೇನು.?

''ನೀವು ಇಲ್ಲಿಯವರೆಗೂ ಎಷ್ಟು ಜನರಿಗೆ ಮುತ್ತು ನೀಡಿದ್ದೀರಾ.?'' ಎಂದು ವಿಶೇಷ ಅತಿಥಿಗಳು ರಾಕೇಶ್ ರನ್ನ ಪ್ರಶ್ನೆ ಮಾಡಿದರು. ''ಇಬ್ಬರು ಗರ್ಲ್ ಫ್ರೆಂಡ್ಸ್ ಇದ್ದರು. ಅವರಿಗೆ ಲೆಕ್ಕವಿಲ್ಲದಷ್ಟು ಬಾರಿ ಮುತ್ತು ಕೊಟ್ಟಿರುವೆ'' ಅಂತ ರಾಕೇಶ್ ಹೇಳಿದರು. ಅಷ್ಟಕ್ಕೆ ಸುಮ್ಮನಾಗದೆ, ''200 ಡೇಟ್ಸ್ ಇತ್ತು. 200 ಹುಡುಗಿಯರಲ್ಲಾ.!'' ಎಂದು ಹೇಳಿ ತಮ್ಮ ಹಳೆಯ ಹೇಳಿಕೆಗೆ ರಾಕೇಶ್ ತೇಪೆ ಹಚ್ಚಿದ್ದಾರೆ.

ಸುಳ್ಳು ಹೇಳಿದ್ರಾ.?

ಸುಳ್ಳು ಹೇಳಿದ್ರಾ.?

ರಾಕೇಶ್ ಕೊಟ್ಟಿರುವ ಈ ಎರಡು ಹೇಳಿಕೆಗಳಲ್ಲಿ ಯಾವುದು ನಿಜ.? ಯಾವುದು ಸುಳ್ಳು.? 'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ದಿನ ಇರುವ ಸಲುವಾಗಿ ರಾಕೇಶ್ ಕಥೆ ಕಟ್ಟುತ್ತಿದ್ದಾರಾ.? ಅಥವಾ ತಮ್ಮ ಪ್ಲೇ ಬಾಯ್ ಇಮೇಜ್ ನಿಂದ ಹೊರಗೆ ಬರಲು ಹೀಗೆ ಮಾಡುತ್ತಿದ್ದಾರಾ.? ಗೊತ್ತಿಲ್ಲ. ಒಟ್ನಲ್ಲಿ ರಾಕೇಶ್ ಗೆ ವೋಟ್ ಮಾಡುವುದು, ಬಿಡುವುದು ನಿಮ್ಮ ಕೈಯಲ್ಲೇ ಇದೆ.

More from Filmibeat

English summary
Bigg Boss Kannada 6: Day 87: Did Rakesh lie about his 200 girl friends.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X