ಶಾಕಿಂಗ್ ಎಲಿಮಿನೇಷನ್: 'ಬಿಗ್ ಬಾಸ್' ಮನೆಯಿಂದ ಧನರಾಜ್ ಔಟ್.?
'ಬಿಗ್ ಬಾಸ್' ವೀಕ್ಷಕರು ಶಾಕ್ ಆಗುವಂತಹ ಸುದ್ದಿಯೊಂದು ಹೊರಬಿದ್ದಿದೆ. 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಿಂದ ಡಬ್ಬಿಂಗ್ ಆರ್ಟಿಸ್ಟ್, ಕಾಮನ್ ಮ್ಯಾನ್ ಧನರಾಜ್ ಎಲಿಮಿನೇಟ್ ಆಗಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
ಹಾಗ್ನೋಡಿದ್ರೆ, ಜೆಂಟಲ್ ಮ್ಯಾನ್ ಧನರಾಜ್ ಹೆಚ್ಚು ವೀಕ್ಷಕರ ಮನಗೆದ್ದಿದ್ದರು. ಡರ್ಟಿ ಗೇಮ್ ಆಡದ ಧನರಾಜ್ ಗೆ ಅಭಿಮಾನಿಗಳ ಸಂಖ್ಯೆ ಕೂಡ ದೊಡ್ಡದಿತ್ತು. ಹೀಗಿದ್ದರೂ, ಟಾಪ್ 5 ಹಂತ ತಲುಪುವ ಮುನ್ನವೇ ಧನರಾಜ್ ಎಡವಿ ಬಿದ್ದಿದ್ದಾರೆ ಎನ್ನಲಾಗಿದೆ.
ಶನಿವಾರ 'ಬಿಗ್ ಬಾಸ್' ಮನೆಯಿಂದ ರಾಕೇಶ್ ಔಟ್ ಆದ್ಮೇಲೆ, ಉಳಿದ ಆರೂ ಮಂದಿ ನೇರವಾಗಿ ನಾಮಿನೇಟ್ ಆಗಿದ್ದರು. ನವೀನ್ ಸಜ್ಜು, ರಾಪಿಡ್ ರಶ್ಮಿ, ಕವಿತಾ ಗೌಡ, ಆಂಡಿ, ಶಶಿ ಕುಮಾರ್ ಮತ್ತು ಧನರಾಜ್ ಗೆ ವೀಕ್ಷಕರ ಬೆಂಬಲ ಅವಶ್ಯಕವಾಗಿತ್ತು.

ಭಾನುವಾರ ರಾತ್ರಿ 9 ಗಂಟೆವರೆಗೂ ವೋಟಿಂಗ್ ಲೈನ್ಸ್ ತೆರೆಯಲಾಗಿದ್ದು, ಧನರಾಜ್ ಗೆ ಕಮ್ಮಿ ವೋಟ್ಸ್ ಲಭ್ಯವಾಗಿತ್ತಂತೆ. ಹೀಗಾಗಿ, ಅವರನ್ನು ಎಲಿಮಿನೇಟ್ ಮಾಡಲಾಗಿದ್ಯಂತೆ.
ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದರೆ, ಟಾಪ್ 5 ಹಂತಕ್ಕೆ ರಾಪಿಡ್ ರಶ್ಮಿ, ನವೀನ್ ಸಜ್ಜು, ಆಂಡಿ, ಕವಿತಾ ಮತ್ತು ಶಶಿ ತಲುಪಿದ್ದಾರೆ ಅಂತರ್ಥ. ಈ ಐವರಲ್ಲಿ ಒಬ್ಬರು 'ಬಿಗ್ ಬಾಸ್ ಕನ್ನಡ-6' ವಿಜೇತರಾಗುವುದು ಖಚಿತ.


Click it and Unblock the Notifications











