For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಮನೆಯಲ್ಲಿ ಮೂರು ವಾರ ಇರಲು ಮಾತ್ರ ಬಂದಿದ್ರಾ ಸ್ನೇಹಾ ಆಚಾರ್ಯ.?

  |

  ಒಂದೆರಡು ಜಗಳಗಳಲ್ಲಿ ದನಿ ಏರಿಸಿದ್ದು ಬಿಟ್ಟರೆ, ಸ್ನೇಹಾ ಆಚಾರ್ಯ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲೇ ಇಲ್ಲ. 'ಬಿಗ್ ಬಾಸ್' ಮನೆಯಲ್ಲಿ ಇದ್ದರೂ, ಇಲ್ಲದಂತೆ ಇದ್ದಾಕೆ ಸ್ನೇಹಾ ಆಚಾರ್ಯ.

  ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆಯೊಳಗೆ ಕೇವಲ ಮೂರು ವಾರ ಇರಲು ಮಾತ್ರ ಸ್ನೇಹಾ ಆಚಾರ್ಯ ಬಂದಿದ್ರಾ ಎಂಬ ಅನುಮಾನ ಕಾಡುವುದು ಸಹಜ. ಯಾಕಂದ್ರೆ, 'ಬಿಗ್ ಬಾಸ್' ಮನೆಯೊಳಗೆ ಹೋಗುವ ಮುನ್ನವೇ ನವೆಂಬರ್ 24-25ಕ್ಕೆ ಮದುವೆ ಫಿಕ್ಸ್ ಆಗಿದೆ ಅಂತ ಸ್ನೇಹಾ ಆಚಾರ್ಯ ಹೇಳಿದ್ದರು.

  ಮದುವೆಯನ್ನ ಮುಂದೆ ಇಟ್ಟುಕೊಂಡು 'ಬಿಗ್ ಬಾಸ್' ಮನೆಗೆ ಹೋದ ಸ್ನೇಹಾ ಆಚಾರ್ಯ, ಮದುವೆಗೆ ಎರಡು ವಾರ ಬಾಕಿ ಇರುವಾಗ ಹೊರಗೆ ಬಂದಿದ್ದಾರೆ. ಮುಂದೆ ಓದಿರಿ...

  ಸೈಲೆಂಟ್ ಆಗಿರಲು ಇದೇ ಕಾರಣ.?

  ಸೈಲೆಂಟ್ ಆಗಿರಲು ಇದೇ ಕಾರಣ.?

  ಬೇಗ ಹೊರಗೆ ಬರಬೇಕು ಎಂಬ ಕಾರಣಕ್ಕೆ, ಸ್ನೇಹಾ ಆಚಾರ್ಯ ಆಟದ ಬಗ್ಗೆ ಹೆಚ್ಚು ಗಮನ ಕೊಡದೆ ಸೈಲೆಂಟ್ ಆಗಿದ್ರಾ.? ಎಂಬ ಪ್ರಶ್ನೆ ಇದೀಗ 'ಬಿಗ್ ಬಾಸ್' ವೀಕ್ಷಕರನ್ನು ಕಾಡುತ್ತಿದೆ.

  'ಬಿಗ್ ಬಾಸ್' ಮನೆಯೊಳಗೆ ಸ್ನೇಹ ಆಚಾರ್ಯ ಹೆಚ್ಚು ದಿನ ಇರೋದು ಡೌಟು.?'ಬಿಗ್ ಬಾಸ್' ಮನೆಯೊಳಗೆ ಸ್ನೇಹ ಆಚಾರ್ಯ ಹೆಚ್ಚು ದಿನ ಇರೋದು ಡೌಟು.?

  ಸ್ನೇಹಾ ಮಂಕಾಗಿದ್ದು ಯಾಕೆ.?

  ಸ್ನೇಹಾ ಮಂಕಾಗಿದ್ದು ಯಾಕೆ.?

  ರಾಪಿಡ್ ರಶ್ಮಿ ಜೊತೆಗೆ ಹೆಚ್ಚು ಆಪ್ತವಾಗಿದ್ದ ಸ್ನೇಹಾ ಆಚಾರ್ಯ ಒಂಡೆರಡು ಬಾರಿ ಟಾರ್ಗೆಟ್ ಆಗಿದ್ದರು. ಕಿಚನ್ ನಲ್ಲಿ ಬೆಂಕಿ ಹಚ್ಚಿದ್ದರು. ಆಂಡ್ರ್ಯೂಗೆ ಬಿಸಿ ಮುಟ್ಟಿಸಿದ್ದರು. ರಶ್ಮಿ ಕುಕ್ಕರ್ ಇದ್ದ ಹಾಗೆ... ಸ್ನೇಹಾ ವಿಶಲ್ ಇದ್ದ ಹಾಗೆ ಎಂಬ ಕಾಮೆಂಟ್ಸ್ ಶುರುವಾದ್ಮೇಲೆ ಸ್ನೇಹಾ ಯಾಕೋ ಮಂಕಾಗಿಬಿಟ್ಟರು.

  'ಬಿಗ್ ಬಾಸ್ ಕನ್ನಡ-6': ಈ ವಾರ ಗಂಟು-ಮೂಟೆ ಕಟ್ಟಿಕೊಂಡು ಹೊರಗೆ ಹೋಗೋರು ಯಾರು.?'ಬಿಗ್ ಬಾಸ್ ಕನ್ನಡ-6': ಈ ವಾರ ಗಂಟು-ಮೂಟೆ ಕಟ್ಟಿಕೊಂಡು ಹೊರಗೆ ಹೋಗೋರು ಯಾರು.?

  ಸ್ನೇಹಾ ಮದುವೆ ಯಾವಾಗ.?

  ಸ್ನೇಹಾ ಮದುವೆ ಯಾವಾಗ.?

  ನ್ಯೂಯಾರ್ಕ್ ಮೂಲದ ರಾಯನ್ ಜೊತೆಗೆ ಈಗಾಗಲೇ ಸ್ನೇಹಾ ಆಚಾರ್ಯ ಎಂಗೇಜ್ಮೆಂಟ್ ಮುಗಿದಿದೆ. ನವೆಂಬರ್ 24-25 ರಂದು ಬೆಂಗಳೂರಿನಲ್ಲಿ ಸ್ನೇಹಾ-ರಾಯನ್ ವಿವಾಹ ಮಹೋತ್ಸವ ನಡೆಯಲಿದೆ. ಸದ್ಯ 'ಬಿಗ್ ಬಾಸ್' ಮನೆಯಿಂದ ಆಚೆ ಬಂದಿರುವ ಸ್ನೇಹಾ ಮದುವೆ ತಯಾರಿಯಲ್ಲಿ ಬಿಜಿಯಾಗಿದ್ದಾರೆ.

  'ಬಿಗ್ ಬಾಸ್' ಮನೆಯಿಂದ ಹೊರ ಬಂದ ಸ್ನೇಹಾ ಆಚಾರ್ಯ'ಬಿಗ್ ಬಾಸ್' ಮನೆಯಿಂದ ಹೊರ ಬಂದ ಸ್ನೇಹಾ ಆಚಾರ್ಯ

  ವೈಲ್ಡ್ ಕಾರ್ಡ್ ಎಂಟ್ರಿ ಕೊಡಬಹುದಾ.?

  ವೈಲ್ಡ್ ಕಾರ್ಡ್ ಎಂಟ್ರಿ ಕೊಡಬಹುದಾ.?

  ಮದುವೆ, ಹನಿಮೂನ್ ಮುಗಿಸಿಕೊಂಡು 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಸ್ನೇಹಾ ವೈಲ್ಡ್ ಕಾರ್ಡ್ ಎಂಟ್ರಿ ಕೊಡಬಹುದಾ.? ಯಾರಿಗೊತ್ತು, 'ಬಿಗ್ ಬಾಸ್' ಯಾವಾಗ ಯಾವ ತರಹ ಟ್ವಿಸ್ಟ್ ಕೊಡ್ತಾರೆ ಅಂತ.?!

  English summary
  Bigg Boss Kannada 6: Did Sneha Acharya committed to stay only 3 weeks in BB House.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X