'ಹುಚ್ಚು ನಾಯಿ' ಎಂದ ಆಂಡ್ರ್ಯೂ: 'ಚಪ್ಪಲಿ ಕೈಗೆ ಬರುತ್ತೆ' ಅಂತ ಎಚ್ಚರಿಕೆ ಕೊಟ್ಟ ಅಕ್ಷತಾ.!

ಬಾಯಿಗೆ ಬಂದ ಹಾಗೆ ಮಾತನಾಡುವುದರಲ್ಲಿ... ಇನ್ನೊಬ್ಬರ ಟೆಂಪರ್ ರೈಸ್ ಮಾಡುವುದರಲ್ಲಿ... ಕಿರಿಕಿರಿ ತರುವುದರಲ್ಲಿ ಆಂಡ್ರ್ಯೂ ಎತ್ತಿದ ಕೈ.

ಆಂಡ್ರ್ಯೂಗೆ ಕಾಮಿಡಿ ಸೆನ್ಸ್ ಚೆನ್ನಾಗಿದೆ ನಿಜ. ಆದ್ರೆ, ಅದನ್ನೇ ದುರ್ಬಳಕೆ ಮಾಡಿಕೊಂಡು ಬೇಕಾಬಿಟ್ಟಿ ಮಾತನಾಡುತ್ತಾ ಇತರೆ ಸ್ಪರ್ಧಿಗಳ ಜೊತೆ ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುತ್ತಾರೆ ಈ ಆಂಡ್ರ್ಯೂ. ನಿನ್ನೆ ಅಕ್ಷತಾ ವಿಷಯದಲ್ಲಿ ಆಗಿದ್ದೂ ಇದೇ.

ಅಡುಗೆ ಮನೆಯ ಡಿಪಾರ್ಟ್ಮೆಂಟ್ ನಲ್ಲಿ ಆಂಡ್ರ್ಯೂ ಇದ್ಮೇಲೆ, 'ಕಿಚನ್ ಲೀಡರ್' ಹೇಳಿದ ಕೆಲಸವನ್ನ ಆಂಡ್ರ್ಯೂ ಮಾಡಲೇಬೇಕು. ಪಾತ್ರೆ ತೊಳೆಯುವ ಜವಾಬ್ದಾರಿ ಆಂಡ್ರ್ಯೂ ಮೇಲಿತ್ತು. ಪಾತ್ರೆ ತೊಳೆಯುವ ಕೆಲಸ ಇನ್ನೂ ಪೆಂಡಿಂಗ್ ನಲ್ಲಿದ್ದ ಕಾರಣ ಆಂಡ್ರ್ಯೂ ಮತ್ತು ಅಕ್ಷತಾ ನಡುವೆ ಮಾತಿನ ಚಕಮಕಿ ನಡೆಯಿತು. ಮುಂದೆ ಓದಿರಿ...

ಕೆಣಕುವ ಆಂಡ್ರ್ಯೂ

ಕೆಣಕುವ ಆಂಡ್ರ್ಯೂ

''ಪಾತ್ರೆ ಇನ್ನೂ ಬಾಕಿ ಇದೆ... ತೊಳೆಯಬೇಕು'' ಅಂತ ಅಕ್ಷತಾ ಹೇಳಲು ಬಂದರೆ, ಅದಕ್ಕೆ ತಾಳ್ಮೆಯಿಂದ ಪ್ರತಿಕ್ರಿಯೆ ಕೊಡದ ಆಂಡ್ರ್ಯೂ ''ಹುಚ್ಚು ನಾಯಿ.. ನನಗೇನೂ ಹೇಳೇ ಇಲ್ಲ. ಅವಳೇ ಮಾತನಾಡುತ್ತಾಳೆ'' ಅಂತ ನಾಲಿಗೆ ಹೊರಳಿದ ಹಾಗೆ ಕಾಮೆಂಟ್ ಮಾಡಿದರು.

ತಿರುಗೇಟು ಕೊಟ್ಟ ಅಕ್ಷತಾ

ತಿರುಗೇಟು ಕೊಟ್ಟ ಅಕ್ಷತಾ

''ಹುಚ್ಚು ನಾಯಿ ಅಂತೆಲ್ಲಾ ಹೇಳಬೇಡ. ಮಾತನಾಡಲು ನನಗೂ ಬರುತ್ತೆ. ಚಪ್ಪಲಿ ಕೈಗೆ ಬರುತ್ತೆ. ಕೈಗೆ ಬಂದ್ಮೇಲೆ ಮುಂದೇನಾಗುತ್ತೆ ಅಂತ ನಿನಗೂ ಗೊತ್ತು'' ಎನ್ನುತ್ತಾ ಆಂಡ್ರ್ಯೂಗೆ ತಿರುಗೇಟು ಕೊಟ್ಟರು ಅಕ್ಷತಾ.

ಪಿತ್ತ ನೆತ್ತಿಗೇರಿಸುವುದರಲ್ಲಿ ನಂಬರ್ 1

ಪಿತ್ತ ನೆತ್ತಿಗೇರಿಸುವುದರಲ್ಲಿ ನಂಬರ್ 1

''ಚಪ್ಪಲಿ ಕೈಗೆ ಬರುತ್ತೆ'' ಅಂತ ಅಕ್ಷತಾ ಹೇಳಿದ್ದಕ್ಕೆ, ''ಧಮ್ ಇದ್ದರೆ ಹೊಡಿ.. ಹೊಡಿ'' ಅಂತ ಪಿತ್ತ ನೆತ್ತಿಗೇರಿಸುವ ಕೆಲಸ ಮಾಡಿದರೆ ಹೊರತು ಪಾತ್ರೆ ತೊಳೆಯಲು ಮಾತ್ರ ಆಂಡ್ರ್ಯೂ ಮುಂದಾಗಲಿಲ್ಲ.

ಬುದ್ಧಿ ಬಂದಿಲ್ಲ.!

ಬುದ್ಧಿ ಬಂದಿಲ್ಲ.!

''ಅವರು ಹಾಗೆ ಹೇಳಿದಕ್ಕೆ ನಾನು ಕೌಂಟರ್ ಕೊಟ್ಟೆ'' ಅಂತ ಪ್ರತಿ ಬಾರಿ ಸಮಜಾಯಿಷಿ ಕೊಡುವ ಆಂಡ್ರ್ಯೂಗೆ ಸುದೀಪ್ ಎಚ್ಚರಿಕೆ ಕೂಡ ಕೊಟ್ಟಿದ್ದರು. ''ಮಾತಿನ ಮೇಲೆ ನಿಗಾ ಇರಲಿ'' ಅಂತ ಎಲ್ಲರಿಗೂ ಕಿವಿಮಾತು ಹೇಳಿದ್ದರು. ಇಷ್ಟಾದ್ರೂ, ಆಂಡ್ರ್ಯೂಗೆ ಬುದ್ಧಿ ಬಂದಿಲ್ಲ. ಜಗಳ ಆಡುತ್ತಿದ್ದರೆ, 'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ದಿನ ಇರಬಹುದು ಅನ್ನೋದು ಅವರ ಸ್ಟ್ರಾಟೆಜಿ ಆಗಿರಬಹುದು.!

More from Filmibeat

English summary
Bigg Boss Kannada 6: Day 23: Fight between Andrew and Akshata over Washing vessels.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X