For Quick Alerts
  ALLOW NOTIFICATIONS  
  For Daily Alerts

  ಅಂದು ಹಾಲಿಗಾಗಿ ಕಿತ್ತಾಟ: ಇಂದು ಮೊಟ್ಟೆಗಾಗಿ ರಂಪಾಟ.!

  |
  Bigg Boss Kannada Season 6 : ಮೊಟ್ಟೆಗಾಗಿ ನಡೀತು ರಶ್ಮಿ ಹಾಗು ಜಯಶ್ರೀ ನಡುವೆ ಯುದ್ಧ | FILMIBEAT KANNADA

  'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಹಾಲು ಕಳ್ಳರನ್ನು ನೋಡಿದ್ರಿ. ಒಂದು ಲೋಟ ಹಾಲು ಕುಡಿದಿದ್ದಕ್ಕೆ ಆದ ಕಿತ್ತಾಟ ನಿಮಗೆ ನೆನಪಿರಬಹುದು. ಇದೀಗ ಹೊಟ್ಟೆಗಾಗಿ ರಂಪಾಟ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲೂ ಮುಂದುವರೆದಿದೆ.

  ಅದಾಗಲೇ ಚಾಕಲೇಟ್ ಕದ್ದು 'ಬಿಗ್ ಬಾಸ್' ನಿಂದ ಒಮ್ಮೆ ಶಿಕ್ಷೆ ಅನುಭವಿಸಿರುವ ಆಂಡ್ರ್ಯೂಗೆ ಮೊಟ್ಟೆ ಕೊಟ್ಟು ರಾಪಿಡ್ ರಶ್ಮಿ ವಿವಾದದ ಕೇಂದ್ರ ಬಿಂದು ಆಗಿದ್ದಾರೆ.

  ''ದೀಪಾವಳಿ ಹಬ್ಬದ ದಿನ ಮಾಂಸಾಹಾರ ಮಾಡುವುದು ಬೇಡ'' ಎಂದು ಅಡುಗೆ ಮನೆ ಡಿಪಾರ್ಟ್ಮೆಂಟ್ ನಲ್ಲಿ ಇದ್ದವರು ನಿರ್ಣಯ ತೆಗೆದುಕೊಂಡಿದ್ದರು. ಇದೇ ಕಾರಣಕ್ಕೆ, ಬೆಳಗ್ಗೆ ರವಿ ಹಾಗೂ ಆಡಮ್ ಗೆ ಮೊಟ್ಟೆ ಸಿಕ್ಕಿರಲಿಲ್ಲ.

  ಆದ್ರೆ, ಅಡುಗೆ ಮನೆ ಜವಾಬ್ದಾರಿ ವಹಿಸಿಕೊಂಡಿದ್ದವರಿಗೆ ತಿಳಿಸದೆ, ಆಂಡ್ರ್ಯೂ ಜೊತೆ ಒಳ್ಳೆಯವಳಾಗಲು ರಾಪಿಡ್ ರಶ್ಮಿ ಮೊಟ್ಟೆ ಕೊಟ್ಟಿರುವುದು ಜಯಶ್ರೀ ಹಾಗೂ ಕವಿತಾಗೆ ಸಿಟ್ಟು ತರಿಸಿದೆ. ಇದೇ ಕಾರಣಕ್ಕೆ ರಶ್ಮಿ ಹಾಗೂ ಜಯಶ್ರೀ ನಡುವೆ ವಾಕ್ಸಮರ ನಡೆದಿದೆ. ಎಷ್ಟರಮಟ್ಟಿಗೆ ಅಂದ್ರೆ, ''ಚಪ್ಪಲಿಯಲ್ಲಿ ಹೊಡೆಯುತ್ತಾರೆ'' ಎನ್ನುವ ಮಟ್ಟಕ್ಕೆ.! ಮುಂದೆ ಓದಿರಿ...

  ಜಯಶ್ರೀ ಆರೋಪ ಏನು.?

  ಜಯಶ್ರೀ ಆರೋಪ ಏನು.?

  ''ದೀಪಾವಳಿ ಹಬ್ಬ ಎಂಬ ಕಾರಣಕ್ಕೆ ಮೊಟ್ಟೆ ಬಳಕೆ ಮಾಡಿರಲಿಲ್ಲ. ರವಿ ಮತ್ತು ಆಡಮ್ ಕೇಳಿದಾಗಲೂ, ಮೊಟ್ಟೆ ಕೊಟ್ಟಿರಲಿಲ್ಲ. ಆದ್ರೆ, ರಶ್ಮಿ ಮಾತ್ರ ಆಂಡ್ರ್ಯೂ ಜೊತೆ ಒಳ್ಳೆಯವಳಾಗಲು ಮೊಟ್ಟೆ ಕೊಟ್ಟಿದ್ದಾರೆ. ಎಲ್ಲರಿಗೂ ಊಟ ಸಮಾನವಾಗಿ ಸಿಗಬೇಕು ಎನ್ನುವುದು ನಮ್ಮ ಆಶಯ. ಆದ್ರೆ, ಯಾರಿಗೂ ಹೇಳದೆ ರಶ್ಮಿ ಹೀಗೆ ಕೊಟ್ಟರೆ, ನಮಗೆ ಕೌಂಟ್ ಸಿಗಲ್ಲ'' ಎನ್ನುವುದು ಜಯಶ್ರೀ ವಾದ.

  ಉಲ್ಟಾ ಪಲ್ಟಾ ಮಾತನಾಡಿದ ಆಂಡ್ರ್ಯೂ: ಪಿತ್ತ ನೆತ್ತಿಗೇರಿಸಿಕೊಂಡ ಧನರಾಜ್.!ಉಲ್ಟಾ ಪಲ್ಟಾ ಮಾತನಾಡಿದ ಆಂಡ್ರ್ಯೂ: ಪಿತ್ತ ನೆತ್ತಿಗೇರಿಸಿಕೊಂಡ ಧನರಾಜ್.!

  ಕವಿತಾ ವಾದ ಏನು.?

  ಕವಿತಾ ವಾದ ಏನು.?

  ''ಊಟದಲ್ಲಿ ಒಗ್ಗಟ್ಟು ಇರಬೇಕು. ಎಲ್ಲರಿಗೂ ಒಂದಾಗಿ ಅಡುಗೆ ಮಾಡಬೇಕು. ಸೆಪರೇಟ್ ಆಗಿ ಮಾಡಿ ಕೊಡುವುದಲ್ಲ. ಪ್ರತ್ಯೇಕವಾಗಿ ಮಾಡಿ ಕೊಟ್ಟರೆ ಎಲ್ಲರೂ ಕೇಳ್ತಾರೆ. ಹಾಗಂತ ಎಲ್ಲರಿಗೂ ಬೇರೆ ಬೇರೆ ಅಡುಗೆ ಮಾಡಿ ಕೊಡಲು ಆಗುತ್ತಾ.?'' ಅಂತ ಪ್ರಶ್ನಿಸುತ್ತಾರೆ ಕವಿತಾ ಗೌಡ.

  'ಬಿಗ್ ಬಾಸ್' ಮನೆಯ ವಿಷ ಸರ್ಪ, ಕುತಂತ್ರಿ, ಗೋಮುಖ ವ್ಯಾಘ್ರ ಯಾರು ಗೊತ್ತೇ.?'ಬಿಗ್ ಬಾಸ್' ಮನೆಯ ವಿಷ ಸರ್ಪ, ಕುತಂತ್ರಿ, ಗೋಮುಖ ವ್ಯಾಘ್ರ ಯಾರು ಗೊತ್ತೇ.?

  ರಶ್ಮಿ ಬಳಿ ಯಾರೂ ಕೇಳ್ಲಿಲ್ವಂತೆ.!

  ರಶ್ಮಿ ಬಳಿ ಯಾರೂ ಕೇಳ್ಲಿಲ್ವಂತೆ.!

  ಮೊಟ್ಟೆ ಬಗ್ಗೆ ಸ್ಪಷ್ಟನೆ ಕೊಡದ ರಶ್ಮಿ, ''ನನ್ನ ಕೇಳಿ ಎಷ್ಟು ಜನ ಇವತ್ತು ಬೆಳಗ್ಗೆ ಅಡುಗೆ ಡಿಸೈಡ್ ಮಾಡಿದ್ದೀರಾ.?'' ಅಂತ ಪ್ರಶ್ನಿಸಿದರು. ಇದರಿಂದ ರಶ್ಮಿ ಹಾಗೂ ಜಯಶ್ರೀ ನಡುವೆ ಮಾತಿಗೆ ಮಾತು ಬೆಳೆಯಿತು. ಕೊನೆಗೆ ''ನಾಳೆಯಿಂದ ಯಾರೇ ಬಂದು ಮೊಟ್ಟೆ ಕೇಳಿದರೂ ಕೊಡುವೆ. ಏನು ಮಾಡ್ಕೊತೀರೋ, ಮಾಡಿಕೊಳ್ಳಿ'' ಅಂತ ರಶ್ಮಿ ಹೇಳಿದರು.

  ಏನ್ ಗೊತ್ತಾ? ರಾಪಿಡ್ ರಶ್ಮಿಗೆ ಮದುವೆಯಾಗಿದೆಯಂತೆ! ಗುಟ್ಟು ರಟ್ಟಾಯ್ತಾ?ಏನ್ ಗೊತ್ತಾ? ರಾಪಿಡ್ ರಶ್ಮಿಗೆ ಮದುವೆಯಾಗಿದೆಯಂತೆ! ಗುಟ್ಟು ರಟ್ಟಾಯ್ತಾ?

  ಬಂದಿರೋದೇ ಮೊಟ್ಟೆ ಲೆಕ್ಕ ಇಡೋಕೆ.!

  ಬಂದಿರೋದೇ ಮೊಟ್ಟೆ ಲೆಕ್ಕ ಇಡೋಕೆ.!

  ''ಕೆಲವರು ಈ ಮನೆಗೆ ಬಂದಿರುವುದೇ ಮೊಟ್ಟೆ ಕೌಂಟ್ ಮಾಡೋಕೆ. ಆಚೆ ಬರಲಿ, ಜನರೇ ಮೊಟ್ಟೆ ಹೊಡೆಯುತ್ತಾರೆ'' ಅಂತ ರಶ್ಮಿ ಹೇಳುತ್ತಿದ್ದ ಹಾಗೆ, ''ಈ ಮಾತೆಲ್ಲ ನನ್ನ ಹತ್ತಿರ ಬೇಡ'' ಅಂತ ಜಯಶ್ರೀ ಎಚ್ಚರಿಕೆ ಕೊಟ್ಟರು. ಸುಮ್ಮನೆ ಇರದೆ, ''ಏನ್ ಮಾಡ್ತೀರಾ.?'' ಅಂತ ರಶ್ಮಿ ಕೇಳಿದರು. ಆಗ, ''ನಿನಗೆ ಚಪ್ಪಲಿಯಲ್ಲಿ ಹೊಡೆಯುತ್ತಾರೆ'' ಎಂದುಬಿಟ್ಟರು ಜಯಶ್ರೀ.

  'ಬಿಗ್' ಕಿತ್ತಾಟ: ರಶ್ಮಿ 'ಲೋಕಲ್ ಆಂಟಿ', ಸ್ಲಂ ಕ್ಯಾಟಗರಿ ಎಂದ ಆಂಡ್ರ್ಯೂ.!'ಬಿಗ್' ಕಿತ್ತಾಟ: ರಶ್ಮಿ 'ಲೋಕಲ್ ಆಂಟಿ', ಸ್ಲಂ ಕ್ಯಾಟಗರಿ ಎಂದ ಆಂಡ್ರ್ಯೂ.!

  ಲೇವಡಿ ಮಾಡಿದ ರಶ್ಮಿ

  ಲೇವಡಿ ಮಾಡಿದ ರಶ್ಮಿ

  ''ಚಪ್ಪಲಿಯಲ್ಲಿ ಹೊಡೆಯುತ್ತಾರೆ'' ಅಂತ ಜಯಶ್ರೀ ಹೇಳಿದ್ದಕ್ಕೆ, ''ಚಪ್ಪಲಿ ಇಲ್ಲ ಅಂದ್ರೆ ಜಯಶ್ರೀ ಹೈಯ್ಟ್ ಗೊತ್ತಾಗಲ್ಲ. ಎರಡು ಅಡಿ ಉದ್ದ ಇದ್ದಾರೆ. ಚಪ್ಪಲಿ ಅವರಿಗೆ ಬೇಕು. ಹೀಗೆ ಮಾತನಾಡಲು ನಮಗೆ ಬರಲ್ವಾ.?'' ಅಂತ ರಶ್ಮಿ ಲೇವಡಿ ಮಾಡಿದರು.

  'ಬಿಗ್ ಬಾಸ್ ಕನ್ನಡ-6': ಮೇಜರ್ ಟಾರ್ಗೆಟ್ ಆದ ರಾಪಿಡ್ ರಶ್ಮಿ.!'ಬಿಗ್ ಬಾಸ್ ಕನ್ನಡ-6': ಮೇಜರ್ ಟಾರ್ಗೆಟ್ ಆದ ರಾಪಿಡ್ ರಶ್ಮಿ.!

  ರಶ್ಮಿ ಬೇರೆ ಯಾವ ಕೆಲಸವೂ ಮಾಡಲ್ಲ

  ರಶ್ಮಿ ಬೇರೆ ಯಾವ ಕೆಲಸವೂ ಮಾಡಲ್ಲ

  ''ಅಡುಗೆ ಮನೆ ಡಿಪಾರ್ಟ್ಮೆಂಟ್ ನಲ್ಲಿ ಇಲ್ಲದೇ ಇದ್ದರೂ, ಬೇಕು ಅಂತ ಅಡುಗೆ ಮನೆಯಲ್ಲೇ ರಶ್ಮಿ ಠಿಕಾಣಿ ಹೂಡುತ್ತಾರೆ. ಕಿಚನ್ ಬಿಟ್ಟು ರಶ್ಮಿ ಬೇರೆ ಯಾವ ಕೆಲಸವೂ ಮಾಡಲ್ಲ'' ಅಂತ ರಶ್ಮಿ ವಿರುದ್ಧ ಅಕ್ಷತಾ ಮತ್ತು ಧನರಾಜ್ ಕೂಡ ಆರೋಪಿಸಿದ್ದಾರೆ.

  ನಿಮ್ಮ ಅಭಿಪ್ರಾಯ ತಿಳಿಸಿ...

  ನಿಮ್ಮ ಅಭಿಪ್ರಾಯ ತಿಳಿಸಿ...

  'ಬಿಗ್ ಬಾಸ್' ಮನೆಯಲ್ಲಿ ರಶ್ಮಿ ವರ್ತನೆ ಸರಿ ಇದ್ಯಾ.? ಜಯಶ್ರೀ ಹಾಗೂ ಕವಿತಾ ಹೇಳುವುದರಲ್ಲೂ ಅರ್ಥ ಇದೆ ಅಂತ ನಿಮಗೆ ಅನ್ಸುತ್ತಾ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

  English summary
  Bigg Boss Kannada 6: Day 17: Fight between Rapid Rashmi and Andrew over egg.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X