ಏನು.. ಶಶಿ 'ರೈತ' ಅಂತ ಸುಳ್ಳು ಹೇಳಿಕೊಂಡು 'ಬಿಗ್ ಬಾಸ್' ಮನೆಗೆ ಬಂದ್ರಾ.?

Recommended Video

Bigg Boss Kannada Season 6 : ಬಿಗ್ ಬಾಸ್ ಗೆ ಸ್ಪರ್ಧಿ ಶಶಿ ಕುಮಾರ್ ರೈತ ಅಂತ ಸುಳ್ಳು ಹೇಳ್ಕೊಂಡ್ ಬಂದ್ರಾ?

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ 18 ಸ್ಪರ್ಧಿಗಳ ಪೈಕಿ ಮೊದಲ ನೋಟಕ್ಕೆ ವೀಕ್ಷಕರ ಮನದಲ್ಲಿ ಭರವಸೆ ಮೂಡಿಸಿದವರು ಶಶಿ ಕುಮಾರ್. ಕೃಷಿ ವಿಭಾಗದಲ್ಲಿ ಮಾಸ್ಟರ್ ಡಿಗ್ರಿ ಪಡೆದಿರುವ ಶಶಿ ಕುಮಾರ್ ವೃತ್ತಿಯಲ್ಲಿ 'ರೈತ' ಅಂತ 'ಬಿಗ್ ಬಾಸ್' ವೇದಿಕೆ ಮೇಲೆ ಹೇಳಿಕೊಂಡಿದ್ದರು.

ನೋಡಲು ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಆಗಿ ಕಾಣುವ ಶಶಿ ಕುಮಾರ್ 'ಆಧುನಿಕ ರೈತ' ಅಂತಲೇ ಸದ್ಯ ಗುರುತಿಸಿಕೊಂಡಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಶಶಿ ಕುಮಾರ್ ಕುರಿತು ದೊಡ್ಡ ಚರ್ಚೆ ನಡೆಯುತ್ತಿದೆ.

''ಶಶಿ ಕುಮಾರ್ ರೈತ ಅಲ್ಲ. ಆತ ಸೀರಿಯಲ್ ನಟ'' ಎಂದು ಧಾರಾವಾಹಿಯ ಸ್ಕ್ರೀನ್ ಶಾಟ್ ಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಪೋಸ್ಟ್ ಮಾಡುತ್ತಿದ್ದಾರೆ.

''ಸುಳ್ಳು ಹೇಳಿ ಶಶಿ 'ಬಿಗ್ ಬಾಸ್' ಮನೆಗೆ ಬಂದಿದ್ದಾರೆ'' ಎಂಬುದು ಕೆಲವರ ವಾದ ಆಗಿದ್ದರೆ, ''ಶಶಿ ಕುಮಾರ್ ಜಾನಪದ ಕಲಾವಿದ. ನಾಟಕಗಳಲ್ಲಿಯೂ ಅಭಿನಯ ಮಾಡಿದ್ದಾರೆ. ರೈತನಾಗಿ ಸೀರಿಯಲ್ ನಲ್ಲಿ ಆಕ್ಟ್ ಮಾಡಿದರೆ ಏನು ತಪ್ಪು.?'' ಅಂತ ಶಶಿ ಪರವಾಗಿ ಕೆಲವರು ಪ್ರಶ್ನೆ ಕೇಳುತ್ತಿದ್ದಾರೆ. ಬೇಕಾದ್ರೆ, ಕೆಲ ಕಾಮೆಂಟ್ ಗಳನ್ನ ನೀವೇ ನೋಡಿಕೊಂಡು ಬನ್ನಿ...

ಸಿಂಪಥಿ ಗೇಮ್ ಆಡ್ತಿದ್ದಾರಾ ಶಶಿ.?

ಸಿಂಪಥಿ ಗೇಮ್ ಆಡ್ತಿದ್ದಾರಾ ಶಶಿ.?

''ಎಲ್ಲಾ ಮೋಸ. ಸೀರಿಯಲ್ ಆಕ್ಟರ್ 'ರೈತ' ಅಂತ ಹೇಳಿಕೊಂಡು ಸಿಂಪಥಿ ಆಟ ಆಡುತ್ತಿದ್ದಾನೆ'' ಎಂದು ವೀಕ್ಷಕರೊಬ್ಬರು ಸೀರಿಯಲ್ ವೊಂದರಲ್ಲಿ ಶಶಿ ಕುಮಾರ್ ನಟಿಸಿರುವ ಸ್ಕ್ರೀನ್ ಶಾಟ್ ಸಮೇತ ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡಿದ್ದಾರೆ.

ಏನು ತಪ್ಪು.?

ಏನು ತಪ್ಪು.?

ವೃತ್ತಿಯಲ್ಲಿ ಶಶಿ ಕುಮಾರ್ ರೈತ. ಹೀಗಿರುವಾಗ, 'ರೈತ' ಅಂತ ಹೇಳಿಕೊಳ್ಳುವುದರಲ್ಲಿ ಏನು ತಪ್ಪು ಅನ್ನೋದು ಕೆಲ ವೀಕ್ಷಕರ ಪ್ರಶ್ನೆಯಾಗಿದೆ.

ಇಲ್ಲದ ಸುದ್ದಿ ಹಬ್ಬಿಸಬೇಡಿ

ಇಲ್ಲದ ಸುದ್ದಿ ಹಬ್ಬಿಸಬೇಡಿ

''ಕೃಷಿ ವಿಭಾಗದಲ್ಲಿ ಓದಿ, ಜಾನಪದ ಕಲಾವಿದರಾಗಿಯೂ ಬೆಳೆದಿದ್ದಾರೆ. ಜೊತೆಗೆ ಆಕ್ಟಿಂಗ್ ಕೂಡ ಮಾಡ್ತಾರೆ. ರೈತ ಅನ್ನೋ ಪದವನ್ನು ಇಟ್ಟುಕೊಂಡು ಸಿಂಪಥಿ ಗಿಟ್ಟಿಸಿಕೊಳ್ಳುತ್ತಿಲ್ಲ. ಆ ತರಹ ಯಾವ ಸೀನ್ ನೂ ಕ್ರಿಯೇಟ್ ಮಾಡಿಲ್ಲ. ಅನವಶ್ಯಕವಾಗಿ ಇಲ್ಲದೇ ಇರುವ ಸುದ್ದಿಯನ್ನ ಹಬ್ಬಿಸಬೇಡಿ'' ಎಂದು ಶಶಿ ಕುಮಾರ್ ಪರವಾಗಿ ಕೆಲವರು ಕಾಮೆಂಟ್ ಹಾಕಿದ್ದಾರೆ.

ಪರ-ವಿರೋಧ ಚರ್ಚೆ

ಪರ-ವಿರೋಧ ಚರ್ಚೆ

ಶಶಿ ಕುಮಾರ್ ಕುರಿತು ಫೇಸ್ ಬುಕ್ ನಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಅದಕ್ಕೆ ಈ ಕಾಮೆಂಟ್ ಗಳೇ ಸಾಕ್ಷಿ.

ರೂಲ್ಸ್ ಇದ್ಯಾ.?

ರೂಲ್ಸ್ ಇದ್ಯಾ.?

''ರೈತ ಸೀರಿಯಲ್ ನಲ್ಲಿ ನಟಿಸಬಾರದು ಅಂತ ರೂಲ್ಸ್ ಇದ್ಯಾ.? ರೈತರನ್ನು ಕೀಳು ಭಾವನೆಯಿಂದ ನೋಡಬೇಡಿ'' ಅಂತೆಲ್ಲಾ ಕೆಲವರು ಶಶಿ ಕುಮಾರ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

More from Filmibeat

English summary
Bigg Boss Kannada 6: Is Shashi Kumar a serial actor not farmer.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X