'ಬಿಗ್ ಬಾಸ್' ಮನೆಯಲ್ಲಿ ಸೋನು ಪಾಟೀಲ್ ಬಳಸುತ್ತಿದ್ದಾರಾ 'ಭಾಷಾ' ಅಸ್ತ್ರ.?
''ನಾನು ಉತ್ತರ ಕರ್ನಾಟಕದ ಜವಾರಿ ಹುಡುಗಿ'' ಎನ್ನುತ್ತಾ ಉತ್ತರ ಕರ್ನಾಟಕದ ಭಾಷೆಯಲ್ಲೇ ಮಾತನಾಡುತ್ತಾ 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟಾಕೆ ಸೋನು ಪಾಟೀಲ್.
''ಮಾತು ಮಾತಿಗೂ 'ಉತ್ತರ ಕರ್ನಾಟಕ' ಅಂತ ಹೇಳುವ ಸೋನು ಪಾಟೀಲ್, ಉತ್ತರ ಕರ್ನಾಟಕದ ಹೆಸರು ಮತ್ತು ಜನರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ'' ಅಂತ ಬಹಿರಂಗವಾಗಿಯೇ ಆಂಡ್ರ್ಯೂ ಆರೋಪ ಮಾಡಿದ್ದರು.
ಸದಾ ಉತ್ತರ ಕರ್ನಾಟಕ ಭಾಷೆಯಲ್ಲೇ ಮಾತನಾಡುವ ಸೋನು ಪಾಟೀಲ್ ಗೆ 'ಉತ್ತರ ಕರ್ನಾಟಕ' ಅಂತ ಹೆಸರು ಯಾಕೆ ಬಂತು ಅನ್ನೋದು ಕೂಡ ಗೊತ್ತಿಲ್ಲ ಎಂಬ ಸಂಗತಿ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿಯೇ ಬಯಲಾಯಿತು.

ಇಷ್ಟೆಲ್ಲಾ ಆದ್ಮೇಲೆ, ಇದೀಗ ಸೋನು ಪಾಟೀಲ್ 'ಉತ್ತರ ಕರ್ನಾಟಕ' ಅಂತ ಪದೇ ಪದೇ ಉಲ್ಲೇಖಿಸುವುದನ್ನು ನಿಲ್ಲಿಸಿದ್ದಾರೆ. ''ಸೋನು ಪಾಟೀಲ್ ಗೆ 'ಬೆಂಗಳೂರು ಕನ್ನಡ' ಚೆನ್ನಾಗಿ ಬರುತ್ತೆ. ಶೋಗಾಗಿ ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತನಾಡುತ್ತಾರೆ'' ಅಂತ ಜಯಶ್ರೀ ಒಮ್ಮೆ ಹೇಳಿದ್ದರು.
ಈಗ ಜಯಶ್ರೀ ಮಾತು ನಿಜ ಅಂತ ವೀಕ್ಷಕರಿಗೆ ಅನಿಸಿದೆ. 'ಬಿಗ್ ಬಾಸ್' ಕಾಲ್ ಸೆಂಟರ್ ಟಾಸ್ಕ್ ನಲ್ಲಿ ಗ್ರಾಹಕ ಸೇವಾ ಪ್ರತಿನಿಧಿಯ ಪಾತ್ರ ನಿರ್ವಹಿಸಿದ ಸೋನು ಪಾಟೀಲ್ ಸರಾಗವಾಗಿ ಬೆಂಗಳೂರು ಕನ್ನಡ ಮಾತನಾಡಿದರು. ಉತ್ತರ ಕರ್ನಾಟಕದ ಸೊಗಡು ಅಂದು ಅವರಲ್ಲಿ ಕಾಣಿಸಲೇ ಇಲ್ಲ.
ಇದನ್ನೆಲ್ಲ ನೋಡಿದ್ಮೇಲೆ, ವೋಟ್ ಗಳಿಗಾಗಿ ಭಾಷಾ ಅಸ್ತ್ರವನ್ನು ಸೋನು ಪಾಟೀಲ್ ಬಳಸುತ್ತಿದ್ದಾರಾ ಎಂಬ ಅನುಮಾನ ವೀಕ್ಷಕರಲ್ಲಿ ಶುರುವಾಗಿದೆ. ಯಾರಿಗೊತ್ತು ಅದೇ ಸೋನು ಪಾಟೀಲ್ ಸ್ಟ್ರಾಟೆಜಿ ಆಗಿರಬಹುದು.!?


Click it and Unblock the Notifications











