'ಅಯ್ಯೋ.. ಈ ಬಾರಿಯ ಬಿಗ್ ಬಾಸ್ ಬೋರ್ ಅನಿಸ್ತಿದೆ' ಎಂದು ಮೂಗು ಮುರಿದ ವೀಕ್ಷಕರು.!
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಶುರುವಾಗಿ ಹತ್ತತ್ರ ಎರಡು ವಾರಗಳು ಕಳೆಯಿತು. ಈ ಎರಡು ವಾರಗಳಲ್ಲಿ 'ಬಿಗ್ ಬಾಸ್' ರೋಚಕವಾಗಿದೆ, ಮಸ್ತ್ ಮಜಾ ನೀಡುತ್ತಿದೆ ಅಂತ ವೀಕ್ಷಕರಿಗೆ ಯಾವತ್ತೂ ಅನಿಸಿಲ್ಲ ಅನ್ನೋದು ಕಟು ಸತ್ಯ.
ಈ ಬಾರಿ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸೆಮಿ ಸೆಲೆಬ್ರಿಟಿಗಳೇ ಹೆಚ್ಚಾಗಿದ್ದಾರೆ. ಕೆಲವರು ಬೇಕು ಅಂತ ತರ್ಲೆ, ಕಿರಿಕ್ ಮಾಡಿಕೊಳ್ತಿದ್ರೆ... ಮಿಕ್ಕವರು ಅಷ್ಟಾಗಿ ಪರದೆ ಮೇಲೆ ಕಾಣುತ್ತಲೇ ಇಲ್ಲ.
ಹಾಗ್ನೋಡಿದ್ರೆ, 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಲಕ್ಷುರಿ ಬಜೆಟ್ ಟಾಸ್ಕ್ ಹಾಗೂ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆ ತರಲಾಗಿದೆ. ಹಿಂದಿ ಭಾಷೆಯ 'ಬಿಗ್ ಬಾಸ್' ಫಾರ್ಮ್ಯಾಟ್ ನ್ನೇ ಇಲ್ಲಿ ಕಾಪಿ ಮಾಡಲಾಗುತ್ತಿದ್ದರೂ, ಮನರಂಜನೆ ಮಾತ್ರ ಸಿಗುತ್ತಿಲ್ಲ ಅನ್ನೋದು ವೀಕ್ಷಕರ ಬೇಸರ.
ಬೋರಿಂಗ್ ಅನಿಸ್ತಿರುವ 'ಬಿಗ್ ಬಾಸ್' ಬಗ್ಗೆ ವೀಕ್ಷಕರು ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಪುಟದಲ್ಲೇ ಬೇಸರ ವ್ಯಕ್ತಪಡಿಸಿದ್ದಾರೆ. ಬೇಕಾದ್ರೆ, ನೀವೇ ಕೆಲ ಕಾಮೆಂಟ್ ಗಳನ್ನ ನೋಡಿ...

ಬೋರಿಂಗ್ ಬಿಗ್ ಬಾಸ್
''ಈ ಬಾರಿಯ 'ಬಿಗ್ ಬಾಸ್' ಸ್ಪರ್ಧಿಗಳು ವೀಕ್ಷಕರಿಗೆ ಇಂಟ್ರೆಸ್ಟಿಂಗ್ ಅಂತ ಅನಿಸುತ್ತಿಲ್ಲ. ಇದ್ದಿದ್ದರಲ್ಲಿ ಆಂಡ್ರ್ಯೂ ಸ್ವಲ್ಪ ಮನರಂಜನೆ ಕೊಡ್ತಾರೆ ಅನ್ನೋದು ಬಿಟ್ಟರೆ ಮಿಕ್ಕವರು ಬರೀ ಗಾಸಿಪ್ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ'' ಎನ್ನುವುದು ವೀಕ್ಷಕರೊಬ್ಬರ ಅಭಿಪ್ರಾಯ.

ಬಿಗ್ ಬಾಸ್ ನೋಡೋಕೆ ಆಗ್ತಿಲ್ಲ
''ಈ ತರಹ ಸ್ಪರ್ಧಿಗಳನ್ನು ಸೆಲೆಕ್ಟ್ ಮಾಡಬೇಡಿ. ನಮಗೆ ಬಿಗ್ ಬಾಸ್ ನೋಡೋಕೆ ಆಗ್ತಿಲ್ಲ. ಎಲ್ಲರೂ ತುಂಬಾ ಬೋರಿಂಗ್. ಯಾರೂ ಕೂಡ ಮನರಂಜನೆ ಕೊಡುತ್ತಿಲ್ಲ. ಇಂಟ್ರೆಸ್ಟಿಂಗ್ ಟಾಸ್ಕ್ ಗಳನ್ನ ಕೊಟ್ಟು ಮನರಂಜಿಸಿ'' ಎಂದು ಕಲರ್ಸ್ ಸೂಪರ್ ವಾಹಿನಿಗೆ ವೀಕ್ಷಕರು ಕೈಮುಗಿದಿದ್ದಾರೆ.

ಟಾಸ್ಕ್ ನಲ್ಲಿ ಇನ್ವಾಲ್ವ್ ಆಗ್ತಿಲ್ಲ.!
''ಯಾರೂ ಕೂಡ ಟಾಸ್ಕ್ ನಲ್ಲಿ ಇನ್ವಾಲ್ವ್ ಆಗ್ತಿಲ್ಲ. ಯಾರಿಗೂ ಗೇಮ್ ಸ್ಪಿರಿಟ್ ಇಲ್ಲ. ಸೀರಿಯಸ್ ನೆಸ್ ಅಂತೂ ಇಲ್ಲವೇ ಇಲ್ಲ. ನೋಡೋರಿಗೆ ಯಾವುದೇ ಮನರಂಜನೆ ಸಿಗುತ್ತಿಲ್ಲ'' ಅಂತಿದ್ದಾರೆ ವೀಕ್ಷಕರು.

ಡಬ್ಬಾ ತರಹ ಇದೆ
''ಮುಂದಿನ ಸೀಸನ್ ನಲ್ಲಾದರೂ ಮನರಂಜನೆ ಕೊಡುವ ಸ್ಪರ್ಧಿಗಳನ್ನು ಆಯ್ಕೆ ಮಾಡಿ. ಈ ಸೀಸನ್ ಡಬ್ಬಾ ತರಹ ಇದೆ'' ಎಂಬ ಕಾಮೆಂಟ್ ಗಳೇ ಹೆಚ್ಚಾಗಿವೆ.

ನಿಮ್ಮ ಅಭಿಪ್ರಾಯ ಏನು.?
ನಿಮ್ಮ ಪ್ರಕಾರ 'ಬಿಗ್ ಬಾಸ್ ಕನ್ನಡ-6' ಹೇಗೆ ಮೂಡಿ ಬರುತ್ತಿದೆ.? ಈ ಕಾರ್ಯಕ್ರಮ ಬೋರಿಂಗ್ ಅಂತ ನಿಮಗೂ ಅನಿಸ್ತಿದ್ಯಾ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.


Click it and Unblock the Notifications











