ನವರಸ ನಾಯಕ ಜಗ್ಗೇಶ್ ಗೆ ಕಿಚ್ಚ ಸುದೀಪ್ ಸ್ಫೂರ್ತಿಯಂತೆ.! ಹೇಗೆ ಅಂತೀರಾ.?

Recommended Video

Bigg Boss Kannada Season 6 : ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಗುಣಗಾನ ಮಾಡಿದ ಜಗ್ಗೇಶ್

ಕಿಚ್ಚ ಸುದೀಪ್ ಧ್ವನಿ, ಅವರ ವಾಯ್ಸ್ ಮಾಡ್ಯೂಲೇಷನ್ ಅಂದ್ರೆ ನಿಮಗೆ ಹೇಗೆ ಇಷ್ಟವೋ, ನವರಸ ನಾಯಕ ಜಗ್ಗೇಶ್ ಗೂ ಅಷ್ಟೇ ಇಷ್ಟ. ''ಕನ್ನಡ ಚಿತ್ರರಂಗದಲ್ಲಿ ದಿ ಬೆಸ್ಟ್ ವಾಯ್ಸ್ ಮಾಡ್ಯೂಲೇಷನ್ ಇರುವುದು ಕಿಚ್ಚ ಸುದೀಪ್ ಗೆ'' ಎಂದು ನಟ ಜಗ್ಗೇಶ್ ಹೇಳಿದ್ದಾರೆ.

ಅಲ್ಲದೇ, ವಾಯ್ಸ್ ಮಾಡ್ಯೂಲೇಷನ್ ನಲ್ಲಿ ನಟ ಜಗ್ಗೇಶ್ ಗೆ ಕಿಚ್ಚ ಸುದೀಪ್ ರವರೇ ಸ್ಫೂರ್ತಿಯಂತೆ.! ಹಾಗಂತ ಸ್ವತಃ ಜಗ್ಗೇಶ್ ಬಾಯ್ಬಿಟ್ಟಿದ್ದಾರೆ. ಅದು 'ಬಿಗ್ ಬಾಸ್' ವೇದಿಕೆ ಮೇಲೆ.

ಹೌದು, 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ 'ಸೂಪರ್ ಸಂಡೆ ವಿತ್ ಸುದೀಪ್' ಸಂಚಿಕೆಯಲ್ಲಿ ಅತಿಥಿಯಾಗಿ 'ಮಾತಿನ ಮಲ್ಲ' ಜಗ್ಗೇಶ್ ಭಾಗವಹಿಸಿದ್ದರು. ಈ ವೇಳೆ ಸುದೀಪ್ ಧ್ವನಿ, ಗುಣವನ್ನ ನಟ ಜಗ್ಗೇಶ್ ಕೊಂಡಾಡಿದರು.

'ಬಿಗ್ ಬಾಸ್' ವೇದಿಕೆ ಮೇಲೆ ಜಗ್ಗೇಶ್ ಏನೇನೆಲ್ಲಾ ಹೇಳಿದರು ಅಂತ ನೀವೇ ಓದಿರಿ, ಫೋಟೋ ಸ್ಲೈಡ್ ಗಳಲ್ಲಿ...

ನೀವೇ ಸ್ಫೂರ್ತಿ

ನೀವೇ ಸ್ಫೂರ್ತಿ

''ನಾನು ಸತ್ಯವಾಗಲೂ ಹೇಳುವೆ.. ನನ್ನ ಸ್ಫೂರ್ತಿಯೇ ನೀವು.. ನಿಮ್ಮನ್ನ ನೋಡಿ ನಾನು ಸಾಕಷ್ಟು ಕಲಿತಿರುವೆ. ನನ್ನ ಪ್ರಕಾರ ಕನ್ನಡದಲ್ಲಿ ದಿ ಬೆಸ್ಟ್ ವಾಯ್ಸ್ ಮಾಡ್ಯೂಲೇಷನ್ ನಿಮಗೆ ಇರುವುದು. ನಾನು ಇದನ್ನ ತುಂಬಾ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ'' - ಜಗ್ಗೇಶ್, ನಟ

ಸುದೀಪ್ ರನ್ನ ಹೊಗಳಿದ ಜಗ್ಗೇಶ್

ಸುದೀಪ್ ರನ್ನ ಹೊಗಳಿದ ಜಗ್ಗೇಶ್

''ಕನ್ನಡ ಚಿತ್ರರಂಗ ಅಂದ್ರೆ ಏನೋ ಒಂದು ತಾತ್ಸಾರ ಮನೋಭಾವ ಇದೆ. ಆದ್ರೆ, ನನಗೆ ಖುಷಿ ಏನಂದರೆ, ಇವತ್ತು ಪರಭಾಷಿಕರು ಬಂದು ಕನ್ನಡ ಚಿತ್ರ ನೋಡಬೇಕು ಅಂದ್ರೆ ಅದರಲ್ಲಿ ಮೊದಲಿಗನಾಗಿ ನಿಲ್ಲುವುದು ನೀವು'' - ಜಗ್ಗೇಶ್, ನಟ

ಯುವ ನಟರಿಗೆ ಪ್ರೋತ್ಸಾಹ ನೀಡುವ ಸುದೀಪ್

ಯುವ ನಟರಿಗೆ ಪ್ರೋತ್ಸಾಹ ನೀಡುವ ಸುದೀಪ್

''ನಮ್ಮ ತಲೆಮಾರಿನಲ್ಲಿ.. ನಾವು ಬರುವ ಸಮಯದಲ್ಲಿ ಖಂಡಂ ಮಾಡುತ್ತಿದ್ದರು ಜಾಸ್ತಿ. ಆದ್ರೆ ಇವತ್ತು ಎಷ್ಟೋ ಜನ ಯುವ ನಟರಿಗೆ ನೀವು ಎಂಕರೇಜ್ ಮಾಡುತ್ತೀರಾ. ಅದು ನಿಮ್ಮ ಬೆಸ್ಟ್ ಪಾರ್ಟ್. ಇನ್ನೊಬ್ಬ ಕಲಾವಿದರ ಭುಜ ತಟ್ಟುತ್ತೀರಲ್ಲಾ, ಅದಕ್ಕೆ ನೀವು ಅಂದ್ರೆ ಅಭಿಮಾನಿಗಳು ಪ್ರಾಣ ಬಿಡುವುದು'' - ಜಗ್ಗೇಶ್, ನಟ

ಜಗ್ಗೇಶ್ ಗೆ ಇರುವ ಆಸೆ ಏನು.?

ಜಗ್ಗೇಶ್ ಗೆ ಇರುವ ಆಸೆ ಏನು.?

''ನಾವು ಜೊತೆಯಲ್ಲಿ ಆಕ್ಟ್ ಮಾಡಬೇಕು ಎಂಬ ಅಭಿಮಾನಿಗಳ ಬೇಡಿಕೆ ಸಾಕಷ್ಟು ಇದೆ. ಆದ್ರೆ, ನಮಗೆ ಹೈಯ್ಟ್ ಪ್ರಾಬ್ಲಂ ಇದೆ. ಆದರೂ ಮನಸ್ಸಿನಲ್ಲಿ ಆಸೆ ಇದೆ'' - ಜಗ್ಗೇಶ್, ನಟ

ಸುದೀಪ್ ಶ್ರೇಷ್ಠ ಗುಣ ಯಾವುದು.?

ಸುದೀಪ್ ಶ್ರೇಷ್ಠ ಗುಣ ಯಾವುದು.?

''ಚಿತ್ರರಂಗದ ಹಲವರಿಗೆ ನೀವು ಸಹಾಯ ಮಾಡಿದ್ದೀರಾ.. ಆದ್ರೆ, ಅದನ್ನ ಎಲ್ಲೂ ಹೇಳಿಕೊಂಡಿಲ್ಲ. ಇದು ನಿಮ್ಮ ಶ್ರೇಷ್ಠವಾದ ಗುಣ. ನಾನು ಇದನ್ನ ಇಷ್ಟ ಪಡುತ್ತೇನೆ'' - ಜಗ್ಗೇಶ್, ನಟ

ಸುದೀಪ್ ಬಗ್ಗೆ ಜಗ್ಗೇಶ್ ಕಾಮೆಂಟ್

ಸುದೀಪ್ ಬಗ್ಗೆ ಜಗ್ಗೇಶ್ ಕಾಮೆಂಟ್

''ಯಾವುದಾದರೂ ಸಿನಿಮಾ ಚೆನ್ನಾಗಿದ್ದರೆ, ಓರ್ವ ಸಿನಿಮಾ ನಟ ಚೆನ್ನಾಗಿ ಅಭಿನಯಿಸಿದ್ದಾರೆ ಅಂದ್ರೆ, ಒಂದು ದೂರವಾಣಿ ಕರೆ ಬರುತ್ತೆ ಅಂದ್ರೆ, ಅದು ಒನ್ ಅಂಡ್ ಒನ್ಲಿ ಸುದೀಪ್ ಕಡೆಯಿಂದ. ಬೇರೆ ಯಾರೂ ಮಾಡಲು ಸಾಧ್ಯ ಇಲ್ಲ'' - ಜಗ್ಗೇಶ್, ನಟ

More from Filmibeat

English summary
Bigg Boss Kannada 6: Jaggesh lauds Kiccha Sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X