ನಾಲಿಗೆ ಮೇಲೆ ಹಿಡಿತ ಇಲ್ಲದೆ ಮಾತನಾಡಿದ್ದ ಜಯಶ್ರೀ: ಕ್ಲಾಸ್ ತೆಗೆದುಕೊಂಡ ಸುದೀಪ್.!

ಕಿರುತೆರೆಯ ಖ್ಯಾತ ನಟಿ ಜಯಶ್ರೀ 'ಬಿಗ್ ಬಾಸ್' ಮನೆಯಲ್ಲಿ ರಿಮೋಟ್ ಕಂಟ್ರೋಲ್ ಅಂತಲೇ ಹೆಸರುವಾಸಿ. 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೊದಲ ದಿನದಿಂದಲೂ ಜಯಶ್ರೀ ಕಂಡ್ರೆ ರಾಪಿಡ್ ರಶ್ಮಿಗೆ ಆಗ್ಬರ್ತಿಲ್ಲ.

ಜಯಶ್ರೀ ಹಾಗೂ ರಾಪಿಡ್ ರಶ್ಮಿ ನಡುವೆ 'ಅಡುಗೆ ಮನೆ' ವಿಚಾರಕ್ಕೆ ಹಲವು ಬಾರಿ ಜಗಳ, ವಾಕ್ಸಮರ ನಡೆದಿದೆ. ಮೊಟ್ಟೆ ವಿಚಾರದಲ್ಲಂತೂ ಇಬ್ಬರ ನಡುವೆ ಮಾತಿನ ಚಕಮಕಿಯೇ ನಡೆದು ಹೋಯ್ತು.

ಮಾತಿನ ಭರದಲ್ಲಿ ರಾಪಿಡ್ ರಶ್ಮಿ ಹೊರಗೆ ಹೋದರೆ ''ಮೊಟ್ಟೆ ತೆಗೆದುಕೊಂಡು ಹೊಡೆಯುತ್ತಾರೆ'' ಎಂದರು. ಇದರಿಂದ ರೊಚ್ಚಿಗೆದ್ದ ಜಯಶ್ರೀ, ನಾಲಿಗೆ ಮೇಲಿನ ಹಿಡಿತ ತಪ್ಪಿ ''ನಿನಗೆ ಚಪ್ಪಲಿ ತಗೊಂಡು ಹೊಡೆಯುತ್ತಾರೆ'' ಎಂದು ಬಿಟ್ಟರು.

Bigg Boss Kannada 6: Jayashree apologizes in front of Sudeep

ಇಷ್ಟೆ ಅಲ್ಲ.. ಆಗಾಗ ಸಿಟ್ಟಲ್ಲಿ ಜಯಶ್ರೀ ಬಾಯಿಂದ ಕೆಲ ಪದಗಳು ಹೊರಗೆ ಬಂದಿವೆ. ಇದನ್ನೆಲ್ಲ ಗಮನಿಸಿದ ಕಿಚ್ಚ ಸುದೀಪ್, 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ, ''ಜಯಶ್ರೀ, ನಿಮ್ಮ ಕನ್ನಡ ಬಹಳ ಸುಂದರವಾಗಿದೆ. ಒಳ್ಳೆ ಕನ್ನಡ ಮಾತನಾಡಿ. ಒಂದು ತಪ್ಪಾಗಿದ್ದರೆ, ನಾನು ಈ ಮಾತನ್ನು ಹೇಳುತ್ತಿರಲಿಲ್ಲ. ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಜಾಗದಲ್ಲಿ ಬೇರೆ ಬೇರೆ ಕನ್ನಡ ಮಾತನಾಡಿದಾಗ, ನೀವು ಕೆಳಗೆ ಹೋಗುತ್ತಿದ್ದೀರಾ'' ಎಂದು ಕ್ಲಾಸ್ ತೆಗೆದುಕೊಂಡರು.

ಆಗ, ''ನನ್ನ ತಪ್ಪಾಗಿದ್ದಕ್ಕೆ ನಾನು ಅಲ್ಲೇ ಬಂದು ಕ್ಷಮೆ ಕೇಳಿದೆ. ತಪ್ಪಾಗಿದೆ, ಕ್ಷಮಿಸಿ'' ಎಂದು ಜಯಶ್ರೀ ಕ್ಷಮೆ ಕೇಳಿದರು.

More from Filmibeat

English summary
Bigg Boss Kannada 6: Week 3: Jayashree apologizes in front of Sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X