ಎಲ್ಲರ ಮುಂದೆ ಆಂಡ್ರ್ಯೂ ಬಳಿ ಕ್ಷಮೆ ಕೇಳಿದ ಕವಿತಾ.!

Recommended Video

Bigg Boss Kannada Season 6:ಎಲ್ಲರ ಮುಂದೆ ಕ್ಷಮೆ ಕೇಳಿದ ಕವಿತಾ.! | FILMIBEAT KANNADA

ಅಂತೂ 'ಬಿಗ್ ಬಾಸ್' ಮನೆಯಲ್ಲಿ ಒಂದು ದೊಡ್ಡ ಹೈಡ್ರಾಮಾಗೆ ತೆರೆ ಬಿದ್ದಿದೆ. ಕಳೆದ ವಾರದ ನಾಮಿನೇಷನ್ ಟಾಸ್ಕ್ ನಿಂದ ಶುರುವಾದ ಕವಿತಾ ಮತ್ತು ಆಂಡ್ರ್ಯೂ ನಡುವಿನ ಕಿತ್ತಾಟಕ್ಕೆ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಪೂರ್ಣ ವಿರಾಮ ಬಿದ್ದಿದೆ.

ಇಡೀ ವಾರದ ಕಥೆಯನ್ನಿಟ್ಟುಕೊಂಡು ಪಂಚಾಯಿತಿ ನಡೆಸಿದ ಸುದೀಪ್, ಕವಿತಾ ಮಾಡಿದ ತಪ್ಪುಗಳನ್ನು ಸೂಕ್ಷ್ಮವಾಗಿ ವಿವರಿಸಿದರು. ಜೊತೆಗೆ ಜಯಶ್ರೀ ಮತ್ತು ಶಶಿ ವರ್ತಿಸಿದ ರೀತಿ ಬಗ್ಗೆಯೂ ಸುದೀಪ್ ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ವಿವಾದವನ್ನು ಮರೆತು ಹ್ಯಾಂಡ್ ಶೇಕ್ ಮಾಡುವಂತೆ ಸುದೀಪ್ ಹೇಳಿದರು.

ಸುದೀಪ್ ವಿವರಿಸಿದ ಮೇಲೆ, ತಾವು ಮಾಡಿದ ತಪ್ಪು ಕವಿತಾ ಅರಿವಿಗೆ ಬಂತು. ಒಪ್ಪಂದದ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿದ್ದು ತಾವೇ ಅಂತ ತಿಳಿದುಬಂದ ಮೇಲೆ ಆಂಡ್ರ್ಯೂ ಬಳಿ ಕ್ಷಮೆ ಕೇಳಲು ಕವಿತಾ ಮುಂದಾದರು. ಮುಂದೆ ಓದಿರಿ...

ಎಲ್ಲರ ಮುಂದೆ ಕ್ಷಮೆ ಕೇಳಿದ ಕವಿತಾ

ಎಲ್ಲರ ಮುಂದೆ ಕ್ಷಮೆ ಕೇಳಿದ ಕವಿತಾ

''ಈ ವಾರದಲ್ಲಿ ಎಲ್ಲವೂ ನಿಮ್ಮ ಮುಂದೆಯೇ ನಡೆಯಿತು. ಹೀಗಾಗಿ, ನಿಮ್ಮೆಲ್ಲರ ಮುಂದೆಯೇ ಆಂಡ್ರ್ಯೂಗೆ ಕ್ಷಮೆ ಕೇಳಬೇಕು ಅಂತಿದ್ದೀನಿ. ಇಷ್ಟೆಲ್ಲಾ ಆಗುವುದಕ್ಕೆ ಮೊದಲ ಕಾರಣವೇ ನಾನು. ನನ್ನ ತಪ್ಪು ನನಗೆ ಗೊತ್ತಿರಲಿಲ್ಲ. ನಾನು ಒಳ್ಳೆಯವಳಾಗಬೇಕು ಅಂತಲ್ಲ. ನಿಜವಾಗಲೂ ನಾನು ಕ್ಷಮೆ ಕೇಳುತ್ತಿದ್ದೇನೆ'' ಎಂದು ಆಂಡ್ರ್ಯೂ ಬಳಿ ಕವಿತಾ ಕ್ಷಮೆಯಾಚಿಸಿದರು.

ಆಂಡ್ರ್ಯೂ ಹೇಳಿದ್ದೇನು.?

ಆಂಡ್ರ್ಯೂ ಹೇಳಿದ್ದೇನು.?

''ಫೀಲಿಂಗ್ ಅಂದ್ರೆ ಪ್ರೀತಿ ಅಂತಲೇ ಇಲ್ಲ. ನಿಮ್ಮ (ಕವಿತಾ) ಜೊತೆಗೆ ಮಾತನಾಡುವುದು ಮಾತ್ರ ನನಗೆ ಇಷ್ಟ. ಇದನ್ನ ಇಲ್ಲಿಗೆ ಬಿಡೋಣ. ಎಲ್ಲರೂ ಖುಷಿ ಆಗಿ ಇರೋಣ'' ಅಂತ ಹೇಳಿದರು ಆಂಡ್ರ್ಯೂ.

ಉಲ್ಟಾ ಆಯಿತು

ಉಲ್ಟಾ ಆಯಿತು

''ಆಂಡ್ರ್ಯೂದು ತಪ್ಪಿರುತ್ತೆ. ಇಲ್ಲೂ ಅದೇ ಆಗುತ್ತೆ ಎಂಬ ನಂಬಿಕೆಯಲ್ಲಿ ನಾನು ಇದ್ದೆ. ಆದ್ರೀಗ, ಎಲ್ಲವೂ ಉಲ್ಟಾ ಆಯ್ತು. ನನಗೆ ತುಂಬಾ ಕನ್ ಫ್ಯೂಶನ್ ಆಗುತ್ತಿದೆ. ನಾನು ಯಾವುದನ್ನೂ ಬೇಕು ಅಂತ ಮಾಡಿಲ್ಲ'' ಅಂತ ಚಿಂತಿಸುತ್ತಿದ್ದರು ಶಶಿ.

ಅಪ್ ಸೆಟ್ ಆಗಿರುವ ಶಶಿ

ಅಪ್ ಸೆಟ್ ಆಗಿರುವ ಶಶಿ

ಒಂದು ಕಡೆ ಕೈ ಮುರಿತ. ಇನ್ನೊಂದು ಕಡೆ ಸುದೀಪ್ ಆಡಿದ ಮಾತುಗಳು... ಇದರಿಂದ ಶಶಿ ಅಂತೂ ಫುಲ್ ಅಪ್ ಸೆಟ್ ಆಗಿದ್ದಾರೆ. ಫೈನಲ್ ವರೆಗೂ ಹೋಗುವೆ ಅಂತ ಹೇಳುತ್ತಿದ್ದ ಶಶಿ ಇದೀಗ ತಮ್ಮ ನಡೆಯಿಂದ ಎಲ್ಲಿ ಬೇಗ ಎಲಿಮಿನೇಟ್ ಆಗಬಹುದೋ ಎಂಬ ಭಯ ಅವರಿಗೆ ಕಾಡುತ್ತಿರಬಹುದು.

More from Filmibeat

English summary
Bigg Boss Kannada 6: Week 5: Kavitha Gowda apologizes Andrew.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X