ಪ್ರಥಮ್ ಆಟಕ್ಕೆ ಬಕ್ರಾ ಆದ 'ಮಾರ್ಡನ್ ರೈತ' ಶಶಿ.!
Recommended Video

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಮಾರ್ಡನ್ ರೈತ ಶಶಿ ಕುಮಾರ್ ಮತ್ತು 'ಚಿನ್ನು' ಕವಿತಾ ಗೌಡ ಪ್ರೇಮ ಪಕ್ಷಿಗಳು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಅನುಮಾನ ಹಲವರಿಗೆ ಇದ್ದೇ ಇದೆ.
ತನ್ನ ಇಷ್ಟದ ಹುಡುಗಿ ಬಗ್ಗೆ ಶಶಿ ಮಾತನಾಡುತ್ತಿದ್ದಾಗ, ''ಇಲ್ಲಿ ಏನೂ ಹೇಳುವುದು ಬೇಡ. ಹೊರಗೆ ಹೋಗಿ ಮಾತಾಡೋಣ'' ಅಂತ ಕವಿತಾ ಗೌಡ ಹೇಳಿದ್ದರು. ಅಲ್ಲಿಗೆ, ಇಬ್ಬರ ನಡುವಿನ ಪ್ರೇಮ ಅಧ್ಯಾಯಕ್ಕೆ ಅಂದು ವಿರಾಮ ಸಿಕ್ಕಿತ್ತು.
ಇದೀಗ 'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆಯಲ್ಲಿ ಪ್ರಥಮ್ ಆಡಿಸಿದ ಆಟಕ್ಕೆ ಶಶಿ ಬಕ್ರಾ ಆಗಿದ್ದಾರೆ. 'ರೋಮ್ಯಾಂಟಿಕ್ ಡಿನ್ನರ್ ಡೇಟ್' ವೇಳೆ ಕವಿತಾ ಬಾಯಿಂದ 'ಐ ಲವ್ ಯು', 'ಮದುವೆ', 'ಪ್ರೀತಿ' ಅಂತೆಲ್ಲಾ ಹೇಳಿಸಿ, ಶಶಿಯನ್ನ 'ಕುರಿ' ಮಾಡಿದರು 'ಒಳ್ಳೆ ಹುಡುಗ' ಪ್ರಥಮ್. ಮುಂದೆ ಓದಿರಿ...

ಕವಿತಾ ಗೌಡಗೆ ಸೀಕ್ರೆಟ್ ಟಾಸ್ಕ್
ಕೊಡಲಾಗುವ ಇಯರ್ ಫೋನ್ ನ ಯಾರಿಗೂ ಗೊತ್ತಾಗದಂತೆ ಧರಿಸಿ, ರೋಮ್ಯಾಂಟಿಕ್ ಡಿನ್ನರ್ ಡೇಟ್ ನಲ್ಲಿ ಪಾಲ್ಗೊಳ್ಳುವಂತೆ ಕವಿತಾ ಗೌಡಗೆ 'ಬಿಗ್ ಬಾಸ್' ಸೀಕ್ರೆಟ್ ಟಾಸ್ಕ್ ನೀಡಿದರು. ಇನ್ನೂ ಸೀಕ್ರೆಟ್ ಹೌಸ್ ನಿಂದ ಪ್ರಥಮ್ ಹೇಳಿದ್ದನ್ನೆಲ್ಲಾ ಕೇಳಿಸಿಕೊಂಡು, ಅವರ ಅಣತಿಯಂತೆ ಡಿನ್ನರ್ ಡೇಟ್ ನಲ್ಲಿ ಶಶಿಯೊಂದಿಗೆ ಕವಿತಾ ಮಾತನಾಡುತ್ತಿದ್ದರು.

ಕಣ್ಮುಚ್ಚಿ ಐ ಲವ್ ಯು ಹೇಳಿದ ಶಶಿ
ಪ್ರಥಮ್ ಹೇಳಿದಂತೆ, ''ಕಣ್ಮುಚ್ಚಿ ನನಗೆ ಐ ಲವ್ ಯು ಹೇಳು'' ಎಂದು ಶಶಿ ಮುಂದೆ ಕವಿತಾ ಬೇಡಿಕೆ ಇಟ್ಟರು. ಕವಿತಾ ನಿಜಕ್ಕೂ ಹೀಗೆ ಮಾತನಾಡುತ್ತಿದ್ದಾರಾ ಎಂಬ ಅನುಮಾನದ ಮೇರೆಗೆ ಕಣ್ಮುಚ್ಚಿ 'ಐ ಲವ್ ಯು' ಎಂದುಬಿಟ್ಟರು ಶಶಿ.

ರೋಮ್ಯಾಂಟಿಕ್ ಡ್ಯಾನ್ಸ್
ಡಿನ್ನರ್ ಮುಗಿದ ಬಳಿಕ 'ಒಂದು ಮಳೆಬಿಲ್ಲು' ಹಾಡಿಗೆ ಕವಿತಾ ಮತ್ತು ಶಶಿ ರೋಮ್ಯಾಂಟಿಕ್ ಡ್ಯಾನ್ಸ್ ಕೂಡ ಮಾಡಿದರು. ಇದನ್ನೆಲ್ಲ ನೋಡಿ ಆಂಡಿ ಹೊಟ್ಟೆಗೆ ಕಿಚ್ಚು ಬಿದ್ದಂತಾಗಿತ್ತು.

ಬಕ್ರಾ ಆದ ಶಶಿ
ಡಿನ್ನರ್ ಮುಗಿದ ಮೇಲೆ, ಇಯರ್ ಫೋನ್ ನ ಶಶಿ ಕೈಗಿಟ್ಟು... ''ನಾನು ಹೇಳಿದ್ದು ಯಾವುದೂ ನನ್ನ ಮಾತುಗಳಲ್ಲ. ಎಲ್ಲವೂ ಪ್ರಥಮ್ ಮಾತುಗಳು'' ಅಂತ ಕವಿತಾ ಹೇಳಿದರು. ಆಗ, ಶಶಿ ಅಕ್ಷರಶಃ ಫೂಲ್ ಆದರು.


Click it and Unblock the Notifications











