ಆಂಡ್ರ್ಯೂ ಪರವಾಗಿ ಬಸ್ಕಿ ಹೊಡೆದು ಶಿಕ್ಷೆ ಅನುಭವಿಸಿದ ಕವಿತಾ.!

Recommended Video

Bigg Boss Kannada Season 6: ಆಂಡ್ರ್ಯೂ ಪರವಾಗಿ ಶಿಕ್ಷೆ ಅನುಭವಿಸಿದ ಕವಿತಾ.! | FILMIBEAT KANNADA

ಒಂದು ವಾರದ ಹಿಂದೆಯಷ್ಟೇ, ಆಂಡ್ರ್ಯೂ ಮತ್ತು ಕವಿತಾ ನಡುವೆ ಆದ ರಾದ್ಧಾಂತದ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ''ದೊಡ್ಡ ರಾಮಾಯಣ ಆಗಲು ನಾನೇ ಕಾರಣ'' ಎಂದು ತಪ್ಪೊಪ್ಪಿಕೊಂಡು ಆಂಡ್ರ್ಯೂ ರಿಂದ ಕವಿತಾ ಕೊಂಚ ದೂರ ಉಳಿದಿದ್ದಾರೆ.

ಸದ್ಯ ಮನೆಯ ಕ್ಯಾಪ್ಟನ್ ಆಗಿ ಕವಿತಾ ಗೌಡ ಆಯ್ಕೆ ಆಗಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ಲೈಟ್ಸ್ ಆನ್ ಆಗಿದ್ದಾಗ, ನಿದ್ದೆಗೆ ಜಾರುವ ಸ್ಪರ್ಧಿಗಳು 25 ಬಸ್ಕಿ ಹೊಡೆಯಬೇಕು ಎಂದು ಕವಿತಾ ನಿಯಮ ರೂಪಿಸಿದ್ದರು.

ಒಂದೇ ದಿನದಲ್ಲಿ ಆಂಡ್ರ್ಯೂ ಮೂರು ಬಾರಿ ನಿದ್ದೆ ಮಾಡಿದ್ದಾರೆ. ಮೂರಿ ಬಾರಿ 'ಎದ್ದೇಳು ಮಂಜುನಾಥ..' ಹಾಡು ಪ್ಲೇ ಆದ ಕಾರಣ ಆಂಡ್ರ್ಯೂ ಬದಲು ಕ್ಯಾಪ್ಟನ್ ಅಗಿ ತಾವೇ ಶಿಕ್ಷೆ ಅನುಭವಿಸಿದರು ಕವಿತಾ ಗೌಡ.

Bigg Boss Kannada 6: Kavitha Gowda takes punishment on behalf of Andrew

''ನಿದ್ದೆ ಮಾಡಬೇಡ ಅಂದ್ರೆ ಎದ್ದು ಓಡಾಡಲು ಆಗಲ್ಲ. ಶಿಕ್ಷೆ ಕೂಡ ತೆಗೆದುಕೊಳ್ಳಲು ಆಗಲ್ಲ. ನಿನ್ನ ಶಿಕ್ಷೆಯನ್ನ ನಾನೇ ತೆಗೆದುಕೊಳ್ಳುವೆ'' ಎಂದು ಆಂಡ್ರ್ಯೂಗೆ ಹೇಳುತ್ತಾ ಕವಿತಾ ಗೌಡ 75 ಬಸ್ಕಿ ಹೊಡೆದರು.

''ನಾನು ಅವನಿಗೆ ಏನೂ ಹೇಳಲ್ಲ. ಹೇಳಿದರೂ ಅವನು ಕೇಳಲ್ಲ. ಅತೀ ಮಾಡುತ್ತಾನೆ. ಹೀಗಾಗಿ ನಾನೇ ಶಿಕ್ಷೆ ತಗೊಂಡೆ'' ಎಂದು ಕವಿತಾ ತಮ್ಮನ್ನ ತಾವು ಸಮರ್ಥಿಸಿಕೊಂಡರು.

ಅತ್ತ ಆಂಡ್ರ್ಯೂ, ''ಪಾಪ.. ನಾನು ಬಸ್ಕಿ ಹೊಡೆದರೆ ಸುಸ್ತಾಗುವೆ ಅಂತ ಅವಳೇ ಹೊಡೆದಳು'' ಎನ್ನುತ್ತಾ ಕಾಮಿಡಿ ಮಾಡುತ್ತಿದ್ದರು. ಸದಾ ತಲೆಹರಟೆ ಮಾಡುವ ಆಂಡ್ರ್ಯೂಗೆ ಶಿಸ್ತು ಯಾವಾಗ ಬರುತ್ತದೋ.?!

More from Filmibeat

English summary
Bigg Boss Kannada 6: Day 41: Kavitha Gowda takes punishment on behalf of Andrew.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X