ಎಷ್ಟೇ ಹೇಳಿದರೂ ಬುದ್ಧಿ ಕಲಿಯದ ಆಂಡ್ರ್ಯೂ ಮೇಲೆ ಸುದೀಪ್ ಮುನಿಸು.!

''ಮಾತಿನ ಮೇಲೆ ಹಿಡಿತ ಇರಲಿ.. ಕೆಟ್ಟ ಶಬ್ದಗಳನ್ನು ಬಳಸಬೇಡಿ.. ಸಿಲ್ಲಿ ವಿಷಯಗಳಿಗೆ ಜಗಳ ಆಡಬೇಡಿ'' ಅಂತೆಲ್ಲಾ ಕಳೆದ ವಾರವಷ್ಟೇ ಕಿಚ್ಚ ಸುದೀಪ್ 'ಬಿಗ್ ಬಾಸ್' ಮನೆಯ ಎಲ್ಲಾ ಸ್ಪರ್ಧಿಗಳಿಗೂ ಕಿವಿಮಾತು ಹೇಳಿದ್ದರು.

ಹೀಗಿದ್ದರೂ, ಆಂಡ್ರ್ಯೂ ಮಾತ್ರ ತಿದ್ದುಕೊಳ್ಳಲಿಲ್ಲ. ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುತ್ತಿದ್ದ ಆಂಡ್ರ್ಯೂ, ಅಕ್ಷತಾಗೆ 'ಹುಚ್ಚು ನಾಯಿ' ಎಂದರು. ಸಾಲದಕ್ಕೆ, 'ಮಕ್ಕಳ' ಟಾಸ್ಕ್ ನಲ್ಲಿ ಮಕ್ಕಳ ಹಾಗೆ ನಡೆದುಕೊಳ್ಳದೇ ಜಯಶ್ರೀ ಮತ್ತು ಸೋನು ಪಾಟೀಲ್ ತಲೆ ಮೇಲೆ ಮೊಟ್ಟೆ ಹೊಡೆದರು.

ವಿನಾಕಾರಣ ಕೆಣಕುವ ಬುದ್ಧಿ ಹೊಂದಿರುವ ಆಂಡ್ರ್ಯೂ ಮೇಲೆ ಸುದೀಪ್ ಕೂಡ ಮುನಿಸಿಕೊಂಡಿದ್ದಾರೆ. ಹೀಗಾಗಿ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಆಂಡ್ರ್ಯೂಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು. ಮುಂದೆ ಓದಿರಿ...

'ಚೈಲ್ಡಿಶ್' ಆಗಿ ಆಡಿದ ಆಂಡ್ರ್ಯೂಗೆ ಸುದೀಪ್ ಪ್ರಶ್ನೆ

'ಚೈಲ್ಡಿಶ್' ಆಗಿ ಆಡಿದ ಆಂಡ್ರ್ಯೂಗೆ ಸುದೀಪ್ ಪ್ರಶ್ನೆ

''ಮಕ್ಕಳ ದಿನಾಚರಣೆಯನ್ನು ಬಹಳ ಚೆನ್ನಾಗಿ ಆಚರಿಸಿದ್ರಿ. ಆದರೆ ಮಗು ತರಹ ಆಡುವುದು ಬೇರೆ... ಬಾಲಿಶವಾಗಿ ಆಡುವುದು ಬೇರೆ... ಕೆಲವರು ಎರಡನ್ನೂ ಒಂದೇ ಅಂತ ಅಂದುಕೊಂಡಿದ್ದೀರಿ. ಚೈಲ್ಡ್ ಲೈಕ್ ಬೇರೆ... ಚೈಲ್ಡಿಶ್ ಬೇರೆ. ಸ್ಕೂಲ್ ನಲ್ಲಿ ಮಕ್ಕಳಿಗೆ ಟೀಚರ್ ಬುದ್ಧಿ ಮಾತು ಹೇಳುತ್ತಾರೆ, ಒಂದೆರಡು ಏಟು ಹೊಡೆಯಬಹುದು ಯಾಕೆ.?'' ಎಂದು ಆಂಡ್ರ್ಯೂಗೆ ಸುದೀಪ್ ಪ್ರಶ್ನಿಸಿದರು. ಅದಕ್ಕೆ ಆಂಡ್ರ್ಯೂ ''ತಿದ್ದುಕೊಳ್ಳಲಿ.. ಏನಾದರೂ ಕೊರತೆಗಳು ಇದ್ದರೆ ಸರಿ ಮಾಡಿಕೊಳ್ಳಲಿ ಅಂತ ಪನಿಶ್ಮೆಂಟ್ ಕೊಡುತ್ತಾರೆ'' ಎಂದರು.

ಆಂಡ್ರ್ಯೂಗೆ ಬಿಸಿ ಮುಟ್ಟಿಸಿದ ಸುದೀಪ್

ಆಂಡ್ರ್ಯೂಗೆ ಬಿಸಿ ಮುಟ್ಟಿಸಿದ ಸುದೀಪ್

''ಈ ಜಗತ್ತಿನಲ್ಲಿ ಫ್ರೀಯಾಗಿ ಸಿಗುವುದು ಅಡ್ವೈಸ್ (ಸಲಹೆ)... ಮೊದಲು ಅವರವರದ್ದನ್ನು ಅವರವರು ತೊಳೆದುಕೊಳ್ಳಬೇಕು... ಅದಾದ್ಮೇಲೆ ಬೇರೆಯವರದ್ದನ್ನು ತೊಳೆಯಬೇಕು ಅಂತ ನೀವು ಹೇಳಿದ್ರಿ. ಜಗತ್ತು ಅಂತ ಹೇಳಿದ್ಮೇಲೆ ನಾನೂ ಸೇರುತ್ತೇನೆ. ಪ್ರತಿ ಶನಿವಾರ ಬಂದು ನಾನು ನಿಮ್ಮ ಬಳಿ ಮಾತನಾಡುವಾಗ, ನಿಮ್ಮ ಬಾಯಿಂದ ಬರುವ ಮಾತುಗಳನ್ನು ನಾನು ಎಷ್ಟು ಸೀರಿಯಸ್ಸಾಗಿ ತೆಗೆದುಕೊಳ್ಳಬೇಕು.? ಅದಕ್ಕೆ ನಾನು ನಿರ್ಧಾರ ಮಾಡಿದ್ದೇನೆ - ''ನನ್ನದನ್ನು ನಾನು ತೊಳೆದುಕೊಳ್ಳುವೆ'' ಎನ್ನುತ್ತಾ ಆಂಡ್ರ್ಯೂಗೆ ಚಾಟಿಯೇಟು ಕೊಟ್ಟರು ಸುದೀಪ್.

ಸುದೀಪ್ ಸಲಹೆ ಪಾಲಿಸದ ಆಂಡ್ರ್ಯೂ

ಸುದೀಪ್ ಸಲಹೆ ಪಾಲಿಸದ ಆಂಡ್ರ್ಯೂ

''ಇಲ್ಲ ಸರ್.. ಅದು ತಪ್ಪಾಗಿ ಅರ್ಥೈಸಲಾಗಿದೆ. ನಾನು ಅದನ್ನ ಹೇಳಿದ್ದು ಇಲ್ಲಿರುವವರಿಗೆ...'' ಅಂತ ಆಂಡ್ರ್ಯೂ ಹೇಳಿದಾಗ, ''ಇಲ್ಲ... ನಾವು ಹೇಳಿದ್ದರ ಪೈಕಿ ನೀವು ಪಾಲಿಸಿದ್ದೇನು.?'' ಎಂದು ಸುದೀಪ್ ಕೇಳಿದರು. ''ರೂಲ್ಸ್ ಫಾಲೋ ಮಾಡಿ ಅಂತ ಹೇಳಿದ್ರಿ'' ಎಂದು ಆಂಡ್ರ್ಯೂ ಹೇಳಿದಾಗ, ಆಂಡ್ರ್ಯೂನ ಸುದೀಪ್ ಮಾತಲ್ಲೇ ಸಿಲುಕಿಸಿದರು.

ತಲೆ ಬಗ್ಗಿಸಿದ ಆಂಡ್ರ್ಯೂ

ತಲೆ ಬಗ್ಗಿಸಿದ ಆಂಡ್ರ್ಯೂ

''ಕೆಟ್ಟ ಶಬ್ದ ಬೇಡ ಅಂತ ಹೇಳಿದ್ದೆ. ಹುಚ್ಚು ನಾಯಿ ಎಲ್ಲಿಂದ ಬಂತು.? ಸಿಲ್ಲಿ ಸಿಲ್ಲಿ ವಿಚಾರಗಳಿಗೆ ಜಗಳ ಮಾಡಬೇಡಿ ಅಂತ ಹೇಳಿದ್ದೆ. ಪದಗಳು, ಅಕ್ಷರಗಳ ಬಗ್ಗೆ ಸ್ವಲ್ಪ ಎಚ್ಚರ ಇರಲಿ ಅಂತ ಹೇಳಿದ್ದೆ. ಯಾವುದನ್ನೂ ಪಾಲಿಸಿದ್ರಿ.?'' ಅಂತ ಸುದೀಪ್ ಪ್ರಶ್ನಿಸಿದರು. ''ಯಾವುದನ್ನೂ ಇಲ್ಲ ಸರ್..'' ಅಂತ ಆಂಡ್ರ್ಯೂ ತಲೆ ಬಗ್ಗಿಸಿದರು. ಇದಾದ ಮೇಲೆ ಆಂಡ್ರ್ಯೂ ಜೊತೆಗೆ ಸುದೀಪ್ ಮಾತುಕತೆ ನಡೆಸಲಿಲ್ಲ.

More from Filmibeat

English summary
Bigg Boss Kannada 6: Week 4: Kiccha Sudeep lashes out at Andrew.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X