ಕಾಲು ಕೆರೆದುಕೊಂಡು ಜಗಳಕ್ಕೆ ಬರುವ ರಾಪಿಡ್ ರಶ್ಮಿಗೆ ಸುದೀಪ್ ಹೇಳಿದ್ದೇನು.?
'ಬಿಗ್ ಬಾಸ್' ಮನೆಯೊಳಗೆ ರಾಪಿಡ್ ರಶ್ಮಿ 'ಪಾಪಸ್ ಕಳ್ಳಿ', 'ಕುಕ್ಕರ್' ಅಂತಲೇ 'ಕು'ಖ್ಯಾತಿ ಗಳಿಸಿದ್ದಾರೆ. ಕಾರಣ... ಅವರ ಮಾತಿನ ವರಸೆ ಮತ್ತು ವಾಕ್ಸಮರ.
ಹಾಗ್ನೋಡಿದ್ರೆ, ಈ ಸೀಸನ್ ನಲ್ಲಿ ಮೊಟ್ಟಮೊದಲ ವಾಗ್ಯುದ್ಧಕ್ಕೆ ನಾಂದಿ ಹಾಡಿದವರೇ ರಾಪಿಡ್ ರಶ್ಮಿ. ಇದರಿಂದಲೇ ಮನೆಯಲ್ಲಿ ಎಲ್ಲರಿಂದಲೂ ವಿರೋಧ ಕಟ್ಟಿಕೊಂಡು ಸತತವಾಗಿ ಮೂರು ಬಾರಿ ನಾಮಿನೇಟ್ ಆಗಿದ್ದರು. ಇಷ್ಟಾದರೂ, ಸುಮ್ಮನಿರುವ ಜಾಯಮಾನ ರಶ್ಮಿಗಿಲ್ಲ.
'ಅಡುಗೆ ಮನೆ' ಸುತ್ತ ಸದಾ ಗಿರಕಿ ಹೊಡೆಯುವ ರಶ್ಮಿ ಆಗಾಗ ವಿನಾಕಾರಣ ಹಲವರ ಜೊತೆಗೆ ಜಗಳ ಆಡಿದ್ದಾರೆ. ರಶ್ಮಿ ಅವರ ಈ ವರ್ತನೆ ಸುದೀಪ್ ಗೂ ಬೇಸರ ತರಿಸಿದೆ. ಹೀಗಾಗಿ, 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ರಶ್ಮಿಗೆ ಸುದೀಪ್ ಪ್ರಶ್ನಿಸಿದರು. ಮುಂದೆ ಓದಿರಿ...

ಕಾಲು ಕೆರೆದುಕೊಂಡು ಜಗಳ ಆಡುವುದು ಯಾಕೆ.?
''ನೀವು ನೇರ ಖಾರ ಗೊತ್ತು. ಆದ್ರೆ, ಕಾಲು ಕೆರೆದುಕೊಂಡು ಜಗಳ ಆಡುವುದು ಸರಿಯೇ.? ಯಾಕಂದ್ರೆ, ವಿನಾಕಾರಣ ಜಯಶ್ರೀ ಜೊತೆಗೆ ರಿಮೋಟ್ ಬಗ್ಗೆ ಕೆದಕಿದ್ರಿ. ಆಮೇಲೆ, ಮೊಟ್ಟೆ ವಿಚಾರ. ಅದು 'ಒಂದು ಮೊಟ್ಟೆಯ ಕಥೆ' ಅಂತ ಯಾರಿಗೂ ಅನಿಸಲೇ ಇಲ್ಲ. ನಿಮ್ಮ ಮತ್ತು ಜಯಶ್ರೀ ನಡುವಿನ ವೈಯುಕ್ತಿಕ ಕಿತ್ತಾಟಕ್ಕೆ ಮೊಟ್ಟೆ ಒಂದು ಕಾರಣ ಅಂತ ಅನಿಸ್ತು'' ಎಂದು ಸುದೀಪ್ ಪ್ರಶ್ನಿಸಿದರು.

ರಶ್ಮಿ ಕೊಟ್ಟ ಸಬೂಬು ಏನು.?
''ರಿಮೋಟ್ ಬಗ್ಗೆ ನಾನು ಜಯಶ್ರೀ ಅವರನ್ನ ರೇಗಿಸ್ದೆ ಅಷ್ಟೇ. ಜಗಳ ಆಡುವ ಕಾರಣ ಖಂಡಿತ ಇರಲಿಲ್ಲ'' ಎಂದು ಕಿಚ್ಚ ಸುದೀಪ್ ಗೆ ರಶ್ಮಿ ಸಬೂಬು ನೀಡಿದರು.

ಪ್ರತ್ಯುತ್ತರ ಕೊಟ್ಟೆ.!
''ಮೊಟ್ಟೆ ವಿಚಾರದಲ್ಲಿ ಆಂಡ್ರ್ಯೂ ಮೊಟ್ಟೆ ಬೇಕು ಅಂದ್ರು. ಆಮೇಲೆ ಸ್ನೇಹಾ ಬಂದು ಮೊಟ್ಟೆ ತೆಗೆದುಕೊಂಡರು. ಮಧ್ಯೆ ಕವಿತಾ ಬಂದು ಮೊಟ್ಟೆ ಹೇಗೆ ಕೊಟ್ಟೆ ಅಂತ ಕೇಳಿದ್ರು. ಮೊದಲನೇಯದ್ದಾಗಿ, ಮೊಟ್ಟೆ ತಿಂದಿದ್ದು ನಾನಲ್ಲ. ಆದ್ರೆ, ಬೇರೆ ಬೇರೆ ಮಾತುಗಳು ಬಂದ್ವು. ಅದಕ್ಕೆ ನಾನು ಪ್ರತ್ಯುತ್ತರ ಕೊಟ್ಟೆ'' ಅಂತಾರೆ ರಶ್ಮಿ

ಮೊಟ್ಟೆ ತೆಗೆದುಕೊಂಡು ಹೊಡೆಯುತ್ತಾರೆ ಎಂದಿದ್ದು ಯಾಕೆ.?
''ಮಾತಿಗೆ ಮಾತು ಬೆಳೆದು.. ಮೊಟ್ಟೆ ವಿಚಾರಕ್ಕೆ ಕಿತ್ತಾಡಿದರೆ, ಹೊರಗೆ ಹೋದಾಗ ಮೊಟ್ಟೆ ತೆಗೆದುಕೊಂಡೇ ಹೊಡೆಯುತ್ತಾರೆ ಅಂತ ಹೇಳಿದೆ. ಅದಕ್ಕೆ ಪ್ರತಿಕ್ರಿಯೆ ಕೂಡ ಬಂತು. ಅದು ಬಿಟ್ಟರೆ, ಇಡೀ ವಾರ ನಾನು ತುಂಬಾ ಕಾಮ್ ಆಗಿದ್ದೆ'' - ರಾಪಿಡ್ ರಶ್ಮಿ

ಸತ್ಯ ಹೇಳಿದ ಜಯಶ್ರೀ
''ಅದು ಮೊಟ್ಟೆಗಾಗಿ ನಡೆದ ಜಗಳ ಅಲ್ಲ. ಅಡುಗೆ ಮನೆ ಮ್ಯಾನೇಜ್ ಮಾಡುವ ಸಲುವಾಗಿ ಆದ ಜಗಳ'' ಎಂದು ಜಯಶ್ರೀ ಸತ್ಯ ಬಾಯ್ಬಿಟ್ಟರು. ಇನ್ಮುಂದೆ ಅಡುಗೆ ಮನೆಯನ್ನ ನೀಟಾಗಿ ಮ್ಯಾನೇಜ್ ಮಾಡುವಂತೆ ಸುದೀಪ್ ಎಲ್ಲರಿಗೂ ಸಲಹೆ ಕೊಟ್ಟರು.


Click it and Unblock the Notifications











